ಸಬಾಹಲ್ ಖೈರ್
ಸಬಾಹಲ್ ಖೈರ್
ಮಹೋನ್ನತ ರಾತ್ರಿ:
ಅಲ್ಲಾಹು ಪವಿತ್ರ ಕುರ್‌ಆನಲ್ಲಿ "ಲೈಲತುಲ್ ಖದ್‌ರ್ ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.."ಎಂದಿದಾನೆ, ಸಾವಿರ ತಿಂಗಳು ಅಂದರೆ ಎಂಭತ್ತಮೂರು ವರುಷ ನಾಲ್ಕು ತಿಂಗಳು ಆಗುತ್ತದೆ.. ಇಹದಲ್ಲಿ ಜೀವಿಸುವ ಒಬ್ಬ ಮನುಷ್ಯನ ಒಟ್ಟಾರೆ ಆಯುಷ್ಯವಾಗಿದೆ. ಹೀಗೆ ನೋಡುವಾಗ ಲೈಲತುಲ್ ಖದರಿನ ಒಂದು ರಾತ್ರಿ ಒಬ್ಬ ಮನುಷ್ಯನ ಆಯುಷ್ಯಕ್ಕಿಂತಲೂ ಹೆಚ್ಚು ಶ್ರೇಷ್ಠವಾಗಿದೆ ಎಂದು ತಿಳಿಯಬಹುದು..
ನಿಶ್ಚಯವಾಗಿಯೂ ಲೈಲತುಲ್ ಖದರಿನ ರಾತ್ರಿಗೆ ಅತ್ಯಂತ ಹೆಚ್ಚು ಮಹತ್ವವಿದೆ. ಅಲ್ಲಾಹನು ಅವನ ಪವಿತ್ರ ಕುರ್‌ಆನಲ್ಲಿ ಲೈಲತುಲ್ ಖದ್ರನ ವಿಶೇಷತೆಗಳನ್ನು ತಿಳಿಸುತ್ತಾನೆ,
"ನಿಶ್ಚಯವಾಗಿಯೂ ಲೈಲತುಲ್ ಖದರ್ ಬರ್ಕತ್ (ಕ್ಷೇಮಾಭಿವೃದ್ಧಿ)ನ ರಾತ್ರಿಯಾಗಿದೆ, ಅತ್ಯಂತ ಉನ್ನತ ರಾತ್ರಿಯಾಗಿದೆ, ಪವಿತ್ರ ಕುರ್‌ಆನ್ ಅವತೀರ್ಣವಾದ ರಾತ್ರಿಯಾಗಿದೆ. ಸಾವಿರ ತಿಂಗಳುಗಳಿಗಿಂತ ಶ್ರೇಷತೆ ಇರುವ ರಾತ್ರಿಯಾಗಿದೆ. ಮಲಕುಗಳು ಧರೆಗೆ ಇಳಿದು ಬರುವ ರಾತ್ರಿಯಾಗಿದೆ. ರಕ್ಷೆಯ ರಾತ್ರಿಯಾಗಿದೆ, ಫಜರ್‌ನ ವೇಳೆಯ ತನಕ ಆ ರಾತ್ರಿಯು ನೀಳವಾಗಿರುತ್ತದೆ..”
ಅಂದು ಪಶ್ಚಾತಾಪಪಡುವವರೆಲ್ಲಾ ಪಶ್ಚಾತಾಪಗಳನ್ನು ಸ್ವೀಕರಿಸಲಾಗುತ್ತದೆ. ಸೂರ್ಯಾಸ್ತಮಾನದಿಂದ ಪ್ರಭಾತದವರೆಗೆ ಎಂದು ಳಹ್‌ಹಾಕ್‌ನಲ್ಲಿ ವರದಿಯಾಗಿದೆ.
"ಲೈಲತುಲ್ ಖದರ್‌ನ ರಾತ್ರಿ ಭೂಮಿಯಲ್ಲಿ ಕಲ್ಲುಗಳಿಗಿಂತಲೂ ಅಧಿಕ ಮಲಕುಗಳಿರುತ್ತಾರೆ.."ಎಂದು ಅಬೂಹುರೈರಾ ಉಲ್ಲೇಖಿಸಿದ್ದಾರೆ.
"ಹಲಾಲಾದ ಆಹಾರವನ್ನು ನೀಡಿ ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಉಪವಾಸ ತೊರೆಯಲು ಅನುವು ಮಾಡಿಕೊಟ್ಟರೆ ಅವನ ಪಾಪ ವಿಮೋಚನೆಗೆ ರಮಳಾನ್‌ನ ರಾತಿಗಳಲ್ಲಿ ಸರ್ವ ಮಲಕುಗಳು ಪ್ರಾರ್ಥಿಸುವರು. ಲೈಲತುಲ್ ಖದ್‌ರ್‌ನ ರಾತ್ರಿ ಜಿಬ್‌ರೀಲ್ ಅಲೈಸ್ಸಲಾಮರು ಅವನ ಕೈ ಹಿಡಿದು ಅಭಿವಂದನೆಸಲ್ಲಿಸುವರು..”
(ಬೃಹಖಿ, ಅತ್ತರ್ಗೀಚ್ : 2 / 96).
Comments
Post a Comment