ಜ್ಞಾನಧಾರೆ
ಲೋಕ ನಾಯಕ ಪ್ರವಾದಿﷺ ರಿಗೆ ಶತ್ರು ಪ್ರಮುಖ ಅಬೂಜಹಲ್ ಸಂರಕ್ಷಣೆ ನೀಡಿದ್ದಾನೆಯೇ..!?
ಪ್ರವಾದಿﷺ ಹೇಳುತ್ತಾರೆ: ಒಮ್ಮೆ ನಾನು ಮಗುವಾಗಿದ್ದಾಗ ಅಬ್ದುಲ್ ಮುತ್ತಲಿಬ್ ರಿಂದ ದೂರ ಸರಿದಿದ್ದೆ(ನಾನು ಕಾಣೆಯಾಗಿದ್ದೆ). ಅತಿ ಕಠಿಣ ಹಸಿವು, ನೀರಡಿಕೆ ನನ್ನನ್ನು ಮರಣಹೊಂದಿಸಲು ಸಮೀಪಿಸುತ್ತಿತ್ತು. ನಂತರ ಅಲ್ಲಾಹು ನನಗೆ ಒಂದು ದಾರಿ ತೋರಿಸಿದ." ಈ ಹದೀಸ್ ಉದ್ಧರಿಸುತ್ತಾ ಲಹ್ಹಾಖ್(ರ.ಅ) ಹೇಳುತ್ತಾರೆ; ಅಬ್ದುಲ್ ಮುತ್ತಲಿಬ್ ಪ್ರವಾದಿﷺ ಕಣ್ಮರೆಯಾದಾಗ ಕ'ಅಬಾದ ಸ್ತಂಭವನ್ನು ಹಿಡಿದು ಹಾಡುತ್ತಾ, ಪ್ರಾರ್ಥಿಸಿದರು.
ಆ ಪದ್ಯ ಅವರು ಪುನರಾವರ್ತಿಸಿ ಹೇಳುತ್ತಿದ್ದರು. ಅಷ್ಟರಲ್ಲಿ ಒಂದು ಒಂಟೆಯ ಮೇಲೆ ಕುಳಿತು ಪ್ರವಾದಿﷺ ಬರುವ ದೃಶ್ಯ. ಮುಂದೆ ಮಗುವಾಗಿದ್ದ ಪ್ರವಾದಿﷺ, ಹಿಂದೆ ಶತ್ರು ಪ್ರಮುಖನಾದ ಅಬೂಜಹಲ್ ಇದ್ದ.
ಅವನು ಹೇಳಿದ, "ಈ ಮಗು ತುಂಬಾ ಅಸಾಧಾರಣವಾದುದು. ಅಬ್ದುಲ್ ಮುತ್ತಲಿಬ್; ಏನು ವಿಷಯ..?
ಅಬೂಜಹಲ್: ದಾರಿಮಧ್ಯೆ ಏಕಾಂಗಿಯಾಗಿ ನಿಂತಿದ್ದ ಈ ಮಗುವನ್ನು ನನ್ನ ಒಂಟೆಯ ಮೇಲೆ ಇಟ್ಟು ಹಿಂಬದಿಯಲ್ಲಿ ಕುಳ್ಳಿರಿಸಿದೆ. ಒಂಟೆಯನ್ನು ಮುಂದಕ್ಕೆ ತಳ್ಳಿದಾಗ ಅದು ಒಂದು ಹೆಜ್ಜೆ ಕೂಡ ಮುಂದೆ ಹೋಗಲಿಲ್ಲ.
ಅದನ್ನು ಎಷ್ಟು ತಳ್ಳಿದರೂ ಅದರಲ್ಲಿ ಒಂದೇ ಒಂದು ಬದಲಾವಣೆ ಆಗಲಿಲ್ಲ. ಇದೇಕೆ ಈಗೆ..? ಎಂದು ನಾನು ಆಲೋಚಿಸಿದೆ. ಕೊನೆಗೆ ನಾನು ಮಗುವನ್ನು ನನ್ನ ಮುಂದೆ ಕುಳ್ಳಿರಿಸಿದಾಗ ಒಂಟೆ ತುಂಬಾ ಆರಾಮವಾಗಿ ಮುಂದೆ ಹೋಗಲು ಪ್ರಾರಂಭಿಸಿತು. ಹಾಗೂ ಆ ಮೂಕಜೀವಿ ನನ್ನಲ್ಲಿ, "ಇದೆಂತಾ ಅಸಂಬದ್ಧ ಮೂರ್ಖತನ..? ಲೋಕ ಜನತೆಯ ಮುಂದೆ ನಿಲ್ಲಬೇಕಾದವರು ಹಿಂದೆ ಕುಳಿತರೆ ಅದು ಹೇಗೆ ಸರಿಯಾಗುವುದು..? ಎಂದು ಹೇಳಿದಂತೆ ನನಗೆ ಭಾಸವಾಯಿತು.
ಈ ಮೇಲಿನ ಘಟನೆ ಉದ್ಧರಿಸುತ್ತಾ ಇಬ್ನ್ ಅಬ್ಬಾಸ್(ರ.ಅ) ಹೇಳಿದರು, "ಮೂಸಾ ನೆಬಿ(ಅ) ರಿಗೆ ಅಲ್ಲಾಹು ಓರ್ವ ಶತ್ರುವಿನ ಸಂರಕ್ಷಣೆ ನೀಡಿದಂತೆ ಪ್ರವಾದಿﷺ ರಿಗೆ ಅಲ್ಲಾಹು ಓರ್ವ ಶತ್ರುವಿನ ಸಂರಕ್ಷಣೆ ನೀಡಿರುವುದಾಗಿ ಈ ಘಟನೆ ನೆನಪಿಸುತ್ತದೆ." [ತಫ್ಸೀರುಲ್ ಕಬೀರ್: 31/198]
ಅದೆಂತಾ ಶ್ರೇಷ್ಠ ನಾಯಕರಲ್ಲವೇ ನಮ್ಮ ಮುತ್ತು ಹಬೀಬ್ﷺ. ಬುದ್ಧಿಯಿಲ್ಲದ ಒಂಟೆಗೂ ಕೂಡ ತಿಳಿದಿತ್ತು ಈ ನನ್ನ ಮೇಲೆ ಕುಳಿತಿರುವ ವ್ಯಕ್ತಿ ಒಂದು ಸಾಧಾರಣ ವ್ಯಕ್ತಿಯಲ್ಲಾ ಎಂಬ ವಾಸ್ತವ. ಆದರೆ ನಮ್ಮ ನಡುವೆ ಇರುವ ಕೆಲವು ಈಮಾನ್ ಇಲ್ಲದ ಕುಬುದ್ಧಿಗಳು ನಮ್ಮ ಹೃದಯ ಗೆದ್ದ ನಾಯಕರಾದ ಹಬೀಬ್ﷺ ರನ್ನು ಓರ್ವ ಸಾಧಾರಣ ವ್ಯಕ್ತಿ ಎಂದು ಹೇಳಿ ಗೇಲಿ ಮಾಡುತ್ತಾರಲ್ಲವೇ.! ಸಾಧಾರಣ ವ್ಯಕ್ತಿಯಾದರೆ ಒಂಟೆ ತಿಳಿದಿದ್ದಾರೂ ಹೇಗೆ? ಅಬೂಜಹಲ್ ಕೂಡ ಆ ವಾಸ್ತವ ಮನದಟ್ಟು ಮಾಡಿದ್ದಾದರೂ ಹೇಗೆ.? ಅಲ್ಲಾಹು ನಮಗೆ ಅಂತವರಿಂದ ಮುತ್ತು ಹಬೀಬ್ﷺ ರವರ ಬರಕತಿನಿಂದ ಸಂರಕ್ಷಣೆ ನೀಡಲಿ, ಆಮೀನ್
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗಂಡಿಬಾಗಿಲು
Comments
Post a Comment