ಅಗ್ನಿ ಪರೀಕ್ಷೆಯಲ್ಲಿ ಜೋಡಿ ಹಕ್ಕಿ
✍ಅಬ್ದುಲ್ ಜಬ್ಬಾರ್
ಕುಡ್ತಮುಗೇರು
﷽
ಅಗ್ನಿಪರೀಕ್ಷೆಯಲ್ಲಿ ಜೋಡಿಹಕ್ಕಿ'
ಅಲ್ಲಾಹನ ಖಲೀಲರಾದ ಪ್ರವಾದಿ ಇಬ್ರಾಹೀಂ ನೆಬಿ ಅಲೈಹಿಸ್ಸಲಾಂ ರವರಿಗೆ ಸಾರಾ ಬೀಬಿಯವರಲ್ಲಿ ಜನಿಸಿದ ಮಗನಾಗಿದ್ದಾನೆ ಇಸ್ಹಾಕ್ ನೆಬಿ ಅಲೈಹಿಸ್ಸಲಾಂ, ಇಸ್ಹಾಕ್ ನೆಬಿಯವರಿಗೆ ಅಲ್ಲಾಹು ಅನುಗ್ರಹಿಸಿ ಕೊಟ್ಟಂತಹ ಎರಡು ಮಕ್ಕಳಲ್ಲಿ ಒಬ್ಬರಾದ ಯಅಖೂಬ್ ನೆಬಿ ಅಲೈಹಿಸ್ಸಲಾಂ ಮತ್ತೊಬ್ಬರು ಡಮಾಸ್ಕಸ್ ನ ರಾಜನಾದ ಹೈಸ್ ಇದೆಲ್ಲವು ಅಲ್ಲಾಹು ಇಬ್ರಾಹೀಂ ನೆಬಿ ಅಲೈಹಿಸ್ಸಲಾಂ ರವರನ್ನು ಗೌರವಿಸಿಯಾಗಿದೆ ಇಬ್ರಾಹೀಂ ನೆಬಿಯವರ ಕುಟುಂಬದಿಂದ ಈ ಲೋಕಕ್ಕೆ ರಾಜರು ಮತ್ತು ಪ್ರವಾದಿಗಳನ್ನು ಅಲ್ಲಾಹು ಅನುಗ್ರಹಿಸಿರುವುದು..
ಒಂದು ಭಾಗದಲ್ಲಿ ಇಸ್ಹಾಖ್ ನೆಬಿಯವರ ಮಗನಾದ ಯಅಖೂಬ್ ನೆಬಿ ಅಲೈಹಿಸ್ಸಲಾಂ ರವರಿಗೆ ಹನ್ನೆರಡು ಮಕ್ಕಳನ್ನು ಕೊಟ್ಟಾಗ ವಿಶ್ವಸುಂದರನಾದ ಒಂದು ಪ್ರವಾದಿ ಯೂಸುಫ್ ನೆಬಿ ಅಲೈಸ್ಸಲಾಂ ರವರನ್ನು ನೀಡಿ ಇನ್ನೊಂದು ಕಡೆಯಲ್ಲಿ ಹೈಸ್ ಎಂಬ ರಾಜನಿಗೆ ಕೊಟ್ಟ ಹಲವು ಮಕ್ಕಳ ಪೈಕಿ ಅದರಲ್ಲೊಬ್ಬರಿಗೆ ಪ್ರವಾದಿ ಸ್ಥಾನ ಕೊಟ್ಟು ಆಧರಿಸಿದಂತಹ ಮಹಾನರಾದ ಅಯ್ಯೂಬ್ ನೆಬಿ ಅಲೈಹಿಸ್ಸಲಾಂ ಇದೆಲ್ಲವೂ ಸೇರುವುದು ಮಹಾನರಾದ ಪ್ರವಾದಿ ಇಬ್ರಾಹೀಂ ನೆಬಿ ಅಲೈಹಿಸ್ಸಲಾಂ ರವರ ಪರಂಪರೆಗೆ ಆಗಿದೆ.
ನಾನೀಗ ಬರೆಯ ಬಯಸುವುದು ಮಹಾನರಾದ ಅಯ್ಯೂಬ್ ನೆಬಿ ಅಲೈಹಿಸ್ಸಲಾಂ ರವರ ಕುರಿತಾಗಿದೆ,
ಅಯ್ಯೂಬ್ ನೆಬಿ ಅಲೈಹಿಸ್ಸಲಾಂ ರಾಜಕುಮಾರನಾಗಿ ಜನಿಸಿ
ರಾಜಕುಮಾರನಾಗಿ ಬೆಳೆದವರಾಗಿದ್ದಾರೆ..
ಅರಮನೆಯಲ್ಲಾಗಿದೆ ಜೀವಿಸುತ್ತಿರುವುದು..
ಆದರೂ ಆ ಜೀವನ ಅಲ್ಲಾಹನ ಮಾರ್ಗದಲ್ಲಾಗಿತ್ತು..
ಯಾವಾಗಲೂ ಒಂದು ಚಿಂತೆಯಾಗಿತ್ತು ಅಯ್ಯೂಬ್ ನೆಬಿ ಯವರಿಗೆ..
ತನ್ನ ಬಾಲ್ಯ ಕಾಲದಿಂದಲೇ ಅವರು ಒಂದು ಅನ್ವೇಷಣಾ ಗುರಿಯಲ್ಲಾಗಿತ್ತು ಜೀವನ ಸಾಗಿಸುತ್ತಿದ್ದದ್ದು ...
ಸಣ್ಣ ಪ್ರಾಯದಿಂಲೇ ಒಂದು ಇಲಾಹಿಯಾದ ಚಿಂತೆಯಾಗಿತ್ತು...
ಅಯ್ಯೂಬ್ ನೆಬಿ ಅಲ್ಲಾಹುವಿನೊಡನೆ ಕೇಳುವ ಒಂದು ಮಾತಾಗಿತ್ತು ರಬ್ಬೆ ನೀನು ನನ್ನನ್ನು ಯಾಕಾಗಿ ಸೃಷ್ಟಿಸಿದ್ದಿ ? ಅಲ್ಲಾಹನೇ ನೀನು ನನ್ನನ್ನು ಸೃಸ್ಟಿಸುವಾಗ ನನ್ನಿಂದ ಕೆಲವು ಲಕ್ಷ್ಯಗಳು ನಿನಗಿರಬಹುದು ಆದರೆ ನಾನು ಆ ಲಕ್ಷ್ಯಗಳಿಗೆ ತಲುಪುತ್ತೇನೊ ..?
ಈ ರೀತಿಯ ಚಿಂತೆಯಾಗಿತ್ತು..
ಬಹಳ ಕಡಿಮೆ ಆಹಾರ ಸೇವಿಸುವವರಾಗಿದ್ದರು ಅಯ್ಯೂಬ್ ನೆಬಿ ಅಲೈಹಿಸ್ಸಲಾಂ ರವರು
ಹಗಲು ಹೊತ್ತು ಉಪವಾಸವು ರಾತ್ರಿಯಿಡೀ ಇಬಾದತ್ ನಿರ್ವಹಿಸುತ್ತಿದ್ದರು...
ಹೀಗೆ ಪ್ರತೀದಿನ ಹಗಲು ಹೊತ್ತಲ್ಲಿ ಉಪವಾಸವೂ ರಾತ್ರಿಯಿಡೀ ಇಬಾದತ್ ನಿರ್ವಹಿಸಿ ಅವರ ಶರೀರವೆಲ್ಲಾ ಕ್ಷೀಣಿಸಿ ಶರೀರ ಸಣಕಲಾದರೂ ಅವರ ಹೃದಯದಲ್ಲಿ ಈಮಾನ್ ಬಲಿಷ್ಟವಾಗಿತ್ತು...
ನಂತರ ಯುವಕನಾಗಿ ಡಮಾಸ್ಕಸ್ ನ ಬೀದಿಗಳಲ್ಲಿ ನಡೆಯುತ್ತಿರುವಾಗ..
ಆ ಕಾಲದಲ್ಲಿದ್ದ ಇಸ್ರಾಯೀಲಿಗಳು ಮುಸ್ಲಿಮರಾಗಿದ್ದು
ಇಸ್ರಾಯೀಲಿಗಳೆಂದರೆ ಈಗಿರುವ ಇಸ್ರಾಯೀಲಿಗಳಂತವರಲ್ಲ
ಈಗಿರುವ ಇಸ್ರಾಯೀಲಿಗಳು ಮುಸ್ಲಿಮರ ಕಠಿಣ ಶತ್ರುಗಳಾಗಿದ್ದಾರೆ
ಆದರೆ ಒಂದು ಕಾಲಘಟ್ಟದಲ್ಲಿ ಇಸ್ರಾಯೀಲಿಗಳು ಯಅಖೂಬ್ ನೆಬಿಯ ಪರಂಪರೆಯಲ್ಲಿ ಅನುಗ್ರಹೀತರಾಗಿದ್ದರು.
ಯಅಖೂಬ್ ನೆಬಿಯವರು ಇಸ್ರಾಯಿಲಿ ಪ್ರವಾದಿ ಎಂದು ಅರಿಯಲ್ಪಟ್ಟಿದ್ದರು ಆದ್ದರಿಂದ ಆ ಕಾಲದಲ್ಲಿದ್ದ ಅಲ್ಲಿನ ಮುಸ್ಲಿಮರು ಇಸ್ರಾಯಿಲಿಗಳೆಂದು ಅರಿಯಲ್ಪಟ್ಟರು
ಅದು ಇಸ್ರಾಯಿಲಿಗಳು ತೀರ ಹದಗೆಟ್ಟಿದ್ದಂತಹ ಕಾಲ..
ಜನರು ದಾರಿ ತಪ್ಪಿದ್ದ ಸಂದರ್ಭ..
ಅಲ್ಲಾಹನ ಮಾರ್ಗಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಕಾಲ...
ಡಮಾಸ್ಕಸ್ ನ ಬೀದಿಯಲ್ಲಿ ಅಯ್ಯೂಬ್ ನೆಬಿಯವರು ನಡೆಯುತ್ತಿರುವಾಗ ಆ ಸಮುದಾಯದ ದುಸ್ಥಿತಿಯನ್ನು ಕಂಡು
ರಾಜಕುಮಾರನಾದ ಅಯ್ಯೂಬ್ ನೆಬಿಯು ಅಲ್ಲಾಹನಲ್ಲಿ ಪ್ರಾರ್ಥಿಸಿದರು ಈ ಸಮುದಾಯವನ್ನು ನಿಯಂತ್ರಿಸಲು, ಒಳಿತಿಗೆ ಆಹ್ವಾನಿಸಲು ಇವರೆಡೆಗೆ ಒಂದು ಪ್ರವಾದಿಯನ್ನು ಅಲ್ಲಾಹು ನಿಯೋಗಿಸಿದ್ದರೆ ಎಂದು ಪ್ರಾರ್ಥಿಸಿದ ವ್ಯಕ್ತಿಯನ್ನೇ ಅಲ್ಲಾಹು ಡಮಾಸ್ಕಸ್ ನ ಪ್ರಾವಾದಿಯನ್ನಾಗಿಸಿದ ಎಂದಾಗಿದೆ ಅಲ್ಲಾಹುವಿನ ತೀರ್ಮಾನ,
ಮಲಕ್ ಜಿಬ್ರೀಲ್ ಅ.ಸ ಪ್ರತ್ಯಕ್ಷಗೊಂಡು ಪ್ರವಾದಿ ಪಟ್ಟವನ್ನು ನೀಡಿ ಡಮಾಸ್ಕಸಿನಲ್ಲಿರುವ ಇಸ್ರಾಯಿಲಿ ಸಮೂಹವನ್ನು ಅಲ್ಲಾಹುವಿನ ಮಾರ್ಗದಲ್ಲಿ ಕರೆತರುವ ದೌತ್ಯವನ್ನು ಅಲ್ಲಾಹು ನೀಡಿದ..
ಅಯ್ಯೂಬ್ ನೆಬಿಯವರಿಗೆ ಪ್ರವಾದಿತ್ವವು ಲಭಿಸಿ ಪ್ರವಾದಿ ದೌತ್ಯವು ಲಭಿಸಿದ ನಂತರ ಅವರ ಜೀವನ ಶೈಲಿ ತುಂಬಾ ಬದಲಾಯಿತು ನಂತರ ಹಗಲು ಉಪವಾಸವೂ, ಪ್ರಭೋಧನೆಯೂ ಆದಾಗ ತುಂಬಾ ಬಳಲಿದರು ಅಯ್ಯೂಬ್ ನೆಬಿ ...
ಮಹಾನರು ಒಂದು ದಿವಸ ತನ್ನ ಕೋಣೆಯಲ್ಲಿ ಇಬಾದತ್ ನಿರ್ವಹಿಸುತ್ತಿರುವಾಗ ಇಬ್ಲೀಸ್ ಯೋಚಿಸುತ್ತಾನೆ ಈ ನೆಬಿಯನ್ನು ಒಮ್ಮೆ ವಂಚಿಸಬೇಕೆಂದು ಅವನು ನೆಬಿಯವರು ನಮಾಝ್ ನಿರ್ವಹಿಸುವ ಕೋಣೆಯ ಹೊರಗೆ ಒಂದು ವಯಸ್ಸಾದ ಮುದುಕನ ರೂಪದಲ್ಲಿ ಬಂದು ನಿಂತು ನೆಬಿಯವರು ನಮಾಝ್ ಮುಗಿಸಿ ತಸ್ಬೀಹ್ ಹೇಳುತ್ತಾ ಕುಳಿತಿರುವಾಗ ಹೊರಗಿನಿಂದ ಇಬ್ಲೀಸ್ ಒಳಗಡೆ ಇಣುಕಿ ನೋಡಿದ ನೆಬಿಯವರು ನೋಡುವಾಗ ಹಿಂದೆ ಸರಿಯುತ್ತಾನೆ ಒಳಗಡೆ ಪ್ರವೇಶಿಸಲು ಅವನಿಗೆ ಭಯವಿದೆ ಹೀಗೆ ಎರಡು ಬಾರಿ ಆವರ್ತಿಸಿದಾಗ ಮಹಾನರಾದ ನೆಬಿಯವರು ಯಾರದು ಹೊರಗೆ ಎಂದು ಕೇಳಿದಾಗ ಇಬ್ಲೀಸ್ ನಂತರ ಬೇರೇನು ಯೋಚಿಸದೆ ನೇರ ಒಳಗಡೆ ಪ್ರವೇಶಿಸಿ ಅಸ್ಸಲಾಂ ಅಲೈಕುಂ ಎಂದು ಸಲಾಂ ಹೇಳಿ
ನೆಬಿಯವರಲ್ಲಿ ಒಂದು ಪ್ರಶ್ನೆ.. ಅಲ್ಲ ಅಯ್ಯೂಬ್ ರವರೇ ಇದೆಂತಹ ನಮಾಝ್ ಹೀಗೂ ಉಂಟೇ ನಮಾಝ್? ನೆಬಿಯವರು ಏನೆಂದು ಕೇಳಿದರು ಅದಕ್ಕವನು ಹೇಳಿದ ಕೇವಲ ನಿದ್ದೆ ಎಲ್ಲಾ ಬಿಟ್ಟು ನಮಾಝ್ ನಿರ್ವಹಿಸಿದರೆ ಹೇಗೆ? ಅಲ್ಪ ಆಹಾರ ಮಾತ್ರ ಸೇವಿಸಿ ಹಗಲೆಲ್ಲಾ ಉಪವಾಸವು ಇದ್ದುಕೊಂಡು ನೀನಾಗಿಯೇ ನಿನ್ನ ಶರೀರವನ್ನು ಅಕ್ರಮಿಸುವುದಲ್ಲವೆ? ಶರೀರಕ್ಕೆ ಸರಿಯಾಗಿ ಆಹಾರ ಸೇವಿಸದೆ ಶರೀರವನ್ನು ಕ್ಷೀಣಿಸುವುದು ಶರೀರದೊಡನೆ ಮಾಡುವ ಅಕ್ರಮವಲ್ಲವೆ ಹೀಗೆ ಅಕ್ರಮಿಸಿದರೆ ಅಲ್ಲಾಹನ ಬಳಿ ನಿನಗೆ ಉತ್ತರಿಸಬೇಕಾಗಿ ಬರಬಹುದಲ್ವೆ? ಅಯ್ಯೂಬ್ ಅಲ್ಲ ಮನುಷ್ಯ ಶರೀರವನ್ನು ಹಾಗೆ ಬೆಳೆಸುವುದು ಯಾಕೆ ಈ ಶರೀರವೆಂಬುವುದು ನಾಳೆ ಖಬರಿನಲ್ಲಿ ಹುಳಗಳಿಗೆ ಭಕ್ಷಿಸಲಿರುವುದಲ್ಲವೆ ಮತ್ತೇಕೆ ನಾವು ಈ ಶರೀರವನ್ನು ಬೆಳೆಸಿಡಬೇಕು ಅದಕ್ಕೆ ಇಬ್ಲೀಸ್ ಹೇಳಿದ ನೀನು ಈಗ ಕೇವಲ ಪ್ರವಾದಿ ಮಾತ್ರವಲ್ಲ ರಾಜಕುಮಾರನೂ ಆಗಿರುವೆ ಭವಿಷ್ಯದಲ್ಲಿ ಡಮಾಸ್ಕಸಿನ ರಾಜನಾಗುವವನಾಗಿರುವೆ ಆದ್ದರಿಂದ ನಮಾಝೆಲ್ಲ ಒಮ್ಮೊಮ್ಮೆ ಬಿಟ್ಟು ಬಿಡಬೇಕು ಉಪವಾಸವೆಲ್ಲ ಒಮ್ಮೊಮ್ಮೆ ಬಿಟ್ಟುಬಿಡಬೇಕು ಚೆನ್ನಾಗಿ ತಿನ್ನಬೇಕು ನಿದ್ದೆಯೂ ಮಾಡಬೇಕು ಇದೆಲ್ಲಾ ಹೇಳಿಕೊಟ್ಟಾಗ ಅಲ್ಲಾಹನ ನೆಬಿ ಅವನ ಮುಖಕ್ಕೆ ನೋಡುತ್ತಾ ಹೇಳಿದರು ನನ್ನ ಸತ್ಯ ದಾರಿಯಲ್ಲಿ ಮುಳ್ಳು ಹಾಕಲು ಬಂದ ಮಹಾ ಕಳ್ಳ ನೀನು ಇಬ್ಲೀಸಲ್ವ ...
ಇಬ್ಲೀಸಲ್ವೆ ಎಂದು ಕೇಳಿದ್ದೆ ತಡ ಅವನು ತಕ್ಷಣ ಅಲ್ಲಿಂದ ಕಾಲ್ಕಿತ್ತ..
ಅಯ್ಯೂಬ್ ನೆಬಿ ಕೂಡಲೆ ಸುಜೂದಿನಲ್ಲಿ ಬಿದ್ದರು ಇಬ್ಲೀಸನನ್ನು
ಗುರುತಿಸಿಲು ತೌಫೀಕ್ ನೀಡಿದ ಅಲ್ಲಾಹನಿಗೆ ಸ್ಥುತಿಗಳನ್ನರ್ಪಿಸಿದರು
ನೆಬಿಯವರು ಹಗಲು ಉಪವಾಸವೂ ಪ್ರಭೋದನೆಯೂ ರಾತ್ರಿ ನಮಾಝ್ ನಿರ್ವಹಿಸುತ್ತಾ ದಿನಗಳೆದರು.. ಮದುವೆಯಾಗುವ ವಯಸ್ಸಾಗಿಯೂ ಮದುವೆಯಾಗಿರಲಿಲ್ಲ ಹಲವರು ಮದುವೆಯಾಗಲು ಒತ್ತಾಯಿಸುತ್ತಿದ್ದರು ಆದರೆ ಈ ವಿಷಯದಲ್ಲಿ ಯಾರ ಮಾತನ್ನೂ ಕೇಳುತ್ತಿರಲಿಲ್ಲ ಅವರು ಹೇಳುತ್ತಿದ್ದದ್ದು ನನಗೆ ಮದುವೆ ಬೇಡ ಮದುವೆಯಾದರೆ ಇಬಾದತ್ ನಿರ್ವಹಿಸಲು ಸಮಯ ಸಾಕಾಗದು ಆದ್ದರಿಂದ ನನಗೆ ಮದುವೆ ಬೇಡ ಎನ್ನುತ್ತಿದ್ದರು ..
ಹೈಸ್ ರವರು ಹೇಳಿದರು ಮಗನೆ ನೀನು ಮದುವೆಯಾಗಬೇಕು ನಿನ್ನ ಮದುವೆಯ ಪ್ರಾಯ ದಾಟಿತು ಆದ್ದರಿಂದ ನೀನು ಮದುವೆ ಕೂಡಲೆ ಆಗಬೇಕು ...
ಇಲ್ಲ ನನಗೆ ಮದುವೆ ಬೇಡ ಎಂದರು
ಅಪ್ಪಾ ನಾನು ಮದುವೆಯಾಗಬೇಕಾದರೆ ನನಗೆ ಹೊಂದುವಂತಹ ಹೆಣ್ಣು ಆಗಿರಬೇಕು ಅದಕ್ಕೆ ಹೈಸ್ ರವರು ಕೇಳಿದರು ಅದೇನು ನಿನಗೆ ಬೇಕಾದ ಹೆಣ್ಣಿಗಿರಬೇಕಾದ ಷರತ್ತು? ಹಗಲುಉಪವಾಸವಿರುವ, ನಮಾಝ್ ನಿರ್ವಹಿಸುವ, ಅಲ್ಲಾಹನನ್ನು ಭಯಪಡುವ, ಪರಲೋಕವನ್ನು ಆಗ್ರಹಿಸುವ ಅಲ್ಪ ಮಾತ್ರ ಜೀವಿಸಲು ಆಹಾರ ಸೇವಿಸುವ ಹೆಣ್ಣಿದೆಯೆ? ಹೇಳಿ ನಾನು ಮದುವೆ ಮಾಡಿಕೊಳ್ಳುತ್ತೇನೆ..
ಇದು ಕೇಳಿದ ಹೈಸ್ ರವರು ಏನೂ ಹೇಳದೆ ಅಲ್ಲಿಂದ ಹೋಗುವಾಗ ಚಿಂತಿಸಿದರು ನಿನ್ನ ಮದುವೆ ಕಂಡು ನಾನು ಮರಣಪಡುವಂತೆ ಕಾಣ್ತಿಲ್ಲ ಎಂದು ತಂದೆ ಹೈಸ್ ರವರು ಚಿಂತಿಸಿದ್ದು ಅಯ್ಯೂಬ್ ನೆಬಿ ಹೇಳುವಂತಹ ಒಂದು ಹೆಣ್ಣು ಇರಲಿಕ್ಕಿಲ್ಲ ಎಂದಾಗಿತ್ತು ಆದರೆ ಅಯ್ಯೂಬ್ ನೆಬಿ ಹೇಳುವಂತಹ ಒಂದು ಹೆಣ್ಣನ್ನು ಅಲ್ಲಾಹು ಸೃಷ್ಟಿಸಿದ್ದಾನೆ..
ಅದು ಆ ಊರಿನಲ್ಲಲ್ಲ ಅದು ದೂರದ ಈಜಿಪ್ಟಿನ ಅರಮನೆಯಲ್ಲಿರುವ ರಾಜಕುಮಾರಿ..
ಒಂದು ಕಾಲದ ಪ್ರವಾದಿಯೂ ರಾಜನೂ ಆಗಿದ್ದ ಮಹಾನರಾದ ಯೂಸುಫ್ ನೆಬಿಯವರ ಮಗನ ಮಗಳು ..
ಹೆಸರು ರಹ್ಮತ್ ಬೀಬಿ
ಅಯ್ಯೂಬ್ ನೆಬಿ ಆಗ್ರಹಿಸುವಂತಹದ್ದೆ ಹೆಣ್ಣು ..
ಅಲ್ಲೂ ಕೂಡ ಇದೇ ತರ ಮದುವೆ ಪ್ರಾಯವಾಗಿದೆ
ಹೆಣ್ಣು ನೋಡಲು ಹಲವರು ಬರುತ್ತಿದ್ದರು
ಎಲ್ಲರಿಗು ರಹ್ಮತ್ ಬೀಬಿಯನ್ನು ಇಷ್ಟವಾಗುತ್ತಿತ್ತು ಆದರೆ ರಹ್ಮತ್ ಬೀಬಿಗೆ ಯಾರನ್ನೂ ಇಷ್ಟವಾಗುತ್ತಿರಲಿಲ್ಲ ..
ಏಕೆಂದರೆ ವ್ಯಕ್ತಿಯನ್ನು ಇಷ್ಟವಾಗದ್ದೇನಲ್ಲ ರಹ್ಮತ್ ಬೀಬಿ ಯೋಚಿಸಿದ್ದು ಯಾರನ್ನೋ ಒಬ್ಬನನ್ನು ಮದುವೆಯಾದರೆ ನಂತರ ಅವನ ಹಿಂದೆ ನಡೆಯಬೇಕಾಗುತ್ತೆ ನಮಾಝ್, ಇಬಾದತ್ ನಿರ್ವಹಿಸಲು ಸಮಯ ಸಿಗದು ಆದ್ದರಿಂದ ನನಗೆ ಮದುವೇನೆ ಬೇಡ ಎಂದಾಗಿತ್ತು ರಹ್ಮತ್ ಬೀಬಿ ಮನಗಂಡದ್ದು..
ಅದೊಂದು ದಿನ ಈಜಿಪ್ಟಿನ ಅರಮನೆಗೆ ರಹ್ಮತ್ ಬೀವಿಯ ವಿವಾಹನ್ವೇಷಣೆಗೆಂದು ಒಬ್ಬ ಸುರಸುಂದರನಾದ ಸದೃಢ ಮೈಕಟ್ಟಿನ ಸುಂದರ ಯುವಕ ಬಂದಿದ್ದ ಊಟೋಪಚಾರ ಏರ್ಪಡಿಸಿತ್ತು
ರಾಜನು ಈ ಬಾರಿಯಾದರು ನನ್ನ ಮಗಳು ಈ ಸಂಬಂಧವನ್ನಾದರು ಒಪ್ಪಿಕೊಂಡಿದ್ದರೆ ಸಾಕಿತ್ತೆಂದು ಬಯಸುತ್ತಾ
ಮಗಳ ಬಳಿ ತೆರಳಿ ನೋಡಲು ಬಂದ ಯುವಕನ ಬಗ್ಗೆ ಮಾಹಿತಿ ನೀಡಿದ ರಾಜನಿಗೆ ಮಗಳ ಎಂದಿನ ಪ್ರತಿಕ್ರಿಯೆಯೇ ಆಗಿತ್ತು ಲಭಿಸಿದ್ದು
ಕೊನೆಗೆ ರಾಜನ ಒತ್ತಾಯಕ್ಕೆ ಮಣಿದು ಹೇಳಿದಳು
ಮೊದಲು ಹುಡುಗನನ್ನು ನಾನು ನೋಡುವೆನು ನನಗೆ ತೃಪ್ತಿಯಾದರೆ ಮಾತ್ರ ನಂತರ ಅವನು ನನ್ನನ್ನು ನೋಡಲಿ ಎಂದಾಗ ರಾಜ ಮಗಳ ಮಾತಿಗೆ ಒಪ್ಪಿಕೊಂಡರು
ನಂತರ ರಾಜ ತೆರಳಿದಾಗ ಇವಳು ಹುಡುಗ ಕಾಣದಂತೆ ಕಿಟಕಿಯಿಂದ ಮೆಲ್ಲನೆ ಇಣುಕಿ ನೋಡಿದಳು
ನೋಡುವಾಗ ಅವನು ಉಣ್ಣುವುದರಲ್ಲೆ ಮಗ್ನನಾಗಿರುವುದನ್ನು ಕಂಡು
ಇವನನ್ನೇನಾದರು ನನಗೆ ಸಂಗಾತಿಯಾಗಿ ಲಭಿಸಿದರೆ ನನ್ನ ಗತಿಯೆ! ಇವನಿಗೆ ಉಣ್ಣಿಸುವುದಕ್ಕಲ್ಲದೆ ಬೇರಾವುದಕ್ಕೂ ಸಮಯ ಸಾಕಾಗದೆಂದು ಅವನನ್ನು ನಿರಾಕರಿಸಿದ ರಹ್ಮತ್ ಬೀವಿ
ರಾಜ ಎಷ್ಟೆಲ್ಲಾ ವರಾನ್ವೇಷಿಸಿ ಫಲವಿಲ್ಲದಿರುವಾಗ ಇನ್ನೇನು ಮಾಡಲೆಂದು
ಒಂದು ವೇಳೆ ಮಗಳ ಮನಸ್ಸೊಳಗೆ ಯಾರನ್ನಾದರು ಬಯಸಿಟ್ಟಿದ್ದಾಳೊ ಕೇಳಿ ನೋಡೋಣ ಎಂದು ಬಯಸಿ
ಮಗಳ ಬಳಿ ತೆರಳಿ ಮಗಳೆ ನಿನ್ನ ಮನಸ್ಸೊಳಗೆ ಯಾರನ್ನಾದರು ಬಯಸಿದ್ದಿಯ?
ಅದಕ್ಕವಳು ಹಾಂ ಹೌದು ಎಂದಳು
ರಾಜ ಆಶ್ಚರ್ಯದಿಂದ ಹಾಗಾದರೆ ಯಾರದು ಎಂದು ಹೇಳು ಎಂದಾಗ ಮಗಳು ಅದು ಯಾವ ವ್ಯಕ್ತಿಯೂ ಅಲ್ಲ ನಾನು ಬಯಸುವುದು ಅಲ್ಪ ಮಾತ್ರ ಆಹಾರ ಸೇವಿಸುವ ಅಲ್ಲಾಹನನ್ನು ಭಯಪಡುವ ಹಗಲೊತ್ತು ವೃತವಿರುವ ರಾತ್ರಿಯೆಲ್ಲಾ ಇಬಾದತ್ ನಿರ್ವಹಿಸುವ ವರನನ್ನಾಗಿದೆ ಎಂದ ರಾಜಕುಮಾರಿ ರಹ್ಮತ್ ಬೀವಿ..
ಇಂತಹ ವರನನ್ನು ನಾನು ಎಲ್ಲಿ ಹುಡುಕಲಿ ಎಂದು ತನ್ನ ಪ್ರಿಯ ಪತ್ನಿಯೊಡನೆ ಸಂಕಟವನ್ನು ತಿಳಿಸಿದಾಗ ರಾಜನನ್ನು ಸಮಾಧಾನಿಸುತ್ತಾ ಅಂತಹ ಒಬ್ಬರು ಡಮಾಸ್ಕಸಿನಲ್ಲಿದ್ದಾರೆಂದು ಹೇಳುವಾಗಲೆ ರಾಜ ಕೇಳಿದ ನೀನು ಹೇಳುವುದು ಅಯ್ಯೂಬ್ ನೆಬಿಯವರನ್ನೊ?
ಹೌದು ಅಯ್ಯೂಬ್ ನೆಬಿಯವರು ನಮ್ಮ ಮಗಳಿಗೆ ಸಂಗಾತಿಯಾಗಬಹುದೆಂದಾಗ
ರಾಜ ಕುತೂಹಲದಿಂದ ಅಯ್ಯೂಬ್ ನೆಬಿಯವರೊಡನೆ ಮಾತನಾಡಿ ನಂತರ ಮಗಳೇನಾದರು ಅದನ್ನೂ ಒಪ್ಪಿಕೊಳ್ಳದಿದ್ದರೆ ನಂತರ ದೊಡ್ಡ ತೊಂದರೆಗೀಡಾಗಬಹುದು
ಕಾರಣ ಅವರೊಬ್ಬ ಪ್ರವಾದಿ..
ಮಗಳೊಡನೆ ಕೇಳಿದಾಗ ಅಯ್ಯೂಬ್ ನೆಬಿಯವರನ್ನು ವಿವಾಹವಾಗಲು ಸಮ್ಮತಿಸಿದರು ರಹ್ಮತ್ ಬೀವಿ..
ಅತ್ತ ಅಯ್ಯೂಬ್ ನೆಬಿಯವರೂ ರಹ್ಮತ್ ಬೀವಿಯನ್ನು ಚೆನ್ನಾಗಿ ಅರಿತಿದ್ದರಿಂದ ವಿವಾಹವಾಗಲು ಒಪ್ಪಿಕೊಂಡರು..
ಹಾಗೆ ಡಮಾಸ್ಕಸ್ ನ ರಾಜಕುಮಾರ ಅಯ್ಯೂಬ್ ನೆಬಿ ಹಾಗೂ ಈಜಿಪ್ಟಿನ ರಾಜಕುಮಾರಿ ರಹ್ಮತ್ ಬೀವಿಯ ವಿವಾಹ ನಡೆಯುತ್ತದೆ
ರಹ್ಮತ್ ಬೀವಿಯವರನ್ನು ಮದುವೆಯಾಗಿ ಡಮಾಸ್ಕಸಿನ ಅಯ್ಯೂಬ್ ನೆಬಿಯ ಮನೆಗೆ ಕರೆದುಕೊಂಡು ಬಂದರು
ಅಯ್ಯೂಬ್ ನೆಬಿ ಬಯಸಿದಂತಹ ರಹ್ಮತ್ ಬೀಬಿ.. ಆಗ್ರಹಿಸಿದಂತೆಯೆ ಲಭಿಸಿದ ಜೋಡಿ..
ಪ್ರಥಮ ರಾತ್ರಿ ಇಬ್ಬರೂ ಇಬಾದತ್ತಿನಲ್ಲೇ ತಲ್ಲೀನರಾದರು
ಇಬ್ಬರು ಸ್ಪರ್ಧಿಸುವಂತಿತ್ತು ಅವರಿಬ್ಬರ ಇಬಾದತ್, ನಮಾಝ್ ಮಾಡುತ್ತಲೇ ಸಮಯ ಕಳೆಯುತ್ತಿರುವುದು ಕಂಡು ಸಹಿಸಲಾಗದ ಒಬ್ಬರು ಆ ಕೋಣೆಯೊಳಗಿದ್ದರು ಅದು ಬೇರಾರು ಅಲ್ಲ ಶಪಿಸಲ್ಪಟ್ಟ ಇಬ್ಲೀಸ್ ಆಗಿದ್ದ
ಅವನಿಗದು ಸಹಿಸಲಸಾಧ್ಯ ವಾಗುತ್ತಿತ್ತು
ಇವರನ್ನು ಹೇಗಾದರು ದಾರಿತಪ್ಪಿಸಬೇಕೆಂದು ಯೋಚಿಸತೂಡಗಿದ.. ಅಯ್ಯೂಬ್ ಮದುವೆಯಾಗಿ ಕರಕೊಂಡು ಬಂದ ಹೆಣ್ಣು ಕೂಡ ಒಂದು ವಸ್ತುವೆ!
ಹೇಗಾದರು ಕಿತಾಪತಿ ಮಾಡಬೆಕೆಂದು ಇಬ್ಲೀಸನ ಸೂತ್ರ ಆದರೆ ಅಲ್ಲಾಹನ ನೆಬಿಯವರಲ್ಲಿ ಏನೂ ನಡೆಯದು ಅವರು ನನ್ನನ್ನು ಬೇಗ ತಿಳಿಯುತ್ತಾರೆ ಈ ಹೆಣ್ಣನ್ನು ಪ್ರಯತ್ನಿಸೋಣ ಎಂದುಕೊಂಡು ಅಯ್ಯೂಬ್ ನೆಬಿ ಇಲ್ಲದ ಸಮಯ ನೋಡಿ ಒಂದು ದಿನ ವಯಸ್ಸಾದ ಅಜ್ಜಿಯ ವೇಷದಲ್ಲಿ ಮದುಮಗಳನ್ನು ಕಾಣುವ ನಾಟಕವಾಡಿ ವಯಸ್ಸಾದ ಅಜ್ಜಿಯ ರೂಪದಲ್ಲಿ ರಹ್ಮತ್ ಬೀವಿ ಇರುವ ಕೋಣೆಯ ಹೊರಗೆ ಬಂದು ನಿಂತಿತು
ನಂತರ ಸಲಾಮ್ ಹೇಳುತ್ತಾ ಒಳಗೋಗಿ ಇಬಾದತ್ ನಲ್ಲಿ ಮಗ್ನಳಾಗಿದ್ದ
ರಹ್ಮತ್ ಬೀವಿಯನ್ನು ಕಂಡು ನಗುತ್ತಾ ಕೇಳಿತು ನೀನು ಅಯ್ಯೂಬಿನ ಪತ್ನಿಯಲ್ಲವೆ?
ಹೌದಮ್ಮ ನಾನು ಅಯ್ಯೂಬ್ ರವರ ಪತ್ನಿ ಏನಾಯಿತು ಹೇಳಿ
ಅದಕ್ಕೆ ಅಜ್ಜಿಯು ಚೆ ಚೆ ನಿನ್ನ ಅವಸ್ಥೆಯೇ
ನಿನ್ನ ಈ ಸ್ಥಿತಿ ನೆನೆಸುವಾಗ ಸಂಕಟವಾಗುತ್ತಿದೆ
ರಹ್ಮತ್ ಬೀವಿ ಕೇಳಿದರು ಏನಾಯಿತು ಈಗ?
ಲೇ ಹೆಣ್ಣೆ ನೀನಲ್ಲದೆ ಬೇರೆ ಯಾರು ಒಪ್ಪಿದ್ದಾರೆ ಆಯ್ಯೂಬ್ ನನ್ನು ಮದುವೆಯಾಗಲು? ಅದು ಗಂಡನಾಗಲು ಅಯೋಗ್ಯವಾದದ್ದು
ಈ ಊರಿನಲ್ಲಿರುವ ಒಂದು ಹೆಣ್ಣೂ ಅಯ್ಯೂಬಿನ ಪತ್ನಿಯಾಗಲು ಸಮ್ಮತಿಸದಾಗ ಕಥೆ ಏನೂ ಗೊತ್ತಿಲ್ಲದ ನಿನ್ನನ್ನು ಡಮಾಸ್ಕಸ್ ನಿಂದ ಮದುವೆಯಾಗಿ ತಂದದ್ದಲ್ಲವೆ?
ಏನಾಯಿತು ಅವರಿಗೀಗ ಏನೂ ತೊಂದರೆ ಇಲ್ಲಲ್ವ ಮತ್ತೇನು, ನನಗೆ ನನ್ನ ಜೀವನದಲ್ಲಿ ಸಿಗಬಹುದದ್ದರಲ್ಲಿ ಅತ್ಯುತ್ತಮ ಗಂಡನಾಗಿದ್ದಾರೆ ಅಯ್ಯೂಬ್ ನೆಬಿ ಅಲೈಹಿಸ್ಸಲಾಂ
ನಿನಗೆ ಈಗ ಹಾಗೆ ಅನಿಸಬಹುದು ಸ್ವಲ್ಪ ಸಮಯ ಕಳೆದಾಗ ನಿನ್ನ ಅಭಿಪ್ರಾಯ ಬದಲಾಗಬಹುದು ನಂತರ ಆ ಅಜ್ಜಿಯು ಕೇಳಿತು ಮದುವೆಯಾಗಿ ಎಲ್ಲಾದರು ಯಾತ್ರೆ ಹೋಗುವುದಿದೆಯಲ್ವ ನೀನು ನಿನ್ನ ಗಂಡನ ಜೊತೆಗೆ ಎಲ್ಲಿಗಾದರು ಯಾತ್ರೆ ಹೋಗಿಲ್ವ?
(السفر قطعة من العذاب)
ಯಾತ್ರೆ ನಿಮಗೆ ಪರೀಕ್ಷಣೆಯಾಗಿದೆ -ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿವಸಲ್ಲಂ
ಕಾರಣ ಯಾತ್ರೆಯಲ್ಲಿ
ಇಬಾದತ್ ಗಳಿಗೆ ಅಡಚಣೆಯಾಗುವ ಸಂದರ್ಭಗಳಿರುತ್ತದೆ .
ಅಲ್ಲಾಹು ಖುರಾನ್ ನಲ್ಲಿ ಯಾತ್ರೆ ಹೋಗಲೂ ಹೇಳಿದ್ದಾನೆ
(سيروا في الأرض فانظروا)
ಭೂಮಿಯುದ್ದ ನೀವು ಸಂಚರಿಸಬೇಕು
ಯಾಕೆಂದರೆ ಕೇವಲ ಕಾಣುವುದಕ್ಕಲ್ಲ ಅದರಿಂದ ಅಲ್ಲಾಹನನ್ನು ಸ್ಮರಿಸಲಿಕ್ಕಾಗಿ, ಸೃಷ್ಟಿಸಿದ ಸೃಷ್ಟಿಕರ್ತನನ್ನು ಅರಿಯಲು
ಅದಕ್ಕಾಗಿ ಅಲ್ಲಾಹನು ಯಾತ್ರೆಹೋಗಲು ಹೇಳಿದ್ದಾನೆ)
ರಹ್ಮತ್ ಬೀವಿ ಹೇಳಿದರು ಅಮ್ಮಾ ನಾವು ಒಂದು ಯಾತ್ರೆಗೆ ಸಜ್ಜಾಗುತ್ತಿದ್ದೇವೆ
ಇದು ಕೇಳಿ ಇಬ್ಲೀಸಿಗೆ ಖುಷಿಯಾಯಿತು ಹೌದ ಯಾತ್ರೆ ಹೋಗ್ತೀರ ಎಲ್ಲಿಗೆ ನಿಮ್ಮ ಯಾತ್ರೆ?
ಅದು ಇಲ್ಲಿಯೆ ಹತ್ತಿರಕ್ಕೆ ಯಾತ್ರೆ
ಹತ್ತಿರಕ್ಕೆ ಯಾಕೆ ಯಾತ್ರೆ? ಯಾತ್ರೆ ಅಲ್ಪ ದೂರಕ್ಕೆ ಹೋಗಬೇಕಲ್ವ?
ಅಲ್ಲಿಯವರೆಗೇ ಜನರು ನಮ್ಮನ್ನು ಕೊಂಡು ಹೋಗುವರು
ಇಬ್ಲೀಸಿಗೆ ಆಶ್ಚರ್ಯ ಜನರು ಕೊಂಡುಹೋಗುವ ಯಾತ್ರೆಯ? ಅದೆಂತಹ ಯಾತ್ರೆ ಮಗಳೆ!?
ಅಮ್ಮಾ ಅಂತಹ ಒಂದು ಯಾತ್ರೆಯೂ ಇದೆ
ಆ ಯಾತ್ರೆಗೆ ಕೊಂಡುಹೋಗುವ ಆವಶ್ಯ ವಸ್ತುಗಳ ಸಜ್ಜೀಕರಣದಲ್ಲಿದ್ದೇವೆ ನಾವು
ಆ ಯಾತ್ರೆಗೆ ಬೇಕಾದದ್ದು ಇಬಾದತ್, ದಾನಧರ್ಮ, ಹಾಗು ಸತ್ಕರ್ಮಗಳೊಂದಿಗೆ ಮಾತ್ರ ನಮಗೆ ಉತ್ತಮ ಯಾತ್ರೆಯಾಗಲು ಸಾಧ್ಯ ಅಲ್ಲವಾದರೆ ನಮ್ಮ ರಬ್ಬ್ ಬಿಡಲಾರನು ಅದುವೆ ಮಯ್ಯಿತ್ ಮಂಚದಲ್ಲಿ ನಮ್ಮನ್ನು ಕೊಂಡೊಯ್ಯುವ ಯಾತ್ರೆ ಆದ್ದರಿಂದ ಅಲ್ಲಾಹನಿಗೋಸ್ಕರ ಸಮಯ ವಿನಿಯೋಗಿಸಲೆ ಅಮ್ಮಾ
ದುನಿಯಾದ ಕಾರ್ಯಗಳ ಮಾತುಕತೆ ನಡೆಸಲು ನನಗೆ ಸಮಯವಿಲ್ಲ ನಿಮಗೆ ಇನ್ನು ಹೋಗಬಹುದು
ಆಗ ಇಬ್ಲೀಸನಿಗೂ ಅರಿವಾಗುತ್ತದೆ ಅಲ್ಲಾಹನ ನೆಬಿ ಅಯ್ಯೂಬ್ ಕೊಂಡು ಬಂದ ಹೆಣ್ಣೂ ಪರವಾಗಿಲ್ಲ!
ಆದರೆ ನಾನು ನಿಮ್ಮನ್ನು ಬಿಡಲಾರೆ ಎಲ್ಲಾ ಘಟ್ಟಗಳಲ್ಲೂ ನಿಮ್ಮ ಜೊತೆಗೆ ನಾನಿದ್ದೇನೆಂಬ ಸೂತ್ರದೊಂದಿಗೆ ಅಲ್ಲಿಂದ ಹೊರಟ
ಅಯ್ಯೂಬ್ ನೆಬಿ ಹಾಗೂ ರಹ್ಮತ್ ಬೀವಿಯ ದಾಂಪತ್ಯದಲ್ಲಿ ಎರಡು ಮಕ್ಕಳು ಜನಿಸಿದವು
ಎರಡೂ ಗಂಡು ಮಕ್ಕಳು
ಮಕ್ಕಳು ಅರಮನೆಯಲ್ಲಿ ಆಡಿ ನಲಿಯುವ ಪ್ರಾಯ..
ವರ್ಷಗಳು ಕಳೆಯಿತು ..
ಒಂದು ದಿನ ಅಯ್ಯೂಬ್ ನೆಬಿ ಅಲೈಹಿಸ್ಸಲಾಂ ಕೋಣೆಯೊಳಗೆ
ನಮಾಜ್ ಮಾಡಲೆಂದು ನಿಂತಾಗ ಹೊರಗಿನಿಂದ ಬಹಳ ಜೋರಾಗಿ ಸದ್ದು ಗದ್ದಲ ಕೇಳಿಸುತ್ತಿತ್ತು
ರಹ್ಮತ್ ಬೀವಿಯನ್ನು ಕರೆದು ಕೇಳಿದರು
ಯಾರದು ಶಬ್ದ ಮಾಡುತ್ತಿರುವುದು ?
ಅದು ನಮ್ಮ ಮಕ್ಕಳು ಆಟವಾಡುತ್ತಿರುವುದಾಗಿದೆ
ರಹ್ಮತ್ ಬೀವಿಯಲ್ಲಿ ಹೇಳಿದರು
ಪ್ರಿಯೆ ನೀನು ರಾಜಕುಮಾರಿ, ನಾನು ರಾಜಕುಮಾರ ನಾವು ಜನಿಸಿದ್ದೂ ಬೆಳೆದದ್ದೂ ಅರಮನೆಯಲ್ಲಿಯೆ ಆದರೂ ನಾವೆಂದೂ ಇಲ್ಲಿನ ಐಶಾರಾಮಿ ಜೀವನವನ್ನು ಮೋಹಿಸಲಿಲ್ಲ ಆದರೆ ನಮ್ಮ ಮಕ್ಕಳೇನಾದರು ಇಲ್ಲಿನ ಐಶಾರಾಮಿ ಜೀವನವನ್ನು ಮೋಹಿಸಿ ಅಲ್ಲಾಹನಲ್ಲಿ ಭಯ ಭಕ್ತಿ ಇಲ್ಲದಾಗಬಹುದೊ ಎಂಬ ಭಯ ನನಗಿದೆ.
ಆದ್ದರಿಂದ ನಿನ್ನಲ್ಲಿ ನಾನು ಒಂದು ಕಾರ್ಯ ಕೇಳಲೆ ?
ಕೇಳಿ ಏನದು ? ನಮಗೇಕೆ ಈ ಐಶಾರಾಮ..
ನಮಗೀ ಅರಮನೆ ತ್ಯಜಿಸಿ ಡಮಾಸ್ಕಸಿನ ಬೀದಿಯಲ್ಲೊಂದು ಗುಡಿಸಲು ಕಟ್ಟಿ ಜೀವಿಸಿದರೆ ಸಾಲದೆ? ಇದು ಕೇಳಿದಾಗ ರಹ್ಮತ್ ಬೀವಿಯ ಉತ್ತರ
ನೆಬಿಯೆ ಈ ಯೋಚನೆ ನನ್ನ ಮನಸ್ಸಿನಲ್ಲಿ ಹಲವು ವರ್ಷಗಳಿಂದ ಇದೆ, ನಮಗೀ ಅರಮನೆ ಬೇಕಾಗಿಲ್ಲ ಆದರೆ ನಾನಿದು ಹೇಳದೆ ಇದ್ದದ್ದು ನಿಮ್ಮ ಕುಟುಂಬವನ್ನು ಬಿಟ್ಟು ಬೇರೆಯೆ ವಾಸಿಸಲು ನಾನು ನನ್ನ ಸ್ವಾರ್ಥಭಾವದಿಂದ ಹೇಳಿದ್ದಾಗಿರಬೇಕೆಂದು ಯಾರಾದರೂ ಒಂದು ವೇಳೆ ತಪ್ಪು ತಿಳ್ಕೊಂಡಾರೋ ಎಂದು ನಾನಿದುವರೆಗೂ ಸುಮ್ಮನಿದ್ದೆ ಎಂದಾಗಿತ್ತು.
ರಹ್ಮತ್ ಬೀವಿಯ ಮಾತುಕೇಳಿ ಅಯ್ಯೂಬ್ ನೆಬಿಗೆ ಬಹಳ ಸಂತೋಷವಾಯಿತು
ನಂತರ ಡಮಾಸ್ಕಸಿನ ಬೀದಿಯಲ್ಲಿ ಹಣ ಕೊಟ್ಟು ಒಂದು ಸಣ್ಣ ಜಾಗ ಖರೀದಿಸಿ ಒಂದು ಗುಡಿಸಲು ಕಟ್ಟಿ ವಾಸಿಸಿದರು
ಚರಿತ್ರೆಯಲ್ಲಿ ನೊಡುವಾಗ ಬಹಳ ದುಃಖಕರವಾದ ಸಂಗತಿಯೇನೆಂದರೆ ಡಮಾಸ್ಕಸ್ ಪ್ರದೇಶದಲ್ಲಿ ಅತೀ ಸಣ್ಣ ಮನೆ ಯಾರದೆಂದು ಕೇಳಿದರೆ ಅದಕ್ಕೆ ಒಂದೇ ಉತ್ತರವಾಗಿತ್ತು ಅದು ಎರಡು ಅರಮನೆಯಲ್ಲಿ ವಾಸಿಸಲು ಭಾಗ್ಯ ಲಭಿಸಿದ ರಾಜಕುಮಾರನ ಹಾಗೂ ರಾಜಕುಮಾರಿಯ ಮನೆಯಾಗಿದೆ ಎಂದಾಗಿತ್ತು..
ಅದಾಗಿದೆ ಅಯ್ಯೂಬ್ ನೆಬಿಯ ಗುಡಿಸಲು ಮನೆ.
ಆ ಮನೆಯಲ್ಲಿ ವಾಸಮಾಡಿ ನಾಲ್ಕು ತಿಂಗಳಾದಾಗ ಒಮ್ಮೆ ಅಯ್ಯೂಬ್ ನೆಬಿಯು ರಹ್ಮತ್ ಬೀವಿಯೊಡನೆ ಕೇಳಿದರು ಮೂರ್ನಾಲ್ಕು ತಿಂಗಳಾಯಿತು ನಾವು ಅರಮನೆ ಬಿಟ್ಟು ನನಗೆ ಕುಟುಂಬದವರನ್ನೊಮ್ಮೆ ಕಾಣಬೇಕು
ನಾನೊಮ್ಮೆ ಅರಮನೆಗೆ ಹೋಗಿ ಬರಲೆ?
ರಹ್ಮತ್ ಬೀವಿ ಹೇಳಿದರು ನಾನೂ ಬರಲೆ? ನಾನೂ ಕುಟುಂಬದವರನ್ನು ಕಾಣಬಹುದಲ್ವೆ
ನಮಗಿಬ್ಬರಿಗೂ ಒಂದಾಗಿ ಹೋಗಬಹುದೆಂದಾಗ ಅಯ್ಯೂಬ್ ನೆಬಿಯು
ನಮ್ಮ ಮಕ್ಕಳೆಲ್ಲಿ?
ಮಕ್ಕಳು ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದಾರೆ
ಹಾಗಾದರೆ ಅವರನ್ನೂ ಇಲ್ಲಿ ಕರೆ ಎಂದರು ರಹ್ಮತ್ ಬೀವಿಯು ಮಕ್ಕಳನ್ನು ಕರೆದುತಂದರು
ಮಕ್ಕಳು ಕೇಳಿದರು ಅಪ್ಪ ಅಮ್ಮಾ ನೀವೆಲ್ಲಿ ಹೋಗುವಿರಿ?
ನಾವು ಅರಮನೆಗೆ ಹೋಗುವೆವು ಕುಟುಂಬದವರನ್ನೊಮ್ಮೆ ಕಂಡು ಬರಲು ನಿಮಗೆ ನಮ್ಮ ಜೊತೆಗೆ ಬರುವುದಾದರೆ ಬರಬಹುದು ಇಲ್ಲಾಂದ್ರೆ ಆಟವಾಡಿ ಇಲ್ಲೆ ನಿಲ್ಲುವುದಾದರೆ ನಿಲ್ಲಬಹುದು
ಇಲ್ಲ ಅಪ್ಪಾ ನಾವು ಬರುವುದಿಲ್ಲ ನಾವಿಲ್ಲಿ ಆಟ ಆಡುತ್ತಿರುತ್ತೇವೆ ನೀವು ಹೋಗಿ ಬನ್ನಿ ಎಂದರು ಆ ಮಕ್ಕಳು.
ಅಯ್ಯೂಬ್ ನೆಬಿಯು ನೆರೆಮನೆಯವರಲ್ಲಿ ಹೇಳಿದರು ನಾವೊಮ್ಮೆ ಅರಮನೆಗೆ ಹೋಗಿ ಬರುತ್ತೇವೆ ನಮ್ಮ ಮಕ್ಕಳನ್ನು ಸ್ವಲ್ಪ ನೋಡಿಕೊಳ್ಳಿ ಎಂದಾಗ ಪರವಾಗಿಲ್ಲ ನೆಬಿಯವರೇ ನಮ್ಮ ಮಕ್ಕಳೂ ಜೊತೆಗಿದ್ದಾರೆ ಏನೂ ತೊಂದರೆಯಾಗದು ನೀವು ಹೋಗಿ ಬನ್ನಿ ಎಂದರು.
ಅವರಿಬ್ಬರು ಡಮಾಸ್ಕಸಿನ ಅರಮನೆಗೆ ಹೋಗುವರು
ಅರಮನೆ ಸಮೀಪಿಸುತ್ತಿದ್ದಂತೆ..
ಅವರ ಜೀವನದ ಮೊದಲನೆಯ ಪರೀಕ್ಷಣೆ..
ಡಮಾಸ್ಕಸಿನ ಪ್ರಕೃತಿ ಬದಲಾಗತೊಡಗಿತು..
ಜೋರಾಗಿ ಮಳೆ ಬರುವ ಎಲ್ಲಾ ಲಕ್ಷಣಗಳು ಕಾಣತೊಡಗಿತು..
ನೆಬಿಯವರು ಆಕಾಶಕ್ಕೆ ನೋಡಿದರು
ಮಳೆಯು ಮೆಲ್ಲ ಮೆಲ್ಲನೆ ಬರಲಾರಂಭಿಸಿ ನಂತರ
ಜೋರಾಗಿ ಗಾಳಿ ಬೀಸತೊಡಗಿತು, ಸಿಡಿಲು ಮಿಂಚೂ ಜೋರಾಗಿತ್ತು
ಇದು ಕಂಡು ಅಯ್ಯೂಬ್ ನೆಬಿಯು ನಾವೀಗ ಬರಬೇಕಾಗಿರಲಿಲ್ಲ ಜೋರಾಗಿ ಮಳೆಯೂ ಗಾಳಿಯೂ ಬರುತ್ತಿದೆ
ನಮ್ಮ ಮಕ್ಕಳು ಮಾತ್ರವಲ್ಲವೆ ಅಲ್ಲಿ ಮಕ್ಕಳೀಗ ಏನು ಮಾಡುವರೊ ಏನೋ
ಪತಿಯು ಆತಂಕಪಡುವಾಗ ಮಕ್ಕಳನ್ನು ಬಿಟ್ಟು ಬಂದ ಸಂಕಟ ಮನಸ್ಸಿನೊಳಗೆ ದುಪ್ಪಟ್ಟು ಇದ್ದರೂ ಪ್ರಿಯ ಪತ್ನಿಯು ಅವರನ್ನು ಸಮಾಧಾನಿಸುತ್ತ ಹೇಳಿದರು ನೀವು ಚಿಂತಿಸಬೇಡಿ ಏನೂ ಆಗದು
ಮಕ್ಕಳು ನೆರೆಯಮನೆಯಲ್ಲಲ್ಲವೆ ಇರುವುದು ಅವರು ಗಾಳಿಮಳೆಗೆ ನೆರೆಮನೆಯಲ್ಲೆ ನಿಲ್ಲಬಹುದೆಂದಾಗ
ಆದರೂ ಒಂದು ವೇಳೆ ನಮ್ಮ ಮಕ್ಕಳೆಲ್ಲಾದರು ನಮ್ಮ ಮನೆಗೆ ಹೋಗಿ ನಿಂತರೆ ಏನಾಗಬಹುದೊ!
ಪುಟಾಣಿ ಸಹೋದರರು ಸಿಡಿಲು ಮಿಂಚಿನ ಆರ್ಭಟದಿಂದ ಕೂಡಿದ ಮಳೆಯ ಕಂಡು ಬೆಚ್ಚಿ ಬಿದ್ದರು. ಈ ರೀತಿಯ ಮೊದಲ ಅನುಭವ ಇದುವರೆಗೆ ಕಂಡಿಲ್ಲದ ಭಾರೀ ಮಳೆ...
ಏನು ಮಾಡಬೇಕೆಂದು ಅರಿಯದ ಆ ಮುಗ್ಧ ಮಕ್ಕಳು.. "ಅಮ್ಮಾ.." ಎಂದು ಚೀರುತ್ತಾ ಗುಡಿಸಲಿನ ಕಡೆ ಓಡಿದರು.
ಪಕ್ಕದ ಮನೆಯವರು ನಿಮ್ಮ ಮನೆಯಲ್ಲಿ ಯಾರೂ ಇಲ್ಲ ಅಲ್ಲಿ ಹೋಗಬೇಡಿ ಮಕ್ಕಳನ್ನು ಎಷ್ಟು ಕರೆದರೂ ಸಿಡಿಲಿನ ಆರ್ಭಟಕ್ಕೆ ಮಕ್ಕಳಿಗೆ ಕೇಳಲಿಲ್ಲ ಮಕ್ಕಳು ಓಡುತ್ತಾ ಗುಡಿಸಲಿಗೆ ಹೋಗಿ ಒಂದೇ ಸಮನೆ ಬಾಗಿಲು ಹಾಕಿದರು. ಮಕ್ಕಳ ಚೀರಾಟ, ಕೂಗಾಟ, ಸಮಾಧಾನಿಸಲು ತಂದೆ ತಾಯಿಗಳಿಲ್ಲ.
ಒಂದು ಕಡೆ ಮಕ್ಕಳ ನೆನೆದು ಚಡಪಡಿಸುತ್ತಿರುವ ತಂದೆ ತಾಯಿ ಇನ್ನೊಂದು ಕಡೆ ಭಯಬೀತರಾದ ಮುಗ್ಧ ಮಕ್ಕಳು
ಖರ್ಜೂರದ ಗರಿಗಳಿಂದ ಮುಚ್ಚಿದ ಆ ಗುಡಿಸಲು..
ಗಾಳಿಯ ರಭಸಕ್ಕೆ ಅದು ಹಾರಿ ಹೋಯಿತು ಮಳೆಯ ನೀರೆಲ್ಲಾ ಮನೆಯೊಳಗೆ ಬೀಳುತ್ತಿದೆ
ಮಕ್ಕಳು ದಿಗ್ಭ್ರಾಂತಗೊಂಡರು
ಇನ್ನೇನು ಮಾಡಲಿ ಪಕ್ಕದ ಮನೆಗೆ ಓಡಲೆಂದು ಹೊರಗೆ ಬಂದಾಗ ಭಾರೀ ಗಾಳಿ ಮಳೆಯ ಜೊತೆಗೆ ಸಿಡಿದ ಸಿಡಿಲಿಗೆ ಮಕ್ಕಳು ಗಾಬರಿಯಿಂದ ಹೈರಾನಾಗಿ ಎಲ್ಲಿ ಹೋಗಬೇಕೆಂದು ದಿಕ್ಕುತೋಚದೆ ಪಾಪ ಅವರು ಆ ಗುಡಿಸಲಿಗೇ ಹಿಂದಿರುಗಿದರು
ಧಾರಾಕಾರ ಮಳೆ ಗಾಳಿ ಸುರಿಯುತ್ತನೇ ಇತ್ತು
ತಕ್ಷಣ ಅವರಿದ್ದ ಗುಡಿಸಲಿನ ಗೋಡೆಯು ಇವರ ಮೇಲೆ ಬಿದ್ದೇಬಿಟ್ಟಿತು
ಮಕ್ಕಳೆರಡು ದಾರುಣವಾಗಿ ಮಣ್ಣಿನಡಿಯಲ್ಲಿ ಮರಣವನ್ನಪ್ಪಿದರು
ಈ ದುರ್ಘಟನೆ ನೆರೆಹೊರೆ ಪ್ರದೇಶದವರಿಗೆ ತಿಳಿಯಲಿಲ್ಲ
ಹಲವು ತಾಸುಗಳ ಬಳಿಕ ವಾತಾವರಣ
ತುಸು ಶಾಂತ ಸ್ಥಿತಿಗೆ ಮರಳಿದಾಗ
ಅಯ್ಯೂಬ್ ನೆಬಿ ರಹ್ಮತ್ ಬೀವಿಯೊಡನೆ ಹೇಳಿದರು ಹೊರಡೋಣ ಇನ್ನು ನಿಲ್ಲುವುದು ಬೇಡ ಮಳೆ ಪೂರ್ತಿ ನಿಲ್ಲಲು ಕಾಯುವುದು ಬೇಡವೆಂದು ಮಳೆಯಲ್ಲಿ ಒದ್ದೆಯಾಗುತ್ತಾ ಡಮಾಸ್ಕಸಿಗೆ ಮಕ್ಕಳಿಗೇನಾಗಿರಬಹುದೆಂದು ನೆನೆಸಿ ಗಾಬರಿಯಿಂದ ಬರುತ್ತಿರುವ ಸಂದರ್ಭ ..
ನೆರೆಮನೆಯವರು ಬಾಗಿಲು ತೆರೆದು ನೇರ ಅಯ್ಯೂಬ್ ನೆಬಿಯವರ ಮನೆಗೆ ನೋಡಿದಾಗ ಆ ದ್ರೃಶ್ಯ ಕಂಡು ಹೈರಾನಾದರು ಅವರು ಸಂಕಟದಿಂದ ಓಡಿ ಹೋಗಿ ನೋಡುವಾಗ ಮಕ್ಕಳು ಮಣ್ಣಿನಡಿಯಲ್ಲಿ ದಾರುಣವಾಗಿ ಮೃತಪಟ್ಟಿದ್ದರು ಅವರು ಸಂಕಟದಿಂದ ಕೂಗಿದಾಗ ಪರಿಸರದ ಜನರೆಲ್ಲಾ ಸೇರಿದರು ..
ಎರಡೂ ಮಕ್ಕಳ ಮಯ್ಯಿತ್ ತೆಗೆದು ಪಕ್ಕದ ಮನೆಯಲ್ಲಿ ಬಿಳಿವಸ್ತ್ರ ಹಾಸಿ ಮಯ್ಯತ್ತನ್ನು ಇಟ್ಟು
ವಿಷಯ ತಿಳಿಸಲು ಅರಮನೆಗೆ ಒಬ್ಬರು ಓಡಿದರು
ಓಡುವ ದಾರಿಯಲ್ಲಿ ಅಯ್ಯೂಬ್ ನೆಬಿ ಬರುತ್ತಿದ್ದರು
ಅವರನ್ನು ಕಂಡಾಗ ಓ ಪ್ರವಾದಿಯವರೆ ಅಸ್ಸಲಾಮು ಅಲೈಕುಂ
ವ ಅಲೈಕುಂ ಸಲಾಂ
ನೆಬಿಯವರೆ ನನಗೊಂದು ವಿಷಯ ತಿಳಿಸಲಿಕ್ಕಿದೆ ತಾವು ಸ್ವಲ್ಪ ಇತ್ತ ಬರುವಿರ
ರಹ್ಮತ್ ಬೀವಿಯವರಿಂದ ಸ್ವಲ್ಪ ದೂರ ಕರೆದು ನೆಬಿಯೇ ಘೋರವಾದ ಮಳೆ ,ಗಾಳಿಗೆ ತಮ್ಮ ಮನೆ ದ್ವಂಸವಾಗಿದೆ ಅದು ಕೇಳಿದ ಕೂಡಲೆ ಪ್ರವಾದಿಯವರು
ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್
ಎನ್ನುತ್ತಾ ಮನೆ ದ್ವಂಸವಾಗಲಿ ಪರವಾಗಿಲ್ಲ ಆದರೆ ನನ್ನ ಸಂಕಟ ಅದಲ್ಲ ನನ್ನ ಎರಡು ಮಕ್ಕಳನ್ನು ಕೊಂಡುಹೋಗದೆಯಾಗಿದೆ ನಾನು ಅರಮನೆಗೆ ಹೋದದ್ದು ಅವರು ನೆರೆಮನೆಯಲ್ಲಿ ಆಟವಾಡುತ್ತಿದ್ದರು ಆ ಮಕ್ಕಳ ಅವಸ್ಥೆ ತಿಳಿಯುವುದಕ್ಕಾಗಿದೆ ನಾನು ಓಡಿ ಬರುತ್ತಿರುವುದು
ನನ್ನ ಮಕ್ಕಳು ಈಗ ನೆರೆಮನೆಯಲ್ಲಾ ಇರುವುದು ಅಲ್ಲ ನನ್ನ ಮನೆಯಲ್ಲಾ? ಆ ಯುವಕ ಪ್ರವಾದಿಯನ್ನು ಒಮ್ಮೆಲೆ ದುಃಖಿಸುವುದು ಬೇಡವೆಂದು ಯೋಚಿಸಿ ಮಕ್ಕಳಿಬ್ಬರೂ ನೆರೆಯಮನೆಯಲ್ಲಿದ್ದಾರೆಂದು ಹೇಳಿದಾಗ ಪ್ರವಾದಿಯವರು ಮುಗುಳ್ನಗುತ್ತಾ ಅಲ್ಹಂದುಲಿಲ್ಲಾಹ್ ಎಂದರು ದ್ವಂಷವಾದ ಮನೆಯಲ್ಲಿ ಮಕ್ಕಳಿಲ್ಲವೆಂದರಿತು ಸಂತೋಷಪಡುವುದೆಂದರಿತ ಆ ವ್ಯಕ್ತಿಗೆ ದುಃಖ ಸಹಿಸಲಾಗಲಿಲ್ಲ ಕೂಡಲೆ ಆ ವ್ಯಕ್ತಿ ತಿರುಗಿ ನಿಂತ ಅಳು ಬಂದು ಕಣ್ಣು ತುಂಬಿದಾಗ ನೆಬಿಯವರು ಕೇಳಿದರು ಯಾಕೆ ನೀನು ಅಳುತ್ತಿರುವೆ? ಏನು ಸಮಸ್ಯೆ? ಏನಿದ್ದರು ನನ್ನೊಡನೆ ಹೇಳು ನಾನು ಅಲ್ಲಾಹನ ಪ್ರವಾದಿ ಆ ವ್ಯಕ್ತಿ ಹೇಳಿದ ನೆಬಿಯೆ ನನ್ನನ್ನು ಕ್ಷಮಿಸಬೇಕು ಮಕ್ಕಳು ನೆರೆಮನೆಯಲ್ಲಿದ್ದಾರೆಂಬುದು ಸತ್ಯವಾಗಿದೆ ಆದರೆ ಜೀವಿಸಿ ಅಲ್ಲ !
ನೆಬಿ ಗಾಬರಿಯಿಂದ ಮತ್ತೆ.. ಮತ್ತೇನಾಯಿತು?!
ನಿಮ್ಮ ಇಬ್ಬರು ಮಕ್ಕಳೂ ಆ ಧ್ವಂಸವಾದ ಮನೆಯಲ್ಲಾಗಿತ್ತು ಇದ್ದದ್ದು
ಮನೆ ಧ್ವಂಸವಾದಾಗ ಇಬ್ಬರು ಮಕ್ಕಳೂ ಮರಣವಪ್ಪಿದರು ಎಂದ
ಮರಣಪಟ್ಟರೆಂದು ಆ ವ್ಯಕ್ತಿ ಉಚ್ಚರಿಸಿದ್ದು ಸ್ವಲ್ಪ ಜೋರು ಸ್ವರದಲ್ಲಾಗಿತ್ತು.
ಹೆತ್ತ ತಾಯಿಗೂ ಆ ಶಬ್ದ ಕೇಳಿಸಿತು ಮಕ್ಕಳು ಮರಣಪಟ್ಟಿದೆಯೆಂದು ಇದು ಕೇಳಿದಾಗ
ಸಂಕಟ ತಾಳಲಾರದೆ ರಹ್ಮತ್ ಬೀವಿಯು ನೆಲಕ್ಕೆ ಬಿದ್ದುಬಿಟ್ಟರು
ಅಯ್ಯೂಬ್ ನೆಬಿಯು ನಿಧಾನವಾಗಿ ರಹ್ಮತ್ ಬೀವಿಯ ಬಳಿ ತೆರಳಿ ರಹ್ಮತ್ ಬೀವಿಯ ಹೆಗಲಿಗೆ ಮೆಲ್ಲನೆ ತಟ್ಟಿದರು
ರಹ್ಮತ್ ಬೀವಿ ಅಯ್ಯೂಬ್ ನೆಬಿಯ ಮುಖಕ್ಕೆ ನೋಡಿ ಹೇಳಿದರು ನಮಗೆ ನಮ್ಮ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಾಬಾರದಿತ್ತೆ..?
ಬರುವುದಿಲ್ಲಾ ಎಂದರೂ ಕರಕೊಂಡು ಹೋಗಬಹುದಿತ್ತು
ಇನ್ನು ನಾನು ಅಲ್ಲಿ ಹೋಗುವಾಗ ಅಮ್ಮಾ ಎಂದು ಓಡಿ ಬರಲು ನನಗಿನ್ನು ಮಕ್ಕಳೆಲ್ಲಿ ನಾನು ಕೈಯಿಂದ ಉಣ್ಣಿಸುತ್ತಿದ್ದ ಅನ್ನಕ್ಕಾಗಿ ಕಾಯುತ್ತಿದ್ದ ನನ್ನ ಮುದ್ದಿನ ನನ್ನ ಕಂದಮ್ಮಗಳು ಇನ್ನೆಲ್ಲಿ ...
ಹೆತ್ತ ತಾಯಿಗೆ ತನ್ನ ಕಂದಮ್ಮನ ಅಗಲಿಕೆಯ ವೇದನೆಯನ್ನು ಲಿಖಿತವಾಗಿ ತಿಳಿಸಲು ಸಾಧ್ಯವಿಲ್ಲ.
ಎಲ್ಲವೂ ಅಲ್ಲಾಹನ ವಿಧಿಯಂತೆ ನಡೆಯುತ್ತದೆ ಸಹಿಸುವುದು ಅನಿವಾರ್ಯವಾಗಿದೆ ಎದ್ದೇಳು ಎಂದು ಸಮಾಧಾನಿಸುತ್ತಾ ರಹ್ಮತ್ ಬೀವಿಯನ್ನು ಕರೆದುಕೊಂಡು ಹೋದರು
ದೊಡ್ಡ ಜನಸಂದಣಿ ಸೇರಿತ್ತು
ತಾಸುಗಳ ಬಳಿಕ
ತನ್ನ ಮಕ್ಕಳಿಗೆ ಕಬರ್ ತೋಡಲು ಪ್ರವಾದಿಯವರು ತಿಳಿಸಿದರು
ಡಮಾಸ್ಕಸಿನ ಖಬರ್ ಸ್ಥಾನದಲ್ಲಿ ತನ್ನೆರಡು ಮಕ್ಕಳ ದಫನ ಕಾರ್ಯ ನೆರವೇರಿಸಲಾಯಿತು
ನಂತರ ಅಯ್ಯೂಬ್ ನೆಬಿಯವರಲ್ಲಿ ಜನರು ಕೇಳಿದರು ನೆಬಿಯೆ ತಾವಿನ್ನು ಎಲ್ಲಿ ವಾಸಿಸುವುದು ಗುಡಿಸಲು ಸರಿಪಡಿಸಬೇಕೆ ಅಲ್ಲ ಅರಮನೆಗೆ ಹಿಂತಿರುಗುವಿರಾ.?
ಇಲ್ಲ ಅರಮನೆಗೆ ಹಿಂತಿರುಗುವುದಿಲ್ಲ..
ಗುಡಿಸಲು ಸರಿಪಡಿಸಬೇಕೆಂದರು
ಕೆಲವೇ ತಾಸುಗಳೊಳಗೆ ಗುಡಿಸಲು ಸರಿಪಡಿಸಲಾಯಿತು ಅಷ್ಟಕ್ಕೇ ಸೀಮಿತವಾಗಿತ್ತು ಆ ಗುಡಿಸಲು..
ಈ ಅನಿರೀಕ್ಷಿತ ದುರ್ಘಟನೆಗೆ ಡಮಾಸ್ಕಸ್ ದುಃಖಸಾಗರವಾಯಿತು..
ಮಕ್ಕಳು ನಷ್ಟಪಟ್ಟಂತಹ ಅತೀವ ದುಃಖದಿಂದ ಕುಳಿತಿರುವ ಸಂದರ್ಭವ ನೋಡಿ ಈ ಸಂದರ್ಭದಲ್ಲಿ ಏನಾದರು ಪಿತೂರಿ ಮಾಡಬಹುದೋ ಎಂದು ಅಲ್ಲಿಗೆ ಆಗಮಿಸಿದ ಇಬ್ಲೀಸ್
ಇಬ್ಲೀಸನು ಒಬ್ಬ ಯುವಕನ ವೇಷದಲ್ಲಿ ಬಂದು ಸಲಾಮ್ ಹೇಳಿಕೊಂಡು ಕೇಳಿದ ನೆಬಿಯೇ ಶಕ್ತವಾದ ಗಾಳಿ, ಮಳೆಗೆ ಮನೆ ನಷ್ಟಪಟ್ಟಿತು ಮಕ್ಕಳೂ ನಷ್ಟಪಟ್ಟಿತಲ್ಲವೆ ತಕ್ಷಣ ನೆಬಿಯವರು ಹೇಳಿದರು
ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್..
ಇದಾಗಿದೆ ಸಜ್ಜನರ ಲಕ್ಷಣ ತೊಂದರೆಗಳು ಬಂದಾಗ ಅಲ್ಲಾಹನಿಗೆ ಸಮರ್ಪಿಸುವುದು.
ಅಯ್ಯೂಬ್ ನೆಬಿಯು ಸಂಕಟವನ್ನು ಅಲ್ಲಾಹನಿಗೆ ಸಮರ್ಪಿಸಿದಾಗ ಇಬ್ಲೀಸ್ ಜೊರಾಗಿ ನಕ್ಕುಬಿಟ್ಟ
ಅಯ್ಯೂಬ್ ನೆಬಿಯು ಕೇಳಿದರು ಯಾಕಾಗಿ ನೀನು ನಗುತ್ತಿರುವೆ ?
ಮತ್ತೆ ನಾನೇಗೆ ನಗದಿರಲಿ ಶಕ್ತವಾದ ಗಾಳಿ ಮಳೆಯು ಡಮಾಸ್ಕಸ್ ಪ್ರದೇಶದಲ್ಲಿ ಬೀಸಿ ನಿಮ್ಮ ಮನೆಯಲ್ಲದ ಬೇರಾವನೊಬ್ಬನ ಮನೆಯು ಧ್ವಂಸವಾಗದಿರುವಾಗ ನಿಮ್ಮ ಮಕ್ಕಳಲ್ಲದ ಬೇರೆ ಯಾವ ಒಂದು ಮನುಷ್ಯನೂ , ಒಂದು ಜೀವಿಯೂ ಮರಣವಪ್ಪಲಿಲ್ಲ
ಸ್ವಂತ ಮಕ್ಕಳ ಜೀವ ಉಳಿಸಲಾಗದ ನೀವು ಅಲ್ಲಾಹನ ಪ್ರವಾದಿಯ?
ತಕ್ಷಣವೆ ಅಲ್ಲಾಹನ ನೆಬಿ ಕುಳಿತಲ್ಲಿಂದ ಥಟ್ಟನೆ ಎದ್ದು ನಿಂತು ಹೇಳಿದರು
ವಲಾ ರಾದ್ದ ಲಿಮಾ ಖಲೈತ ವಲಾ ಮುಬದ್ದಿಲ ಲಿಮಾ ಹಕಂತ ...
ಅಲ್ಲಾಹನ ವಿಧಿಯನ್ನು ನಿನ್ನಿಂದ ತಡೆಯಲು ಸಾಧ್ಯವೆ...? ಅಲ್ಲಾಹನ ವಿಧಿಯನ್ನು ತಡೆಯಲು ಈ ಪ್ರಪಂಚದಲ್ಲಿ ಯಾವೊಬ್ಬನಿಗೂ ಸಾಧ್ಯವಿಲ್ಲ ..
ನನ್ನ ಮಕ್ಕಳ ಜನ್ಮವು ಅಲ್ಲಾಹು ಕೊಟ್ಟ ಔದಾರ್ಯವಾಗಿದೆ ಅದರ ರೂಹ್ ಹಿಡಿಯಲು ಅಲ್ಲಾಹನಿಗೆ ಅವಕಾಶ ಇದೆ ಆ ಅರ್ಹತೆಯಲ್ಲಿ ಕೈ ಹಾಕಲು ಪ್ರಪಂಚದ ಯಾವ ವ್ಯಕ್ತಿಗೂ ಸಾಧ್ಯವಿಲ್ಲ ಎಂದರು ಅಯ್ಯೂಬ್ ನೆಬಿ.
ಇದು ಕೇಳಿದ ಇಬ್ಲೀಸನು ತಿರುಗಿ ನಿಂತು ನೆಬಿ ನಿಮ್ಮ ಮನಸ್ಸೊಳಗಿರುವ ತಖ್ವಾ ಭಯಭಕ್ತಿ ನಾನು ಒಡೆಯುವೆನು ಈಗಲ್ಲದಿದ್ದರೆ ಇನ್ನೊಮ್ಮೆ ಎಂದು ಇಬ್ಲೀಸ್ ಅಲ್ಲಿಂದ ಹೊರಟ..
ಅಯ್ಯೂಬ್ ನೆಬಿಯವರನ್ನು ಮೂರು ಘಟಕಗಳಲ್ಲಿ ಪರೀಕ್ಷಿಸಿ ನೋಡಲು ಇಬ್ಲೀಸನು ಅಲ್ಲಾಹನೊಡನೆ ಅನುಮತಿ ಕೇಳಿದ್ದ....
ಅದಕ್ಕಾಗಿ ಮೂರು ಅವಕಾಶವನ್ನು ನೀಡಿದ್ದ..
ಇಬ್ಲೀಸನಿಗೆ ಮನುಷ್ಯನ ಶರೀರದ ಎಲ್ಲಾ ಅಂಗಾಂಗಗಳಿಗೂ, ನರನಾಡಿಗಳಲ್ಲೂ ಸಂಚರಿಸುವ ಶಕ್ತಿ ಅಲ್ಲಾಹು ಕೊಟ್ಟಿದ್ದಾನೆ
ಒಂದು ದಿನ ಇಬ್ಲೀಸ್ ಅಯ್ಯೂಬ್ ನೆಬಿಯವರ ಶರೀರದೊಳಗೆ ಪ್ರವೇಶಿಸಿ ರಕ್ತನಾಳಗಳಲ್ಲೆಲ್ಲಾ ಸಂಚರಿಸಿ ರೋಗ ನಿರೋಧಕ ಶಕ್ತಿಯನ್ನು ನಾಶಗೊಳಿಸಿ ಶರೀರದ ಎಲ್ಲಾ ಭಾಗಗಳಲ್ಲೂ ಗುಳ್ಳೆಗಳೆಬ್ಬಿಸಿತು
ದಿನಕಳೆದಂತೆ ಗುಳ್ಳೆಗಳೊಡೆದು ಅದರಿಂದ ರೇಶಿ ಹೊರಬಂದು ದುರ್ವಾಸನೆ ಬರತೊಡಗಿತು
ನೆಬಿಯವರಿಗೆ ಮನೆಯಿಂದ ಹೊರಗಡೆ ಹೋಗಲು ಅಸಾಧ್ಯವಾದ ಪರಿಸ್ಥಿತಿ ಬಂತು
ಸಂಬಂಧಿಕರು ಕೂಡ ದೂರವಾದರು.
ಶರೀರವೆಲ್ಲಾ ಹುಣ್ಣಾಗಿ ಕೊಳೆತರು ಧಿಕ್ರ್ ಉಚ್ಚರಿಸಿದ ನಾಲಗೆಗೆ ಹಾಗೂ ಹೃದಯಕ್ಕೆ ಏನೂ ಹಾನಿ ಸಂಭವಿಸಲಿಲ್ಲ
ಅವರು ಸದಾ ಧಿಕ್ರ್ ಉಚ್ಚರಿಸುತ್ತಾ ಇದ್ದರು
ಶರೀರದ ಗುಳ್ಳೆಗಳು ಹೊಡೆದು ಅದರಲ್ಲಿ ಹುಳಗಳಾದವು
ತಿಂಗಳುಗಟ್ಟಲೆ ಈ ಸ್ಥಿತಿಯಲ್ಲಿದ್ದರು
ಪ್ರಿಯ ಪತ್ನಿ ಮಾತ್ರ ಜೊತೆಗಿದ್ದರು
ಉಳಿದವರೆಲ್ಲರೂ ದೂರವಾದರು
ಸ್ವತಃ ಕುಟುಂಬದವರು ಕೂಡ ತ್ಯಜಿಸಿದರು
ಕುಷ್ಟರೋಗವೆಂದು ತಪ್ಪಾಗಿ ತಿಳಿದು ಎಲ್ಲರೂ ದೂರವಾದರು
ಇಷ್ಟೆಲ್ಲಾ ನಡೆದರೂ ಅಯ್ಯೂಬ್ ನೆಬಿಯ ಈಮಾನ್ ಗೆ ಭಂಗವಾಗಲಿಲ್ಲ ಅವರು ಅಲ್ಲಾಹನನ್ನು ಸ್ಮರಿಸುತ್ತಲೇ ಇದ್ದರು.
ಇಬ್ಲೀಸನು ಅಷ್ಟಕ್ಕೆ ಬಿಟ್ಟುಬಿಡಲಿಲ್ಲ ಅವನು ಶರೀರದಿಂದ ಹೊರಬಂದು ನೇರ ಯುವಕನ ವೇಷದಲ್ಲಿ ಊರಿನ ಜನರ ಬಳಿ ಹೋಗಿ ಹೇಳತೊಡಗಿದ ಊರವರೇ ನಾನು ಸ್ವಲ್ಪ ದೂರದ ಊರಿನಿಂದ ನೆಬಿಯವರನ್ನು ಕಾಣಲೆಂದು ಬಂದೆ..
ನೀವು ನೆಬಿಯವರನ್ನು ಕಂಡಿದ್ದೀರ ?
ಆಗ ಅವರೆಡೆಯಲ್ಲಿ ಚರ್ಚೆ ತೊಡಗಿತು ಪ್ರವಾದಿಯವರು ಎಲ್ಲೋಗಿದ್ದಾರೆ ಹಲವು ದಿನಗಳಾಗಿದೆಯಲ್ವ ನಾವು ಕಾಣದೆ ಅದರಲ್ಲೊಬ್ಬ ಹೇಳಿದ ಹೌದು ಹಲವು ದಿನಗಳಾಯಿತು ನೆಬಿಯವರನ್ನು ಕಾಣದೆ
ಇಬ್ಲೀಸ್ ಹೇಳಿದ ನೀವೆಂತಹ ಮೂರ್ಖರು
ಆ ವ್ಯಕ್ತಿ ಅಲ್ಲಾಹನ ಪ್ರವಾದಿಯೇನೂ ಅಲ್ಲ ಎಂದಾಗ ಅಲ್ಲಿದ್ದ ಜನರಿಗೆ ಕೋಪ ಬಂತು ಅವರು ಅವನಿಗೆ ಹೊಡೆಯಲು ಮುಂದಾದರು ಆಗ ಇಬ್ಲೀಸ್ ಹೇಳಿದ ಅವನು ನೆಬಿಯೇನೂ ಅಲ್ಲ ..
ಜನ ಕೋಪಗೊಂಡು ಲೇ ದುಷ್ಟ ನೀನೇನು ಹೇಳುತ್ತಿದ್ದಿಯ? ನೆಬಿಯವರನ್ನು ನೆಬಿಯಲ್ಲವೆಂದು ಹೇಳುವೆಯ?!
ಹೌದು ಪ್ರವಾದಿಗಳಿಗೆ ಅಲ್ಲಾಹು ಹಲವು ಸಿಫತ್ ಗಳನ್ನು ನೀಡಿದ್ದಾನೆ ಅದರಲ್ಲಿ ಪ್ರಧಾನವಾಗಿರುವ ಸಿಫತೇನೆಂದರೆ
ಜನರು ಕಾಣುವಾಗ ಅಸಹ್ಯ ಪಡುವಂತಹ ಮಾರಕ ರೋಗಗಳು ಪ್ರವಾದಿಯವರಿಗೆ ಬಾಧಿಸಬಾರದು
ಆದರೆ ನೀವು ನಂಬುವ ಪ್ರವಾದಿಗೆ ಮಾರಕ ರೋಗವಿದೆ .
ನೀನೇನು ಅವಿವೇಕ ಮಾತನಾಡುತ್ತಿರುವೆ ?
ನೀವು ನನ್ನ ಜೊತೆಗೆ ಬನ್ನಿ ಕಾಣಿಸಿಕೊಡುವೆ ಎಂದ
ಜನರನ್ನು ಕರದೆಕೊಂಡು ಹೋಗಿ ಅಯ್ಯೂಬ್ ನೆಬಿಯ ಮನೆಯ ಮುಂದೆ ನಿಲ್ಲಿಸಿದ..
ಅ ಕ್ಷಣದಲ್ಲಿ ಮನೆಯೊಳಗೆ ಏನು ಸಮಾಚಾರವೆಂದರೆ
ರಹ್ಮತ್ ಬೀಬಿ ಅಯ್ಯೂಬ್ ನೆಬಿಯವರೊಡನೆ ಕೇಳುತ್ತಿದ್ದರು ನೆಬಿಯೆ ನಿಮಗೆ ಒಳ್ಳೆಯ ಚಿಕಿತ್ಸೆ ಮಾಡಿಸಬಾರದೆ
ಬೇಡ ರಹ್ಮತೆ ಅತ್ಯುತ್ತಮ ಚಿಕಿತ್ಸಕ ಮೇಲೊಬ್ಬನಿದ್ದಾನೆ ರೋಗ ಕೊಟ್ಟವನಿಗೆ ಅದು ಗುಣಪಡಿಸಲೂ ಸಾಧ್ಯವಿದೆ
ರೋಗ ನೀಡಿದವನು ಆಗ್ರಹಿಸಿದರೆ ಮಾತ್ರ ರೋಗ ಗುಣವಾಗುವುದು ಆದ್ದರಿಂದ ಅವನೇ ರೋಗ ನಿವಾರಿಸುವನು
ಅದುವರೆಗೂ ನಾನಿದು ಸಹಿಸುವೆನು ನನಗೆ ಚಿಕಿತ್ಸೆ ಬೇಡ
ನನ್ನ ರೋಗ ಅಲ್ಲಾಹು ಗುಣಪಡಿಸುವನು
ರೋಗ ಬಂದು ಗುಳ್ಳೆಗಳೊಡೆದು ಹುಳವಾಗಿ ಸಹಿಸಲಾಗದ ನೋವಿದೆ..
ಅಲ್ಪ ಆಶ್ವಾಸನೆಗಾಗಿ ರಹ್ಮತ್ ಬೀವಿಯು ಕುದಿಸಿದ ನೀರಿಗೆ ಬಟ್ಟೆಯನ್ನು ಮುಳುಗಿಸಿ ಗಾಯಗಳಿಗೆ ಇಡುತ್ತಿದ್ದರು ಅದೇ ಸಂದರ್ಭದಲ್ಲಿ ಹೊರಗಿನಿಂದ ಯಾರೋ ಕರೆಯುತ್ತಿರುವುದು ಅಯ್ಯೂಬ್ ನೆಬಿಗೆ ಕೇಳಿಸಿತು
ನೆಬಿಯವರಿಗೆ ಕಿವಿ ಮಾತ್ರ ಕೇಳಿಸುತ್ತಿದೆ ಕಣ್ಣು ಕಾಣಿಸುತ್ತಿಲ್ಲ
ನೆಬಿ ರಹ್ಮತ್ ಬೀವಿಯೊಡನೆ ಯಾರದು ಕರೆಯುತ್ತಿರುವುದು ನೋಡು ಎಂದಾಗ ಒಬ್ಬ ಯುವಕ ಮತ್ತು ಜೊತೆಗೆ ಕೆಲವರಿದ್ದರು
ಅವರ ಅವಶ್ಯಕತೆ ಏನೆಂದು ಕೇಳಲು ನೆಬಿಯವರು ಹೇಳಿದರು ರಹ್ಮತ್ ಬೀವಿ ಹೊರಗೆ ಬಂದು ಕೇಳಿದರು ಏನು ಬೇಕಾಗಿತ್ತು ಅವರು ಕೇಳಿದರು ನೆಬಿಯವರು ಇದ್ದಾರೆಯೆ?
ನೆಬಿಯವರು ಇದ್ದಾರೆ
ಹಾಗಾದರೆ ಅವರನ್ನೊಮ್ಮೆ ಕರೆಯಿರಿ
ಅವರಿಗೆ ಹೊರಗೆ ಬರಕ್ಕಾಗದು
ಅದೇನು?
ಅವರಿಗೆ ಹುಷಾರಿಲ್ಲ
ಏನಾಯಿತು ಅವರಿಗೆ ? ಜ್ವರವ?
ಜ್ವರ ಅಲ್ಲ, ಅವರಿಗೆ ಶರೀರದಲ್ಲಿ ಗುಳ್ಳೆಗಳಾಗಿದೆ ನಂತರ ಇಬ್ಲೀಸ್ ಬಹಳ ಆವೇಶದಿಂದ ಕೇಳಿದ
ಹಾಗಾದರೆ ಅವರ ಶರೀರದಲ್ಲೆಲ್ಲಾ ಹುಳಗಳಾಗಿದೆಯ? ಹೌದು ಸ್ವಲ್ಪ ಹುಳಗಳಾಗಿದೆ
ಕಣ್ಣಿನ ದೃಷ್ಟಿ ಹೋಗಿದ?
ಹೌದು ಕಣ್ಣಿನ ದೃಷ್ಟಿ ನಷ್ಟಪಟ್ಟಿದೆ
ಕೈ ಕಾಲಿನ ಬೆರಳುಗಳು ಮುರಿದು ಬೀಳುತ್ತಿದೆಯ?
ಹೌದು ಕೆಲವು ಬೆರಳುಗಳು ಮುರಿದು ಬಿದ್ದಿದೆ
ಕೂಡಲೆ ಇಬ್ಲೀಸ್ ಜೊತೆಗಿದ್ದ ಜನರೊಡನೆ ಹೇಳತೊಡಗಿದ ಕೇಳಿದಿರಾ ಜನಗಳೆ ನಾನು ಹೇಳಿದ್ದಲ್ಲ ಸ್ವತಃ ಪತ್ನಿಯೆ ಹೇಳಿದ್ದು ಕೇಳಿಸಿದಿರಲ್ವೆ
ಈಗ ನಿಮಗೆ ಏನನಿಸುತ್ತಿದೆ ಈ ಲಕ್ಷಣಗಳನ್ನೆಲ್ಲಾ ತಿಳಿಯುವಾಗ ಇದು ಯಾವ ರೋಗ ತರ ತಿಳಿಯುತ್ತದೆ ?
ಲಕ್ಷಣಗಳು ಕೇಳಿಸಿಕೊಂಡಾಗ ಕುಷ್ಟ ರೋಗ ತರ ಅನಿಸುತ್ತಿದೆ
ಹಾಗಾದರೆ ಕುಷ್ಟ ರೋಗ ಪ್ರವಾದಿಗಳಿಗೆ ಬರಬಹುದೆ?
ಹಾಗಾದರೆ ಈ ಅಯ್ಯುಬ್ ಎನ್ನುವ ಮನುಷ್ಯ ಪ್ರವಾದಿಯೆ?ಕೆಲವರು ಕೋಪಗೊಂಡು ಹೇಳಿದರು ಅಲ್ಲ ರೋಗ ಬಂದರು ಅವರು ನಮ್ಮ ನೆಬಿಯವರೆ ಎನ್ನುತ್ತ ಕೆಲವರು ಅವನ ಮಾತನ್ನು ನಿರ್ಲಕ್ಷಿದರು ಕೆಲವರು ಇಂತಹ ರೋಗ ನೆಬಿಯವರಿಗೆ ಬರಲಾರದು ಈ ರೋಗ ಬಂದಿದ್ದರಿಂದ ಇವನು ಹೇಳಿದ್ದು ಹೌದೆಂದು ಪರಿಗಣಿಸಿದಾಗ
ಜನರೆಡೆಯಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು ಆಗ ಆ ಯುವಕನ ವೇಶದಲ್ಲಿದ್ದ ಇಬ್ಲೀಸ್ ಹೇಳಿದನು ಓ ಜನಗಳೆ ನೀವು ತರ್ಕಿಸಬಾರದು ತರ್ಕಿಸುವುದು ಇಬ್ಲೀಸಿನ ಹಾದಿಯಾಗಿದೆ ನಿಮ್ಮ ಮನಸ್ಸೊಳಗೆ ಇಬ್ಲೀಸನು ಹತ್ತಿದ್ದಾನೆ ಎಂದನು ಅದೆ ಇಬ್ಲೀಸ್
ನೀವು ಸುಮ್ಮನೆ ತರ್ಕಿಸದೆ ನನ್ನ ಮಾತು ಕೇಳಿ
ಈ ಮಾರಕ ರೋಗ ಊರಿಗೆ ಹರಡುವುದಕ್ಕಿಂತ ಮುಂಚೆ ನಾಡನ್ನು ರಕ್ಷಿಸಬೇಕು ಅದಕ್ಕೊಂದು ಮಾರ್ಗವಿದೆ ರಹ್ಮತ್ ಬೀವಿಯನ್ನು ಕರೆದು ಹೇಳಿದ ಲೆ ಹೆಣ್ಣೆ ನಿನ್ನದು ಸಣ್ಣ ಪ್ರಾಯ ನಿನಗೆ ಸೌಂದರ್ಯಕ್ಕೇನು ಕಮ್ಮಿಯಿಲ್ಲ ನೀನು ಬೇರೊಬ್ಬನನ್ನು ಮದುವೆಯಾಗಿ ಜೀವಿಸಿಕೊ ಸುಮ್ಮನೆ ಈ ಮನುಷ್ಯನ ಜೊತೆಗೆ ಇದ್ದು ಜೀವನ ವ್ಯರ್ಥ ಮಾಡಿಕೊಳ್ಳಬೇಡ ನಿನ್ನ ಗಂಡನನ್ನು ನಮಗೆ ಕೊಡು ರಹ್ಮತ್ ಬೀವಿ ಕೇಳಿದರು
ಅದೇಕೆ?
ಈ ನಾಡಿಗೆ ಅವರ ಮಾರಕ ರೋಗ ಹರಡುವುದಕ್ಕೆ ಮೊದಲು ಆ ವ್ಯಕ್ತಿಯನ್ನು ಕೊಂದು ಹೂತುಬಿಡಲು
ರಹ್ಮತ್ ಬೀವಿಯು ಗಾಬರಿಗೊಂಡು ಹೇಳಿದರು ಅವರಿಗೇನು ಕುಷ್ಟರೋಗವಿಲ್ಲ ಅಂತಹ ರೋಗವಾಗಿದ್ದರೆ ಮೊದಲು ಹರಡಬೇಕಾಗಿದ್ದದ್ದು ನನಗಲ್ಲವೆ? ಮೂರ್ನಾಲ್ಕು ತಿಂಗಳಿಂದ ಜೊತೆಗೆ ಮಲಗುವ ನನಗೇನು ಸಂಭವಿಸಲಿಲ್ಲ ಮತ್ತೇಗೆ ನಿಮಗೆ ಹರಡುವುದು ?
ನಿನ್ನ ನ್ಯಾಯವಾದವೇನು ನನಗೆ ಹೇಳಬೇಕಾಗಿಲ್ಲ ಬೇಗ ಜಾಗ ಕಾಲಿಮಾಡಿಕೊ ಇಲ್ಲದಿದ್ದರೆ ಕೊಲ್ಲುವೆವು
ಅಯ್ಯೂಬ್ ನೆಬಿಯ ರೋಗವು ಊರಿಗೆ ಹರಡುವುದಕ್ಕೆ ಮೊದಲು ಅವರನ್ನು ಕೊಲ್ಲಬೇಕೆಂದು ತಿಳಿಸಿದ ಜನರೊಡನೆ ರಹ್ಮತ್ ಬೀವಿಯು ನನ್ನ ಪತಿಯವರು ಈ ಊರಲ್ಲಿ ನಿಂತರೆ ತಾನೆ ನಿಮಗೆ ತೊಂದರೆ ನಾನು ಮತ್ತು ನನ್ನ ಪತಿಯವರು ಈ ಊರುಬಿಟ್ಟು ಹೊರಟುಹೋದರೆ ನಿಮಗೇನು ತೊಂದರೆ ಇಲ್ಲ ತಾನೆ.?
ಆಗ ಕೆಲವರು ಹೇಳಿದರು ಆ ಹೆಣ್ಣು ಹೇಳುವುದರಲ್ಲೂ ನ್ಯಾಯವಿದೆ ಒಂದು ವ್ಯಕ್ತಿಯನ್ನು ಕೊಲ್ಲುವುದು ಸರಿಯಲ್ಲ ಓ ಹೆಣ್ಣೆ ಬೆಳಗಾಗುವುದರೊಳಗೆ ಊರುಬಿಟ್ಟು ಹೋಗಬೇಕು ನಾಳೆ ಏನಾದರು ಯಾರಾದರು ಕೊಂದುಬಿಟ್ಟರೆ ನಂತರ ಹೇಳಿ ಪ್ರಯೋಜನವಿಲ್ಲ ಬೆಳಗಾಗುವುದರೊಳಗೆ ಊರುಬಿಡಬೇಕು ರಹ್ಮತ್ ಬೀವಿ ಸಮ್ಮತಿಸಿದರು
ಆದರೆ ಯುವಕ (ಇಬ್ಲೀಸ್) ನೀವೇನು ಹೇಳುತ್ತಿರುವುದು ಬೇರೆ ಊರಿಗೆ ಹೋದರೆ ಆ ಊರಿನವರಿಗೆ ರೋಗ ಹರಡುವುದಿಲ್ಲವೆ? ಬೇರೆ ಊರಿನವರಿಗೆ ರೋಗ ಬಂದರೆ ನಿನಗೇನು ತೊಂದರೆ ಅದು ಅವರು ನೋಡಿಕೊಳ್ಳಬಹುದು ನೀನು ಸುಮ್ಮನಿರು ಎಂದರು ಜನರು..
ಆ ಕ್ಷಣವೆ ರಹ್ಮತ್ ಬೀವಿಯು ಮನೆಯೊಳಗೆ ನಡೆದರು
ಇಬ್ಲೀಸ್ ಹಾಗೂ ಜನರು ಸದ್ಯ ಅಲ್ಲಿಂದ ಹೊರಟುಹೋದರು
ರಹ್ಮತ್ ಬೀವಿಯು ಯಾವ ದೂರೂ ಪತಿಯೊಡನೆ ಹೇಳಲಿಲ್ಲ ನಡೆದ ಯಾವ ಘಟನೆಯನ್ನೂ ತಿಳಿಸಲಿಲ್ಲ ಅಲ್ಲಿ ನೆಬಿಯವರ ಬಳಿ ಕುಳಿತುಕೊಂಡು ಅಯ್ಯೂಬ್ ನೆಬಿಯವರ ಹಾರೈಕೆ ಮಾಡುತ್ತಿರುವರು ನೆಬಿಯವರು ಕೇಳಿದರು ರಹ್ಮತೆ ಊರವರು ಯಾಕೆ ಬಂದರು ಏನು ವಿಷಯ ?
ಊರವರು ನಿಮ್ಮನ್ನು ಅನ್ವೇಷಿಸಲೆಂದು ಬಂದರು
ಮತ್ತೇನು ಅವರು ನನ್ನ ಬಳಿ ಬಾರದೆ ಹೋದರು?
ಅದು ಅಸೌಖ್ಯವಿರುವುದರಿಂದ ತೊಂದರೆಕೊಡುವುದು ಬೇಡವೆಂದಾಗಿರಬಹುದು
ಬೇರೇನೂ ತಿಳಿಸಲಿಲ್ಲ ಊರುಬಿಡಬೇಕೆಂದದ್ದೂ ಕೊಲ್ಲುವುದೆಂದದ್ದೂ ಏನೂ ತಿಳಿಸಲಿಲ್ಲ ಕಾರಣ ಅದೆಲ್ಲವು ಹೇಳಿ ನೆಬಿಯವರ ಮನಸ್ಸು ನೋಯಿಸಬಾರದೆಂದಾಗಿತ್ತು ರಹ್ಮತ್ ಬೀವಿಯವರು ಬಯಸಿದ್ದು..
ಆದರೆ ಮಗ್ರಿಬ್ ನ ಹೊತ್ತಾದಾಗ ರಹ್ಮತ್ ಬೀವಿಗೆ ಬೇಸರವಾಗತೊಡಗಿತು ಕಾರಣ ನೆಬಿಯವರು ಸಮ್ಮತಿಸದೆ ಈ ಊರುಬಿಟ್ಟು ಹೋಗಲು ಸಾಧ್ಯವಿಲ್ಲ ನೆಬಿಯವರೊಡನೆ ಈ ವಿಷಯ ತಿಳಿಸಲೂ ಬೇಕು
ಆ ಕ್ಷಣದಲ್ಲಿ ಬುದ್ಧಿವಂತೆಯಾದ ಹೆಣ್ಣು ರಹ್ಮತ್ ಬೀವಿಯು ಅಯ್ಯೂಬ್ ನೆಬಿಯವರೊಡನೆ ಕೇಳುವರು ಅತಿ ಕಠಿಣವಾದ ಪರಿಸ್ಥಿಯಲ್ಲಿರುವಾಗಲು ಅವರಿಬ್ಬರಿಗೂ ಉಪವಾಸವಾಗಿತ್ತು ಉಪವಾಸ ತೊರೆಯಲು ಸಮಯವಾಗಿದೆ ಸೇವಿಸಲು ಏನೂ ಇಲ್ಲ ಬರೇ ನೀರಲ್ಲದೆ ಬೇರೇನು ಇಲ್ಲ ನೆಬಿಯವರೇ ನೀರು ತಗೊಂಡು ಬರಲೆ? ಆಹಾರ ಇರುವುದಾದರು ಹೇಗೆ ನೆಬಿಯವರು ಹಲವು ದಿನಗಳಿಂದ ಮನೆಯಲ್ಲೆ ರೋಗಿಯಾಗಿ ಮಲಗಿದ್ದಾರೆ ಒಂದು ತುತ್ತು ಆಹಾರವಿಲ್ಲದ ಆ ಮನೆ
ನೀರು ಕೊಡಬೇಕೆ ಎಂದು ಕೇಳಿದಾಗ ಅಲ್ ಹಮ್ದುಲಿಲ್ಲಾಹ್ ಅದು ಸಾಕು ಕೊಡು ಎಂದರು ನೆಬಿಯವರು ನೀರು ಕುಡಿದು ಉಪವಾಸ ತೊರೆದರು
ನಂತರ ರಹ್ಮತ್ ಬೀವಿಯು ಕೇಳುವರು ನೆಬಿಯವರೆ ನಾನೊಂದು ಮಾತು ಹೇಳಲೆ ?
ಹೇಳು ರಹ್ಮತೆ ಏನದು
ನೆಬಿಯೆ ನಾವು ಈ ಮನೆಯಲ್ಲೆ ಇದ್ದು ಬೋರಾಗುತ್ತಿದೆ ನಮಗೆ ಈ ಊರುಬಿಟ್ಟು ಬೇರೆಲ್ಲಾದರೂ ಹೋದರೇನು?
ಎಲ್ಲಿಗೆಂದು ಹೋಗುವುದು ಈಜಿಪ್ಟಿನ ನಿನ್ನ ಊರಿಗೊ ಈ ವೇಷದಲ್ಲಿ ನಾವಲ್ಲಿಗೆ ಹೋದರೆ ಅಲ್ಲಿಯ ಕಾರ್ಯವೂ ಕೆಡಬಹುದು..
ಅಲ್ಲ ನೆಬಿಯವರೇ ಈಜಿಪ್ಟಿಗೆ ಹೋಗದಿದ್ದರೂ ಬೇರೆ ಎಲ್ಲಾದರು ಈ ಊರು ಬಿಟ್ಟು ಹೋದರೆ?
ನೆಬಿ ಕೇಳಿದರು ಜನಿಸಿದ ನಾಡಿಗಿಂತ ಸುರಕ್ಷೆ ಬೇರೆ ಯಾವ ನಾಡಲ್ಲಿ ಲಭಿಸುವುದು
ಆದ್ದರಿಂದ ನಾವಿಲ್ಲೆ ಇರೋಣವೆಂದಾಗ
ಬೇಡ ನೆಬಿಯವರೇ ನಮ್ಮಿಂದ ಕೆಲವರಿಗೆ ತೊಂದರೆಗಳಿವೆ ನಾವಿಲ್ಲಿಂದ ಹೋಗೋಣ..
ನಮ್ಮಿಂದ ಜನರಿಗೇನು ತೊಂದರೆ?
ಏನೋ ತೊಂದರೆ ಇದೆ ಎನ್ನುತ್ತಾ ರಹ್ಮತ್ ಬೀವಿಯು ಅತ್ತುಬಿಟ್ಟರು..
ಅಳುತ್ತಿರುವಾಗ ನೆಬಿಯವರು ಹೇಳಿದರು ನೀನು ಅಳಬೇಡ ಬೆಳಗಾಗುವುದರೊಳಗೆ ನನ್ನನ್ನು ಕರಕೊಂಡು ಊರುಬಿಡಬೇಕೆಂದು ಬೆದರಿಕೆ ಹಾಕಿದ್ದಾರಲ್ಲವೆ ಕಣ್ಣು ಕಾಣಿಸುತ್ತಿಲ್ಲವಾದರು ಕಿವಿ ಕೇಳಿಸುತ್ತಿದೆ ಎಲ್ಲವೂ ನಾನು ಕೇಳಿಸಿಕೊಂಡಿದ್ದೇನೆ ಅವರು ಅಲ್ಲಿಂದ ಹೇಳಿದ್ದು ನಾನು ಕೇಳಿಸಿಕೊಂಡಿದ್ದೇನೆ ನಾನೇಕೆ ನಿನ್ನಲ್ಲಿ ಕೇಳದೆ ಇದ್ದದ್ದೆಂದು ಗೊತ್ತೆ ನಾನು ಸಂಕಟಪಡುವುದು ಬೇಡವೆಂದಲ್ಲವೆ ನೀನು ನನ್ನಲ್ಲಿ ಹೇಳದೆ ಇದ್ದದ್ದು ಅದಕ್ಕೆ ನಾನು ಅದು ಕೇಳಿದರೆ ನಿನಗೆ ಸಂಕಟವಾಗಬಹುದೆಂದು ನಾನೂ ಕೇಳಲಿಲಲ ಎಂದರು
ಇದಾಗಿದೆ ಪತಿ-ಪತ್ನಿ
ಹೇಳಿದರೆ ಬೇಸರವಾಗಬಹುದೆಂದು ಹೇಳಲಿಲ್ಲ..
ಕೇಳಿದರೆ ಬೇಸರವಾಗಬಹುದೆಂದು ಕೇಳಲಿಲ್ಲ ..
ಎಂತಹ ಅನ್ಯೋನ್ಯತೆ!
ಆದರೆ ನೀನು ಹೇಳಿದಂತೆ ಹೋಗುವುದಾದರು ಹೇಗೆ ಹೋಗುವುದು ಶರೀರಕ್ಕೆ ಬಲವಿಲ್ಲದೆ ಮಲಗಿರುವ ನೀನು ಎತ್ತಿದರೆ ಮಾತ್ರ ಏಳಲು ಸಾಧ್ಯವಿರುವ ನಾನು ಅಲ್ಪವೂ ಬಲವಿಲ್ಲದ ನನ್ನ ಈ ಸ್ಥಿತಿಯಲ್ಲಿ ಯಾರೂ ಕೂಡ ಸಹಾಯಕ್ಕೂ ಬಾರದೆ ಯಾತ್ರೆಗೆ ಯಾರೂ ವಾಹನವೂ ಕೊಡದಿರುವಾಗ ನಾವೇಗೆ ಹೋಗುವುದು ?
ಯಾರ ವಾಹನವೂ ಬೇಕಾಗಿಲ್ಲ ಯಾರ ಸಹಾಯವೂ ಬೇಕಾಗಿಲ್ಲ ನಾನು ನನ್ನ ಹೆಗಲಲ್ಲಿಟ್ಟು ನಿಮ್ಮನ್ನು ಕೊಂಡು ಹೋಗುವೆನು
ತಕ್ಷಣ ನೆಬಿಯವರು ಹೇಳಿದರು ರಹ್ಮತೆ ಏನು ಹೇಳುತ್ತಿರುವೆ ಅಲ್ಪವೇನಾದರು ನನ್ನನ್ನು ಹೆಗಲೆಮೇಲಿಟ್ಟು ಎತ್ತಬಹುದು ನಂತರ ನಿನಗೆ ಭಾರವಾಗಬಹುದು ನಾನೇನಾದರು ನಿನಗೆ ಭಾರವಾಗಿ ಅನುಭವವಾದರೆ ನಾನು ಅಲ್ಲಾಹನ ಬಳಿ ಉತ್ತರಿಸಬೇಕಾಗಿ ಬರಬಹುದು ಆದ್ದರಿಂದ ಅದು ಬೇಡ
ಇಲ್ಲ ನೆಬಿಯೆ ಒಮ್ಮೆಯೂ ನನಗೆ ನಿಮ್ಮನ್ನು ಭಾರವೆಂದು ಅನಿಸದು ನೆಬಿಯವರೇ ನೀವು ಸಮ್ಮತಿಸಬೇಕು
ಆಯಿತು ರಹ್ಮತೆ ನಿನ್ನ ಆಗ್ರಹ ಅದಾಗಿದ್ದರೆ ನಿನ್ನನ್ನು ಬೇಸರಗೊಳಿಸಲ್ಲ ಅಲ್ಲಾಹನ ವಿಧಿಯಂತೆ ನಡೆಯಲಿ ಎನ್ನುತ್ತಾ ಒಪ್ಪಿಕೊಂಡರು ..
ನಂತರ ರಹ್ಮತ್ ಬೀವಿಯವರ ಯಾತ್ರೆಯ ತಯಾರಿಯು
ಚಿಂತಿಸುವಂತದ್ದು..
ಏನೆಲ್ಲಾ ಯಾತ್ರೆಗೆ ಕೊಂಡು ಹೋಗಬೇಕಾದ ಅಗತ್ಯ ವಸ್ತುಗಳು
ಮೂರು ತುಂಡು ಬಿಳಿ ಬಟ್ಟೆ
ಬಟ್ಟೆ ಯಾಕೆಂದು ಗೊತ್ತೆ ರೋಗಿಯಾದ ಪತಿಯನ್ನಾಗಿದೆ ಯಾತ್ರೆಯಲ್ಲಿ ಕೊಂಡು ಹೋಗುತ್ತಿರುವುದು ಎಲ್ಲಾದರೂ ದಾರಿ ಮಧ್ಯೆ ನನ್ನ ಪತಿಯವರು ಮರಣಪಟ್ಟರೆ ಯಾರೊಬ್ಬರ ಮನೆಬಾಗಿಲಿಗೆ ಹೋಗಿ ಬೇಡಬೇಕಾದ ಗತಿಕೇಡು ಬರಬಾರದೆಂದು ಯೋಚಿಸಿ ಮೂರು ತುಂಡು ಬಿಳಿ ಬಟ್ಟೆ ಮಡಚಿಟ್ಟರು ನೀರು ಸೇದಲು ಒಂದು ಪಾತ್ರೆ ಮತ್ತು ಒಂದು ಹಗ್ಗ ಇವಿಷ್ಟೆ ಇರುವುದು ಕೊಂಡುಹೋಗಲು ಇರುವ ಸಾಮಾಗ್ರಿ ಇವಿಷ್ಟನ್ನು ಒಂದು ಬಟ್ಟೆಯಲ್ಲಿ ಸುತ್ತಿಕಟ್ಟಿ ಇನ್ನೊಂದು ಬಟ್ಟೆಯಲ್ಲಿ ತನ್ನ ಪತಿಯವರನ್ನು ಸುತ್ತಿಕಟ್ಟಿ ತನ್ನ ಹೆಗಲ ಮೇಲಿಟ್ಟು ಯಾತ್ರೆ ಹೊರಟಾಗ ನೆಬಿಯವರು ಹೇಳಿದರು ರಹ್ಮತೆ ನನ್ನ ಸಂಬಂಧಿಕರ ಮನೆಗೊಮ್ಮೆ ಕೊಂಡುಹೋಗಬೇಕು ಅವರಲ್ಲೊಮ್ಮೆ ಯಾತ್ರೆ ತಿಳಿಸಲಿಕ್ಕಿದೆ
ರಹ್ಮತ್ ಬೀವಿಯು ಬಂಧುಗಳ ಮನೆಗೆ ಕೊಂಡು ಹೋದರು
ಇವರನ್ನು ಕಂಡ ಕೂಡಲೇ ಬಂಧುಗಳ ಮನೆಯವರು ಬಾಗಿಲು ಮುಚ್ಚಿ ಬಿಟ್ಟರು
ಅವರು ತಿರುಗಿಯೂ ನೋಡಲಿಲ್ಲ
ರಹ್ಮತೆ ನಾವು ಹೋದಮೇಲೆ ಯಾರಾದರು ನಮ್ಮ ಮನೆಬಾಗಿಲಿಗೆ ಬಂದು ನೋಡುವಾಗ
ನಾವಲ್ಲಿಂದ ಕಳ್ಳರ ತರ ಸದ್ದಿಲ್ಲದೆ ಓಡಿ ಹೋಗಿದ್ದೇವೆಂದು ಜನ ಹೇಳಬಾರದೆಂದು ನಾನು ಹೇಳಿದ್ದು ಆದರೆ ನನ್ನನ್ನು ಕಾಣುವಾಗ ಬಾಗಿಲು ಮುಚ್ಚಿದರೆ ಅವರಲ್ಲೇನು ಯಾತ್ರೆ ಹೇಳುವುದು ನಿನಗಿನ್ನು ಕೊಂಡುಹೋಗಬಹುದೆಂದರು ನಂತರ ಅವರು ಯಾತ್ರೆ ಹೊರಟರು
ಬೇರೆ ಚರಿತ್ರೆಯಲ್ಲೊ ಇತಿಹಾಸದಲ್ಲೊ ಇಂತಹ ಒಂದು ಪತ್ನಿ ಕಾಣಸಿಗದು
ಅದು ಅಯ್ಯೂಬ್ ನೆಬಿಯ ಪ್ರಿಯ ಪತ್ನಿ ರಹ್ಮತ್ ಬೀವಿ ಮಾತ್ರ
ಆ ರಾತ್ರಿಯಲ್ಲಿ ತನ್ನ ಪತಿಯನ್ನು ತನ್ನ ಹೆಗಲಲ್ಲಿಟ್ಟು ಅಲ್ಲಾಹನ ಮೇಲೆ ಭರವಸೆಯಿಟ್ಟು ರಾತ್ರಿಯಿಡೀ ಚಲಿಸಿದರು
ಬೆಳಗಾಗುವ ತನಕ ನಡೆದರು
ಬೆಳಗಾಗುವ ಮೊದಲು ಆ ಊರು ಬಿಟ್ಟು ಹೋಗದಿದ್ದರೆ ಊರಿನ ಜನರು ಬರಬಹುದೆಂದು ಭಯಪಟ್ಟು ನಡೆದರು..
ನಂತರ ತಲುಪಿದ್ದು ಒಂದು ಮರುಭೂಮಿಗೆ, ದಿಕ್ಕು ಕಾಣದ ಮರುಭೂಮಿ ಒಂದು ಸ್ಥಳದಲ್ಲಿ ಪತಿಯವರನ್ನು ಇಳಿಸಿದರು
ಅರಮನೆಯಲ್ಲಿರಬೇಕಾದ ಆ ರಾಜಕುಮಾರಿ ರಹ್ಮತ್ ಬೀವಿಯ ಕಾಲಲ್ಲಿ ಧರಿಸಲು ಚಪ್ಪಲಿಯೂ ಇರಲಿಲ್ಲ ಸುಡುಬಿಸಿಲಿಗೆ ಕಾದ ಮರುಭೂಮಿಯ ಮರಳಿನಲ್ಲಿ ಕಾಲು ಊರುತ್ತಾ ಊರುತ್ತಾ ಕಾಲಿನ ಅಡಿಭಾಗದ ಚರ್ಮ ಸವೆದು ಹೋಯಿತು.
ಅತಿ ಕಠಿಣವಾದ ಸುಡು ಬಿಸಿಲು ಕಾಲು ಸುಟ್ಟು ಹೋಗಿ ನೋಯುತ್ತಿದ್ದರೂ ಪುನಃ ನಡೆದರು ಆ ದಿನದ ಮಗ್ರಿಬ್ ತನಕವೂ ನಡೆದರು
ಹೀಗೆ ಸುದೀರ್ಘ ಇಪ್ಪತ್ತನಾಲ್ಕು ಗಂಟೆ ನಿರಂತರ ನಡೆದ ರಹ್ಮತ್ ಬೀವಿಯು ಮಗ್ರಿಬಿನ ಹೊತ್ತಾದಾಗ ಒಂದು ಬಾವಿಯ ಸಮೀಪ ಅಯ್ಯೂಬ್ ನೆಬಿಯನ್ನು ಇಳಿಸಿ ಅಯ್ಯೂಬ್ ನೆಬಿಯನ್ನು ಕೂರಿಸಿದಾಗ ಅಯ್ಯೂಬ್ ನೆಬಿಗೆ ಶರೀರಕ್ಕೆ ಬಲವಿಲ್ಲದಿರುವುದರಿಂದ ಅಲ್ಲೆ ನೆಲಕ್ಕೆ ಮಕಾಡೆ ಬಿದ್ದರು ಬಹಳ ಸುಸ್ತಾಗಿದ್ದ ರಹ್ಮತ್ ಬೀವಿಯು ಪ್ರಜ್ಞೆತಪ್ಪಿ ಬಿದ್ದುಬಿಟ್ಟರು ಅಯ್ಯೂಬ್ ನೆಬಿಯವರಿಗೆ ಮನದಟ್ಟಾಯಿತು ತುಂಬಾ ಸುಸ್ತಾಗಿದ್ದ ರಹ್ಮತ್ ಪ್ರಜ್ಞೆ ಕಳಕೊಂಡಿದ್ದಾಳೆಂದು ಅವರು ರಹ್ಮತ್ ಬೀವಿಯನ್ನು ಕರೆಯುವುದಕ್ಕೂ ಮುಂದಾಗಲಿಲ್ಲ ಯಾಕೆಂದರೆ ಹೀಗಾದರೂ ಅಲ್ಪ ವಿಶ್ರಾಂತಿ ಪಡೆಯಲೆಂದು
ಅಲ್ಪ ಹೊತ್ತಿನ ಬಳಿಕ ರಹ್ಮತ್ ಬೀವಿಯು ಎಚ್ಚರಗೊಂಡಾಗ ನೆಬಿಯವರು ನೆಲದಲ್ಲಿ ಬಿದ್ದಿದ್ದರು ರಹ್ಮತ್ ಬೀವಿಯು ಬೇಗನೆ ಎದ್ದು ನೆಬಿಯವರ ಬಳಿ ಹೋಗಿ ಕ್ಷಮಿಸಬೇಕು ಪ್ರವಾದಿಯವರೆ.. ಆಯಾಸಗೊಂಡಾಗ ಅರಿಯದೆ ನಿಮ್ಮನ್ನು ಕೆಳಗಿಟ್ಟೆ..
ಪರವಾಗಿಲ್ಲ ರಹ್ಮತೆ ನೀನು ತುಂಬಾ ಆಯಾಸಗೊಂಡಿದ್ದೀಯ
ನೆಬಿಯವರೇ ಉಪವಾಸ ತೊರೆಯುವ ಸಮಯವಾಯಿತು ಉಪವಾಸ ಬಿಡಲು ಏನಾದರೂ ತಿನ್ನಲು ಬೇಕಲ್ಲವೆ ನೆಬಿಯವರೇ ನನ್ನ ಕೈಯಲ್ಲಿ ಏನೂ ಇಲ್ಲ ನೆಬಿಯವರೇ ನಾವಿರುವುದು ಒಂದು ಬಾವಿಯ ಸಮೀಪ ನಾನು ಉಪವಾಸ ತೊರೆಯಲು ನೀರನ್ನಾದರೂ ಎತ್ತಿ ಬರುವೆ ಎನ್ನುತ್ತಾ ರಹ್ಮತ್ ಬೀವಿಯು ಅತ್ತು ಬಿಟ್ಟರು
ಅಯ್ಯೂಬ್ ನೆಬಿಯು ಸಮಾಧಾನಿಸುತ್ತಾ ಅಳಬೇಡ ರಹ್ಮತೆ ಈ ಭೂಮಿಯಲ್ಲಿ ನೀರು ಕೂಡ ಇಲ್ಲದೆ ಕಷ್ಟ ಪಡುವ ಅದೆಷ್ಟೊ ಜನರಿದ್ದಾರೆ ನಮ್ಮನ್ನು ಅಲ್ಲಾಹು ನೀರಿನ ಬಳಿ ತಲುಪಿಸಿದನಲ್ವ ನೀನು ಹೋಗಿ ನೀರು ತಾ ನೀರಾದರೂ ಇದೆಯಲ್ವ ನಮಗೆ ಈಗ ಇದು ಸಾಕು ಎಂದಾಗ ಅಯ್ಯೂಬ್ ನೆಬಿಯವರಿಗೆ ಅಲ್ಪ ನೀರು ಕುಡಿಸಿ ತಾನೂ ಸ್ವಲ್ಪ ಕುಡಿದರು ನಂತರ ಕೈ ಕಾಲು ಮುಖ ತೊಳೆದು ಸ್ವಲ್ಪ ಆರಾಮವಾದರು
ಅಲ್ಲಾಹನ ನೆಬಿಯವರಿಗೆ ಇನ್ನೂ ಪರೀಕ್ಷಣೆಯಾಗಿತ್ತು
ಆ ದಿನ ರಾತ್ರಿ ಅಲ್ಲಾಹು ಕಠಿಣ ಚಳಿಯನ್ನು ನೀಡಿದ ಇಬ್ಬರು ಚಳಿಯಿಂದ ನಡುಗತೊಡಗಿದರು ರಹ್ಮತ್ ಬೀವಿ ಒಮ್ಮೆ ಚಿಂತಿಸುವರು ಈ ಚಳಿಗೆ ಇಲ್ಲಿ ನಿಂತರೆ ಅಪಾಯ ನೆಬಿಯವರಿಗಾದರೆ ಸೌಖ್ಯವೂ ಇಲ್ಲ ರಹ್ಮತ್ ಬೀವಿ ನೆಬಿಯವರೊಡನೆ ಕೇಳಿದರು ನೆಬಿಯವರೇ ಕಠಿಣವಾದ ಚಳಿ ಸಹಿಸಲಾಗುತ್ತಿಲ್ಲ ಅಲ್ವ ಈ ಪರಿಸರದಲ್ಲಿ ಮಂಜು ಕಡಿಮೆ ಬೀಳುವ ಸ್ಥಳ ಇಲ್ಲೆಲ್ಲಾದರು ಇದೆಯಾ ಎಂದು ಸ್ವಲ್ಪ ನೋಡಿ ಬರುತ್ತೇನೆಂದು ಸ್ವಲ್ಪ ಮುಂದೆ ಹೋದಾಗ ದೂರದಲ್ಲೊಂದು ಅಂಗಡಿ ಕಾಣಿಸುತ್ತಿದೆ ನಾವು ಹೋಗಿ ಆ ಅಂಗಡಿ ಜಗಲಿಯಲ್ಲಿ ಮಲಗಬಹುದೇನೊ ಎಂದು ಅಯ್ಯುಬ್ ನೆಬಿಯವರನ್ನು ಎತ್ತಿಕೊಂಡು ರಹ್ಮತ್ ಬೀವಿಯು ಆ ಅಂಗಡಿ ಬಳಿ ತೆರಳಿದಾಗ ಕಂಡ ದೃಶ್ಯವೇನೆಂದರೆ ಅಂಗಡಿಯ ಹಿತ್ತಲಲ್ಲಿ ಸುತ್ತಲೂ ಭಿಕ್ಷುಕರು ತುಂಬಿದ್ದರು ರಹ್ಮತ್ ಬೀವಿ ನೋಡುವರು ಅಲ್ಪ ಸ್ಥಳ ಅಲ್ಲೆಲ್ಲಾದರು ಸಿಗಬಹುದೆಂದು ಹೆಗಲಲ್ಲಿ ಅಯ್ಯೂಬ್ ನೆಬಿ ಇದ್ದರು ಕೊನೆಗೊಂದು ಬದಿಯಲ್ಲಿ ಒಂದು ಮರದ ತುಂಡಿತ್ತು ಅದನ್ನು ಸ್ವಲ್ಪ ಸರಿಸಿ ಅಲ್ಪ ಸ್ಥಳ ಮಾಡಿಕೊಂಡು ರಹ್ಮತ್ ಬೀವಿಯು ಅಯ್ಯೂಬ್ ನೆಬಿಯವರನ್ನು ಮೆಲ್ಲನೆ ಅಲ್ಲಿ ಮಲಗಿಸಿ ರಹ್ಮತ್ ಬೀವಿ ಅಲ್ಲೆ ಕುಳಿತುಕೊಂಡರು ಅಷ್ಟು ಮಾತ್ರ ಅಲ್ಲಿ ಸ್ಥಳ ಇದ್ದಿದ್ದು ಹಾಗೆ ಕುಳಿತಿರುವಾಗ ಅಯ್ಯೂಬ್ ನೆಬಿಯವರ ಶರೀರದಿಂದ ಒಂದು ದುರ್ಗಂಧ ಹೊರಟಿತು ಅದು ಯಾಕೆಂದು ನೆಬಿಯವರು ಮುಂದೆ ತಿಳಿಸುವರು
ದುರ್ಗಂಧ ಬೀಸಿದಾಗ ಅಲ್ಲಿ ಮಲಗಿದ್ದ ಭಿಕ್ಷುಕರು ಚಡಪಡಿಸಿ ಎದ್ದು ಮೂಗಿಗೆ ಕೈಇಟ್ಟು ಕೇಳುವರು ಹ್ಮ್ಮ್ಮ್ಮ್ ಯಾರದು ಏನದು ದುರ್ನಾತ ಬರುತ್ತಿದೆ
ಅದರಲ್ಲೊಬ್ಬ ಹೇಳಿದ ಅದೊ ಅಲ್ಲೊಂದು ಹೆಣ್ಣು ಆ ಹೆಣ್ಣಿನ ಬಳಿಯಿಂದ ಬರುತ್ತಿದೆ ದುರ್ನಾತ ಮತ್ತೊಬ್ಬ ಹೇಳಿದ ಅವಳಲ್ಲ ಅವಳು ಅದೇನೋ ಒಂದು ಕಟ್ಟು ತಂದಿಟ್ಟಿದ್ದಾಳೆ ಆ ಕಟ್ಟು ತಂದಿಟ್ಟಾಗ ಶುರುವಾಗಿದೆ ವಾಸನೆ ಎಂದಾಗ ಅವರೆಲ್ಲ ಥಟ್ಟನೆ ಎದ್ದು ಕೇಳುವರು ಲೆ ಹೆಣ್ಣೆ ಏನದು ಅಲ್ಲಿ ತಂದಿಟ್ಟದ್ದು?
ಅದು ನನ್ನ ಪತಿ ಎಂದಾಗ
ಅದೇನು ದುರ್ವಾಸನೆ ಬೀರುತ್ತಿದೆ ಹೀಗಾದರೆ ನಮಗೆ ಇಲ್ಲಿ ನಿದ್ರಿಸಲು ಸಾಧ್ಯವಿಲ್ಲ ಬೇಗ ಇಲ್ಲಿಂದ ಹೋಗಬೇಕೆಂದರು
ಹೊರಗಡೆ ತುಂಬಾ ಚಳಿ ಇದೆ ನನ್ನ ಪತಿಯವರಿಗೆ ಹುಷಾರಿಲ್ಲ ಹೊರಗಡೆ ಕೊಂಡು ಹೋದರೆ ಹುಷಾರಿಲ್ಲದ ಅವರು ಚಳಿಗೆ ತೀರಿ ಹೋದಾರು ಆದ್ದರಿಂದ ಇಲ್ಲಿ ನಿಂತು ನಾಳೆ ಬೆಳಿಗ್ಗೆಯೇ ನಾವಿಲ್ಲಿಂದ ಹೋಗುತ್ತೇವೆ ಎಂದು ಕೇಳಿಕೊಂಡಾಗ ಅಲ್ಲಿದ್ದ ಒಂದಿಬ್ಬರು ಹೇಳಿದರು ವಾಸನೆಯೇನೂ ಇಲ್ಲ ಮಲಗಿಕೊ ಎಂದರು ಆದರೆ ಉಳಿದ ಜನ ದುರ್ಗಂಧ ಸಹಿಸಲಾಗದೆ ಇರಲಿಬಿಡಿ ಎಂದವರನ್ನು ಗದರಿಸಿ ಬಾಯಿಮುಚ್ಚಿಸಿ ರಹ್ಮತ್ ಬೀವಿಯನ್ನು ಬೇಗ ಅಲ್ಲಿಂದ ಹೊರಟುಹೋಗಲು ಹೇಳಿದರು ರಹ್ಮತ್ ಬೀವಿಯು ದುಃಖದಿಂದ ಹೇಳುವರು ಹೇಗಾದರೂ ಬೆಳಗ್ಗೆವರೆಗೆ ಸ್ವಲ್ಪ ಸಹಿಸಿಕೊಳ್ಳಬಾರದೆ ಈ ರೋಗಿಯಾದ ನನ್ನ ಪತಿಯನ್ನು ಎತ್ತಿ ನಾನೆಲ್ಲಿ ಹೋಗಲಿ ಎಂದು ದುಃಖಿಸಿದಾಗ ಕೆಲವರು ಹೇಳಿದರು ನೀವು ಇಲ್ಲಿಂದ ಅಲ್ಪ ಮುಂದೆ ಹೋದರೆ ಅಲ್ಲೊಂದು ಬಂಡೆಗಳ ಗುಹೆಯಂತಹ ಸ್ಥಳವಿದೆ ನೀವು ಅಲ್ಲೆಲ್ಲಾದರು ಇರಿ ಎಂದರು ರಹ್ಮತ್ ಬೀವಿಯು ಕೂಡಲೆ ಅಯ್ಯೂಬ್ ನೆಬಿಯವರನ್ನು ಎತ್ತಿ ಆ ಕಡೆ ಹೊರಟರು ಇದೆಲ್ಲವು ತಿಳಿದುಕೊಂಡು ಅಯ್ಯೂಬ್ ನೆಬಿಯವರ ಕಣ್ಣಿನಿಂದ ಕಣ್ಣೀರು ಸುರಿಯುತ್ತಿತ್ತು ರಹ್ಮತ್ ಬೀವಿಗೆ ತಿಳಿಯಿತು ನೆಬಿಯವರು ಮನನೊಂದು ಅಳುತ್ತಿರುವುದೆಂದು ರಹ್ಮತ್ ಬೀವಿಯು ನೆಬಿಯವರನ್ನು ಕಣ್ಣೇರೊರೆಸುತ್ತಾ ಸಮಾಧಾನಿಸಿದರು ಅಳಬೇಡಿ ಪ್ರವಾಜಗರೆ ಅಲ್ಲಾಹನ ವಿಧಿ ನೆನೆಸಿ ಸಹಿಸಿಕೊಳ್ಳೋಣವೆಂದರು ನಿಮಗೆ ನಾನಿಲ್ಲವೆ, ನಮಗೆ ಅಲ್ಲಾಹನಿಲ್ಲವೇ.? ನೀವು ದುಃಖಿಸಬೇಡಿ ಎಂದಾಗ ಆಯಿತು ರಹ್ಮತೆ ನಾವು ಸಹಿಸಿಕೊಳ್ಳೋಣ ಎನ್ನುತ್ತಾ ಕೇಳಿದರು ರಹ್ಮತೆ ನಿನಗೆ ನಾನು ದುರ್ನಾತ ಬರುತ್ತಿದ್ದೇನ? ಇಲ್ಲ ನೆಬಿಯೆ ನನಗೆ ಒಂದಿಷ್ಟೂ ವಾಸನೆ ಬರುತ್ತಿಲ್ಲ ಎಂದಾಗ ಹಾಗಾದರೆ ನೀನು ಬಚವಾದೆ ಎಂದರು ಅದೇಕೆಂದು ಕೇಳಿದಾಗ ಹೇಳಿದರು ಈ ದುರ್ನಾತ ನನ್ನ ಭಾಗದಿಂದ ಹೊರಡಿಸುವುದು ಯಾರಿಗೆಂದು ನಿನಗೆ ಗೊತ್ತೆ? ಅಲ್ಲಾಹು ಇಷ್ಟಪಡದವರಿಗೆ ಹಾಗೂ ಅಲ್ಲಾಹುವನ್ನು ಇಷ್ಟಪಡದವರಿಗೆ ಮಾತ್ರ ಎಂದರು ಅವ್ರು ಸದ್ಯ ನನ್ನ ಬಳಿ ಬರಬಾರದೆಂದು ಅವರಿಗೆ ಆ ರೀತಿ ಕೆಟ್ಟ ವಾಸನೆ ಅನುಭವಾಗುತ್ತದೆ
ಇನ್ನು ಸಜ್ಜನರಿಗೆ ದುರ್ಗಂಧ ಬೀರದು ಅವರಿಗೆ ಅಲ್ಲಾಹು ನನಗೆ ನೀಡಿದ ನುಬುವ್ವತ್ತಿನ ಸುಗಂಧ ಅನುಭವವಾಗುತ್ತದೆ
ನೀನಾಗ ನೋಡಿದೆಯಲ್ವ ಅಲ್ಲಿ ಕೆಲವು ಅಲ್ಲಾಹನನ್ನು ಅಲ್ಪ ಭಯಪಡುವವರು ಕಾಣಸಿಕ್ಕಿದರು ಅವರು ನಮ್ಮನ್ನು ದೂರಮಾಡಲಿಲ್ಲ ಮತ್ತೆ ಕೆಲವು ದುಷ್ಟರನ್ನು ನಮಗೆ ಈ ಯಾತ್ರೆಯಲ್ಲಿ ಕಂಡು ತಿಳಿಯಲು ಸಾಧ್ಯವಾಯಿತು ಎಂದ ಅಯ್ಯೂಬ್ ನೆಬಿ
ಇದು ಕೇಳಿ ರಹ್ಮತ್ ಬೀವಿಗೆ ಸಮಾಧಾನವಾಯಿತು ಅವರು ಅವರು ಆ ಬಂಡಿಕಲ್ಲಿನೆಡೆಯಲ್ಲಿ ತಂಗಿ ಬೆಳಗಾಯಿತು..
ಎಂದಿನಂತೆ ಆ ದಿನವು ಉಪವಾಸ ..
ರಹ್ಮತ್ ಬೀವಿ ಕೇಳುವರು ನಮಗೆ ವೃತ ತೊರೆಯಲು ಏನಾದರು ಬೇಡವೆ ?
ವೃತ ತೊರೆಯಲು ಸಮಯವಾಗಲಿಲ್ಲ ತಾನೆ
ಸಮಯವಾಗಲಿಲ್ಲ ಆದರು ಆಹಾರವೇನಾದರು ಬೇಕಲ್ಲವೆ ಹಲವು ದಿನಗಳಾದವಲ್ಲವೆ ತಾವು ಏನೂ ತಿನ್ನದೆ.. ನಾನೊಂದು ಕಾರ್ಯ ಹೇಳಿದರೆ ನಿಮಗೆ ತೊಂದರೆಯಾಗಬಹುದೆ? ಇಲ್ಲ ಏನೆಂದು ಹೇಳು..
ನಾನು ಕೇಳಿದರೆ ನಿಮಗೆ ತೊಂದರೆಯಾಗಬಹುದೊ?
ನೀನು ವಿಷಯವೇನೆಂದು ಹೇಳು
ನೆಬಿಯವರೇ ಅಲ್ಲೊಂದು ಮನೆ ಕಾಣುತ್ತಿದೆ ನಾನಲ್ಲಿಗೆ ಹೋಗಲೆ? ನೆಬಿಯವರು ಗಾಬರಿಗೊಂಡು ಹೇಳಿದರು ನಾನು ಅಲ್ಲಾಹನ ಪ್ರವಾಜಗನಾಗಿರುವಾಗ ನೀನು ಅಲ್ಲಿ ಯಾಚಿಸಲೊ! ನೀನು ಯಾಚಿಸಲಾರಂಭಿಸಿದೆಯ!
ನೆಬಿಯೆ ಯಾಚಿಸಲು ಅಲ್ಲ ಆ ಮನೆಗೆ ಹೋಗಿ ಅಲ್ಲಿಯ ಏನಾದರು ಕೆಲಸ ಮಾಡಿ ಸಂಬಳವಾಗಿ ಅಲ್ಪ ಆಹಾರ ತರಲೆ ಎಂದು
ನೆಬಿಯವರು ಅದು ಕೇಳಿ ಸಂಕಟವಾದರು ಕಾರಣ ನಾನು ನನ್ನ ಪತ್ನಿಗೆ ಆಹಾರ ಕೊಡಬೇಕಾಗಿದ್ದು ನನ್ನ ಕರ್ತವ್ಯವಲ್ಲವೆ. ರಹ್ಮತ್ ಬೀವಿಯು ಹೇಳುತ್ತಿರುವುದು ನಾನು ಮನೆಯಲ್ಲಿ ಏನಾದರು ಕೆಲಸಮಾಡಿ ಸಂಬಳವಾಗಿ ಅಲ್ಪ ಆಹಾರ ಲಭಿಸಿದರೆ ಸಾಕೆಂದಾಗಿತ್ತು ನೆಬಿಯವರು ಯೋಚಿಸುವರು ನನಗಾದರು ಪರವಾಗಿಲ್ಲ ರಹ್ಮತ್ ಗಾದರು ಆಹಾರ ಲಭಿಸಲೆಂದು ಹೋಗಲು ಒಪ್ಪಿಕೊಂಡರು ಅದೇ ಸಂದರ್ಭದಲ್ಲಿ ರಹ್ಮತ್ ಬೀವಿಯು ಯೋಚಿಸುವುದು ನನಗೆ ಇಲ್ಲದಿದ್ದರು ಪರವಾಗಿಲ್ಲ ನೆಬಿಯವರಿಗೆ ಆಹಾರ ಲಭಿಸಬೇಕು ಕಾರಣ ಅವರು ಅಸೌಖ್ಯದಿಂದಿದ್ದಾರೆ ಹೀಗೆ ಇವರಿಬ್ಬರ ಚಿಂತನೆ..
ಇದಾಗಿದೆ ಸ್ತ್ರೀಗಳ ಒಂದು ಒಳ್ಳೆಯ ಸ್ವಭಾವ ಅವರು ಹಸಿದಿದ್ದರೂ ಗಂಡನಿಗೆ ಕೊಡಲು ಯೋಚಿಸುವರು.
ಅದೇ ರೀತಿ ಇಲ್ಲಿ ಅಯ್ಯೂಬ್ ನೆಬಿಯವರು ರಹ್ಮತ್ ಬೀವಿಗೆ ಲಭಿಸಲೆಂದು ಆಗ್ರಹಿಸುವರು..
ರಹ್ಮತ್ ಬೀವಿ ಅಯ್ಯೂಬ್ ನೆಬಿಯವರಿಗೆ ಲಭಿಸಲೆಂದು ಆಗ್ರಹಿಸುವರು..
ನೆಬಿಯವರು ಹೇಳುವರು ನೀನು ಅಲ್ಲಿ ಕೆಲಸಕ್ಕೆ ಹೋಗು, ಆದರೆ ಒಂದು ಶರತ್ತು ಇದೆ ಅದೇನೆಂದರೆ ನೀನು ಅಲ್ಲಿ ಕೆಲಸ ಮಾಡದೆ ಏನನ್ನೂ ತರಬಾರದು.. ಆಯ್ತೆಂದು ರಹ್ಮತ್ ಬೀವಿ ಒಪ್ಪಿಕೊಂಡು ಆ ದೊಡ್ಡ ಮನೆಬಾಗಿಲಿಗೆ ಹೋಗಿ ಕೇಳುವರು ಇಲ್ಲಿ ಯಾರಾದರೂ ಇದ್ದೀರ?
ಶಬ್ದ ಕೇಳಿ ಆ ಮನೆಯೊಡತಿ ಬರುವಳು
ಏನೆಂದು ಕೇಳುವಳು
ಅಮ್ಮ ಈ ಮನೆಯಲ್ಲಿ ಕೆಲಸವಿದೆಯೆ?
ಹಾ ಕೆಲಸ ಇದೆ, ಏನು ಸಂಬಳ?
ನನಗೆ ಸಂಬಳವೇನೂ ಬೇಡ ಊಟ ಕೊಟ್ಟರೆ ಸಾಕು..
ಹೌದಾ ಊಟ ಕೊಟ್ಟರೆ ಎಲ್ಲಾ ಕೆಲಸ ಮಾಡ್ತಿಯ?
ಹೌದು ಹಲಾಲಾದ ಎಲ್ಲಾ ಕೆಲಸ ಮಾಡುವೆನೆಂದರು ನಂತರ
ರಹ್ಮತ್ ಬೀವಿಯನ್ನು ಮನೆಯೊಳಗೆ ಕರೆದುಕೊಂಡು ಅಡುಗೆ ಕೋಣೆಯಲ್ಲಿ ರಾಶಿ ಹಾಕಿಟ್ಟಿದ್ದ ಅಡುಗೆ ಮಾಡಿಟ್ಟ ಪಾತ್ರೆಗಳನ್ನು ತೋರಿಸುತ್ತಾ ಹೇಳುವಳು ಇದೆಲ್ಲವು ನಿನ್ನ ಕೆಲಸ ರಹ್ಮತ್ ಬೀವಿಯು ಬಾವಿಯಿಂದ ನೀರೆತ್ತಿ ಅಲ್ಲಿದ್ದ ಎಲ್ಲಾ ಪಾತ್ರೆಗಳನ್ನು ಚೆನ್ನಾಗಿ ತೊಳೆದಿಟ್ಟು ಕೇಳುವರು ಅಮ್ಮಾ ನಾನಿನ್ನು ಹೋಗಲೆ?
ಕೆಲಸ ಮುಗಿಯಲಿಲ್ಲ ಅಂಗಳ ಗುಡಿಸಲು ಹೇಳುವಳು
ಉಪವಾಸವಿದ್ದ ರಹ್ಮತ್ ಬೀವಿಯು ಹೇಳಿದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವರು..
ಆ ಮನೆಯೊಡತಿಗೆ ರಹ್ಮತ್ ಬೀವಿಯ ಕೆಲಸ ಕಂಡು ಬಹಳ ಖುಷಿಯಾಯಿತು ಒಳ್ಳೆಯ ಹೆಣ್ಣು ಇವಳಿಗಾದರೆ ಸಂಬಳವೂ ಕೊಡಬೇಕಾಗಿಲ್ಲ ಊಟ ಮಾತ್ರ ಕೊಟ್ಟರೆ ಸಾಕು ಇವಳನ್ನು ಇಲ್ಲೆ ನಿಲ್ಲಿಸಿದರೆ ನನಗೆ ತುಂಬಾ ಉಪಕಾರವಾಗಬಹುದೆಂದು ಹೇಳುವಳು ಓ ಹೆಣ್ಣೇ ನೀನಿನ್ನು ಇ್ಲಲ್ಲೇ ಇರು ನೀನೆಲ್ಲಿಗೂ ಹೋಗಬೇಕಾಗಿಲ್ಲ ನಿನಗ್ಯಾರೂ ಇಲ್ಲ ತಾನೆ
ಇದು ಕೇಳಿದಾಗ ರಹ್ಮತ್ ಬೀವಿಯು ನನಗೊಬ್ಬರು ಇದ್ದಾರಮ್ಮ ಅವರು ಅಸೌಖ್ಯದಿಂದ ಮಲಗಿದ್ದಾರೆ ಆದ್ದರಿಂದ ಇನ್ನು ಏನೇ ಕೆಲಸವಿದ್ದರು ನಾಳೆ ಬೆಳಿಗ್ಗೆ ಬಂದು ಮಾಡಿಕೊಡುವೆ ಈಗ ಈ ಕೆಲಸ ಮುಗಿದ ಕೂಡಲೆ ನನ್ನನ್ನು ಬಿಡಬೇಕು
ಆಯ್ತೆಂದು ಸಮ್ಮತಿಸಿದಳು..
ಮನೆಯೊಡತಿ ಒಂದು ದೊಡ್ಡ ಪಾತ್ರೆ ತುಂಬಾ ಊಟ ತಂದು ಕೊಟ್ಟು ಇದು ಕೊಂಡು ಹೋಗು ಎಂದಳು ರಹ್ಮತ್ ಬೀವಿ ಅದು ಕಂಡು ಅಚ್ಚರಿಗೊಂಡು ಇಷ್ಟೂ ಊಟ ನನಗೊ! ಬೇಡಮ್ಮ ನನಗಿಷ್ಟೇನು ಬೇಕಾಗಿಲ್ಲ ನಾನು ಅಲ್ಪವೇ ತಿನ್ನುವುದು ನನ್ನ ಪತಿಯವರು ಕೂಡ ಹಾಗೇನೆ ಇಷ್ಟೂ ಊಟ ನನಗೆ ಬೇಕಾಗಿಲ್ಲ ಆದರೂ ಮನೆಯೊಡತಿ ಒತ್ತಾಯ ಮಾಡಿ ಕೊಡುವಾಗ ಏನೋ ಯೋಚಿಸಿ ಇನ್ಶಾ ಅಲ್ಲಾಹ್ ಎನ್ನುತ್ತಾ ಆಹಾರ ತಗೊಂಡು ರಹ್ಮತ್ ಬೀವಿಯು ಅಯ್ಯೂಬ್ ನೆಬಿಯವರ ಬಳಿ ತೆರಳಿದರು.
ನೆಬಿಯವರ ಮುಂದೆ ಆಹಾರ ಇಟ್ಟು ನೆಬಿಯವರಿಗೆ ಸಲಾಂ ಹೇಳಿದರು ನೆಬಿ ಕೇಳಿದರು ತುಂಬಾ ಆಯಾಸವಾಯಿತಲ್ವ ರಹ್ಮತೆ ?
ಪರವಾಗಿಲ್ಲ ನೆಬಿಯೆ ಈ ಭೂಮಿಲೋಕದಲ್ಲಿ ಆಯಾಸವಾದರಲ್ವೆ ನಾಳೆ ಪರಲೋಕದಲ್ಲಿ ವಿಶ್ರಮಿಸಲು ಸಾಧ್ಯ
ನೆಬಿ ಕೇಳಿದರು ಕೆಲಸ ಸಿಕ್ಕಿತೊ? ಹಾಂ ಕೆಲಸ ಸಿಕ್ಕಿತು, ನೆಬಿಯವರೇ
ಆಹಾರವೂ ಸಿಕ್ಕಿತು ಆದರೆ ಒಂದು ಸಮಸ್ಯೆ ಇದೆ ನಮ್ಮ ಜೀವನಪೂರ್ತಿ ತಿಂದರೂ ಮುಗಿಯಲಿಕ್ಕಿಲ್ಲ ಇದು
ಯಾಕಮ್ಮ ಇಷ್ಟು ತಂದೆ ನಿನಗೆ ಗೊತ್ತಿದೆ ತಾನೆ ನಾವು ಎಷ್ಟು ಉಣ್ಣುವುದೆಂದು ಆಹಾರವನ್ನು ಎಸೆದರೆ ಅಲ್ಲಾಹನಲ್ಲಿ ಉತ್ತರಿಸಬೇಕಾಗಿ ಬರಬಹುದು ತಾನೆ ತಕ್ಷಣ
ನೆಬಿಯವರಿಗೆ ಹೊಳೆಯಿತು ರಹ್ಮತ್ ಬೀವಿಯನ್ನು ಈಗ ಒಮ್ಮೆ ಪರೀಕ್ಷಿಸಬೇಕೆಂದು
ರಹ್ಮತ್ ಬೀವಿಯೊಡನೆ ಅಯ್ಯೂಬ್ ನೆಬಿಯವರು ಹೇಳುವರು ನೀನೊಂದು ಕೆಲಸ ಮಾಡು ಸ್ವಲ್ಪ ಆಹಾರ ಇಲ್ಲಿ ಇಟ್ಟುಬಿಡು ಬಾಕಿ ಉಳಿದದ್ದು ಆ ಅಂಗಡಿಬಳಿ ಇರುವ ಭಿಕ್ಷುಕರಿಗೆ ಕೊಂಡುಹೋಗಿ ಕೊಡು ಎಂದರು
(ಹಿಂದಿನ ದಿನ ರಾತ್ರಿ ವಿಶ್ರಮಿಸಲು ಬಿಡದೆ ಓಡಿಸಿದ ಭಿಕ್ಷುಕರು)
ರಹ್ಮತ್ ಬೀವಿ ಹೇಳುವರು ನಮಗೆ ಇಷ್ಟೊಂದು ಆಹಾರ ಬೇಡವೆಂದು ನನಗೆ ಗೊತ್ತಿತ್ತು ಆದರೂ ನಾನಿದು ಯಾಕೆ ತಂದೆನೆಂದರೆ ಆ ಬಡವ ಭಿಕ್ಷುಕರಿಗೂ ಒಂದು ಪಾಲು ಕೊಡಬಹುದೆಂದಾಗಿತ್ತು
ಈ ಮಾತು ಕೇಳಿ ಅಯ್ಯೂಬ್ ನೆಬಿಯವರು ಹೇಳಿದ ಮಾತು *ಅಲ್ಲಾಹು ಅಪಾರವಾಗಿ ಕರುಣೆತೋರುವವನಾಗಿದ್ದಾನೆ ಅಲ್ಲಾಹು ನನಗೆ ಎರಡು ಅನುಗ್ರಹವನ್ನು ನೀಡಿದ ಅದರಲ್ಲೊಂದು ಅಲ್ಲಾಹು ನನ್ನನ್ನು ಪ್ರವಾದಿಗಳ ಪಟ್ಟಿಯಲ್ಲಿ ಸೇರಿಸಿದ್ದು ಇನ್ನೊಂದು ಅನುಗ್ರಹವೆಂದರೆ ನೀನು ನನಗೆ ಪತ್ನಿಯಾಗಿ ಲಭಿಸಿದ್ದಾಗಿದೆ ಅಲ್ಲಾಹು ನನಗೆ ಕೊಟ್ಟ ದೊಡ್ಡ ಅನುಗ್ರಹ*
ರಹ್ಮತ್ ಬೀವಿ ಅಲ್ಲಾಹನನ್ನು ಸ್ಥುತಿಸಿದರು ನಂತರ ಇಬ್ಬರೂ ನೀರಿನಿಂದ ಉಪವಾಸ ತೊರೆದರು ಊಟ ಬಡಿಸಲೆ ಎಂದು ರಹ್ಮತ್ ಬೀವಿ ಕೇಳಿದಾಗ ಊಟ ಮತ್ತೆ ಆ ಭಿಕ್ಷುಕರಿಗೆ ಕೊಟ್ಟು ಬಂದಮೇಲೆ ಸಾಕೆಂದರು,
ರಹ್ಮತ್ ಆ ಊಟದ ಕಟ್ಟನ್ನು ಎತ್ತಿಕೊಂಡು ಭಿಕ್ಷುಕರ ಕಡೆಗೆ ನಡೆದರು ರಹ್ಮತ್ ಬೀವಿಯನ್ನು ಕಂಡು ಭಿಕ್ಷುಕರು ಎನಿಸಿದರು ಇವತ್ತಿನ ನಿದ್ದೆಯೂ ಹಾಳಾದಂತೆ ರಹ್ಮತ್ ಬೀವಿ ಹೇಳಿದರು ಇದು ಊಟ ನಿಮಗೆಂದು
ಭಿಕ್ಷುಕರು ಕೂಡಲೆ ತಿಂದು ಖಾಲಿ ಮಾಡಿದರು
ಪಾತ್ರೆಯನ್ನು ತಗೊಂಡು ನೆಬಿಯವರ ಬಳಿ ಮರಳಿದರು
ನಂತರ ರಾತ್ರಿ ಇಬಾದತೆಲ್ಲಾ ನಿರ್ವಹಿಸಿ ಬೆಳಗಾದಾಗ ನೆಬಿಯವರೊಡನೆ ಹೇಳುವರು ನೆಬಿಯವರೇ ಈ ಪಾತ್ರೆಯನ್ನು ಕೊಡಲು ಇದೆ ಆ ಮನೆಯೊಡತಿ ನನ್ನನ್ನು ಕೆಲಸಕ್ಕೂ ಕಾಯುತ್ತಿರಬಹುದು ನೆಬಿಯವರೇ ನಾನು ಹೋಗಿ ಬರುತ್ತೇನೆಂದು ರಹ್ಮತ್ ಬೀವಿಯು ಹೊರಟರು.
ರಹ್ಮತ್ ಬೀವಿಯು ಆ ಮನೆಯನ್ನು ಸಮೀಪಿಸಿದಾಗ ಆ ಮನೆಯೊಡತಿ ಮನೆಯೆದುರು ಕಾದು ನಿಂತಿದ್ದಳು
ರಹ್ಮತ್ ಬೀವಿಯನ್ನು ಕಂಡ ಕೂಡಲೆ ಅವಳು ಹೇಳಿದಳು ನೀನು ಇತ್ತ ಬರಬೇಡ ನೀನು ಅಲ್ಲಿಂದಲೆ ಹೋಗು
ರಹ್ಮತ್ ಹೇಳಿದರು ಅಮ್ಮಾ ನನ್ನನ್ನು ಗೊತ್ತಿಲ್ವ? ನಿನ್ನೆ ಪಾತ್ರೆ ತೊಳೆದ ಹೆಣ್ಣು..
ಅದು ಗೊತ್ತು ನೀನು ಆ ಕುಷ್ಟರೋಗ ಹಿಡಿದವನ ಪತ್ನಿಯಲ್ವ ನೀನು ಈ ಕಡೆ ಬರಬಾರದು ಹೋಗಾಚೆ
ಮನನೊಂದು ರಹ್ಮತ್ ಬೀವಿ ಹಿಂತಿರುಗಿದರು..
ರಹ್ಮತ್ ಬೀವಿ ಹಿಂತಿರುಗಿ ಬಂದು ಸಲಾಂ ಹೇಳಿದಾಗ ನೆಬಿಯರು ಕೇಳಿದರು ಏನು ರಹ್ಮತೆ ಇವತ್ತು ಕೆಲಸ ಇಲ್ವ ಏನಾಯಿತು?
ಕೆಲಸ ಇಲ್ಲ ಎಂದರು ಅವರು ಆದ್ದರಿಂದ ನಾನು ಮರಳಿ ಬಂದೆ ಎಂದರು.. ನೆಬಿ ಕೂಡಲೇ ಕೇಳಿದರು ಆ ಹೆಣ್ಣೂ ತಿಳಿದಳೇ ನನ್ನ ವಿಷಯ?
ಗೊತ್ತಿಲ್ಲ ನೆಬಿಯವರೇ
ಸ್ವಲ್ಪ ಕಳೆದು ರಹ್ಮತ್ ಕೇಳಿದರು ನೆಬಿಯವರೇ ನಾವು ಈ ಊರೂ ಬಿಟ್ಟು ಹೋಗೋಣವೆ ?
ಹಾಗಾದರೆ ಅವಳು ತಿಳಿದಳು ಅಲ್ವೆ ರಹ್ಮತ್.?
ನಿನ್ನ ಇಚ್ಚೆಯಂತೆ ಆಗಲೆಂದು ನೆಬಿಯವರು ಒಪ್ಪಿಕೊಂಡರು
ರಹ್ಮತ್ ಬೀವಿ ನೆಬಿಯವರನ್ನು ಎತ್ತಿ ಅಲ್ಲಿಂದ ಯಾತ್ರೆ ಹೊರಟರು
ರಹ್ಮತ್ ಬೀವಿಯು ನಡೆದು ನಡೆದು ಮಧ್ಯಾಹ್ನದ ಹೊತ್ತಿಗೆ ಸುಸ್ತಾಗಿ ಒಂದು ಕಡೆ ಮರದಡಿಯಲ್ಲಿ ನೆಬಿಯವರನ್ನು ಕೆಳಗಿಳಿಸಿ ನಿಂತು ಸುತ್ತಲೂ ಕಣ್ಣಾಯಿಸಿ ನೋಡುತ್ತಾ ಹೇಳುವರು ನೆಬಿಯವರೇ ಈ ಊರೆಲ್ಲ ಬಡವರೆ ಇರುವಂತೆ ಕಾಣಿಸ್ತಿದೆ ಇಲ್ಲೆಲ್ಲೂ ಕೆಲಸ ಸಿಗುವ ಹಾಗೆ ನನಗೆ ಅನಿಸುತ್ತಿಲ್ಲ.
ಪರವಾಗಿಲ್ಲ ನಿನ್ನೆ ಊಟ ಮಾಡಿದ್ದೇವೆ ತಾನೆ ಎಂದರು.
ನಂತರ ರಹ್ಮತ್ ಬೀವಿಯು ಒಂದು ಗುಡಿಸಲು ಮನೆ ನೋಡುತ್ತಾ ಹೇಳುವರು ನೆಬಿಯವರೇ ಅಲ್ಲೊಂದು ಗುಡಿಸಲು ಮನೆ ಕಾಣುತ್ತಿದೆ ನೆಬಿಯವರು ಕೇಳಿದರು ಅಲ್ಲೇನು ನಿನಗೆ ಕೆಲಸ ಸಿಗದೆಂದು ನಿನ್ನ ಮಾತಿನಿಂದಲೇ ತಿಳಿಯುತ್ತಿದೆ..
ನೋಡೋಣ ನೆಬಿಯವರೇ ಅಲ್ಲಾಹನಲ್ಲವೇ ದೊಡ್ಡವನು
ಆ ಗುಡಿಸಲಿಗೆ ರಹ್ಮತ್ ಬೀವಿ ಹೋಗಿ ಮನೆಯವರನ್ನು ಕರೆದಾಗ ಶಬ್ದ ಕೇಳಿ ಮನೆಯೊಳಗಿನಿಂದ ಹೊರಗಡೆ ನೋಡುವಾಗ ಕರೆದದ್ದು ಹೆಣ್ಣೆಂದು ತೀಳಿದಮೇಲೆ ಆ ಮನೆಯೊಡತಿ ಹೊರಬಂದಳು
ರಹ್ಮತ್ ಬೀಬಿ ಕಾಣುವಾಗ ಮಧ್ಯ ವಯಸ್ಸಿನ ಹೆಣ್ಣು.. ಶರೀರವೆಲ್ಲಾ ಮುಚ್ಚುವಂತಹ ವಸ್ತ್ರ ಧರಿಸಿದ ಹೆಣ್ಣು.. ಮೆಲ್ಲನೆ ಹೊರಗೆ ಬಂದು ಕೇಳುವರು ತಾವು ಯಾರು.? ಎಲ್ಲಿಂದ ಬಂದಿರುವಿರಿ.? ಕಾಣುವಾಗ ತುಂಬಾ ಆಯಾಸವಾದಂತೆ ಕಾಣುತ್ತಿದೆ.!
ನಾನು ತುಂಬಾ ದೂರದಿಂದ ಬರುತ್ತಿದ್ದೇನೆ ಇಲ್ಲಿ ನನಗೆ ಏನಾದರೂ ಕೆಲಸ ಸಿಗಬಹುದೆ?
ಆಗ ಆ ಹೆಂಗಸು ಕೇಳುವರು ಈ ಮನೆಯಲ್ಲೊ? ನನ್ನ ಬಳಿ ಕೆಲಸವೋ? ಇಲ್ಲಿ ನಾನೆ ಕೆಲಸವೇನೂ ಇಲ್ಲದೆ ಸುಮ್ಮನೆ ಕೂತಿರುವೆನು, ಯಾಕೆ ನಿನಗೆ ಪತಿ ಮಕ್ಕಳು ಯಾರೂ ಏನೂ ಇಲ್ವ?
ಪತಿ ಇದ್ದಾರೆ ಅವರಿಗೆ ಅಸೌಖ್ಯವಿರುವುದರಿಂದ ಅಲ್ಲೊಂದು ಮರದಡಿಯಲ್ಲಿ ಮಲಗಿಸಿ ಬಂದೆ
ನನಗೆ ಸಂಬಳವೇನೂ ಬೇಡ ನನಗೆ ಸ್ವಲ್ಪ ಊಟ ಮಾತ್ರ ಕೊಟ್ಟರೆ ಸಾಕಿತ್ತಮ್ಮ
ಅದಕ್ಕೆ ಹೆಂಗಸು ಹೇಳುವರು ಈಗ ನನ್ನ ಬಳಿ ಆಹಾರವೇನೂ ಇಲ್ಲ ನಿನಗೆ ಊಟ ಸಾಯಂಕಾಲ ಸಿಕ್ಕಿದರೆ ಸಾಕೆ? ಸಾಯಂಕಾಲವಾದರೆ ನನ್ನ ಪತಿಯವರು ತರಬಹುದು ಅವರು ಕೆಲಸಕ್ಕೆ ಹೋಗಿದ್ದಾರೆ ಅವರು ತಗೊಂಡು ಬರುತ್ತಾರೆ ಎಂದಾಗ ನನಗೆ ಆಹಾರ ಸಾಯಂಕಾಲ ಕೊಟ್ಟರೆ ಸಾಕು ಕಾರಣ ನನಗೆ ಉಪವಾಸ ನನ್ನ ಪತಿಯವರಿಗೂ ಉಪವಾಸ ಅದು ಕೇಳಿದೊಡನೆ ಆ ಹೆಂಗಸು ಹೌದಾ ಉಪವಾಸವೇ ಅಲ್ಹಂದುಲಿಲ್ಲಾಹ್ ನನಗೂ ಉಪವಾಸವಿದೆ
ಹೆಂಗಸಿಗೆ ಉಪವಾಸವೆಂದು ಕೇಳಿದೊಡನೆ ರಹ್ಮತ್ ಬೀವಿಯು ಕುತೂಹಲದಿಂದ ಉಪವಾಸ ಹಿಡಿಯುವ ಹೆಣ್ಣೊ ಎಂದು ಆ ಹೆಂಗಸನ್ನು ನೋಡಿದಾಗ ಆ ಹೆಂಗಸು ಕೇಳಿತು ನೀನೇನು ಆಶ್ಚರ್ಯಪಟ್ಟು ನೋಡುತ್ತಿರುವೆ ನಾನು ಅಯ್ಯೂಬ್ ನೆಬಿಯ ಧರ್ಮದವಳೆಂದು ಮುಗುಳ್ನಗುತ್ತಾ ಹೇಳುತ್ತಿದ್ದಂತೆ ನಿನ್ನ ಪತಿಯವರನ್ನೆಲ್ಲಿ ರಸ್ತೆಯಲ್ಲಿ ಬಿಟ್ಟು ಬಂದೆನೆಂದೆ.! ಅವರನ್ನೇಕೆ ಅಲ್ಲಿ ಬಿಟ್ಟುಬಂದೆ.? ಇಲ್ಲಿಗೆ ಕರಕೊಂಡು ಬಾ ಎಂದಾಗ
ಅದು ಸರಿಯಲ್ಲ ನಿಮಗೆ ಕಂಡಾಗ ತೊಂದರೆಯಾಗಬಹುದು ಅದು ಬೇಡ
ಏನು ತೊಂದರೆ ಅಲ್ಲಾಹು ನೀಡಿದ ರೋಗ ಹೇಗೆ ತೊಂದರೆಯಾಗುವುದು ನೀನೋಗಿ ಅವರನ್ನು ಕರಕೊಂಡು ಬಾ ಎಂದು ಒತ್ತಡ ಹೇರಿದಾಗ
ರಹ್ಮತ್ ಬೀವಿ ಸಂತೋಷದಿಂದ ನಗು ನಗುತ್ತಾ ಓಡೋಡಿ ನೆಬಿಯವರಿಗೆ ಸಲಾಂ ಹೇಳುವಾಗ ನೆಬಿ ಕೇಳುವರು ಏನಿದು ಇಷ್ಟೊಂದು ಸಂತೋಷ?
ನನ್ನ ನೆಬಿಯವರೇ ನಾನೀಗ ಹೋದ ಆ ಸಣ್ಣ ಮನೆ ಇದೆಯಲ್ವ ಆ ಮನೆಯವಳು ಹೇಳಿದ್ದು ನಾನು ಅಯ್ಯೂಬ್ ನೆಬಿಯ ಧರ್ಮದವಳೆಂದು ಆ ಮಹಿಳೆ ನಮ್ಮನ್ನು ಅವರ ಮನೆಗೆ ಹೋಗಲು ಹೇಳಿದಳೆಂದಾಗ ನೆಬಿಯವರು ಹೇಳುವರು ಅದು ಬೇಡ ನನ್ನನ್ನು ಕಾಣದ್ದರಿಂದ ಹಾಗೆ ಹೇಳಿರಬಹುದು ನನ್ನನ್ನು ಕಂಡರೆ ಓಡಿಸಿ ಬಿಡಬಹುದು
ಇಲ್ಲ ನೆಬಿಯೆ ಎಲ್ಲವೂ ತಿಳಿಸಿಯೂ ಅಲ್ಲಿಗೆ ಹೋಗಲು ಹೇಳಿದ್ದಾರೆ ಹಾಗಾದರೆ ಕರಕೊಂಡುಹೋಗು, ಅವರಿಗೆ ಸಮಾಧಾನವಾಗದಿದ್ದರೆ ಮರಳಿ ತರಬೇಕೆಂದು ಹೇಳಿ ಒಪ್ಪಿದರು ..
ಮನೆಯಂಗಳಕ್ಕೆ ತಲುಪಿದಾಗ ನೋಡಿನಿಂತಿದ್ದ ಆ ಮಹಿಳೆಯು ವಾಂತಿ ಮಾಡಲೆತ್ನಿಸಿದರು
ಆಗ ನೆಬಿಯವರು ಹೇಳಿದರು ರಹ್ಮತೆ ನಾನೇಳಿದೆನಲ್ವ ರಹ್ಮತ್ ಬೀವಿ ಕೂಡಲೇ ಆ ಮನೆಯಿಂದ ಮರಳಿ ಕರಕೊಂಡು ಹೋದರು
ಮರಳಿ ಕೊಂಡುಹೋಗುತ್ತಿರುವಾಗ ಆ ಮಹಿಳೆ ಓಡಿಹೋಗಿ ಹೇಳಿತು ಕೊಂಡು ಹೋಗಬೇಡಿ ನನ್ನ ಮನಸ್ಸಿಗೆ ಇಬ್ಲೀಸ್ ಹತ್ತಿ ಹಾಗೆ ಅನ್ನಿಸಿದ್ದು ನೀವು ಬನ್ನಿ ಎಂದಾಗ ರಹ್ಮತ್ ಬೀವಿ ಯೋಚಿಸುವರು ಇಬ್ಲೀಸನ ಪಿತೂರಿ ಒಬ್ಬಳಿಗೆ ಮನದಟ್ಟಾಗಬೇಕಾದರೆ ಇದು ಅಲ್ಲಾಹು ತೃಪ್ತಿಪಟ್ಟ ಹೆಣ್ಣೇ ಆಗಿರಬಹುದೆಂದು ಪುನಃ ಆ ಮನೆಗೇ ಅಯ್ಯೂಬ್ ನೆಬಿಯವರನ್ನು ಕೊಂಡುಹೋಗಿ ಮನೆಯ ಹೊರಗೆ ಮಲಗಿಸಲು ನೋಡುವಾಗ ಆ ಮಹಿಳೆ ಹೇಳಿತು ಬೇಡ ಬೇಡ ಇಲ್ಲಿ ಮಲಗಿಸಬೇಡ ಇಲ್ಲಿ ಮಲಗಿಸಿದ್ದು ನನ್ನ ಪತಿಯವರು ಕಂಡರೆ ನನ್ನಲ್ಲಿ ಕೋಪಗೊಂಡಾರು ಆದ್ದರಿಂದ ನೀವು ಮನೆಯೊಳಗೆ ತಂದು ಮಲಗಿಸಲು ಹೇಳಿ ಒಂದು ಕೋಣೆಯೊಳಗೆ ಹಾಸಿಗೆ ಹಾಸಿ ಕೊಟ್ಟು ರಹ್ಮತ್ ಬೀವಿಯೊಡನೆ ನಿಮ್ಮ ಊರೆಲ್ಲಿ ಎಂದು ಕೇಳಿತು ಆ ಮಹಿಳೆ
ನಮ್ಮ ಊರು ಡಮಾಸ್ಕಸ್
ಡಮಾಸ್ಕಸ್ ಎಂದು ಕೇಳಿದೊಡನೆ ಕುತೂಹಲದಿಂದ ಕೇಳಿತು ಡಮಾಸ್ಕಸೊ ಅದು ಮಹಾನರಾದ ನಮ್ಮ ಪ್ರವಾದಿ ಅಯ್ಯೂಬ್ ನೆಬಿಯವರ ಊರಲ್ಲವೆ! ನನ್ನ ಪತಿಯವರು ಸದಾ ಈ ಕೋಣೆಯಲ್ಲಿ ನಮಾಜ್ ಬಳಿಕ ಎಂದೂ ಪ್ರಾರ್ಥಿಸುವರು ಅಲ್ಲಾಹುವೆ ನನ್ನನ್ನು ಡಮಾಸ್ಕಸಿಗೆ ಎತ್ತಿಸಬೇಕು ನನಗೆ ಅಯ್ಯೂಬ್ ನೆಬಿಯವರನ್ನು ಕಾಣಲು ಭಾಗ್ಯ ನೀಡಬೇಕೆಂದು
ಇಲ್ಲಿ ಗಮನಿಸಾಬೇಕಾದದ್ದು ಆ ವ್ಯಕ್ತಿ ಪ್ರಾರ್ಥಿಸುತ್ತಿದ್ದರಿಂದಲೆ ಅಲ್ಲಾಹು ನೆಬಿಯವರನ್ನು ಅಲ್ಲಿ ತಲುಪಿಸಿದ್ದು..
ಅದು ಅವರ ಪ್ರಾರ್ಥನೆಯ ಫಲ..!
ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆಯ ಪತಿಯು ಬಂದರು
ಕೈಯಲ್ಲಿ ಅಲ್ಪ ಗೋಧಿಯ ಕಟ್ಟು ಇದೆ ಜೊತೆಗೆ ಎರಡು ಫಕೀರ್ಗಳನ್ನು ಕರಕೊಂಡು ಬಂದಿದ್ದರು
ಬರುತ್ತಾ ಮನೆ ತಲುಪಿದಾಗ ಅಸ್ಸಲಾಮು ಅಲೈಕುಂ ಎನ್ನುತ್ತಾ ಪತ್ನಿಯೊಡನೆ ಇದು ಸ್ವಲ್ಪ ಗೋಧಿ..
ಸ್ವಲ್ಪ ಹೆಚ್ಚು ನೀರು ಸೇರಿಸು ಕಾರಣ ಜೊತೆಗಿಬ್ಬರು ಫಕೀರ್ ಗಳೂ ಇದ್ದಾರೆ ಅವರಿಗೂ ಬರಬೇಕಲ್ವ
ಅದಕ್ಕೆ ಪತ್ನಿ ಹೇಳಿದರು ನಿಮ್ಮ ಜೊತೆಗಿಬ್ಬರಿದ್ದರೆ ನನ್ನ ಬಳಿ ಇಬ್ಬರಿದ್ದಾರೆ
ನಿನ್ನ ಬಳಿ ಇಬ್ಬರೊ ಅದ್ಯಾರು?
ಅದು ಅಸೌಖ್ಯವಿರುವ ಒಬ್ಬರು ಮತ್ತು ಅವರ ಪತ್ನಿ
ಓ ಹೊ ಹಾಗಾದರೆ ನೀನೂ ಒಳ್ಳೆಯ ಕಾರ್ಯ ಮಾಡಲಾರಂಭಿಸಿದೆಯ..? ಆಗಲಿ ಒಳ್ಳೆಯದೆ
ನಂತರ ಜೊತೆಗೆ ಬಂದ ಫಕೀರರನ್ನು ಕುಳಿತುಕೊಳ್ಳಲು ಹೇಳಿ ಅವರು ನೇರ
ಅಯ್ಯೂಬ್ ನೆಬಿಯವರನ್ನು ಮಲಗಿಸಿದ ಕೋಣೆಗೆ ಹೋದರು
ಕೋಣೆಯೊಳಗಿದ್ದ ಆ ವ್ಯಕ್ತಿಗೆ ಅಸ್ಸಲಾಮು ಅಲೈಕುಮ್ ಎಂದು ಸಲಾಂ ಹೇಳಿದರು ಆಗ ಪುರುಷನ ಶಬ್ದ ಕೇಳಿಸಿಕೊಂಡ ನೆಬಿಯವರು ವ ಅಲೈಕುಮುಸ್ಸಲಾಂ ಎನ್ನುತ್ತಾ ತಾವ್ಯಾರೆಂದು ಕೇಳಿದರು ನಾನು ಈ ಮನೆ ಯಜಮಾನ
ನೆಬಿಯವರು ತಕ್ಷಣ ಹೇಳಿದರು ದಯವಿಟ್ಟು ನನ್ನನ್ನು ಕ್ಷಮಿಸಬೇಕು ತಮ್ಮ ಪತ್ನಿ ಹೇಳಿ ಅವರ ಅನುಮತಿಯಂತೆ ನನ್ನನ್ನು ನನ್ನ ಪತ್ನಿ ಇಲ್ಲಿ ಮಲಗಿಸಿದ್ದಾಳೆ ನಿಮಗಿಷ್ಟವಿಲ್ಲದಿದ್ದರೆ ಹೇಳಿದರೆ ಸಾಕು ಅವಳು ನನ್ನನ್ನೆತ್ತಿ ಕೊಂಡು ಹೋಗಬಹುದು
ಯಾಕೆ ನನ್ನ ಪತ್ನಿ ಹೇಳಿ ಅಲ್ವ ನೀವೇನೂ ಅಕ್ರಮಿಸಿ ಬಂದವರಲ್ಲ ತಾನೆ?
ಎನ್ನುತ್ತಾ
ಆ ವ್ಯಕ್ತಿ ನೆಬಿಯವರ ಹತ್ತಿರಕ್ಕೆ ಬರುತ್ತಿದ್ದಾರೆಂದು ತಿಳಿದಾಗ ನೆಬಿಯವರು ಹೇಳಿದರು ಹತ್ತಿರ ಬರಬೇಡಿ ನಾನು ತುಂಬಾ ವಾಸನಿಸುತ್ತಿರಬಹುದು
ಅವರು ಹೇಳಿದರು ವಾಸನೆಯೊ ಒಳ್ಳೆಯ ಪರಿಮಳ ಎನ್ನುತ್ತಾ ಜೋರಾಗಿ ಪರಿಮಳ ಆಸ್ವಾದಿಸಿದರು..
ಅವರಿಗೆ ಒಳ್ಳೆಯ ಪರಿಮಳ ಅನುಭವವಾಗುತ್ತಿತ್ತು
ಅಯ್ಯೂಬ್ ನೆಬಿಯವರಲ್ಲಿ ಆ ಮನೆಯೊಡೆಯ ಕೇಳುವರು ನಿಮ್ಮ ಊರು ಯಾವುದು ?
ನನ್ನ ಊರು ಡಮಸ್ಕಸ್
ಡಮಸ್ಕಸ್! ಮಹಾನರಾದ ಅಯ್ಯೂಬ್ ನೆಬಿಯರ ಊರು ನೀವೆಲ್ಲ ಎಂತಹ ಭಾಗ್ಯವಂತರು ನೀವು ಅಯ್ಯೂಬ್ ನೆಬಿಯವರನ್ನು ಕಂಡಿರಬಹುದಲ್ಲವೆ ?
ಹಾಂ ಅಲ್ಹಂದುಲಿಲ್ಲಾಹ್ ಎಂದರು
(ಮಾತನಾಡುತ್ತಿರುವುದು ಅಯ್ಯೂಬ್ ನೆಬಿಯವರಲ್ಲೆ ಆದರೆ ಆ ವ್ಯಕ್ತಿಗೆ ಗೊತ್ತಿರಲಿಲ್ಲ )
ನಾನು ಹಲವು ವರ್ಷಗಳಾಯಿತು ಅಯ್ಯೂಬ್ ನೆಬಿಯವರನ್ನು ಕಾಣಲು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿರುವುದು ಇದುವರೆಗೂ ನನಗೆ ಕಾಣಲು ಸಾಧ್ಯವಾಗಲಿಲ್ಲ ನೀವೂ ಕೂಡ ನನಗೋಸ್ಕರ ಪ್ರಾರ್ಥಿಸಬೇಕು
ಇನ್ಶಾ ಅಲ್ಲಾಹ್ ಅಲ್ಲಾಹು ನಿಮಗೆ ಕಾಣಿಸಿ ಕೊಡಬಹುದು ಎಂದರು.
ನಂತರ ಆ ಮನೆಯ ಹೆಂಗಸು ತಯಾರಿಸಿದ ಆಹಾರವನ್ನು ಒಂದು ಸಣ್ಣ ಪಾತ್ರೆಯಲ್ಲಿಟ್ಟು ಪತಿಯವರ ಕೈಯಲ್ಲಿ ಕೊಟ್ಟರು
ಆ ವ್ಯಕ್ತಿಯು ಸ್ವತಹ ಅಯ್ಯುಬ್ ನೆಬಿಯವರ ಬಾಯಿಗೆ ಹಾಕಿ ತಿನ್ನಿಸಿದರು
ತನ್ನ ಅತಿಥಿಯನ್ನು ಸ್ನೇಹಪೂರಕ ಸತ್ಕರಿಸಿದ ಆ ವ್ಯಕ್ತಿ
ನೆಬಿಯವರನ್ನು ಯಾರೆಂದು ತಿಳಿಯದೆಯೂ ಆತ್ಮೀಯವಾಗಿ ಸತ್ಕರಿಸಿದ್ದಕ್ಕೆ ನೆಬಿಯವರು ಅಲ್ಲಾಹನಲ್ಲಿ ಮನಸ್ಸಾರೆ ಪ್ರಾರ್ಥಿಸಿದರು
ಯಾ ಅಲ್ಲಾಹ್ ನಾನ್ಯಾರೆಂದು ತಿಳಿಯದೆಯೂ ನನ್ನ ಸೇವೆ ಮಾಡಿದ ಈ ವ್ಯಕ್ತಿಗೆ ನೀನು ಈ ಲೋಕದಲ್ಲು ನಾಳೆ ಪರಲೋಕದಲ್ಲೂ ನನ್ನ ಜೊತೆಗಾರನಾಗಿಸಬೇಕೆಂದು ಪ್ರಾರ್ಥಿಸಿದರು
ಅಲ್ಪ ಹೊತ್ತಿನ ಬಳಿಕ ರಹ್ಮತ್ ಬೀವಿಯು ಕೋಣೆಗೆ ಬಂದಾಗ ಅಯ್ಯೂಬ್ ನೆಬಿಯವರು ಹೇಳುವರು ಇನ್ನು ಈ ಮನೆಯಲ್ಲಿ ವಿಶ್ರಮಿಸಿ ಈ ಬಡವರಿಗೆ ತೊಂದರೆ ಕೊಡುವುದು ಸರಿಯಲ್ಲ ನಮಗೆ ನಾಳೆ ಬೆಳಿಗ್ಗೆಯೆ ಇಲ್ಲಿಂದ ಹೊರಡಬೇಕು..
ಬೆಳಿಗ್ಗೆ ಇವರು ಹೊರಡುವಾಗ ಆ ಮನೆಯವರು ನಿಲ್ಲಲು ಒತ್ತಾಯಿಸುವರು
ಅವರನ್ನು ಇಲ್ಲಿ ಮಲಗಿಸಿ ಅವರಿಗೆ ನಾವು ಒಂದು ವೈದ್ಯರನ್ನು ತರಿಸಿ ಚಿಕಿತ್ಸೆ ನೀಡೋಣ ಎಂದರು
ನೆಬಿಯವರು ಒಪ್ಪಲಿಲ್ಲ ಅಲ್ಲಾಹನಿಗಿಂತ ದೊಡ್ಡ ಚಿಕಿತ್ಸಕ ಬೇರೆ ಇಲ್ಲ ಸಹೋದರ ಎಂದರು
ರಹ್ಮತ್ ಬೀವಿ ಅಯ್ಯೂಬ್ ನೆಬಿಯವರನ್ನು ಎತ್ತಿ ಯಾತ್ರೆ ಹೊರಟರು..
ಅವರ ಯಾತ್ರೆ ಬಹಳ ದೀರ್ಘವಾಗಿತ್ತು ..
ಪತಿ ಅಯ್ಯೂಬ್ ನೆಬಿಯವರ ರೋಗ ಕಾರಣ ಅವರಿಗೆಲ್ಲು ಸ್ಥಿರ ವಾಸ ಮಾಡುವಂತಿರಲಿಲ್ಲ
ಅವರು ಯಾರಿಗೂ ತೊಂದರೆ ಕೊಡಲು ಬಯಸಲಿಲ್ಲ
ಆದ್ದರಿಂದ ಅವರು ಯಾತ್ರೆ ಮಾಡುತ್ತಾ ಜೀವನ ಸಾಗಿಸಿದರು
ಯಾತ್ರೆಯಲ್ಲಿ ಹಸಿವು ನೀಗಿಸಲಿಕ್ಕಿರುವ ತುತ್ತು ಅನ್ನಕ್ಕಾಗಿ ಯಾತ್ರೆಯಲ್ಲಿ ಸಿಗುವ ಮನೆಗಳಲ್ಲಿ ರಹ್ಮತ್ ಬೀವಿ ಕೆಲಸ ಮಾಡಿ ಸಂಬಳವಾಗಿ ಅಲ್ಪ ಆಹಾರವನ್ನು ಪಡೆದು ಯಾತ್ರೆಯೊಂದಿಗೆ ಜೀವನ ಮುಂದುವರಿಸಿದರು..
ದಿನಕಳೆದಂತೆ ಅಯ್ಯೂಬ್ ನೆಬಿಯವರ ರೋಗವೂ ಅಧಿಕವಾಗುತ್ತಿತ್ತು.
ಅಲ್ಲಾಹನನ್ನು ಸದಾ ಸ್ಮರಿಸುವ ಹೃದಯ ಮತ್ತು ನಾಲಗೆ ಹೊರತು ಉಳಿದ ಎಲ್ಲಾ ಅಂಗಾಂಗಳಿಗೂ ರೋಗ ಹರಡಿ ಹುಳಗಳಾಗಿ ತುಂಬಿತ್ತು.. ಹುಳಗಳು ತನ್ನ ಮಾಂಸವನ್ನು ತಿನ್ನುವ ರಭಸದಲ್ಲೇನಾದರೂ ಶರೀರದಿಂದ ಜಾರಿ ಕೆಳಗೆ ಬಿದ್ದು ಬಿಟ್ಟರೆ ಅಯ್ಯೂಬ್ ನೆಬಿಯವರು ಸ್ವತಃ ತಾನೇ ಆ ಹುಳಗಳನ್ನು ಹೆಕ್ಕಿ ತನ್ನ ಶರೀರದಲ್ಲಿಟ್ಟು
كلوا ممّا رزقكم اللّه
'ನಿಮಗಾಗಿ ಅಲ್ಲಾಹನು ನಿಶ್ಚಯಿಸಿದ ನಿಮ್ಮ ಆಹಾರವನ್ನು ನೀವು ತಿನ್ನಿ ಹುಳಗಳೇ'
ಎಂದು ಹೇಳುತ್ತಿದ್ದರೆಂದರೆ ಎಂತಹ ಕಲ್ಲು ಹೃದಯವೂ ಕರಗಬಹುದು..
ಅವರ ಯಾತ್ರೆಯು ಕೇವಲ ಒಂದು ವಾರವೊ ಒಂದು ತಿಂಗಳೊ ಒಂದು ವರ್ಷವೊ ಮಾತ್ರವಾಗಿರಲಿಲ್ಲ
ಸುದೀರ್ಘ 18 ವರ್ಷಗಳ ಯಾತ್ರೆ..
ಕೊನೆಗೆ ಅವರು ತಲುಪಿದ್ದು ಒಮಾನ್ ರಾಜ್ಯಕ್ಕೆ
ಒಮಾನಿನ ಸಲಾಲ ಕಳೆದು ಜಬಲ್ ಅಯ್ಯೂಬ್ ಎಂದು ಅರಿಯಲ್ಪಡುವ (ಅಯ್ಯೂಬ್ ನೆಬಿ ಇದ್ದ ಕಲ್ಲು ಈಗಲೂ ಕಾಣಬಹುದು) ಆ ಪ್ರದೇಶಕ್ಕೆ ತಲುಪಿದರು ಅಯ್ಯೂಬ್ ನೆಬಿಯವರನ್ನು ಕರಕೊಂಡು ಹೋಗಿ ಆ ಪರ್ವತದ ಮೇಲಿರುವ ಆ ದೊಡ್ಡ ಕಲ್ಲಿನಮೇಲೆ ಮಲಗಿಸಿ
ನಾಲ್ಕು ಭಾಗವೂ ನೋಡಿ ರಹ್ಮತ್ ಬೀವಿ ಹೇಳಿದರು ನೆಬಿಯವರೇ ಇದು ತುಂಬಾ ಶ್ರೀಮಂತರಿರುವ ಊರಾಗಿದೆ ಇಲ್ಲಿ ಕೆಲಸ ಸಿಗಲು ಸಾಧ್ಯತೆ ಇದೆ ಆಗ ನೆಬಿಯವರು ಹೇಳಿದರು ನಮಗೆ ಹಿಂದೆ ಆ ಫಕೀರನ ಮನೆಯಲ್ಲಿ ಸಿಕ್ಕಿದಂತಹ ಸ್ನೇಹ ಇದುವರೆಗೂ ಎಲ್ಲೂ ಸಿಗಲಿಲ್ಲ ಸಿಕ್ಕಿದರೆ ಕಾಣಬಹುದು ಎಂದರು
ನಂತರ ರಹ್ಮತ್ ಬೀವಿಯು ಅಯ್ಯೂಬ್ ನೆಬಿಯವರನ್ನು ಆ ಬಂಡೆಕಲ್ಲಿನಲ್ಲಿ ಮಲಗಿಸಿ ಉಪವಾಸದೊಂದಿಗೆ ಅಲ್ಪ ಆಹಾರಕ್ಕಾಗಿ ಕೆಲಸ ಹುಡುಕಿ ಹೊರಟರು
ಆದರೆ ಒಂದೇ ಒಂದು ಮನೆಯಲ್ಲೂ ರಹ್ಮತ್ ಬೀವಿಗೆ ಕೆಲಸ ಕೊಡಲಿಲ್ಲ ಸಾಯಂಕಾಲವಾಯಿತು ರಹ್ಮತ್ ಬೀವಿ ನಡೆದುಕೊಂಡು ಹೋಗುತ್ತಿರುವಾಗ ಒಂದು ಮನೆಯು ಕಂಡಿತು ಇನ್ಶಾ ಅಲ್ಲಾಹ್ ಇಲ್ಲೊಮ್ಮೆ ಕೇಳಿನೊಡೋಣವೆಂದು ರಹ್ಮತ್ ಬೀವಿಯು ಆ ಮನೆಗೆ ಹೋಗಿ ಮನೆಯವರನ್ನು ಕರೆದಾಗ ಮನೆಯೊಳಗಿನಿಂದ ಒಬ್ಬಳು ಹೆಣ್ಣು ಹೊರಬಂದಳು ರಹ್ಮತ್ ಬೀವಿಯಲ್ಲಿ ಅವಳು ಕೇಳಿದಳು ಏನು ಬಂದೆ?
ಇಲ್ಲಿ ಏನಾದರು ಕೆಲಸ ಇದೆಯ ಎಂದು ಕೇಳಿದಾಗ ಇಲ್ಲ ಇಲ್ಲಿ ಏನೂ ಕೆಲಸವಿಲ್ಲ ನೀನು ಹೋಗು ಎಂದಳು..
ರಹ್ಮತ್ ಬೀವಿಯು ಅಲ್ಲಿಂದ ಹಿಂತಿರುಗಿ ನಡೆದರು
ಹಾಗೆ ನಡೆಯುತ್ತಿರುವಾಗ ನಡೆದದ್ದೇನೆಂದರೆ
ರಹ್ಮತ್ ಬೀವಿಯವರಿಗೆ ಬಹಳ ಸುಂದರವಾದ ಉದ್ದಗಿನ ಕೂದಲಿತ್ತು ಆ ಕೂದಲನ್ನು ಅವರು ಮಡಚಿ ಬಟ್ಟೆಯಲ್ಲಿ ಕಟ್ಟಿ ಇಡುತ್ತಿದ್ದರು ಆ ಹೆಣ್ಣು ಅದೇಗೊ ಅವರ ಆ ಕಟ್ಟಿಟ್ಟ ಕೂದಲನ್ನು ಗಮನಿಸಿದಳು ನಂತರ ಅವಳು ಓಡಿ ಹೋಗಿ ರಹ್ಮತ್ ಬೀವಿಯನ್ನು ಕರೆದಳು
ರಹ್ಮತ್ ಬೀವಿಯನ್ನು ಕರೆದು ಅಲ್ಲಿ ನಿಲ್ಲಲು ಹೇಳುವಳು ನಿಂತಮೇಲೆ ಅವಳು ಕೇಳುವಳು ನೀನು ಯಾಕಾಗಿ ಕೆಲಸ ಬೇಕೆಂದು ಕೇಳಿದ್ದು?
ರಹ್ಮತ್ ಬೀವಿಯು ಹೇಳಿದರು ಅದು ಆಹಾರಕ್ಕಾಗಿ
ಆಹಾರ ನಾನು ಕೊಡುವೆ ಆದರೆ ನಿನ್ನ ಕೂದಲನ್ನೊಮ್ಮೆ ತೋರಿಸು ಎನ್ನುತ್ತ ಕಟ್ಟಿಟ್ಟ ಬಟ್ಟೆಯನ್ನು ಹಿಡಿದು ಎಳೆದಾಗ ಮೊಣಕಾಲಿನ ವರೆಗೆ ಉದ್ದಗಿದ್ದ ಆ ಕೂದಲನ್ನು ಕಂಡು ಆ ಹೆಣ್ಣು ಕುತೂಹಲದಿಂದ ಅಬ್ಬಾ ಇದೆಂತಹ ಕೂದಲು!
ರಹ್ಮತ್ ಬೀವಿಯು ಕೂಡಲೆ ಆ ಕೂದಲನ್ನು ಸುತ್ತಿಕಟ್ಟುತ್ತಾ ಇದು ಅಲ್ಲಾಹು ನನಗೆ ಕೊಟ್ಟದ್ದೆಂದಾಗ ಆ ಹೆಣ್ಣು ಅವಳಲ್ಲಿರುವ ಸಣ್ಣಗಿನ ಸಪೂರದ ಜಡೆಯನ್ನು ತೋರಿಸಿ ಹೇಳಿದಳು ಇಲ್ಲಿ ನೋಡು ನನ್ನ ಕೂದಲು ಇಷ್ಟೆ ಇರುವುದೆನ್ನುತ್ತಾ ನಿನ್ನಿಂದ ಒಂದಿಷ್ಟು ಕೂದಲು ಕತ್ತರಿಸಿ ನನಗೆ ಕೊಡುವೆಯ ನನಗೆ ಇದಕ್ಕೆ ಸುತ್ತಿ ಜೋಡಿಸಲು ನೀನು ಕೊಡುವುದಾದರೆ ಬದಲು ನಿನಗೆ ಆಹಾರ ಕೊಡುವೆನೆಂದಳು
ರಹ್ಮತ್ ಬೀವಿಯು ಯೋಚಿಸುವರು ಇನ್ನು ಕೆಲಸ ಹುಡುಕಲು ಸಮಯವಿಲ್ಲ ಉಪವಾಸ ಬಿಡುವ ಸಮಯವೂ ಹತ್ತಿರವಾಗಿದೆ ನೆಬಿಯವರಿಗೆ ಉಪವಾಸ ಬಿಡುವ ಹೊತ್ತಿಗೆ ಅವರ ಬಳಿ ತಲುಪಬೇಕು ಇವಳಿಗೆ ಸ್ವಲ್ಪ ಕೂದಲು ಕತ್ತರಿಸಿ ಕೊಟ್ಟರೆ ಆಹಾರ ಕೊಡುತ್ತೇನೆಂದಿದ್ದಾಳೆ ಕೊಟ್ಟರೆ ನೆಬಿಯವರಿಗೆ ಸ್ವಲ್ಪ ಆಹಾರವು ಸಿಗಬಹುದಲ್ಲವೆ ಎಂದು ಯೋಚಿಸಿ ರಹ್ಮತ್ ಬೀವಿಯು ಸಮ್ಮತಿಸಿದರು
ಅವಳು ರಹ್ಮತ್ ಬೀವಿಯನ್ನು ಮನೆಯ ಹಿಂಬದಿಗೆ ಕರಕೊಂಡು ಹೋಗಿ ರಹ್ಮತ್ ಬೀವಿಯ ಜಡೆಯನ್ನು ಕೈಯಲ್ಲಿ ಹಿಡಿದು ಜಡೆಯ ಬುಡದಿಂದಲೆ ಕತ್ತರಿಸಿ ತೆಗೆದಳು ಸ್ತ್ರೀಗಳ ಸೌದರ್ಯಕ್ಕಾಗಿ ಅಲ್ಲಾಹು ನೀಡಿದ್ದಾಗಿದೆ ಉದ್ದವಾದ ಕೂದಲು
ನಂತರ ರಹ್ಮತ್ ಬೀವಿಗೆ ಸಂಕಟವಾಯಿತು ಅಲ್ಪವೆಂದು ಕೇಳಿ ಪೂರ್ತಿಯಾಗಿ ಕತ್ತರಿಸಿದ್ದು ಕಂಡು ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ನನ್ನಲ್ಲಿರುವುದು ನನ್ನ ಪತಿಯವರಿಗಾಗಿದೆ ನಾನು ನನ್ನ ಪತಿಯವರಲ್ಲಿ ಸಮ್ಮತಿ ಕೇಳದೆ ಕೊಟ್ಟಿದ್ದು ತಪ್ಪಾಗಿದೆ ನೆಬಿಯವರೇನಾದರು ನನಗೆ ಕ್ಷಮಿಸದಿದ್ದರೆ ನಾನು ಖಂಡಿತ ನರಕಕ್ಕೆ ಹೋಗಬೇಕಾದೀತು ಎಂದು ಬಹಳ ಸಂಕಟದಿಂದ ಕ್ಷಮೆ ಕೇಳಲೆಂದು ಅವಳು ಕೊಟ್ಟ ಆಹಾರವನ್ನು ಹಿಡಿದು ಕೂಡಲೆ ನೆಬಿಯವರ ಬಳಿ ಓಡತೊಡಗಿದರು..
ಅದೇ ಸಮಯದಲ್ಲಿ
ರಹ್ಮತ್ ಬೀವಿ ತಲುಪುವ ಮೊದಲು
ಇಬ್ಲೀಸನು ಅಯ್ಯೂಬ್ ನೆಬಿಯವರಿರುವ ಸ್ಥಳಕ್ಕೆ ಹೋಗಿ ಅಯ್ಯೂಬ್ ನೆಬಿಯವರು ಕೇಳುವಂತೆ ಅವನಷ್ಟಕ್ಕೆ ಅವನು ಹೇಳುವನು
ಇವರೆಂತಹ ಮನುಷ್ಯರು ಈ ಊರಿನವರು
ಕರುಣೆ ಇಲ್ಲದ ದುಷ್ಟರು
ಆ ಹೆಣ್ಣು ಒಂದು ಸಣ್ಣ ತಪ್ಪಲ್ಲವೆ ಮಾಡಿದ್ದು ಹೀಗೆ ಶಿಕ್ಷೆ ಕೊಡಬೇಕಿತ್ತ ಇದು ಕೇಳಿ
ನೆಬಿಯವರು ಮಲಗಿದಲ್ಲಿಂದಲೆ ಕೇಳುವರು ಏನು ವಿಷಯ ನೀವು ಹೇಳುತ್ತಿದ್ದೀರಿ
ಆಗ ಇಬ್ಲೀಸ್ ಕೇಳುವನು ಹೊ ಇಲ್ಲೊಬ್ಬರು ಇದ್ದಿರೊ
ಎನ್ನುತ್ತಾ ಇಬ್ಲೀಸ್ ಹೇಳುವನು ಅದೇನಿಲ್ಲ ನಾನೊಂದು ಹೆಣ್ಣಿನ ಕಾರ್ಯ ಹೇಳುತ್ತಿದ್ದದ್ದು
ಯಾರೆಂದು ಗೊತ್ತಿಲ್ಲ ಒಂದು ಹೆಣ್ಣು ಬೆಳಗ್ಗೆಯಿಂದ ಕೆಲಸ ಹುಡುಕಿ ನಡೆದಾಡುತ್ತಿದ್ದಳು ಯಾರೂ ಕೂಡ ಕೆಲಸ ಕೊಡಲಿಲ್ಲ ನಂತರ ಕೆಲಸ ಸಿಗದೆ ಆ ಹೆಣ್ಣು ಹಿಂತಿರುಗುವಾಗ ಒಬ್ಬ ಪುರುಷ ಅವಳ ಹಿಂದೆ ಬೀಳುವನು ಅವನು ಅವಳಲ್ಲಿ ಕೇಳಿದನು ನಿನಗೆ ಯಾಕೆ ಕೆಲಸವೆಂದು ಆಗ ಆ ಹೆಣ್ಣು ಹೇಳಿದಳಂತೆ ನನ್ನ ಪತಿಯವರು ಹುಷಾರಿಲ್ಲದೆ ಮಲಗಿದ್ದಾರೆ ಆದರಿಂದ ಸ್ವಲ್ಪ ಆಹಾರಕ್ಕಗಿ ಕೆಲಸ ಹುಡುಕುತ್ತಿದ್ದೇನೆಂದಾಗ ಆ ಪುರುಷನು ಹೇಳಿದನಂತೆ ನೀನು ಕೆಲಸವೇನೂ ಮಾಡಬೇಕಾಗಿಲ್ಲ ನಿನಗೆ ಆಹಾರ ನಾನು ಕೊಡುತ್ತೇನೆ ನೀನು ಅಲ್ಪ ಹೊತ್ತು ನನ್ನ ಜೊತೆ ಸುಖಪಡೆಯಲು ಸಮ್ಮತಿಸಿದರೆ ಸಾಕೆಂದನಂತೆ ಮೊದಲು ಅವಳು ಸಮ್ಮತಿಸಿರಲಿಲ್ಲ ನಂತರ ಅವಳು ಸಮ್ಮತಿಸಿದಳಂತೆ ಹಾಗೆ ಅವರು ದಾರಿಬದಿಯಲ್ಲಿ ವ್ಯಭಿಚರಿಸಿದರೆಂದು ಹೇಳುತ್ತಿರುವಾಗ ನೆಬಿಯವರು ತಾನರಿಯದೆ ಹೇಳಿಬಿಟ್ಟರು ಇಲ್ಲ ನನ್ನ ಪತ್ನಿ ಹಾಗೆ ಮಾಡಲಾರಳು ಇದು ಕೇಳಿ ಇಬ್ಲೀಸನು ಹೇಳಿದ ಒ ಹೊ ಅದು ಸರಿ ನೀನಾ ಆ ಹುಷಾರಿಲ್ಲದ ಪತಿ? ನಿನ್ನ ಪತ್ನಿಯೊ ಅದು? ನಾಚಿಕೆಯಾಗುತ್ತಿಲ್ಲವೆ ನಿನಗೆ ಪತ್ನಿಯನ್ನು ವ್ಯಭಿಚರಿಸಲು ಕಳುಹಿಸಿ ತಿನ್ನಲು ಕಾಯುತ್ತಿದ್ದೀಯ ಇದಕ್ಕಿಂತಲೂ ಒಳ್ಳೆಯದು ಆತ್ಮಹತ್ಯೆ ಮಾಡಿಕೊಂಡು ಸಾಯುವುದಲ್ಲವೆ?
ಇಲ್ಲ ಮನುಷ್ಯ ನನ್ನ ಪತ್ನಿ ಹಾಗೆ ಮಾಡಲಾರಳು ಎಂದಾಗ ಇಬ್ಲೀಸ್ ಹೇಳುವನು ನಾನೀಗ ನಿನ್ನ ಹೆಣ್ಣೆಂದು ಹೇಳಿಲ್ಲ ತಾನೆ ನಾನೊಂದು ಹೆಣ್ಣಿನ ವಿಷಯ ಹೇಳಿದೆ ಅಷ್ಟೆ
ಈ ಊರಿನ ರೂಢಿ ಏನೆಂದರೆ ಈ ಊರಿನಲ್ಲಿ ಯಾರಾದರು ವ್ಯಭಿಚಾರ ನಡೆಸಿದರೆ ಅವರಿಗೆ ಕೊಡುವ ಶಿಕ್ಷೆ ಏನೆಂದರೆ ಹುಡುಗನ ತಲೆಬೋಳಿಸುವರು ಹುಡುಗಿಯ ತಲೆಕೂದಲು ಕತ್ತರಿಸಿಬಿಡುವರು.
ಆದ್ದರಿಂದ ನಾನು ಹೇಳಿದ್ದು ಸುಳ್ಳಾದರೆ ನಿಮಗೆ ಪರೀಕ್ಷಿಸಬಹುದು
ಇಲ್ಲಿ ಆ ಹೆಣ್ಣಿನ ಕೂದಲನ್ನು ಕತ್ತರಿಸಿದ್ದಾರೆ ಆ ಪುರುಷನ ಕೂದಲೂ ಬೋಳಿಸಿದ್ದಾರೆ
ಒಂದು ವೇಳೆ ನಿನ್ನ ಪತ್ನಿ ಬಂದಾಗ ನಿನ್ನ ಪತ್ನಿಗೆ ಕೂದಲು ಇದ್ದರೆ ನಾನು ಹೇಳಿದ ಹೆಣ್ಣು ಅದಲ್ಲ ಎಂದೂ
ಕೂದಲು ಇಲ್ಲದಿದ್ದರೆ ಅವಳೇ ಆ ಹೆಣ್ಣೆಂದು ತಿಳಿಯಬಹುದು
ಸ್ವಲ್ಪ ಹೊತ್ತು ಕಳೆದಾಗ ರಹ್ಮತ್ ಬೀವಿ ಓಡಿ ಬಂದರು ಅವರು ಬಂದೊಡನೆ ಅಯ್ಯೂಬ್ ನೆಬಿಯವರು ಕೇಳಿದರು ಆಹಾರ ಸಿಕ್ಕಿತಾ?
ಸಿಕ್ಕಿತು ನೆಬಿಯವರೇ
ಕೆಲಸ ಇತ್ತಾ?
ಇಲ್ಲ ನೆಬಿಯೆ
ನಾನು ನಿನ್ನಲ್ಲಿ ಹೇಳಿಲ್ವ ಕೆಲಸ ಸಿಗದಿದ್ದರೆ ಆಹಾರ ತರಬಾರದೆಂದು ಮತ್ತೇಗೆ ತಂದೆ?
ನೆಬಿಯವರೇ ನೀವು ನನಗೆ ಕ್ಷಮಿಸಬಹುದೆ?
ಏನೆಂದು ಹೇಳು
ನೆಬಿಯೆ ನಾನೊಂದು ತಪ್ಪು ಮಾಡಿದೆ ನನಗೆ ಕ್ಷಮಿಸಬೇಕು
ನಾನೊಂದು ತಪ್ಪು ಮಾಡಿದೆ ಎಂದಾಕ್ಷಣ ನೆಬಿಯವರಿಗೆ ಇಬ್ಲೀಸ್ ಹೇಳಿದ್ದು ಮನಸ್ಸಿನಲ್ಲಿ ಹೊಳೆಯಿತು ತಕ್ಷಣ ನೆಬಿ ತನ್ನ ಬೆರಳುಗಳು ಉದುರಿದಂತಹ ಬಲವಿಲ್ಲದ ಆ ಕೈಯನ್ನೊಮ್ಮೆ ಎತ್ತಲು ರಹ್ಮತ್ ಬೀವಿಯವರಿಗೆ ಹೇಳುವರು
ಪತಿ ಹೇಳಿದಂತೆ ರಹ್ಮತ್ ಬೀವಿ ಎತ್ತಿ ಏನು ನೆಬಿಯವರೇ ಇನ್ನು ಆ ಕೈಯನ್ನು ನಿನ್ನ ತಲೆಗೆ ತಾಗಿಸು ಎಂದಾಗ ರಹ್ಮತ್ ಬೀವಿಯು ತಲೆಗೆ ಇಟ್ಟರು
ನೆಬಿ ಕೂಡಲೆ ಕೇಳಿದರು ನಿನ್ನ ಕೂದಲೆಲ್ಲಿ?
ನೆಬಿಯೆ ನಾನೀಗ ಹೇಳಿದೆನಲ್ವ ನಾನೊಂದು ತಪ್ಪು ಮಾಡಿದೆ
ನೆಬಿ ತಕ್ಷಣ ಕೇಳಿಯೆ ಬಿಟ್ಟರು ನೀನು ವ್ಯಭಿಚರಿಸಿದೆಯ
ತನ್ನ ಪ್ರಿಯ ಪತಿಯಿಂದ ಇಂತಹ ಮಾತು ಕೇಳಿ ಸಹಿಸಲಾರದೆ ಬಿಕ್ಕಿ ಬಿಕ್ಕಿ ಅಳುತ್ತಾ ರಹ್ಮತ್ ಬೀವಿಯು ಆ ಬಂಡೆಕಲ್ಲಿನಿಂದ ತಾನರಿಯದೆ ಹಾರಿದರು..
ಒಂದು ಕಡೆಯಲ್ಲಿ ವ್ಯಬಿಚರಿಸಿದ್ದಕ್ಕೆ ಶಿಕ್ಷೆಯ ಬಗ್ಗೆ ಯೋಚಿಸುವ ಅಯ್ಯೂಬ್ ನೆಬಿ
ಇನ್ನೊಂದು ಕಡೆ ನಿರಪರಾಧಿಯಾದ ರಹ್ಮತ್ ಬೀವಿಯು ತನ್ನ ತಪ್ಪಿಗೆ ಕ್ಷಮೆ ಕೇಳಲು ಬಂದ ನಾನು ಕೇಳಿಸಿಕೊಂಡದ್ದೇನು ಎಂದು ಸಹಿಸಲಾರದೆ ಅಳುತ್ತಾ ರಬ್ಬೆ ನನ್ನ ನಿರಪರಾಧಿತ್ವವನ್ನು ನೆಬಿಯವರಿಗೆ ನೀನು ತಿಳಿಸಬೇಕಲ್ಲಾಹ್ ಎಂದು ಪ್ರಾರ್ಥಿಸಿ ನೋಡುವಾಗ ಕಂಡದ್ದು
ಬಂಡೆಕಲ್ಲಿನ ಮೇಲೆ ಉರುಳಿ ಕೆಳಗೆ ಬೀಳಲಿಕ್ಕಾದ ಸ್ಥಿತಿಯಲ್ಲಿ ತನ್ನ ಪತಿ ಅಯ್ಯೂಬ್ ನೆಬಿಯವರು ಇರುವುದು ತಕ್ಷಣ ರಹ್ಮತ್ ಬೀವಿ ಓಡಿಹೋಗಿ ಅಯ್ಯೂಬ್ ನೆಬಿಯವರನ್ನು ಎತ್ತಲು ನೋಡುವಾಗ ಅಯ್ಯೂಬ್ ನೆಬಿಯವರ ಭಾರ ಅಧಿಕವಾದದ್ದು ಅನುಭವವಾಯಿತು ಹಣೆ ಬೆವರಿತ್ತು ರಹ್ಮತ್ ಬೀವಿಗೆ ಮನದಟ್ಟಾಯಿತು ಜಿಬ್ರೀಲ್ ವಹ್ಯ್ ತಂದಿರಬೇಕು
ನನ್ನ ಬಗ್ಗೆಯು ತಿಳಿಸಿರುತ್ತಿದ್ದರೆಂದು ಬಯಸಿದ ರಹ್ಮತ್ ಬೀವಿ ಅಲ್ಲಿ ಆ ಕ್ಷಣದಲ್ಲಿ ಜಿಬ್ರೀಲ್ ಬಂದಿರುವುದೇ ರಹ್ಮತ್ ಬೀವಿಯ ನಿರಪರಾದಿತ್ವವನ್ನು ತಿಳಿಸುವುದಕ್ಕಾಗಿತ್ತು
ಜಿಬ್ರೀಲ್ ಹೇಳಿದರು ನೆಬಿಯೆ ತಾವು ದುಖಿಸಬೇಕಾಗಿಲ್ಲ ನಿಮ್ಮ ಭಾರ ಹೊರುವ ಈ ಹೆಣ್ಣಿಗೆ ಸಮಾನವಾದ ಒಂದು ಹೆಣ್ಣು ಇದುವರೆಗೆ ಜನಿಸಲಿಲ್ಲ ಅವರು ತಪ್ಪು ಮಾಡಲಿಲ್ಲ ಅವರಿಗೆ ತಕ್ಕ ಸ್ಥಾನವನ್ನು ಅಲ್ಲಾಹು ಸ್ವರ್ಗದಲ್ಲಿ ನೀಡಲಿದ್ದಾನೆ ಎಂದು ತಿಳಿಸಿ
ಜಿಬ್ರೀಲ್ ತೆರಳಿದ ನಂತರ ಅಯ್ಯೂಬ್ ನೆಬಿಯರು ಮುಗುಳ್ನಗುತ್ತಾ ರಹ್ಮತ್ ಬೀವಿಯೊಡನೆ ಕ್ಷಮೆ ಕೇಳುವರು ರಹ್ಮತ್ ಬೀವಿ ಯಾಕಾಗಿ ಕ್ಷಮೆ..
ನೀವು ನನ್ನನ್ನು ತಪ್ಪು ಭಾವಿಸಿದರಿಂದಲ್ವೆ ನನ್ನ ಬಗ್ಗೆ ಅಲ್ಲಾಹು ಮಲಕ್ ಜಿಬ್ರೀಲನ್ನು ಕಳಿಸಿದ್ದು, ನನಗೆ ಸ್ವರ್ಗದಲ್ಲಿ ಸ್ಥಾನವಿದೆಯೆಂದು ತಿಳಿಸಿದ್ದು ಇದು ದೊಡ್ಡ ಅನುಗ್ರಹವಲ್ಲವೆ ಎಂದು ಸಂತೋಷದಿಂದ ನೆಬಿಯವರಿಗೆ ಕೃತಜ್ಞತೆ ಹೇಳುತ್ತಾ ಅಲ್ಲಾಹನಿಗೆ ಸ್ಥುತಿಗಳನ್ನರ್ಪಿಸುತ್ತಾ ಸುಜೂದ್ ನಿರ್ವಹಿಸಿದರು..
ದಿನಗಳು ಕಳೆಯಿತು
ರಹ್ಮತ್ ಬೀವಿ ಎಂದಿನಂತೆ ಕೆಲಸಕ್ಕೆ ಹೋಗಿ ಒಂದು ದಿನ ಮರಳಿ ಬರುವಾಗ ಕಂಡದ್ದು
ನೆಬಿಯವರು ಆ ಕಲ್ಲಿನ ಮೇಲೆ ಮಲಗಿ ಸದಾ ತಸ್ಬೀಹ್ ಹೇಳುತ್ತಿದ್ದರು ಆ ದಿನ ನೆಬಿಯವರಿಗೆ ತಸ್ಬೀಹ್ ಹೇಳಲು ಸಾಧ್ಯವಾಗುತ್ತಿಲ್ಲ ಆ ನಾಲಗೆಗೂ ರೋಗ ಬಾಧಿಸಿತು ನೆಬಿಯವರು ಹೇಳಿದರು ನನ್ನ ನಾಲಗೆಗೂ ತೊಂದರೆಯಾಯಿತೆ ನನಗೆ ಈಗ ತಸ್ಬೀಹ್ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅತ್ತು ಬಿಟ್ಟರು
ಅಲ್ಲಾಹುವೇ ನಿನ್ನ ತಸ್ಬೀಹ್ ಹೇಳಲು ನನಗೆ ಸಾಧ್ಯವಾಗದಿದ್ದರೆ ನಾನೇಕೆ ಜೀವಿಸಬೇಕು ಆದ್ದರಿಂದ ನನ್ನ ನಾಲಗೆಯನ್ನು ನನಗೆ ಮರಳಿ ಕೊಡಬೇಕು ಅಷ್ಟು ಪ್ರಾರ್ಥಿಸಿದ್ದಷ್ಟೆ ಆಗಲೆ ಮಲಕ್ ಜಿಬ್ರೀಲ್ ಪ್ರತ್ಯಕ್ಷಗೊಂಡರು
ಓ ನೆಬಿಯವರೇ, ಒಬ್ಬ ಸೃಷ್ಟಿಯಿಂದ ಅಲ್ಲಾಹು ಬಯಸಿದ ಪ್ರಾರ್ಥನೆಯಾಗಿದೆ ಅದು ನಿಮ್ಮ ರೋಗವನ್ನು ನೀಗಿಸಲು ಅಲ್ಲಾಹನ ಅನುಮತಿಯಿದೆ ಆಗಲೂ ಅಯ್ಯೂಬ್ ನೆಬಿಯವರು ಹೇಳುವರು ನನಗೆ ನನ್ನ ರೊಗ ಗುಣವಾಗದಿದ್ದರು ಪರವಾಗಿಲ್ಲ ನನ್ನ ನಾಲಿಗೆಯನ್ನು ಗುಣಪಡಿಸಬೇಕು ಕಾರಣ ಅದು ಅಲ್ಲಾಹನಿಗೆ ತಸ್ಬೀಹ್ ಹೇಳಲು ಬೇಕು..
ನಿಮ್ಮ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಅಲ್ಲಾಹನ ಆಜ್ಞೆ ಇದೆ ಎಂದು
ನೆಬಿಯವರನ್ನು ಮಲಕ್ ಜಿಬ್ರೀಲ್ ಎತ್ತಿಕೊಂಡು ಆ ಬಂಡೆಕಲ್ಲಿನ ಕೆಳಗೆ ಕೊಂಡುಹೋಗಿ ಇಟ್ಟು ಜಿಬ್ರೀಲ್ ಹೇಳುವರು ಇಲ್ಲಿ ನಿಲ್ಲಬೇಕು
ನೆಬಿಯವರು ಹೇಳಿದರು ನನಗೆ ನಿಲ್ಲಲು ಸಾಧ್ಯವಿಲ್ಲ ನಾನೇಗೆ ನಿಲ್ಲಲಿ ನಂತರ ಜಿಬ್ರೀಲರ ಸಹಾಯದಿಂದ ನಿಲ್ಲಿಸಿದರು ನಂತರ ಜಿಬ್ರೀಲ್ ಹೇಳಿದರು ಈ ಕಲ್ಲಿಗೆ ತಮ್ಮ ಕಾಲಿನಿಂದ ಒದೆಯಿರಿ ನೆಬಿಯೆ
ಇಲ್ಲ ಜಿಬ್ರೀಲ್ ನನಗೆ ಸಾಧ್ಯವಿಲ್ಲ ನಂತರ ಜಿಬ್ರೀಲ್ ಅವರ ಕಾಲನ್ನು ಹಿಡಿದು ಬಂಡೆಕಲ್ಲಿಗೆ ತಟ್ಟಿದಾಗ ಎರಡು ಸೀಳಾಗಿ ನೀರು ಹೊರಚಿಮ್ಮಿತು ಒಂದು ಕುಡಿಯುವುದಕ್ಕೆ ಇನ್ನೊಂದು ಸ್ನಾನಕ್ಕೆ ಎಂದಾಗಿತ್ತು
ಅಧ್ಬುತವೆಂದರೆ ಹೊರಚಿಮ್ಮಿದ ಆ ನೀರು ಒಂದು ತಣ್ಣೀರು ಇನ್ನೊಂದು ಬಿಸಿನೀರು ಆಗಿತ್ತು
ಈ ಎರಡೂ ನೀರು ಒಂದುಗೂಡಿದ ಆ ನೀರಲ್ಲಿ ಮುಳುಗಿ ಸ್ನಾನ ಮಾಡಲು ಜಿಬ್ರೀಲ್ ಹೇಳುವರು
ನೆಬಿಯವರು ಜಿಬ್ರೀಲರ ಸಹಾಯದಿಂದ ಆ ನೀರಲ್ಲಿ ಮುಳುಗಿ ಎದ್ದರು
ಮುಳುಗಿ ಎದ್ದಾಗ ಶರೀರದಿಂದ ನೀರು ಇಳಿದು ಹೋದಂತೆ ಅವರ ರೋಗವು ಸಂಪೂರ್ಣವಾಗಿ ನೀಗಿತು ನೆಬಿಯವರು ನೀರಿನಿಂದ ಹೊರಬಂದು ಕೂಡಲೇ ಅಲ್ಲಾಹನಿಗೆ ಸುಜೂದ್ ನಿರ್ವಹಿಸುತ್ತಿರುವ
ಆ ಕ್ಷಣದಲ್ಲಿ ರಹ್ಮತ್ ಬೀವಿ ಮರಳಿಬಂದಾಗ ಬಂಡೆ ಕಲ್ಲಿನ ಮೇಲೆ ಮಲಗಿಸಿ ಹೋಗಿದ್ದ ನೆಬಿಯವರನ್ನು ಕಾಣದಾದಾಗ ಸಂಕಟಪಟ್ಟರು ನೆಬಿಯವರನ್ನು ಸುತ್ತಲೂ ಹುಡುಕಾಡಿದರು ನಂತರ ತಾಳ್ಮೆ ಕಳೆದುಕೊಂಡು ಕೇಳುವರು ಯಾ ಅಲ್ಲಾಹ್ ನನ್ನ ಪತಿಯವರು ಎಲ್ಲಿ ಎಂದು ಹುಡುಕಾಡಿ ಹುಡುಕಾಡಿ ನಡೆಯುತ್ತಿರುವಾಗ
ಕಲ್ಲಿನ ಕೆಲಭಾಗದಲ್ಲಿ ಒಬ್ಬರು ಸುಜೂದ್ ನಿರ್ವಹಿಸುವುದು ಕಂಡರು
ಯಾರೊ ಅನ್ಯ ಪುರುಷನಾಗಿರಬಹುದು ಆದರು ಕೇಳಿ ನೋಡೋಣವೆಂಡು ರಹ್ಮತ್ ಬೀವಿ ಅವರ ಬಳಿ ಹೋಗಿ ನಿಂತರು ಅವರು ಸುಜೂದಿನಿಂದ ಎದ್ದ ನಂತರ ಅವರ ಮುಖ ನೋಡದೆ ಅವರೊಡನೆ ಕೇಳುವರು ಅಲ್ಲಿ ಕಲ್ಲಿನ ಮೇಲೆ ಮಲಗಿಸಿದ್ದ ರೋಗಿಯಾದ ಪತಿಯನ್ನು ಎಲ್ಲಾದರು ಕಂಡಿದ್ದೀರ ತೀರಾ ಅಸೌಖ್ಯದಿಂದ ಇದ್ದರು ಒಂದಿಷ್ಟು ಚಲಿಸಲಾಸಧ್ಯವಾಗಿದ್ದ ಅವರನ್ನು ಕಾಣುತ್ತಿಲ್ಲ ಎಂದಾಗ
ಅಲ್ಲಾಹನ ಪ್ರವಾದಿ ಅಯ್ಯೂಬ್ ನೆಬಿ ಯೋಚಿಸುವರು ನನಗೋಸ್ಕರ ಕಷ್ಟಪಡುತ್ತಿದ್ದಾಳೆ ಇನ್ನು ಇವಳಿಗೆ ಕಷ್ಟ ಕೊಡಬಾರದೆಂದು ಯೋಚಿಸಿ ಅಯ್ಯೂಬ್ ನೆಬಿಯು ಎದ್ದು ರಹ್ಮತ್ ಬೀವಿಯ ಹತ್ತಿರ ನಡೆಯುತ್ತಿರುವಾಗ ರಹ್ಮತ್ ಬೀವಿ ಹೇಳಿದರು ಇತ್ತ ಬರಬೇಡ ನಾನು ಅಯ್ಯೂಬ್ ನೆಬಿಯವರ ಪತ್ನಿ ಎಂದರು
ಅಯ್ಯೂಬ್ ನೆಬಿ ಹೇಳಿದರು ರಹ್ಮತೆ ನೀನು ನನ್ನನ್ನು ನೋಡು ನಾನು ಅಯ್ಯೂಬ್ ನೆಬಿ ನಿನ್ನ ಪತಿ
ನನ್ನ ರೋಗವನ್ನು ಅಲ್ಲಾಹು ಗುಣಪಡಿಸಿದ
ಅದು ಕಂಡು ರಹ್ಮತ್ ಬೀವಿ ಹೈರಾನಾಗಿ ಹೇಳುವರು ಅಲ್ಹಂದುಲಿಲ್ಲಾಹ್ ಏನಿದು ನಾನು ಕಾಣುತ್ತಿರುವುದು ಸಂತೋಷದಿಂದ ಮುಗುಳ್ನಗುತ್ತ ಅಯ್ಯೂಬ್ ನೆಬಿಯವರನ್ನು ಅಪ್ಪಿಹಿಡಿದುಕೊಂಡು ಹೇಳುವರು ನೆಬಿಯೆ ಈಗಲೆ ನಮಗೆ ಊರಿಗೆ ಹೊರಡಬೇಕು ತಾವು ಕುಷ್ಟ ರೋಗ ಹಿಡಿದವರು ತಾವು ನೆಬಿ ಅಲ್ಲವೆಂದು ಹೇಳಿರುವ ಜನರು ಈಗ ನಿಮ್ಮನ್ನು ಕಾಣಬೇಕು ಎಂದಾಗ ಅಯ್ಯೂಬ್ ನೆಬಿ ಹೇಳಿದರು ಹೋಗಬಹುದು ಆದರೆ ಅದಕ್ಕಿಂತ ಮೊದಲು ನಮಗೆ ಒಂದು ಕಡೆ ಹೋಗಬೇಕು
ರಹ್ಮತ್ ಬೀವಿ ಕೇಳಿದರು ಅದೆಲ್ಲಿಗೆ?
ಹಲವು ವರ್ಷಗಳಿಂದ ನನ್ನನ್ನು ಕಾಣಲು ಆಗ್ರಹಿಸುವ ಒಬ್ಬ ಫಕೀರ್ ಇದ್ದರಲ್ವ
ಎಲ್ಲರು ನಮ್ಮನ್ನು ಅಸಹ್ಯವಾಗಿ ಕಂಡಾಗಲು ಪ್ರೀತಿಯಿಂದ ಸತ್ಕರಿಸಿದ ಆ ಫಕೀರನನ್ನು ಇನ್ಶಾ ಅಲ್ಲಾಹ್ ನಮಗೆ ಮೊದಲು ಅವರನ್ನು ಕಾಣಬೇಕು ಎಂದರು
ಅವರು ಹೊರಡುವಾಗ ರಹ್ಮತ್ ಬೀವಿಯೊಡನೆ ಅಯ್ಯೂಬ್ ನೆಬಿಯವರು ಕೇಳುವರು ಇಷ್ಟೂ ದೂರ ನೀನು ನನ್ನನ್ನು ಎತ್ತಿಕೊಂಡು ಬಂದಿದ್ದೀಯಲ್ವ ಇನ್ನು ಸ್ವಲ್ಪ ನಾನು ನಿನ್ನನ್ನು ಎತ್ತಿ ನಡೆಯಲೆ ರಹ್ಮತ್ ಬೀವಿ ಹೇಳಿದರು ಬೇಡ ನೆಬಿಯೆ ಅದು ಬೇಡ ನಾವು ಜೊತೆಗೆ ನಡೆಯುವ ಎಂದರು
ಇಬ್ಬರು ನಡೆದು .. ನಡೆದು .. ಆ ಫಕೀರನ ಮನೆಗೆ ತಲುಪಿದರು
ಆಗ ಫಕೀರ್ ಮನೆಯ ಹೊರಗಿದ್ದರು ಅವರ ಪತ್ನಿ ಮನೆಯೊಳಗಿದ್ದರು
ನೆಬಿ ಹೋಗಿ ಅಸ್ಸಲಾಂ ಅಲೈಕುಂ ಎಂದು ಸಲಾಂ ಹೇಳಿದರು
ಫಕೀರ್ ವ ಅಲೈಕುಮುಸ್ಸಲಾಂ ಎಂದು ಎದ್ದು ನಿಂತು ಆ ಪ್ರಸನ್ನವಾದ ಆ ಮುಖವನ್ನು ಫಕೀರ್ ನನಗೆ ತಮ್ಮ ಪರಿಚಯವಿಲ್ಲ ಎಂದರು
ಆ ಸಂದರ್ಭದಲ್ಲಿ ಒಳಗಿನಿಂದ ಅವರ ಹೆಂಡತಿ ರಹ್ಮತ್ ಬೀವಿಯನ್ನು ಕಂಡಾಗ ಎಲ್ಲೋ ಕಂಡಂತಿದೆ ಎಂದು ಯೋಚಿಸುತ್ತಾ ಇದು ಹಿಂದೆ ಒಂದು ಅಸೌಖ್ಯವಿರುವ ಪತಿಯನ್ನು ತಂದ ಹೆಣ್ಣಲ್ವೆ ಹಾಗಾದರೆ ಹಿಂದೆ ಇದ್ದ ಆ ಪತಿ ತೀರಿಹೋದರೊ ಎಂದು ಪತಿಯೊಡನೆ ಮಾತನಾಡುವಾಗ
ಅಯ್ಯೂಬ್ ನೆಬಿಯವರು ಹೇಳಿದರು ಇಲ್ಲ ಆ ವ್ಯಕ್ತಿ ತೀರಿ ಹೋಗಲಿಲ್ಲ ಅವರೆ ನಾನು ಎಲ್ಲವು ಅಲ್ಲಾಹು ಗುಣಪಡಿಸಿದ ಎನ್ನುತ್ತ
ನೆಬಿಯವರು ಆ ಫಕೀರನಲ್ಲಿ ಹೇಳುವರು ನನಗೆ ನೀವು ಕ್ಷಮಿಸಬೇಕು
ಯಾಕೆ?
ನೀವು ಅಯ್ಯೂಬ್ ನೆಬಿಯವರನ್ನು ಕಾಣಲು ಆಗ್ರಹಿಸುವವರಲ್ಲವೆ ?
ಹೌದು
ಹಾಗಾದರೆ ನೋಡಿಕೊಳ್ಳಿ ನಾನೆ ಆ ಅಯ್ಯೂಬ್ ನೆಬಿ
ನಾನು ಅಂದು ಇಲ್ಲಿ ಬಂದಾಗ ಹೇಳಿರಲಿಲ್ಲ ಅವರು ನೆಬಿಯವರನ್ನು ತಬ್ಬಿ ಹಿಡಿದುಕೊಂಡು ಹೇಳಿದರು ತಮಗೆ ಅಂದೇ ಹೇಳಬಾರದಿತ್ತೆ ನೆಬಿಯೆ ನಾನು ನಿಮ್ಮನ್ನು ಬಿಡುತ್ತಿರಲಿಲ್ಲ
ಆದ್ದರಿಂದಲೆ ನಾನು ಅಂದು ಹೇಳದಿದ್ದದ್ದು
ಅಂದು ನಿಮಗೆ ಕಷ್ಟವಾಗಾಬಾರದೆಂದು ನಾನು ಹೇಳಲಿಲ್ಲ,
ಅಂದು ನಾನು ನಿಮಗೋಸ್ಕರ ಪ್ರಾರ್ಥಿಸಿದ್ದೆ ನಿಮ್ಮನ್ನು ಈ ಲೋಕದಲ್ಲೂ ನಾಳೆ ಪರಲೋಕದಲ್ಲೂ ಜೊತೆಗಾರನಾಗಿಸಬೇಕೆಂದು ಆದರಿಂದ ನೀವು ಬನ್ನಿ ನಮ್ಮ ಜೊತೆಗೆ ನನಗೆ ಜೊತೆಗಾರನಾಗಿ ತಾವು, ಮತ್ತು ನನ್ನ ಪತ್ನಿಯ ಜೊತೆಗಾರ್ತಿಯಾಗಿ ನಿಮ್ಮ ಪತ್ನಿಯು ಡಮಾಸ್ಕಸಿಗೆ ಹೋಗಿ ಅಲ್ಲಿ ಇರೋಣ ಎಂದರು
ಆ ಫಕೀರ್ ಕೂಡಲೆ ಅವರ ಪತ್ನಿಗೆ ತಿಳಿಸುವರು ನಮ್ಮನ್ನು ನೆಬಿಯವರು ಜೊತೆಗೆ ಹೋಗಲು ಕರೆಯುತ್ತಿದ್ದಾರೆ ಬೇಗ ಹೊರಡು ಎಂದರು.
ಅಯ್ಯುಬ್ ನೆಬಿ, ರಹ್ಮತ್ ಬೀವಿ,
ಫಕೀರ್ ಮತ್ತು ಫಕೀರ್ ರ ಹೆಂಡತಿಯು ಸೇರಿ ಡಮಾಸ್ಕಸಿಗೆ ಯಾತ್ರೆ ಹೊರಟರು ..
ಆ ಸಮಯದಲ್ಲಿ ಡಮಾಸ್ಕಸಿನ ಸ್ಥಿತಿ ಏನೆಂದರೆ
ಅಲ್ಲಾಹನ ಪ್ರವಾದಿಯವರನ್ನು ಊರಿನಿಂದ ಓಡಿಸಿದ ಜನರ ಮನಸ್ಸಿನಲ್ಲಿ ಅಲ್ಲಾಹು ಬಹಳ ಸಂಕಟ ನೀಡಿದ್ದನು
ನೆಬಿಯನ್ನು ಕಂಡು ಕ್ಷಮೆ ಕೇಳದಿದ್ದರೆ ನಮ್ಮ ಈ ಜನಾಂಗವನ್ನೆ ಅಲ್ಲಾಹು ನಶಿಸಿ ಬಿಡಬಹುದು, ನೆಬಿಯವರ ಶಾಪ ನಮಗೆ ಸಿಗಬಹುದೆಂಬ ಭಯ ಅಲ್ಲಾಹು ಅವರ ಮನಸ್ಸಲ್ಲಿ ಇಟ್ಟು ಕೊಟ್ಟಿದ್ದ ಕಾಲ
ಅವರು ನೆಬಿಯವರನ್ನು ಹುಡುಕಿ ನಡೆಯುತ್ತಿದ್ದಂತಹ ಕಾಲ
ಅಯ್ಯೂಬ್ ನೆಬಿ ಬರುತ್ತಿದ್ದಾರೆಂಬ ವಾರ್ತೆ ಊರಿಗೆ ಹರಡಿತು ಅದ್ಯಾರೊ ಒಬ್ಬ ಅಲ್ಲಾಹನ ನೆಬಿಯವರು ಬರುತ್ತಿದ್ದಾರೆಂಬ ವಿಷಯ ಡಮಸ್ಕಸಿನ ಪಟ್ಟನದಲ್ಲೆಲ್ಲಾ ಹೇಳಿಕೊಂಡು ನಡೆದ..
ಜನರೆಲ್ಲ ನೆಬಿಯವರನ್ನು ಸ್ವೀಕರಿಸಲು ಅತ್ತ ಓಡತೋಡಗಿದರು
ಜನರಿಗೆ ನೆಬಿಯು ದೂರದಿಂದ ಮರುಭೂಮಿಯಲ್ಲಿ ಬರುತ್ತಿರುವುದು ಕಂಡು
ಎಲ್ಲರು ನೆಬಿಯವರನ್ನು ಸ್ವೀಕರಿಸಲು ಓಡಿದರು
ಒಂದು ಕಾಲದಲ್ಲಿ ಊರುಬಿಟ್ಟು ಹೋಗದಿದ್ದರೆ ಕೊಂದುಬಿಡುತ್ತೇವೆಂದ ಜನರು ನೆಬಿಯವರನ್ನು ಆಧರದಿಂದ ಗೌರವಿಸಿ ಸ್ವೀಕರಿಸಿ ಡಮಾಸ್ಕಸಿಗೆ ಕೊಂಡುಹೋದರು
ಡಮಾಸ್ಕಸಿಗೆ ತೆರಳಿ ಹಿಂದಿನ ಆ ಗುಡಿಸಲು ಮನೆಯನ್ನು ಸರಿಪಡಿಸಿ ಅದರಲ್ಲೆ ವಾಸಿಸಿ
ಇಸ್ಲಾಮಿನ ಪ್ರಭೋದನೆಯನ್ನು ಪುನರಾರಂಭಿಸಿದರು..
ಅಸ್ಸಲಾಮು ಅಲೈಕುಂ
✍ ಅಬ್ದುಲ್ ಜಬ್ಬಾರ್
ಕುಡ್ತಮಗೇರು
Comments
Post a Comment