ದಿನದ ಬೋಧನೆ 3



       ನಮಾಝ್ ಸ್ವರ್ಗದ ಕೀಲಿಕೈ ಆಗಿದೆ. ನಮಾಝ್ ಮಾಡದವರಿಗೆ ಇಸ್ಲಾಮಿನಲ್ಲಿ ಯಾವ ಸ್ಥಾನಮಾನವೂ ಇಲ್ಲ. ಒಬ್ಬ ಮುಸ್ಲಿಮ್ ಹಾಗೂ ಕಾಫಿರ್ ನಡುವಿನ ವ್ಯತ್ಯಾಸ ನಮಾಝ್ ಆಗಿದೆ. ಮಸೀದಿಯ ಮಿನಾರಗಳಲ್ಲಿ ಐದು ಸಲ ಬಾಂಗಿನ ಧ್ವನಿಯು ಕೇಳುವಾಗ (ಬನ್ನಿ ನಮಾಝ್'ಗೆ, ಬನ್ನಿ ವಿಜಯಕ್ಕೆ ) ಎಂದು ಕರೆಯುವಾಗ ಇಂದು ಕೆಲವೊಂದು ಯುವಕರು ಮಸೀದಿಗೆ ನಮಾಝ್ ನಿರ್ವಹಿಸಲು ಹೋಗದೆ ಬೀದಿ ಬದಿಗಳಲ್ಲಿ, ಅಂಗಡಿ ಬಾಗಿಲುಗಳಲ್ಲಿ, ಕಟ್ಟೆಗಳಲ್ಲಿ ಕೂತು ಸಮಯವನ್ನು ವ್ಯರ್ಥ ಮಾಡುತ್ತಿರುವುದು ಕಾಣಬಹುದಾಗಿದೆ. ಯುವಕರು ಚಿಂತಿಸಬೇಕಾದ ಒಂದು ಕಾರ್ಯವಾಗಿದೆ ನಮಾಝ್. ಸಮಯದ ಆರಂಭದಲ್ಲಿ ಇಮಾಮ್ ಜಮಾಅತ್ತಾಗಿ ನಮಾಝ್ ನಿರ್ವಹಿಸುವುದು ಉತ್ತಮವಾಗಿದೆ. ನಮಾಝ್ ಕಳಾ ಮಾಡುವುದರಿಂದ ನಾಳೆ ಪರಲೋಕದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವಿರಿ. ಪರಲೋಕದಲ್ಲಿ ಮೊತ್ತ ಮೊದಲು ವಿಚಾರಣೆ ನಡೆಯುವುದು ನಮಾಝ್'ನ ಕುರಿತಾಗಿದೆ. ನಮಾಝ್ ನಿರ್ವಹಿಸುವಾಗ ಇಖ್ಲಾಸ್'ನೊಂದಿಗೆ ನಿರ್ವಹಿಸಿರಿ. ಸತ್ಯವಿಶ್ವಾಸಿಗಳಿಗೆ ನಮಾಝ್ ಆನಂದವನ್ನು ತರುತ್ತದೆ. 

   7 ವಯಸ್ಸಾಗುವಾಗ ನಿಮ್ಮ ಮಕ್ಕಳಿಗೆ ನಮಾಝ್ ಮಾಡಲು ಕಲಿಸಿರಿ, ನಮಾಝ್ ಬಗ್ಗೆ ಅಭಿರುಚಿ ಹುಟ್ಟಿಸಿರಿ. ಹತ್ತು ವರ್ಷ ಪ್ರಾಯವಾದಾಗ ನಮಾಝ್ ಮಾಡುವಲ್ಲಿ ಅವರು ಅಸಡ್ಡೆ ತೋರಿದರೆ ತಕ್ಕ ಶಿಕ್ಷೆ ನೀಡಿರಿ. ನಮಾಝ್'ನ ಬಗ್ಗೆ ಅಶ್ರದ್ಧೆಯನ್ನು ನೀವು ಸಹಿಸಲಾರಿರಿ ಎಂಬುದನ್ನು ನಿಮ್ಮ ಮಕ್ಕಳಿಗೆ ನಡೆನುಡಿಗಳಿಂದ ಸ್ಪಷ್ಟಪಡಿಸಿರಿ. ಆದ್ದರಿಂದ ತಮ್ಮ ಮಕ್ಕಳಿಗೆ ಸಮಯವಾಗುವಾಗ ನಮಾಝ್ ಮಾಡಲು ನಿರ್ದೇಶ ಮಾಡಿರಿ. ನಮಾಝ್ ಕೈ ತಪ್ಪಿ ಹೋಗದಂತೆ ಜಾಗೃತೆ ಮಾಡಿರಿ.

    ನಮಾಝ್'ನಲ್ಲಿ ಉದಾಸೀನರಾಗದಿರಿ, ಸರಿಯಾಗಿ ಅಲ್ಲಾಹನ ತೃಪ್ತಿ ಬಯಸಿ ನಮಾಝ್ ನಿರ್ವಹಿಸಿರಿ. ಪ. ಕುರ್'ಆನ್ ಹೇಳುತ್ತದೆ, ನಮಾಝ್ ಮಾಡುವವರಿಗೆ ವಿನಾಶ ಕಾದಿದೆ. ಅವರು ಯಾರೆಂದರೆ ತಮ್ಮ ನಮಾಝಿನ ಕುರಿತು ಅನಾಸ್ಥೆ ತಾಳುವವರು, ಅವರು ತೋರಿಕೆಗಾಗಿ ನಮಾಝ್ ಮಾಡುತ್ತಾರೆ ( ಅಲ್ ಮಾಊನ್ 4,5,6)ನಮಾಝ್'ನಲ್ಲಿ ಉದಾಸೀನ ತೋರುವವರೂ, ಶ್ರದ್ಧೆಯಿಲ್ಲದೆ ನಮಾಝ್ ನಿರ್ವಹಿಸುವವರೂ, ಜನರಿಗೆ ಕಾಣಲು ಬೇಕಾಗಿ ನಮಾಝ್ ನಿರ್ವಹಿಸುವವರಿಗೆ ವಿನಾಶವಿದೆ. ಅವರಿಗೆ ವೈಲ್ ಎಂಬ ನರಕವಿದೆ ಎಂದಾಗಿದೆ ಕುರ್'ಆನಿನ ಎಚ್ಚರಿಕೆ. ಕುರ್'ಆನಿನಲ್ಲಿ ಅನೇಕ ಕಡೆಯೂ ನಮಾಝ್ ಕುರಿತು ವಿವರಿಸಲಾಗಿದೆ.

     ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ವಫಾತಿನ ಸಮಯದಲ್ಲಿ ಮರಣ ನೋವಿನಲ್ಲೂ ತನ್ನ ಸಮದಾಯಕ್ಕೆ ನಮಾಝ್ ಕುರಿತು ನನ್ನ ಸಮುದಾಯವೇ ನಮಾಝನ್ನು ನಿರ್ವಹಿಸಿರಿ ಎಂದು ಹೇಳಿಯಾಗಿದೆ ಈ ಲೋಕದಿಂದ ವಿದಾಯ ಹೇಳಿದ್ದು. ನಮಾಝಿನ ಮಹತ್ವ ಎಷ್ಟು ಹೇಳಿದರೂ ತೀರದ ವಿಷಯವಾಗಿದೆ. ಅಲ್ಲಾಹನು ನಮ್ಮೆಲ್ಲರನ್ನೂ ನಮಾಝ್ ನಿರ್ವಹಿಸುವವರ ಸಾಲಿನಲ್ಲಿ ಸೇರಿಸಲಿ ಆಮೀನ್.

ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸಯ್ಯುದುನಾ ಮುಹಮ್ಮದ್
NOORUL FALAH ISLAMIC ORGANISATION 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್