ದಿನದ ಬೋಧನೆ 7
ಅಬೂಹುರೈರಾ(ರ) ಅವರಿಂದ ನಿವೇದನೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು: ದ್ಸಿಕ್ರ್ ಹೇಳುವವರನ್ನು ಹುಡುಕಿಕೊಂಡು ದಾರಿಗಳಲ್ಲಿ ಸಂಚರಿಸುವ ಕೆಲವು ಮಲಕ್'ಗಳಿದ್ದಾರೆ. ಅಂಥವರನ್ನು ಕಂಡಾಗ ಅವರು "ನೀವು ನಿಮ್ಮ ಗಮ್ಯ ಸ್ಥಾನಕ್ಕೆ ಬನ್ನಿರಿ ಎಂದು ಹೇಳಿಕೊಂಡು ತಮ್ಮ ರೆಕ್ಕೆಗಳನ್ನು ಬಿಚ್ಚಿ ಪ್ರಥಮ ಆಕಾಶದ ತನಕ ಅವರನ್ನು ಆವರಿಸಿಕೊಳ್ಳುವರು. ಬಳಿಕ ಆ ಮಲಕ್'ಗಳು ಅಲ್ಲಾಹನ ಸನ್ನಿಧಿಗೆ ತೆರಳಿದಾಗ ಅಲ್ಲಾಹ್ ತಿಳಿದುಕೊಂಡೇ ಅವರನ್ನುದ್ದೇಶಿಸಿ ಕೇಳುತ್ತಾನೆ:
" ನನ್ನ ದಾಸರು ಏನನ್ನು ಹೇಳುತ್ತಿದ್ದಾರೆ"? ಮಲಕ್'ಗಳು ವಿವರಿಸುತ್ತಾರೆ. ಅವರು ನಿನ್ನ ಸ್ತುತಿ ಕೀರ್ತನೆಗಳಲ್ಲಿ ಮಗ್ನರಾಗಿ ನಿನ್ನ ಮಹಾನತೆ ಮತ್ತು ಶ್ರೇಷ್ಠತೆಯನ್ನು ಕೊಂಡಾಡುತ್ತಿದ್ದಾರೆ.
ಅಲ್ಲಾಹ್ : ಅವರು ನನ್ನನ್ನು ನೋಡಿದ್ದಾರೆಯೇ?
ಮಲಕ್'ಗಳು : ಇಲ್ಲ. ಅಲ್ಲಾಹನಾಣೆಗೂ ಸತ್ಯ. ಅವರು ನಿನ್ನನ್ನು ನೋಡಿಯೇ ಇಲ್ಲ.
ಅಲ್ಲಾಹ್ : ಹೀಗಿರುವಾಗ ನನ್ನನ್ನು ನೋಡಿರುತ್ತಿದ್ದರೆ ಸ್ಥಿತಿ ಏನಾಗಿರುತ್ತಿತ್ತು?
ಮಲಕುಗಳು : ಅವರು ನಿನ್ನನ್ನು ನೋಡಿರುತ್ತಿದ್ದರೆ ಅತ್ಯಧಿಕ ಆರಾಧಿಸುತ್ತಿದ್ದರು.
ಅಲ್ಲಾಹ್ : ಸರಿ, ಅವರು ನನ್ನೊಂದಿಗೆ ಏನನ್ನು ಅಪೇಕ್ಷಿಸುತ್ತಿದ್ದಾರೆ?
ಮಲಕುಗಳು : ಅವರು ನಿನ್ನಿಂದ ಸ್ವರ್ಗವನ್ನು ಅಪೇಕ್ಷಿಸುತ್ತಿದ್ದಾರೆ.
ಅಲ್ಲಾಹ್ : ಅವರು ಸ್ವರ್ಗವನ್ನು ನೋಡಿದ್ದಾರೆಯೇ?
ಮಲಕುಗಳು : ಪ್ರಭುವಿನಾಣೆಗೂ ಸತ್ಯ, ಅವರು ಖಂಡಿತವಾಗಿಯೂ ಸ್ವರ್ಗವನ್ನು ನೋಡಿಲ್ಲ.
ಅಲ್ಲಾಹ್ : ಅವರು ಸ್ವರ್ಗವನ್ನು ನೋಡಿರುತ್ತಿದ್ದರೆ?
ಮಲಕುಗಳು : ಅವರು ಸ್ವರ್ಗವನ್ನು ನೋಡಿರುತ್ತಿದ್ದರೆ ಹೆಚ್ಚು ಆಗ್ರಹಿಸುತ್ತಿದ್ದರಲ್ಲದೆ, ನಿನ್ನೊಂದಿಗೆ ಅದಕ್ಕಾಗಿ ಅತ್ಯಧಿಕ ಪ್ರಾರ್ಥಿಸಲು ಆಸಕ್ತರಾಗುತ್ತಿದ್ದರು.
ಅಲ್ಲಾಹ್ : ಅವರು ಏನಾದರೂ ಕಾರ್ಯದ ಬಗ್ಗೆ ಅಭಯ ಯಾಚಿಸುತ್ತಿದ್ದಾರೆಯೇ?
ಮಲಕುಗಳು : ಅವರು ನರಕದ ಕುರಿತು ಅಭಯ ಕೋರುತ್ತಿದ್ದಾರೆ.
ಅಲ್ಲಾಹ್ : ಅವರು ನರಕವನ್ನು ದರ್ಶಿಸಿದ್ದಾರೆಯೇ?
ಮಲಕುಗಳು : ಪ್ರಭುವಿನಾಣೆಗೂ ಅವರು ನರಕವನ್ನು ದರ್ಶಿಸಿಲ್ಲ.
ಅಲ್ಲಾಹ್ : ಅವರು ಆ ನರಕವನ್ನು ದರ್ಶಿಸುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು?
ಮಲಕುಗಳು : ಹಾಗಾಗುತ್ತಿದ್ದರೆ ಅವರು ಅಲ್ಲಿಂದ ಶೀಘ್ರ ಓಡಿ ಹೋಗುತ್ತಿದ್ದರಲ್ಲದೆ, ಅತ್ಯಧಿಕ ಭಯಪಡುತ್ತಿದ್ದರು.
ಅಲ್ಲಾಹ್ : ನಿಶ್ಚಯವಾಗಿಯೂ ನಾನು ನಿಮ್ಮನ್ನು ಸಾಕ್ಷಿ ನಿಲ್ಲಿಸಿ ಅವರ ಪಾಪಗಳೆನ್ನೆಲ್ಲಾ ಕ್ಷಮಿಸಿ ಬಿಟ್ಟಿದ್ದೇನೆ.
ಆಗ ಒಂದು ಮಲಕ್ : ಓ ಅಲ್ಲಾಹನೇ, ದ್ಸಿಕ್ರ್ ಮಜ್ಲಿಸ್'ನಲ್ಲಿ ಒಬ್ಬ ವ್ಯಕ್ತಿಯಿದ್ದಾರೆ. ವಾಸ್ತವದಲ್ಲಿ ಅವರು ಅವರಲ್ಲಿ ಸೇರಿದವನಲ್ಲ, ಆತ ಬೇರೆ ಯಾವುದೋ ಅವಶ್ಯಕತೆಗಾಗಿ ಬಂದವನು.
ಅಲ್ಲಾಹ್ : ಅದು ಮಹಾತ್ಮರ ತಂಡವಾಗಿದೆ. ಅವರ ಜೊತೆಯಲ್ಲಿರುವವರು ನಿರಾಶರಾಗಬೇಕಿಲ್ಲ. ದ್ಸಿಕ್ರ್ ಹೇಳುವರಂತೆ ಆ ಮಜ್ಲಿಸ್'ನಲ್ಲಿ ಕುಳಿತವರು ಕೂಡಾ ಆ ಭಾಗ್ಯದಲ್ಲಿ ಪಾಲುದಾರರಾಗಿರುತ್ತಾರೆ. (ಬುಖಾರಿ, ಮುಸ್ಲಿಮ್)
ಅಲ್ಲಾಹನು ಅವನ ದ್ಸಿಕ್ರ್ ಹೇಳುವವರ ಕೂಟದಲ್ಲಿ ನಮ್ಮೆಲ್ಲರನ್ನೂ ಸೇರಿಸಲಿ. ಆಮೀನ್
••••••••••••••••••••••••••••••••••
ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸೈಯ್ಯದಿನಾ ಮುಹಮ್ಮದ್
Comments
Post a Comment