ಅತ್ತು ಮುಗಿಸಿದ ಜನ್ಮ..!


  ಅತ್ತು ಮುಗಿಸಿದ ಜನ್ಮ..!

ರಿಯಾಹುನಿಲ್ ಖೈಸಿಯ್ಯ್‌ರನ್ನು ನಮಗೆ ಪರಿಚಯವಿದೆ. ಅಲ್ಲಾಹನ ಸ್ಮರಣೆಯಲ್ಲಿ ಅತ್ತು ಅತ್ತು ಪ್ರಜ್ಞೆ ತಪ್ಪಿ ವಫಾತ್ ಆದ ಮಹಾತ್ಮರು. ಆದ್ದರಿಂದ ಮಹಾತ್ಮರ ಕುರಿತು ಹೆಚ್ಚೆಚ್ಚು ತಿಳಿಯುವುದು ನಮ್ಮ ಉತ್ತಮ ಭವಿಷ್ಯಕ್ಕೆ ಉಪಕಾರವಾದೀತು.
ರಿಯಾಹುನಿಲ್ ಖೈಸಿಯ್ಯ್ ಹೇಳುತ್ತಾರೆ,
 "ನನ್ನ ಜೀವನದಲ್ಲಿ ನಾನು 40 ಕ್ಕಿಂತಲೂ ಹೆಚ್ಚು ತಪ್ಪುಗಳನ್ನು ಮಾಡಿದ್ದೇನೆ. ಆ ಒಂದೊಂದು ತಪ್ಪಿಗೂ ಒಂದು ಲಕ್ಷದಂತೆ ಇಸ್ತಿಗ್‌ಫಾರ್ (ಕ್ಷಮೆಯಾಚನೆ) ಹೇಳಿದ್ದೇನೆ. 
[ಇಲ್ಲಿ ಹೇಳಿದ ತಪ್ಪು ಕೆಲವೊಮ್ಮೆ ನಾವು ಮೊದಲು ಕೆಲವು ಚರಿತ್ರೆಗಳಲ್ಲಿ ಹೇಳಿದ ಹಾಗೆ; ಸಂಭವಿಸಿದ ಒಂದು ವಿಷಯದ ಕುರಿತು ನನ್ನಿಂದ ಹಾಗಾಗದಿರುತ್ತಿದ್ದರೆ ಎಂದು ಚಿಂತಿಸಿದ್ದನ್ನು ಮಹಾ ಪಾಪವಾಗಿ ಕಂಡ ಮಹಾತ್ಮರ ರೀತಿ ಚಿಂತಿಸಿದ ತಪ್ಪುಗಳಾಗಿರಬಹುದು. ಅವರ ವಿನಯವಾಗಿದೆ ಇಂತಹಾ ಪ್ರಯೋಗಗಳಿಂದ ನಮಗೆ ತಿಳಿಯುವುದು.]

ರಿಯಾಹುನಿಲ್ ಖೈಸಿಯ್ಯ್‌ರಿಗೆ ಕಬ್ಬಿಣದ ಕೋಳವೊಂದಿತ್ತು. ರಾತ್ರಿಯಾದರೆ ಮಹಾತ್ಮರು ಆ ಕೋಳವನ್ನು ತನ್ನ ಕತ್ತಿನ ಮೂಲಕ ಹಾಕಿ ಮುಂಜಾನೆಯವರೆಗೆ ಆಳುತ್ತಿದ್ದರು. ತಾನೊಬ್ಬ ಪಾಪಿ ಎಂಬ ಭಾವನೆಯನ್ನು ಸ್ವಯಂ ಸೃಷ್ಟಿಸಿ ಅದರ ಮೂಲಕ ತನ್ನ ಯಜಮಾನನೊಂದಿಗೆ ಕ್ಷಮೆಯಾಚನೆಗೆ ಶಕ್ತಿಯನ್ನೂ ಭಕ್ತಿ ವರ್ಧಿಸಲೂ ಮಹಾತ್ಮರ ಈ ಪ್ರವೃತ್ತಿ (ಕೋಳವನ್ನು ಬಂಧಿಸುವುದು) ಸಹಾಯಕವಾಗಿರಬಹುದು. 
ಬೇರೊಂದು ಸಂದರ್ಭದಲ್ಲಿ ರಿಯಾಹುನಿಲ್ ಖೈಸಿಯ್ಯ್ ರ ಸಂಬಂಧಿಕರಾದ ಮುಹಮ್ಮದ್ ಬಿನ್ ಹಾರಿಸ್ ಹೇಳುವುದಾಗಿ ಕಾಣಬಹುದು, 
"ನಾನು ಅವರನ್ನು ಕಾಣಲು ಬೇಕಾಗಿ ಮಸ್ಜಿದ್ ಗೆ ಹೋದರೆ ಅವರು ಅಲ್ಲಿ ಅಳುತ್ತಿರುತ್ತಾರೆ. ಇನ್ನು ಮನೆಯಲ್ಲಿ ಭೇಟಿಯಾಗೋಣ ಎಂದು ಮನೆಯಲ್ಲಿರುವ ಸಮಯವನ್ನು ನೋಡಿ ಮನೆಗೆ ಹೋದರೂ ಅಳುತ್ತಿರುತ್ತಾರೆ. ಖಬರ್‌ಸ್ತಾನದಲ್ಲಿ ಝಿಯಾರತ್ ಗೆ ಹೋಗುವ ಅವರನ್ನು ಹಿಂಬಾಲಿಸಿ ಹೋದರೂ ಕಣ್ಣೀರಿನ ಕಣ್ಣುಗಳಲ್ಲದೆ ಅವರನ್ನು ನನಗೆ ಕಾಣಲು ಸಾಧ್ಯವಾಗಲಿಲ್ಲ. ಅಳಲು ಬೇಕಾಗಿ ಒಬ್ಬ ಮನುಷ್ಯನು ಜೀವಿಸುವುದೆಂದರೆ ಅದ್ಭುತವಲ್ಲವೇ..!? 
ಒಂದು ದಿನ ಬಂದದ್ದು ಬರಲಿ ಎಂದು ಆಲೋಚಿಸಿ ನಾನು ಕೇಳಿಯೇ ಬಿಟ್ಟೆ.
"ನಿಮ್ಮನ್ನು ಯಾವಾಗ ಕಂಡರೂ; ಮಸೀದಿಯಲ್ಲಾದರೂ, ಮನೆಯಲ್ಲಾದರೂ, ಮಖ್ ಬರದಲ್ಲಾದರೂ ಎಲ್ಲಿ ಕಂಡರೂ ನೀವು ಅಳುತ್ತಿರುತ್ತೀರಲ್ಲವೇ..!?
ಈ ಜೀವನ ಪೂರ್ತಿ ನೀವು ಅಳುತ್ತಾ ಮುಗಿಸುತ್ತೀರಾ..!?
ನಾನಿದನ್ನು ಕೇಳಿದ್ದೂ ಮಹಾತ್ಮರ ಕಣ್ಣುಗಳು ಉಕ್ಕಿ ಹರಿಯತೊಡಗಿತು. ಅಳುವಿನ ಶಕ್ತಿ ವರ್ಧಿಸುತ್ತಾ ಹೋಯಿತು. ನನಗೆ ದಿಕ್ಕು ತೋಚದಾಯಿತು. ಸ್ವಲ್ಪ ಸಮಯದ ನಂತರ ಸಾವರಿಸುತ್ತಾ ಮಹಾತ್ಮರು ಹೇಳತೊಡಗಿತು..
"ಪಾಪವನ್ನು ಮಾಡಿದವನಿಗೆ ಅಳುವುದಲ್ಲದೆ ಬೇರೆ ಯಾವ ಮಾರ್ಗವಿದೆ.? 

ನೀತಿ:ನಾನು 40 ತಪ್ಪುಗಳನ್ನು ಮಾಡಿದ್ದೇನೆ ಎಂದು ಮಹಾತ್ಮರಾದ ರಿಯಾಹುನಿಲ್ ಖೈಸಿಯ್ಯ್ ಹೇಳುವಾಗ; ಸದಾ ಸಮಯವೂ ಅಲ್ಲಾಹನನ್ನು ಹೆದರಿ ಅಳುವ ಮಹಾತ್ಮರು ಮಾಡಿದ ತಪ್ಪು ನಮಗೆ ತುಲನೆ ಮಾಡಿ ನೋಡುವಾಗ ಅವೆಲ್ಲವೂ ಕೆಲವೊಮ್ಮೆ ನಾವು ತಪ್ಪಿಯೂ ಪರಿಗಣಿಸದ ಕಾರ್ಯಗಳಾಗಿರಬಹುದು.
ಮಹಾತ್ಮರಿಗೆ ಅವರ ಜೀವನ ಕಾಲ ಪೂರ್ತಿ ಮಾಡಿದ ತಪ್ಪುಗಳನ್ನು ಲೆಕ್ಕ ಹಾಕಿ ಕ್ಲಪ್ತಗೊಳಿಸಲೂ ಅದಕ್ಕೆ ಬೇಕಾಗಿ ಕ್ಷಮೆ ಯಾಚಿಸಲೂ ಸಾಧ್ಯವಾಗುತ್ತಿತ್ತು. ಆದರೆ ನಮ್ಮ ಅವಸ್ಥೆಯೇ..! ಜೀವನದ ಒಂದೊಂದು ಘಳಿಗೆಯಲ್ಲೂ ತಪ್ಪುಗಳ ಸರಮಾಲೆಗಳನ್ನೇ ನಾವು ಮಾಡುತ್ತಿರುತ್ತೇವೆ. ಆದರೂ ನನ್ನಷ್ಟು ಉತ್ತಮರು ಈ ಲೋಕದಲ್ಲಿ ಯಾರೂ ಇಲ್ಲ ಎಂಬ ಭಾವನೆಯಲ್ಲೇ ಕಾಲ ಕಳೆಯಲು ಯಾವುದೇ ಲಜ್ಜೆಯಿಲ್ಲ. ಆದ್ದರಿಂದ ಅಹಂಭಾವನ್ನು, ಅಹಂಕಾರವನ್ನು ಬದಿಗಿಟ್ಟು ಮಾಡಿದ ತಪ್ಪುಗಳನ್ನು ಒಂದೊಂದಾಗಿ ಗುಣಿಸಿ ಹೇಳುತ್ತಾ ಅಳುತ್ತಾ ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಲು ನಮಗೆ ಸಾಧ್ಯವಾಗಬೇಕು..

✍🏻 ಶಂಸುದ್ದೀನ್ ಅಹ್ಸನಿ ಬಳ್ಕುಂಜೆ

*NOORUL-FALAH ISLAMIC ORGANISATION 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್