ಸಬಾಹಲ್ ಖೈರ್
ಸಬಾಹಲ್ ಖೈರ್
ಫಿತ್ವ್‌ರ್ ಝಕಾತ್:
ಈದುಲ್ ಫಿತ್ವ್‌ರಿನಂದು ವಿತರಿಸಲಾಗುವ ಕಡ್ಡಾಯ ದಾನವೇ ಫಿತ್ವ್‌ರ್ ಝಕಾತ್, ಶರೀರದ ನೈತಿಕ ಮಾಲಿನ್ಯಗಳನ್ನು ನಿವಾರಿಸಿ ಶುಚಿತ್ವಗೊಳಿಸಲು ಹಾಗೂ ರಮಳಾನ್ ವ್ರತಗಳಲ್ಲಿ ನಾವರಿಯದೆ ಉಂಟಾಗಬಹುದಾದ ಲೋಪದೋಷಗಳನ್ನು ಪರಿಹರಿಸಲೂ ಫಿತ್ವ್‌ರ್ ಝಕಾತ್ ಸಹಾಯಕವಾಗುತ್ತದೆ.
ಜೊತೆಗೆ ಬಡವ-ನಿರ್ಗತಿಕರಂತಹ ಅಸಹಾಯಕರಿಗೂ ಹಬ್ಬದ ಸಂಭ್ರಮದಲ್ಲಿ ನಿಶ್ಚಿಂತೆಯಿಂದ ಪಾಲ್ಗೊಳ್ಳಲು ಕೂಡಾ ಇದು ಅನುವು ಮಾಡಿ ಕೊಡುತ್ತದೆ. ಸಂತೋಷ ಸಡಗರ ಸಂದರ್ಭಗಳಲ್ಲಿ ಕೂಡಾ ಬಡವರ ಬಳಲನ್ನು ಪರಿಗಣಿಸುವ ಇಂತಹ ವಿಧಿ ವಿಧಾನಗಳು ಇಸ್ಲಾಮಿನ ಮಾತ್ರ ಒಂದು ವಿಶೇಷತೆಯಾಗಿದೆ..
Comments
Post a Comment