ಸಬಾಹಲ್ ಖೈರ್
ಸಬಾಹಲ್ ಖೈರ್
ಉಪವಾಸಿಗರಿಗೆ ಇದು ತಿಳಿದಿರಲೇಬೇಕು:
•ಕೆಲವು ಮಹಿಳೆಯರಿಗೆ ರಮಳಾನ್ ವ್ರತದ ಸಂದರ್ಭದಲ್ಲಿ ರುಚಿ ನೋಡುವ ಅಭ್ಯಾಸವಿದೆ. ಆದರೆ, ಈ ಕುರಿತು ಎಚ್ಚರಿಕೆ ವಹಿಸಬೇಕು. ನಾಲಗೆ ಮೇಲೆ ಒಂದು ವಸ್ತು ಇಟ್ಟರೆ ಅದರ ರುಚಿ ಒಳ ಹೋಗುತ್ತದೆ. ಇದರಿಂದ ವ್ರತಕ್ಕೆ ತೊಂದರೆ ಇಲ್ಲದಿದ್ದರೂ ಇದು ಕರಾಹತ್ ಆಗಿದೆ. ಆದರೆ, ನಾಲಗೆ ಮೇಲೆ ಇಟ್ಟ ವಸ್ತುವನ್ನು (ಅದು ದ್ರವರೂಪದಲ್ಲಿರುವ ವಸ್ತುವಾದರೂ) ತಕ್ಷಣವೇ ಉಗುಳಿ ಬಾಯಿ ಮುಕ್ಕಳಿಸುವುದು ಉತ್ತಮ. ಈ ವಿಷಯದಲ್ಲಿ ಬಹಳಷ್ಟು ಜಾಗೃತೆ ವಹಿಸಬೇಕು..
•ಮಾಂಸ ಖಂಡಗಳಿಗೆ ಚುಚ್ಚುಮದ್ದು ಕೊಡುವುದರಿಂದ ವ್ರತಕ್ಕೆ ತೊಂದರೆ ಇಲ್ಲ..
•ಸ್ವಲನವಾಗುವ ಉದ್ದೇಶವಿಲ್ಲದೇ ವುಳೂಅ್ ಭಂಗವಾಗದ ರೀತಿಯಲ್ಲಿ ಮರೆಯ ಮೇಲೆ ಪತ್ನಿ/ಪತಿಯನ್ನು ಸ್ಪರ್ಶಿಸಿದಾಗ ಸ್ವಲನವಾದರೂ, ಚಿಂತನೆಯ ಮೂಲಕ ಸ್ವಲನವಾದರೂ ಹಾಗೂ ಸ್ವಪ್ನ ಸ್ಥಲನವಾದರೂ ವ್ರತ ಕೆಡುವುದಿಲ್ಲ. ಆದರೆ ಸೂಕ್ಷ್ಮ ತೆಗೆ ಬೇಕಾಗಿ ಇವುಗಳಿಂದ ದೂರವಿರುವುದೇ ಉತ್ತಮ..
•ಸ್ನಾನ ಮಾಡುವಾಗ ಬಾಯಿ, ಮೂಗು, ಕಿವಿ, ಗುದದ್ವಾರ ಮತ್ತು ಸ್ತ್ರೀಯರು ಯೋನಿ ಶುಚಿಗೊಳಿಸುವಾಗ (ಕೈ ಬೆರಳು) ನೀರು ಒಳ ಹೋಗದಂತೆ ಜಾಗೃತೆ ವಹಿಸಬೇಕು. ರಮಳಾನ್ ತಿಂಗಳಲ್ಲಿ ರಾತ್ರಿ ಅಥವಾ ಸಹರಿಗೆ ಮುಂಚೆ ಸ್ನಾನ ಮಾಡುವುದನ್ನು ರೂಢಿ ಮಾಡಿದರೆ ಸೂಕ್ಷತೆ ಕಾಯ್ದುಕೊಂಡಂತಾಗುತ್ತದೆ..
•ಹಲ್ಲುಜ್ಜುವಾಗ ಗಂಟಲಿಗೆ ಬ್ರೆಷ್ ಹಾಕಬಾರದು. ವಾಂತಿ ಆಗುವ ಸಾಧ್ಯತೆ ಇರುತ್ತದೆ..
•ತಲೆಗೆ ಎಣ್ಣೆ ಹಾಕುವುದು, ಕಣ್ಣಿಗೆ ಔಷಧಿ ಹಾಕುವುದರಿಂದ ವ್ರತಕ್ಕೆ ತೊಂದರೆ ಇಲ್ಲ..
•ಉಗುಳು ನುಂಗುವುದರಿಂದ ವ್ರತಕ್ಕೆ ತೊಂದರೆ ಇಲ್ಲ. ಆದರೆ ಉಗುರು ಕಚ್ಚುವವರು, ಕಫ ಮಿಶ್ರಿತ, ರಕ್ತ ಮಿಶ್ರಿತ ಉಗುಳು ನುಂಗುವುದರಿಂದ ವ್ರತಕ್ಕೆ ಭಂಗವಾಗುತ್ತದೆ..
•ಗಂಟಲಿನಿಂದ ಮೇಲೆ ಬರದ ಅಥವಾ ಗಂಟಲಿನ ಕೆಳಗಡೆ ಇರುವ ಕಫವನ್ನು ನುಂಗಿದರೆ ವ್ರತಕ್ಕೆ ಭಂಗವಿಲ್ಲ..
Comments
Post a Comment