ಎಲ್ಲವೂ ದಾಖಲಿಸಲ್ಪಡುವುದು..!


  ಎಲ್ಲವೂ ದಾಖಲಿಸಲ್ಪಡುವುದು..!

ಅತ್ಯಂತ ಪರಿಚಿತವಾದ ಉದಾಹರಣೆ ಮೂಲಕ ಪ್ರಾರಂಭಿಸೋಣ. ಅಂದು ಮೋಟಿವೇಶನ್ ಕ್ಲಾಸ್‌ಗೆ ತಲುಪಿದ ಟ್ರೈನರ್ ಸಾಧಾರಣೆಗೆ ಎದುರಾಗಿರಲಿಲ್ಲ. ಅವರು ಒಂದು ಕಾಗದ ತೆಗೆದರು. ಅದರ ಮಧ್ಯೆ ಕಪ್ಪು ಶಾಯಿ ಪೆನ್ನಿನಿಂದ ಒಂದು ಸಣ್ಣ ಚುಕ್ಕೆಯನ್ನು ಹಾಕಿದರು. ನಂತರ ಎಲ್ಲರ ಎದುರಿಗೆ ಆ ಕಾಗದವನ್ನು ತೋರಿಸುತ್ತಾ ಕೇಳುತ್ತಾರೆ 'ಈ ಪೇಪರಿನಲ್ಲಿ ನೀವೇನನ್ನು ಕಾಣುತ್ತಿದ್ದೀರಿ..?:
'ಒಂದು ಕಪ್ಪುಚುಕ್ಕೆ..'
ಪ್ರಶ್ನೆಕರ್ತನ ಪ್ರಶ್ನೆಗೆ ತಕ್ಷಣವೇ ಸಭಿಕರಿಂದ ಉತ್ತರ ಬಂತು..! ಆಗ ಆತ ನಗುತ್ತಾ ಆ ಸಭಿಕರೊಂದಿಗೆ ಹೇಳುತ್ತಾನೆ 'ಒಂದು ಪೇಪರಿನಲ್ಲಿ ಇರುವ ವಿಶಾಲವಾದ ಬಿಳಿ ಭಾಗಗಳು ಯಾವುದನ್ನೂ ಕಾಣದೆ ಕಪ್ಪು ಚುಕ್ಕೆ ಯಲ್ಲಿ ಮಾತ್ರ ನಮ್ಮ ಶ್ರದ್ಧೆ ತಲುಪಿದರೆ; ಬೇರೆಯವರ ಮನಸ್ಸಿನ ವಿಶಾಲವಾದ ಒಳಿತಿಗೆ ಬದಲಾಗಿ ಅವರಲ್ಲಿ ಕಾಣುವ ಕೆಡುಕಿನ ಅತಿ ಸಣ್ಣ ಭಾಗಗಳಿಗೂ ದಿಟ್ಟಿಸಿ ನೋಡಲು ಅದನ್ನು ಭೀಮಾಕಾರವಾಗಿ ಕಾಣಲು ನಮಗಿಷ್ಟ ಎಂದಾಗಿದೆ.
ಬಹುದೊಡ್ಡ ಸಿದ್ಧಾಂತವನ್ನು ಬೇರೆಯವರಿಗೆ ಹೇಳಿಕೊಡಲು ಸಾಧ್ಯವಾಯಿತೆಂಬ ಸಂತೋಷದೊಂದಿಗೆ ಅವರು ಹೇಳಿ ಮುಗಿಸುವಾಗ ನಿಶ್ಶಬ್ದವಾದ ಕ್ಲಾಸಿನಿಂದ ಒಬ್ಬರು ಕೂಗಿ ಹೇಳುತ್ತಾರೆ
'ಸರ್, ಈ ಉದಾಹರಣೆ ಬದಲಿಸಿ ಎಲ್ಲರೂ ಹೇಳುವ ಉದಾಹರಣೆಯಾಗಿದೆ'.
ಮುಗಿಯಿತು; ಇಷ್ಟು ಹೊತ್ತು ಅವರು ತೆಗೆದ ಕ್ಲಾಸಿನ ಎಲ್ಲಾ ಗೌರವವೂ ಈ ಪದ ಪ್ರಯೋಗದೊಂದಿಗೆ ಸೋರಿಹೋಯಿತು. ಅಷ್ಟರವರೆಗೆ ಆ ಸಭೆಯಲ್ಲಿ ಮೋಟಿವೇಟರನ್ನು ಬಹುಮಾನದೊಂದಿಗೆ ಕಾಣುತ್ತಿದ್ದ ಎಲ್ಲರ ಮುಖ ಪರಿಹಾಸ್ಯ ನಗೆಯೊಂದಿಗೆ ಅವರನ್ನು ನೋಡತೊಡಗಿದರು. ಅವರ ಮುಖದಲ್ಲಿ ಲಜ್ಜೆ ಪ್ರಕಟವಾಯಿತು.
ಮನುಷ್ಯನು ಬದಲಾಯಿಸಬೇಕಾದ, ಆದರೆ ಬದಲಾಯಿಸಲು ಅತ್ಯಂತ ಕಷ್ಟಕರ ಸ್ವಭಾವವಾಗಿದೆ ಇದು. ಅಥವಾ ಯಾವಾಗಲೂ ಬೇರೆಯವರನ್ನು ಅಳೆಯಲು ಅವರ ತಪ್ಪುಗಳನ್ನು ಕಂಡು ಹಿಡಿಯಲು ನಮಗೆ ಅತ್ಯಂತ ಇಷ್ಟ. ಸ್ವಂತವನ್ನು ಅಳೆಯಲೂ ಅದರಲ್ಲಿರುವ ತಪ್ಪುಗಳನ್ನು ಕಂಡುಹಿಡಿಯಲೂ ಅಧಿಕ ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಈ ಸ್ವಭಾವಕ್ಕೆ ವಿಪರೀತವಾಗಿ ಪರಿಚಯಿಸೋಣ.

ಇಮಾಂ ಗಝ್ಝಾಲಿ ರಳಿಯಲ್ಲಾಹು ಅನ್ಹು ತನ್ನ ಇಹ್ಯಾದಲ್ಲಿ ತೌಬತ್ ಬಿನ್ ಸ್ವಿಮ್ಮರನ್ನು ಪರಿಚಯಿಸುತ್ತಿದ್ದಾರೆ. ಮಹಾತ್ಮರು ಸ್ವಂತ ಶರೀರವನ್ನು ವಿಚಾರಣೆಗೊಳಪಡಿಸುವ ವ್ಯಕ್ತಿಯಾಗಿದ್ದಾರೆ. ಇಮಾಂ ಗಝ್ಝಾಲಿ ಮಹಾತ್ಮರನ್ನು ಪರಿಚಯಿಸಿ ಪ್ರಾರಂಭಿಸುವುದು ಹೀಗೆ;
ಜೀವನದ ಒಂದೊಂದು ಗಂಟೆಗಳು, ನಿಮಿಷಗಳು, ದಿನಗಳು ನಾವು ನಮ್ಮ ಶರೀರವನ್ನು ಆಂತರಿಕ ಹಾಗೂ ಬಾಹ್ಯವಾದ ವಿಚಾರಣೆಗೊಳಪಡಿಸುತ್ತಿರಲೇ ಇರಬೇಬೇಕು. ಹೀಗೆ ಮಾಡುವ ಒಬ್ಬರಾಗಿದ್ದರು ಮಹಾತ್ಮರಾದ ತೌಬತ್ ಬಿನ್ ಸ್ವಿಮ್ಮ. ಅವರಿಗೆ 60 ವರ್ಷ ವಯಸ್ಸಾದಾಗ ತನ್ನ ಇದುವರೆಗಿನ ಜೀವನ ಕಾಲದಲ್ಲಿ ಎಷ್ಟು ದಿನಗಳಿತ್ತು ಎಂದು ಲೆಕ್ಕ ಹಾಕಿದರು. 21500 ಎಂದು ಉತ್ತರ ಲಭಿಸಿತು. ನಂತರ ಮಹಾತ್ಮರು ಆತ್ಮಾವಲೋಕನ ನಡೆಸಿದರು "ಓ ನನ್ನ ನಾಶವೇ, 21500 ದಿನಗಳಲ್ಲಿ ನಾನು ಜೀವಿಸಿದ್ದರಲ್ಲಿ; ಒಂದು ದಿನ ಒಂದು ತಪ್ಪನ್ನು ಲೆಕ್ಕ ಹಾಕಿದರೆ 21500 ತಪ್ಪುಗಳೊಂದಿಗೆಯಲ್ಲವೇ ನಾನು ನನ್ನ ಯಜಮಾನನಾದ ಅಲ್ಲಾಹನನ್ನು ಕಾಣಬೇಕಾದದ್ದು..? ಆದರೆ ಒಂದೊಂದು ದಿನವೂ ಸಾವಿರಾರು ಸಂಭವಿಸಿದ್ದರೆ ನನ್ನ ಅವಸ್ಥೆ ಏನಾಗಿರಬಹುದು...!?
ಇದನ್ನು ಹೇಳಿ ಮಹಾತ್ಮರು ಪ್ರಜ್ಞೆತಪ್ಪಿ ಬಿದ್ದರು. ನಂತರ ಮಹಾತ್ಮರನ್ನು ಮರಣ ಹೊಂದಿದ ಅವಸ್ಥೆಯಲ್ಲಾಗಿತ್ತು ಕಂಡದ್ದು.
ಮುಂದುವರೆದು ಇಮಾಂ ಗಝ್ಝಾಲಿ ಹೇಳುತ್ತಾರೆ "ಮನುಷ್ಯನು ಅವನ ಒಂದೊಂದು ಶ್ವಾಸೋಚ್ಛ್ವಾಸವನ್ನು ವಿಚಾರಣೆ ನಡೆಸಬೇಕು. ಅವನ ಹೃದಯದಿಂದ ಅವನು ಮಾಡುವ ಕೆಡುಕುಗಳನ್ನು ವಿಚಾರಣೆ ಮಾಡಬೇಕು. ಮಾಡುವ ತಪ್ಪುಗಳನ್ನು ಅನುಸರಿಸಿ ನಾವು ಒಂದೊಂದು ಕಲ್ಲುಗಳನ್ನು ನಮ್ಮ ಮನೆಗೆ ಎಸೆಯುವುದಾದರೆ ತಕ್ಷಣದಲ್ಲೇ ನಮ್ಮ ಮನೆ ಕಲ್ಲುಗಳಿಂದ ತುಂಬಬಹುದು.ಮನುಷ್ಯನು ಅವನು ಮಾಡುವ ತಪ್ಪುಗಳನ್ನು ಬಹುಬೇಗನೆ ಮರೆಯುತ್ತಾನೆ. ಆದರೆ ಎರಡು ಮಲಕುಗಳು ಬಹುಬೇಗ ಅದನ್ನೆಲ್ಲ ಉಲ್ಲೇಖಿಸುತ್ತಾರೆ.

ನೀತಿ: ಸ್ವಶರೀರವನ್ನು ವಿಚಾರಣೆ ನಡೆಸಿ ನೋಡಿ ನಂತರ ಬೇರೆಯವರ ವಿಷಯಗಳಲ್ಲಿ ತಲೆ ತೋರಿಸಲು ನಮಗೆ ಸಮಯವಿರಲಾರದು. ಕಾರಣ ಸ್ವಂತವನ್ನು ವಿಚಾರಣೆ ನಡೆಸಿ ಮುಗಿಸುವುದೇ ಎಂಬುದು ಅಸಂಭವವಾಗಿದೆ...!

✍🏻 ಶಂಸುದ್ದೀನ್ ಅಹ್ಸನಿ ಬಳ್ಕುಂಜೆ

 ಪ್ರಚಾರ:
NOOR-UL-FALAH ORGANIZATION

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್