ಸಬಾಹಲ್ ಖೈರ್
ಸಹನೆಗೆ ಸಿಂಹ ಕೂಡಾ ಶರಣಾಯಿತು:
ಓರ್ವನು ತನ್ನ ದೂರದ ಊರಲ್ಲಿದ್ದ ಮಿತ್ರನೊಬ್ಬನನ್ನು ಕಾಣಲೆಂದು ಹೋದನು. ಹೋದಾಗ ಮಿತ್ರ ಮನೆಯಲ್ಲಿರಲಿಲ್ಲ. ಪತ್ನಿ ಇದ್ದಳು. ಯಾರು ನೀವು ಎಂದು ಆಕೆ ಕೇಳಿದಾಗ “ನಿಮ್ಮ ಪತಿಯ ಆಪ್ತಮಿತ್ರ, ಅವನೆಲ್ಲಿದ್ದಾನೆ?" ಎಂದು ಕೇಳಿದರು. ಆಗ ಆಕೆ ಹೇಳಿದಳು. “ಸೌದೆ ತರಲೆಂದು ಎತ್ತಲೋ ಹೋಗಿದ್ದಾರೆ. ಮರಳಿಬಾರದೆ ಅಲ್ಲೇ ಸತ್ತಿದ್ದರೆ ಚೆನ್ನಾಗಿತ್ತು ದುಷ್ಟ, ಕೊರಮ ನೀಚ." ಮಿತ್ರನಿಗೆ ಆಶ್ಚರ್ಯವಾಯಿತು. ಹೀಗೂ ಬಯ್ಯುವ ಪತ್ನಿಯರಿದ್ದಾರಾ ಎಂದು ಚಕಿತರಾದರು. ಅಷ್ಟರಲ್ಲಿ ಮಿತ್ರನು ಸೌದೆಯ ಕಟ್ಟನ್ನು ಒಂದು ಸಿಂಹದ ಮೇಲೆ ಹೊರಿಸಿಕೊಂಡು ಬರುವುದು ಕಾಣಿಸಿತು. ಹೊರೆಯನ್ನು ಇಳಿಸಿ “ನೀನು ಹೋಗು" ಎಂದಾಗ ಸಿಂಹ ಹೊರಟು ಹೋಯಿತು. ಮನೆಯಲ್ಲಿ ತನ್ನ ಹಳೆಯ ಮಿತ್ರ ಬಂದುದನ್ನು ಕಂಡು ಬಹಳ ಅಕ್ಕರೆಯಿಂದ ಸ್ವಾಗತಿಸಿ ಉಪಚಾರ ನೀಡಿದನು. ಆಗಲೂ ಆಕೆ ಅವನನ್ನು ಬಯ್ಯುತ್ತಲೇ ಇದ್ದಳು. ಆತ ಚಕಾರವೆತ್ತುತ್ತಿರಲಿಲ್ಲ. ಹಾಗೆ ಮಿತ್ರನು ಹೊರಟು ಹೋದನು.
ಮುಂದಿನ ವರ್ಷ ಇದೇ ಮಿತ್ರ ಮತ್ತೊಮ್ಮೆ ಅದೇ ಮಿತ್ರನ ಭೇಟಿಗೆ ಬಂದನು. ಮಡದಿಯು ಅವನಿಗೆ ಸ್ವಾಗತ ನೀಡಿ ಒಳ್ಳೆಯ ಆತಿಥ್ಯ ಕೊಟ್ಟಳು, ಪತಿ ಎಲ್ಲಿದ್ದಾನೆ ಎಂದು ಕೇಳಿದಾಗ "ಸೌದೆ ತರಲು ಹೋಗಿದ್ದಾರೆ. ಪಾಪ ಅವರೊಬ್ಬರು ದುಡಿದು ಕಷ್ಟಪಟ್ಟು ನಮ್ಮನ್ನು ಸಾಕುತ್ತಿದ್ದಾರೆ. ಚಿನ್ನದಂತಹ ಮನುಷ್ಯ. ಇಂತಹ ಮನುಷ್ಯನ ಕೈಹಿಡಿದ ನಾನು ಧನ್ಯ" ಎಂದೆಲ್ಲ ಪ್ರಶಂಸೆ ಮಾಡಿದಳು. ಅವನಿಗೆ ಆಶ್ಚರ್ಯವಾಗಿ *ಕಳೆದ ವರ್ಷ ನಾನು ಬಂದಾಗ ನೀವು ಹೀಗಲ್ಲವಲ್ಲ ಹೇಳುತ್ತಿದ್ದುದು?* ಎಂದು ಕೇಳಿದಾಗ “ನಾನು ಅವಳಲ್ಲ. ಅವಳು ತೀರಿಹೋದಳು, ನಾನು ನಂತರದ ಹೆಂಡತಿ” ಎಂದಳು.
ಸ್ವಲ್ಪ ಹೊತ್ತಾದಾಗ ಮಿತ್ರನು ಸೌದೆಯ ಹೊರೆಯನ್ನು ತಾನೇ ತಲೆಮೇಲೆ ಹೊತ್ತುಕೊಂಡು ಬೆವರಿಸುವಳಿಸುತ್ತಾ ಬಂದನ್ನು, ಸಿಂಹ ಇರಲಿಲ್ಲ. ಬೇರೆ ಏನೂ ಇರಲಿಲ್ಲ. ಆಶ್ಚರ್ಯ ಚಕಿತನಾಗಿ ಅವನ ಬಳಿಗೆ ಹೋದ ಮಿತ್ರ ವಿಷಯ ಕೇಳಿದನು. ಆಗ ಆ ಮಿತ್ರ ಹೇಳಿದನು.
“ಕಳೆದ ವರ್ಷ ನೀನು ಬಂದಾಗ ಇದ್ದವಳು ತೀರಿ ಹೋಗಿದ್ದಾಳೆ ಅವಳು ಕೊಡುತ್ತಿದ್ದ ಕಾಟಕ್ಕೆ ನಾನು ಸಹನೆ ತೋರುತ್ತಿದ್ದುದರಿಂದ ಅಲ್ಲಾಹನು ನನಗೆ ಹೊರಗಡೆ ಎಲ್ಲವನ್ನು ಸುಲಭಗೊಳಿಸಿಕೊಡುತ್ತಿದ್ದನು. ನನ್ನ ಸೌದೆಯ ಹೊರೆಯನ್ನು ನನಗೆ ಸಿಂಹ ಹೊತ್ತು ತಂದು ಹಾಕುತ್ತಿತ್ತು. ಆದರೆ ಅವಳು ತೀರಿಕೊಂಡ ನಂತರ ಒಳಗಿರುವ ಇವಳನ್ನು ಮದುವೆಯಾದೆ. ಚಿನ್ನದಂತಹ ಗುಣದವಳು ನನಗೆ ಯಾವುದೇ ಕಾಟ ಕೊಡುವುದಿಲ್ಲ. ಆದ್ದರಿಂದ ನಾನು ಸಹನೆ ತೋರುವ ಪ್ರಶ್ನೆಯೇ ಇಲ್ಲ. ಹಾಗೂ ನನಗೆ ಹೊರಗಡೆ ದೊರೆಯುತ್ತಿದ್ದ ಅನುಕೂಲಗಳು ನಷ್ಟವಾದವು”
ಸಂ: ✒️ಅಬೂರಿಫಾನ ಕುಂದಾಪುರ
ದುಆಃ ಇರಲಿ ಸದಾ..
𝗟𝗶𝗸𝗲 & 𝗙𝗼𝗹𝗹𝗼𝘄 ✦
ꜰᴏʀ ᴀʟʟ ɪꜱʟᴀᴍɪᴄ ʀᴇʟᴀᴛᴇᴅ ᴀʀᴛɪᴄʟᴇꜱ ᴅᴏᴡɴʟᴏᴀᴅ ᴀɴᴅ ɪɴꜱᴛᴀʟʟ ᴛʜɪꜱ ᴀᴘᴘ
https://play.google.com/store/apps/details?id=com.noorulfalah.islamicstories
ᴄᴏᴘʏʀɪɢʜᴛ©
𝗡𝗢𝗢𝗥-𝗨𝗟-𝗙𝗔𝗟𝗔𝗛 ORGANIZATION®
💢💢💢💢💢💢💢💢💢💢💢
Comments
Post a Comment