ಹಲ್ಲು ನೋವು ಹಾಗೂ ಹುಳುಕಾಗಿದೆಯೇ.?
ಹಲ್ಲು ನೋವು ಹಾಗೂ ಹುಳುಕಾಗಿದೆಯೇ.?
ಬಹಳಷ್ಟು ಜನರಲ್ಲಿ ಹಲ್ಲುಗಳು ಹುಳುಕಾಗಿರುತ್ತವೆ ಹಾಗೂ ಪದೇ ಪದೇ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ, ಈ ನೋವು ಬಂದರೆ ಸಹಿಸಲು ಆಗುವುದಿಲ್ಲ ಅಷ್ಟೊಂದು ನೋವು ಕೊಡುತ್ತದೆ. ಇವುಗಳ ನಿವಾರಣೆಗೆ ಮನೆಯಲ್ಲಿಯೇ ಇದೆ ಔಷಧಿ ಅದು ಹೇಗೆ ಅನ್ನೋದನ್ನು ತಿಳಿಸುತ್ತವೆ ನೋಡಿ.
ಹಲ್ಲುಗಳಲ್ಲಿ ಹುಳುಕು ಹಲ್ಲು ಇದ್ದರೆ ಮನೆಯಲ್ಲಿನ ಈ ಪದಾರ್ಥಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು:
▪️ಅರ್ಧ ಚಮಚ ಅಡುಗೆ ಉಪ್ಪನ್ನು ಒಂದು ಗ್ಲಾಸ್ ನೀರಲ್ಲಿ ಹಾಕಿ ಅದನ್ನು ಚನ್ನಾಗಿ ಮಿಶ್ರಣ ಮಾಡಿ ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಹುಳುಕಾಗಿರುವ ಹಲ್ಲು ನಿವಾರಣೆಯಾಗುತ್ತದೆ ಉಪ್ಪಿನಂಶ ಹುಳುಕು ಹಲ್ಲನ್ನು ನಿವಾರಿಸುತ್ತದೆ ಹೀಗೆ ದಿನದಲ್ಲಿ ೩-೪ ಬಾರಿ ಮಾಡಬೇಕು.
▪️ಹುಳುಕು ಹಣ್ಣಿನಿಂದ ಹಲ್ಲು ನೋವು ಇದ್ದರೆ, ಮನೆಯಲ್ಲಿ ಹಸಿ ಈರುಳ್ಳಿಯನ್ನು ರೌಂಡ್ ಆಗಿ ಕಟ್ ಮಾಡಿ ಹಲ್ಲಿನ ಮೇಲೆ ಇಡುವುದರಿಂದ ಹಾಲಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಿವಾರಣೆಯಾಗಿ ಹಲ್ಲು ನೋವು ಕಡಿಮೆಯಾಗುತ್ತದೆ. ಸುಲಭವಾಗಿ ಪರಿಹರಿಸುವ ಈರುಳ್ಳಿ ಹಲ್ಲು ನೋವಿಗೆ ಮನೆಮದ್ದಾಗಿದೆ.
▪️ಹುಳುಕು ಹಲ್ಲು ನಿವಾರಿಸುವ ಮತ್ತೊಂದು ವಿಧಾನ ಅಂದರೆ, ಒಂದು ಗ್ಲಾಸ್ ಬಿಸಿನೀರಿನಲ್ಲಿ ಎರಡು ಪೇರಳೆ ಎಲೆ ಹಾಗು ಒಂದು ಸ್ಪೂನ್ ಉಪ್ಪನ್ನು ಹಾಕಿ ೨೦ ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಆ ನೀರನ್ನು ಬಾಯಲ್ಲಿ ಹಾಕಿ ಮುಕ್ಕುಳಿಸಿ ಹುಳುಕು ಹಲ್ಲು ನಿವಾರಣೆಯಾಗುತ್ತದೆ.
ಹುಳುಕು ತಡೆಯುವುದು ಹೇಗೆ?:
▪️ಹಣ್ಣು, ತರಕಾರಿ, ಹಾಲು, ಧಾನ್ಯ ಎಲ್ಲವನ್ನೂ ಒಳಗೊಂಡ ಉತ್ತಮ ಆಹಾರ ಸೇವನೆ
▪️ದಿನಕ್ಕೆರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು
▪️ದಿನಕ್ಕೊಂದು ಬಾರಿ ದಂತ ದಾರ ಬಳಸುವುದು
▪️ನಿಯಮಿತವಾಗಿ ಆರು ತಿಂಗಳಿಗೆ ದಂತವೈದ್ಯರ ಭೇಟಿ ಮಾಡುವುದು.
=============================
ಸಂಗ್ರಹ:
ಮನೆ ಮದ್ದುಗಳು
ಸಂ: ✒️ಅಬೂರಿಫಾನ
=============================
ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ
ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ.
اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.
=============================
✤𝙇𝙞𝙠𝙚 & 𝙎𝙝𝙖𝙧𝙚✤
✦𝙋𝙧𝙖𝙮 𝙛𝙤𝙧 𝙪𝙨 ✦
𝗔𝗥𝗨𝗥 𝗖𝗥𝗘𝗔𝗧𝗜𝗩𝗘
𝗡𝗢𝗢𝗥-𝗨𝗟-𝗙𝗔𝗟𝗔𝗛
💢💢💢💢💢💢
Comments
Post a Comment