ದಿನದ ಬೋಧನೆ 8

ದ್ಸಿಕ್ರ್ : ತಿಳಿಯಿರಿ, ಅಲ್ಲಾಹನ ಸ್ಮರಣೆಯಿಂದಲೇ ಮನಸ್ಸಮಾಧಾನ ಲಭ್ಯವಾಗುತ್ತದೆ.(ಸೂರತುಲ್ ಅರ್ರ'ಅದ್)

     ದ್ಸಿಕ್ರ್'ನಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಕ್ಲೇಶಗಳು ದೂರವಾಗುವುದು. ಕಷ್ಟಕಾರ್ಪಣ್ಯ, ದುರಂತಗಳಿಂದ ರಕ್ಷಣೆ ಲಭಿಸುವುದು. ಸುದುದ್ದೇಶಗಳು ಪೂರ್ತಿಯಾಗುವುದು. ಜೀವನದಲ್ಲಿ ಸುಖ, ಶಾಂತಿ, ಒಳಿತು ನೆಲೆಗೊಳ್ಳುವುದು. ಏನಾದರೂ ತೊಂದರೆಗೆ ಸಿಲುಕಿದರೆ ದ್ಸಿಕ್ರ್ ನಿಮಿತ್ತ ಅದರಿಂದ ವಿಮೋಚನೆ ಪಡೆಯಲು ಸಾಧ್ಯವಿದೆ. ದ್ಸಿಕ್ರ್'ನಿಂದ ಮಾನಸಿಕ ಒತ್ತಡಗಳು ದೂರವಾಗಿ ಮನಸ್ಸಿಗೆ ಪ್ರಸನ್ನತೆ ಆವರಿಸಿಕೊಳ್ಳುವುದು.

    ಅಲ್ಲಾಹನನ್ನು ಸ್ಮರಿಸುವ ಹೃದಯವು ಜೀವಂತವಿರುವ ಹಾಗೂ ಸ್ಮರಿಸದೇ ಇರುವ ಹೃದಯವು ಸತ್ತ ಶವದ ಹಾಗೆ ಎಂಬುವುದನ್ನು ಮರೆಯದಿರಿ.

    ನಾವು ದಿನನಿತ್ಯ ಅಲ್ಲಾಹನ ಸ್ಮರಣೆಗಾಗಿ ಕನಿಷ್ಠ ವೇಳೆಯನ್ನಾದರೂ ಸದುಪಯೋಗಪಡಿಸಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು.

   ಕುರ್'ಆನಿನಲ್ಲಿ ಅನೇಕ ಕಡೆ ದ್ಸಿಕ್ರ್'ನ ಕುರಿತು ಹೇಳಿದೆ.
   "ನೀವು ಯಶಸ್ವಿಯಾಗಲು ಧಾರಾಳವಾಗಿ ದ್ಸಿಕ್ರ್ ಹೇಳಿರಿ" (ಸೂರತ್ತುಲ್ ಜುಮುಅ)

     "ನಮಾಝ್ ನಿರ್ವಹಿಸಿದ ಬಳಿಕ ನೀವು ನಿಂತುಕೊಂಡು, ಕೂತುಕೊಂಡು, ಒರಗಿಕೊಂಡು ಅಲ್ಲಾಹನ ದ್ಸಿಕ್ರ್ ಹೇಳಿರಿ" (ಸೂರತುನ್ನಿಸಾಅ್)

     "ನೀವು ಅಲ್ಲಾಹನ ನಾಮವನ್ನು ಉಚ್ಚರಿಸಿರಿ (ಇತರ ಯೋಚನೆಗಳಿಂದ ದೂರವಿದ್ದು) ಆತನ ಕಡೆಗೇ ವಾಲಿಕೊಳ್ಳಿರಿ"
   "ಅತ್ಯಧಿಕವಾಗಿ ಅಲ್ಲಾಹನನ್ನು ಧ್ಯಾನಿಸುವ (ದ್ಸಿಕ್ರ್) ಹೇಳುವ ಸ್ತ್ರೀ ಪುರುಷರ ಪಾಪಗಳನ್ನು ಅಲ್ಲಾಹನು ಕ್ಷಮಿಸುತ್ತಾನಲ್ಲದೆ, ಅವರಿಗೆ ಅತ್ಯಂತ ಮಹತ್ತರವಾದ ಪ್ರತಿಫಲವನ್ನು ಸಜ್ಜುಗೊಳಿಸಿಟ್ಟಿದ್ದಾನೆ" (ಸೂರತುಲ್ ಅಹ್'ಝಾಬ್)

    ಅಲ್ಲಾಹನಿಗೆ ದ್ಸಿಕ್ರ್ ಹೇಳುವುದು ಅತ್ಯಧಿಕ ಪುಣ್ಯವೇರಿದ ಕಾರ್ಯವಾಗಿದೆ. (ಸೂರತುಲ್ ಅಂಕಬೂತ್)

   ಹೀಗೆ ದ್ಸಿಕ್ರ್'ನ ಮಹತ್ವವನ್ನು ವಿವರಿಸುವ ಅನೇಕ ಆಯತ್'ಗಳು ಪವಿತ್ರ ಖುರ್'ಆನಿನಲ್ಲಿದೆ. ದ್ಸಿಕ್ರ್ ಹದೀಸಿನಲ್ಲಿ ಎಂಬುವುದನ್ನು ಇಂಶಾ ಅಲ್ಲಾಹ್ ನಾಳೆ ತಿಳಿಯೋಣ.
•••••••••••••••••••••••••••••••••••••••

  ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸಯ್ಯಿದಿನಾ ಮುಹಮ್ಮದ್

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್