ದಿನದ ಬೋಧನೆ 4
ರಾತ್ರಿ ಇಶಾ, ರವಾತಿಬ್ ನಮಾಝ್ ನಂತರ ವಿತ್ರ್ ನಮಾಝನ್ನು ತಪ್ಪದೇ ನಿತ್ಯವು ನಿರ್ವಹಿಸಿರಿ,
ಬೆಳಿಗ್ಗೆ ಸೂರ್ಯೋದಯದ ನಂತರವಿರುವ ನಮಾಝ್ ಆಗಿದೆ ಲುಹಾ ನಮಾಝ್, ಚೆನ್ನಾಗಿ ವುಳೂ ನಿರ್ವಹಿಸಿ, ತಕ್ವಾ, ಇಖ್ಲಾಸ್'ನೊಂದಿಗೆ ಲುಹಾ ನಮಾಝ್ ನಿರ್ವಹಿಸುವುದು ಐಶ್ಚರ್ಯ ವೃದ್ಧಿಯಾಗಲು, ಜೀವನದಲ್ಲಿ ಬರ್ಕತ್ ಲಭ್ಯವಾಗಲು ಕಾರಣವಾಗುತ್ತದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು; ಶರೀರದ ಎಲ್ಲಾ ನರನಾಡಿಗಳಿಗೆ ದಾನ ಕೊಡಬೇಕಾಗಿದೆ, ನರನಾಡಿಗಳ ದಾನವು ಅದು ಲುಹಾ ನಮಾಝ್ ಆಗಿದೆ. ಮನೆಯಲ್ಲಿರುವ ಮಹಿಳೆಯರೂ, ಮಕ್ಕಳೂ, ಗಂಡಸರೂ ಲುಹಾ ನಮಾಝನ್ನು ನಿರ್ವಹಿಸಲು ಮರೆಯದಿರಿ, ಕೆಲಸಕಾರ್ಯಗಳಿಗೆ ಹೋಗಬೇಕಾದ ಗಂಡಸರು (ಉದಾಹರಣೆಗೆ 9 ಗಂಟೆಗೆ ಕೆಲಸಕ್ಕೆ ಹೋಗಬೇಕಾದರೆ 8:30 ಕ್ಕೆ ಕನಿಷ್ಟ ಎರಡು ರಕ'ಅತ್ ಆದರೂ ಲುಹಾ ನಮಾಝ್ ನಿರ್ವಹಿಸಿರಿ.
ಮಹ್'ಶರಾ ಎಂಬ ಮೈದಾನದಲ್ಲಿ ವಿಚಾರಣೆಗಾಗಿ ಒಗ್ಗೂಡಿಸಲ್ಪಡುವ ದಿನ ಅಂದು ತಮ್ಮ ಫರ್'ಲ್ ನಮಾಝ್'ಗಳನ್ನು ಪರಿಶೋಧಿಸುವಾಗ ಅದರಲ್ಲಿ ತಪ್ಪುಗಳು ಸಂಭವಿಸಿದರೆ ಅವರು ಸುನ್ನತ್ ನಮಾಝ್'ಗಳನ್ನು ನಿರ್ವಹಿಸಿದ್ದಾರ ಎಂದು ನೋಡಲು ಮಲಕುಗಳಲ್ಲಿ ಅಲ್ಲಾಹನು ಆಜ್ಞಾಪಿಸುತ್ತಾನೆ. ಆಗ ಮಲಕುಗಳು ಸುನ್ನತ್ ನಮಾಝ್ ನಿರ್ವಹಿಸಿದ್ದಾರ ಎಂದು ದಾಖಲೆಗಳಲ್ಲಿ ನೋಡುತ್ತಾರೆ, ಸುನ್ನತ್ ನಮಾಝ್' ನಿರ್ವಹಿಸಿದ್ದಲ್ಲಿ ಫರ್'ಳ್ ನಮಾಝ್'ಗಳಲ್ಲಿ ಸಂಭವಿಸಿದ ತಪ್ಪುಗಳನ್ನು ಸುನ್ನತ್ ನಮಾಝ್'ಗಳಲ್ಲಿ ಸರಿಪಡಿಸಲಾಗುತ್ತದೆ. ಆಗ ಅವರು ವಿಜಯಿಗಳಲ್ಲಿ ಸೇರುವರು.
ಇನ್ನು ಫರ್'ಲ್ ನಮಾಝನ್ನು ಸರಿಯಾಗಿ ನಿರ್ವಹಿಸದವರ ಸುನ್ನತ್ ನಮಾಝ್'ಗಳು ಇದೆಯೇ ಎಂದು ಮಲಕುಗಳಲ್ಲಿ ಅಲ್ಲಾಹನು ನೋಡಲು ಹೇಳುವಾಗ ಮಲಕುಗಳು ಸುನ್ನತ್ ನಮಾಝ್'ಗಳಿವೆಯೇ ಎಂದು ಪರಿಶೋಧಿಸುತ್ತಾರೆ. ಆಗ ಅವರ ಸುನ್ನತ್ ನಮಾಝ್ ಗಳು ಇಲ್ಲವಾದಲ್ಲಿ ನರಕದಲ್ಲಿ ಶಿಕ್ಷಿಸುವ ಝಬಾನಿಯಾ ಮಲಕುಗಳೊಂದಿಗೆ ಅಲ್ಲಾಹನು ಹೇಳುವನು ಇವನಿಗೆ ನರಕದ ಬೇಡಿ ತೊಡಿಸಿರಿ, ಅನಂತರ ಇವನನ್ನು ನರಕಕ್ಕೆ ಎಸೆಯಿರಿ. ಅಲ್ಲಾಹನು ಕಾಪಾಡಲಿ. ಆಮೀನ್.
ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸಯ್ಯುದುನಾ ಮುಹಮ್ಮದ್
NOORUL FALAH ISLAMIC ORGANISATION
Comments
Post a Comment