ದಿನದ ಬೋಧನೆ 5
ದ್ಸಿಕ್ರ್'ನ ಶಿಷ್ಠಾಚಾರಗಳು : ಏಕಾಂಗಿ ಮತ್ತು ಸಾಮೂಹಿಕವಾಗಿ ದ್ಸಿಕ್ರ್ ಹೇಳುವಾಗ ಪಾಲಿಸಬೇಕಾದ ಹಲವಾರು ಶಿಷ್ಠಾಚಾರಗಳಿವೆ.
ದ್ಸಿಕ್ರ್ ಹೇಳುವವನ ವಸ್ತ್ರಗಳು ಶುಚಿಯಾಗಿರಬೇಕು, ವುಳೂ'ಅ್(ಅಂಗಸ್ನಾನ) ಇರಬೇಕು,
ಕೆಲಸ ಮತ್ತು ಆಹಾರ ಹಲಾಲ್ ಆಗಿರಬೇಕು, ಸಂಪೂರ್ಣ ಶುದ್ಧಿಯಾಗಿರಬೇಕು, ಪಶ್ಚಾತ್ತಾಪದ ಮೂಲಕ ಹೃದಯವನ್ನು ಶುದ್ಧೀಕರಿಸಬೇಕು, ಹೃದಯಕ್ಕೆ ಸಂಬಂಧಿಸಿದ ಎಲ್ಲಾ ರೋಗಗಳಿಂದ ಮುಕ್ತರಾಗಿರಬೇಕು, ಐಹಿಕ ಕಾರ್ಯಗಳ ಕುರಿತ ಎಲ್ಲಾ ಯೋಚನೆಗಳನ್ನು ಹೃದಯದಿಂದ ದೂರವಿಡಬೇಕು, ಶೈತಾನನ ದುರ್ಬೋಧನೆಗಳಿಂದ ಮನಸ್ಸಿನಲ್ಲಿ ಉದ್ಭವಿಸುವ ಕೆಟ್ಟ ವಿಚಾರಗಳಿಂದ ಮುಕ್ತರಾಗಲು ತೀವ್ರ ಪರಿಶ್ರಮ ಅಗತ್ಯ, ಅಲ್ಲಾಹನ ಮುಂದೆ ತನ್ನ ಕೊರತೆ ಮತ್ತು ವಿಧೆಯತೆಯನ್ನು ತೋಡಿಕೊಳ್ಳಬೇಕು, ನಿಂತುಕೊಂಡು ದ್ಸಿಕ್ರ್ ಹೇಳುವಾಗ ದ್ಸಿಕ್ರ್'ನಲ್ಲಿ ನಿರತರಾದವರ ಹಿಂದೆ ನಿಂತುಕೊಳ್ಳಬೇಕು.
ಕುಳಿತುಕೊಂಡು ದ್ಸಿಕ್ರ್ ಹೇಳುವಾಗ ಸಭೆಯ ಅಗತ್ಯವಾದ ಜಾಗಕ್ಕೆ ತೆರಳಿ ಕುಳಿತುಕೊಳ್ಳಬೇಕು, ದ್ಸಿಕ್ರ್ ಹೇಳುವಾಗ ಗಮನವು ಸಂಪೂರ್ಣವಾಗಿ ಅದರ ಮೇಲೆ ಕೇಂದ್ರೀಕರಿಸಬೇಕು, (ಅಶೃದ್ಧೆಯಿಂದ ದ್ಸಿಕ್ರ್ ಹೇಳಿದರೂ ಅದು ಸ್ವೀಕರಿಸಲ್ಪಡುತ್ತದೆ. ಆದರೆ ದ್ಸಿಕ್ರ್'ನ ಪೂರ್ಣ ಪ್ರತಿಫಲ ದೊರೆಯಬೇಕಾದರೆ ಏಕಾಗ್ರತೆ ಅಗತ್ಯ)
ಸದ್ಗುಣ ಸಂಪನ್ನನಾಗಿರಬೇಕು. ದ್ಸಿಕ್ರ್ ಹೇಳಲು ಕೂರುವ ಜಾಗವು ಪ್ರತ್ಯೇಕವಾಗಿದ್ದು ಶುದ್ದಿಯಿಂದ ಕೂಡಿರಬೇಕು, ಖಿಬ್ಲಾಕ್ಕೆ ಅಭಿಮುಖವಾಗಿ ಕುಳಿತುಕೊಳ್ಳಬೇಕು, ಭಯಭಕ್ತಿ, ವಿನಯ, ಗಂಭೀರತೆ, ಶಾಂತಿ, ಮುಂತಾದ ವಿಶೇಷಣಗಳೊಂದಿಗೆ ತಲೆತಗ್ಗಿಸಿ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು, ಅಹಂಕಾರ, ವಿದ್ವೇಷ, ಪ್ರಚಾರಪ್ರಿಯತೆ, ಜಿಪುಣತೆ ಮುಂತಾದ ಆಂತರಿಕ ಮಾಲಿನ್ಯದಿಂದ ಹೃದಯವು ದೂರವಿರಬೇಕು.
•••••••••••••••••••••••••••••••••••
ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸೈಯ್ಯದಿನಾ ಮುಹಮ್ಮದ್
Comments
Post a Comment