ಸಬಾಹಲ್ ಖೈರ್
ಸಬಾಹಲ್ ಖೈರ್
ರಮಳಾನ್ ವರ್ಷವಿಡೀ ಪ್ರತಿಫಲ:
"ವಿಶ್ವಾಸದಿಂದ ಹಾಗೂ ಪ್ರತಿಫಲದ ಅಪೇಕ್ಷೆಯೊಂದಿಗೆ ರಮಳಾನಿನಲ್ಲಿ ಒಬ್ಬ ವ್ರತಾಚರಿಸಿದರೆ ಅವನ ಈ ಹಿಂದಿನ ಪಾಪಗಳೆಲ್ಲವೂ ಮನ್ನಿಸಲ್ಪಡುವುದು..”
(ಬುಖಾರಿ, ಮುಸ್ಲಿಮ್).
“ಒಬ್ಬ ವ್ಯಕ್ತಿ ರಮಳಾನಿನ ಉಪವಾಸ ಹಾಗೂ ಅದರ ಮುಂದುವರಿದ ಭಾಗವಾಗಿ ಶವ್ವಾಲಿನ ಆರು ಉಪವಾಸವನ್ನು ಆಚರಿಸಿದರೆ ವರ್ಷವಿಡೀ ಉಪವಾಸ ಆಚರಿಸಿದ ಪ್ರತಿಫಲ ಲಭ್ಯವಾಗುವುದು.." ಎಂದು ಹೇಳುವ ನಬಿವಚನವಿದೆ. ಒಂದು ಒಳಿತಿಗೆ ಹತ್ತು ಪ್ರತಿಫಲವಿರುವಾಗ ಮೂವತ್ತು ದಿನಗಳ ಉಪವಾಸಕ್ಕೆ ಮುನ್ನೂರು ಹಾಗೂ ಶವ್ವಾಲಿನ ಆರು ಉಪವಾಸಕ್ಕೆ ಅರುವತ್ತು ಪ್ರತಿಫಲದಂತೆ ಮುನ್ನೂರ ಅರುವತ್ತು ಪ್ರತಿಫಲ ಲಭ್ಯವಾಗುತ್ತದೆ. ಅಂದರೆ, ವರ್ಷವಿಡೀ ಉಪವಾಸ ಆಚರಿಸಿದ ಪ್ರತಿಫಲ ಲಭ್ಯವಾದಂತಾಯಿತಲ್ಲವೇ..?
ರಮಳಾನಿನ ಮಹತ್ವವನ್ನು ಮತ್ತೊಂದು ಹದೀಸಿನಲ್ಲಿ ಹೀಗೆ ಹೇಳಲಾಗಿದೆ.
"ರಮಳಾನಿನ ಆಗಮನದೊಂದಿಗೆ ಸ್ವರ್ಗದ ಬಾಗಿಲುಗಳು ತೆರೆಯಲ್ಪಡುತ್ತದೆ. ನರಕದ ಬಾಗಿಲುಗಳು ಮುಚ್ಚಲ್ಪಡುತ್ತದೆ. ಪಿಶಾಚಿಗಳನ್ನು ಬಂಧಿಸಲಾಗುವುದು..”
(ಬುಖಾರಿ, ಮುಸ್ಲಿಮ್)
ರಮಳಾನಿನ ಪ್ರತೀ ಹಗಲು ರಾತ್ರಿಗಳಲ್ಲಿ ಅಲ್ಲಾಹನು ನರಕ ವಿಮೋಚನೆ ನೀಡುವನು. ಪ್ರತೀ ಹಗಲು ರಾತ್ರಿಗಳಲ್ಲೂ ಮುಸ್ಲಿಮನ ಪ್ರಾರ್ಥನೆಯನ್ನು ಸ್ವೀಕರಿಸಲಾಗುವುದು ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ..
ಅಬ್ದುರ್ರಹ್ಮಾನಿಬ್ನು ಔಫ್ (ರ) ಹೇಳುತ್ತಾರೆ..
ಇತರ ತಿಂಗಳುಗಳಿಗಿಂತಲೂ ರಮಳಾನಿಗೆ ಹೆಚ್ಚು ಹೆಚ್ಚು ಮಹತ್ವ ಕಲ್ಪಿಸಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು..
"ವಿಶ್ವಾಸದೊಂದಿಗೆ ಹಾಗೂ ಪ್ರತಿಫಲದ ಅಪೇಕ್ಷೆಯೊಂದಿಗೆ ರಮಳಾನ್ ತಿಂಗಳಲ್ಲಿ ಉಪವಾಸ ಆಚರಿಸಿ, ನಮಾಝ್ ಮಾಡಿದರೆ ಅವನು ಪಾಪಮುಕ್ತನಾಗುವನು. ಅವನು ತಾಯಿಯ ಹೊಟ್ಟೆಯಿಂದ ಹೊರಬಂದ ದಿನದಂತೆ.."
(ಅವನು ಪಾಪರಹಿತನಾಗುವನು),
Comments
Post a Comment