ಸಬಾಹಲ್ ಖೈರ್
ಸಬಾಹಲ್ ಖೈರ್
ಲೈಲತುಲ್ ಖದ್‌ರ್ ಮಹೋನ್ನತ ರಾತ್ರಿ:
ಲೈಲತುಲ್ ಖದ್‌ರ್ ರಮಳಾನ್‌ನಿನ ರಾತ್ರಿಗಳಲ್ಲಿ ಅತ್ಯಂತ ಮಹೋನ್ನತ ರಾತ್ರಿಯಾಗಿದೆ. ಅಲ್ಲಾಹನು ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಪವಿತ್ರ ಕುರ್‌ಆನ್ ಆವತೀರ್ಣಗೊಳಿಸಲು ಪ್ರಾರಂಭ ಮಾಡಿದ ರಾತ್ರಿಯಾಗಿದೆ, ರಕ್ಷೆ, ಅನುಗ್ರಹ, ಒಳಿತು ಹಾಗೂ ಪ್ರತಿಫಲದ ರಾತ್ರಿಯಾಗಿದೆ. ಲೈಲತುಲ್ ಖದ್‌ರ್ ಅಂದರೆ ಗೌರವದ ರಾತ್ರಿ, ಮಹೋನ್ನತ ರಾತ್ರಿ, ಶ್ರೇಷ್ಟತೆಯ ರಾತ್ರಿ ಎಂಬೀ ಅರ್ಥಗಳಿವೆ. ಆ ರಾತ್ರಿಯಲ್ಲಿ ಪ್ರಾರ್ಥನ ಸ್ವೀಕರಿಸಲ್ಪಡಲು, ಆಪತ್ತು, ಮುಸೀಬತ್ತು, ರೋಗ ರುಜಿನಗಳು ನೀಗಿ ಹೋಗಲು, ಸುಖ ಸಂತೋಷ, ಕ್ಷೇಮ, ಐಶ್ವರ್ಯ ವರ್ಷಿಸಲು ಆಕಾಶದ ಬಾಗಿಲುಗಳು ತೆರೆಯಲಾಗುತ್ತದೆ. ಇದು ಲೈಲತುಲ್ ಖದ್‌ರ್ ನ ಮಹತ್ವವಾಗಿದೆ, ಈ ರಾತ್ರಿಯು ಇತರ ಎಲ್ಲಾ ರಾಶಿಗಳಿಗಿಂತ ಅತ್ಯಂತ ಉನ್ನತ ರಾತ್ರಿಯಾಗಿದೆ,
ಇಮಾಮ್ ಅಬೂಬಕರಿನಿಲ್ ವರ್ರಾಖ್ (ರ) ಹೇಳುತ್ತಾರೆ:
"ನಿಶ್ಚಯವಾಗಿಯೂ ಈ ರಾತ್ರಿಯಲ್ಲಿ ಅತಿ ಮಹೋನ್ನತ ಗ್ರಂಥ ಪವಿತ್ರ ಕುರ್‌ಆನ್, ಅತಿ ಮಹೋನ್ನತ ಮಲಕ್ ಜಿಬ್‌ರೀಲ್ (ಅ) ರವರ ಮುಖಾಂತರ ಅತಿ ಮಹೋನ್ನತ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಹಾಗೂ ಅವರ ಅತಿ ಮಹೋನ್ನತ ಸಮುದಾಯದ ಮೇಲೆ ಅವತೀರ್ಣವಾಯಿತು. ಈ ಕಾರಣದಿಂದಲೇ ಈ ರಾತಿಗೆ ಲೈಲತುಲ್ ಖದ್‌ರ್ (ಅತಿ ಮಹೋನ್ನತ ರಾತ್ರಿ) ಎಂಬ ಹೆಸರು ಬಂತು.."
Comments
Post a Comment