ಪ್ರವಾದಿಯನ್ನು ಕೊಲ್ಲಲು ಬಂದ ಫುಳಾಲ ಮುಸ್ಲಿಮರಾದರು
ಪ್ರವಾದಿಯನ್ನು ಕೊಲ್ಲಲು
ಬಂದ
ಫುಳಾಲ ಮುಸ್ಲಿಮರಾದರು
۞بِـسْــــــــمِ الــلّٰــهِ الرَّحْـــــمٰنِ الرَّحِــيـــــــــمْ۞
––––––––––––––––––––––
اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰه ﷺ
ಮಕ್ಕಾ ವಿಜಯದ ದಿನ ಪ್ರವಾದಿ ﷺ ರವರು ರಾತ್ರಿ ಕಅಬಾಲಯಕ್ಕೆ ಹೋಗಿ ತವಾಫ್ ಮಾಡಲು ಶುರುಮಾಡಿದರು. 1000 ಕ್ಕಿಂತಲೂ ಅಧಿಕ ಸ್ವಹಾಬಿಗಳು ಖಡ್ಗ ಹಿಡಿದು ಹೊರಗಡೆ ಕಾವಲು ನಿಂತಿದ್ದಾರೆ. ಉಮರ್ ಖತ್ತಾಬರೂ رضي الله عنهಕೂಡ ಹೊರಗಡೆ ಇದ್ದಾರೆ. ಪ್ರವಾದಿ ﷺ ತವಾಫ್ ನಿರ್ವಹಿಸುತ್ತಿದ್ದಾರೆ.
ಪ್ರವಾದಿ ﷺ ರವರನ್ನು ಕೊಲ್ಲಬೇಕೆಂಬ ಆಗ್ರಹದೊಂದಿಗೆ ಫುಳಾಲ ಎನ್ನುವ ವ್ಯಕ್ತಿ ಖಡ್ಗ
ವನ್ನು ಹಿಡಿದು ಕಅಬಾಲಯದ ಹಿಂದೆ ಅಡಗಿ ಕುಳಿತಿದ್ದಾನೆ.
ಮಕ್ಕಾ ವಿಜಯದ ದಿನದಲ್ಲಿಯೂ ಕೂಡ ನನಗೆ ಮುಹಮ್ಮದನನ್ನು ﷺ ಕೊಲ್ಲಲು ಸಾಧ್ಯವಾಗದೆ ಇದ್ದರೆ ಇನ್ನು ಮುಂದೆ ಮುಹಮ್ಮದ್ ﷺ ರನ್ನು ನನಗೆ ಕೊಲ್ಲಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದರು.
ಫುಳಾಲ ಖಡ್ಗ ಹಿಡಿದು ಕಾಯುತ್ತಿರುವಾಗ ಪ್ರವಾದಿ ಮುಹಮ್ಮದ್ ﷺ ಕಅಬಾಲಯದ ತವಾಫ್ ಮಾಡುತ್ತಿದ್ದಾರೆ. ಒಂದನೇ ತವಾಫ್ ಪೂರ್ತಿ ಮಾಡಿದರು.
ಪ್ರವಾದಿ ಮುಹಮ್ಮದ್ صَلَّى اللَّهُ عَلَيهِ وَسَلَّمರವರು ಫುಳಾಲ ಅಡಗಿರುವ ಭಾಗಕ್ಕೆ ಮುಟ್ಟಿದಾಗ ಕಅಬಾಲಯದ ಹಿಂದೆ ಅಡಗಿರುವ ಫುಳಾಲ ಖಡ್ಗವನ್ನು ಹಿಡಿದು ಹಿಂದಿನಿಂದ ಬಂದರು. ಆದರೆ ಹಬೀಬರಾದ ಪ್ರವಾದಿ ﷺ ರವರ ರಿಸಾಲತಿನ ಶರೀರ ಕಂಡಾಗ ಫುಳಾಲನ ಕೈ ನಡುಗಲು ಶುರುವಾಯಿತು.
ಫುಳಾಲ ಹೆದರಿಕೆಯಿಂದ ತತ್ತರಿಸಿದರು. ಪ್ರವಾದಿಯನ್ನು ﷺ ಕೊಲ್ಲಲು ಸಾಧ್ಯವಾಗಲಿಲ್ಲ. ಇದನ್ನು ಅರಿಯದ ಪ್ರವಾದಿﷺಯವರ ಒಂದನೆಯ ತವಾಫ್ ಕಳೆದು ಎರಡನೆಯ ತವಾಫ್ ಪೂರ್ತಿಯಾಯಿತು.
ಎರಡನೆಯ ತವಾಫ್ ಕೂಡ ಪೂರ್ತಿಯಾದಾಗ ಎರಡನೆಯ ಬಾರಿ ಫುಳಾಲ ಖಡ್ಗದೊಂದಿಗೆ ಪ್ರವಾದಿಯನ್ನು ﷺ ವಧಿಸಲು ಹಿಂದಿನಿಂದ ಬಂದರು. ಆದರೆ ಎರಡನೆಯ ಬಾರಿಯೂ ಪುಣ್ಯವಾದ ಆ ಶರೀರವನ್ನು ಕಂಡಾಗ ಹೆದರಿದರು.
ಎರಡನೆಯ ತವಾಫಿನಲ್ಲಿಯೂ ಮುತ್ತು ಮುಹಮ್ಮದ್ ﷺತಂಙಳ್ ರನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಮೂರನೆಯ ತವಾಫ್ ಕಳೆಯಿತು. ಹೀಗೆ 4-5- ತವಾಫ್ ಕೂಡ ಕಳೆಯಿತು. ಎಲ್ಲಾ ರೀತಿಯಲ್ಲೂ ಪರಾಜಯಗೊಂಡಾಗ ಪ್ರವಾದಿ ಮುಹಮ್ಮದ್ ﷺ ರವರನ್ನು ಕೊಲ್ಲುವ ವೈರಾಗ್ಯದೊಂದಿಗಿರುವಾಗ ಪ್ರವಾದಿ ಮುಹಮ್ಮದ್ ﷺಏಳನೆ ತವಾಫ್ ಗೆ ಮುಟ್ಟಿದರು. ಇನ್ನು ಮುಹಮ್ಮದ್ ﷺ ರನ್ನು ಈಗ ನಾನು ಕೊಲ್ಲದೇ ಇದ್ದರೆ ಇನ್ನು ಮುಂದೆ ನನಗೆ ಕೊಲ್ಲಲು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ತೀರ್ಮಾನಿಸುತ್ತಾ ಈಗ ನಾನು ಮುಹಮ್ಮದ್ ﷺ ರನ್ನು ವಧಿಸಿಯೇ ತೀರುವೆನು ಎಂದು ದ್ರಡ ಸಂಕಲ್ಪ ಮಾಡಿ ಫುಳಾಲ ತನ್ನ ನಡುಗುವ ಎರಡು ಕೈ ಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಈಗಲಾದರೂ ಮುಹಮ್ಮದ್ ﷺರನ್ನು ಕೊಲ್ಲಬೇಕು ಎಂದು ಹಿಂದಿನಿಂದ ಕಾಯುವಾಗ ಪ್ರವಾದಿಯವರ ﷺ ಏಳನೇ ತವಾಫ್ ಪೂರ್ತಿಯಾಗುವ ಹಂತಕ್ಕೆ ತಲುಪಿತು.
ಪ್ರವಾದಿಯವರ ಹಿಂದೆ ಛಂಗನೆ ಹಾರಿ ಪ್ರವಾದಿಯನ್ನು ವಧಿಸಲು ಹಿಂದಿನಿಂದ ಖಡ್ಗ ಬೀಸುವಾಗ ಫುಳಾಲ ಮತ್ತೊಮ್ಮೆ ಪ್ರವಾದಿಯವರ ﷺ ರವರ ರಿಸಾಲತಿನ ಶರೀರವನ್ನು ಕಂಡಾಗ ಹೆದರಿ ನಡುಗಿದರು.
ಕೈಗಳಿಗೆ ನಡುಕ ಉಂಟಾಯಿತು. ಖಡ್ಗವು ಕೈಯಿಂದ ಕೆಳಗೆ ಬಿತ್ತು. ಶಬ್ದ ಕೇಳಿ ಪ್ರವಾದಿಯವರು ﷺ ತಿರುಗಿ ನೋಡಿದಾಗ ಹೆದರಿಕೆಯಿಂದ ನಡುಗುತ್ತಾ ಫುಳಾಲ ನಿಂತಿದ್ದಾರೆ. ಫುಳಾಲ ಹೆದರಿಕೆಯಿಂದ ಗಡಗಡ ನಡುಗುತ್ತಿದ್ದಾರೆ. ನನ್ನ ಈಗ ಸೆರೆಹಿಡಿಯಲಾಗುತ್ತದೆ. ನನ್ನನ್ನು ಈಗ ಕೊಲ್ಲುತ್ತಾರೆ. ಯಾರನ್ನು ನಾನು ಕೊಲ್ಲಲು ಬಂದದ್ದು ಮಕ್ಕಾದ ರಾಜಕುಮಾರನನ್ನಾಗಿದೆ. ಎಂದು ಮನಸ್ಸಿನಲ್ಲಿಯೇ ಫುಳಾಲ ದು:ಖದಿಂದ ಯೋಚಿಸುವಾಗ
(ಉಮರ್ رضي الله عنه ಮತ್ತು ಇತರ ಸ್ವಹಾಬಿಗಳು ಹೊರಗಡೆ ಕಾವಲು ನಿಂತಿದ್ದಾರೆ.ಅವರಿಗೆ ಈ ವಿಷಯ ತಿಳಿದಿಲ್ಲ.)
ಕಾರುಣ್ಯದ ಸಾಗರವಾದ ಪ್ರವಾದಿ ಮುಹಮ್ಮದ್ ﷺ ಹೇಳಿದರು. " ಫುಳಾಲ ನಿನ್ನನ್ನು ನಾನು ನೋಡಿದ್ದೇನೆ ಫುಳಾಲ " ನಾನು ಒಂದನೆಯ ತವಾಫ್ ಮಾಡುವಾಗ ಈ ಕಅಬಾಲಯದ ಹಿಂದೆ ಖಡ್ಗವನ್ನು ಕೈಯ್ಯಲ್ಲಿ ಹಿಡಿದುಕೊಂಡು ನೀನು ಇದ್ದೆ ಎಂದು ನನಗೆ ತಿಳಿದಿತ್ತು. ಫುಳಾಲ ಇದು ಗೊತ್ತಿದ್ದೂ ನಾನು ತವಾಫ್ ಮಾಡಿದೆ. ಒಂದೊಂದು ಬಾರಿಯೂ ನೀನು ನನ್ನ ಹಿಂದಿನಿಂದ ಕೊಲ್ಲಲು ಬಂದು ತಿರುಗಿ ಹೋದದ್ದು ನನಗೆ ತಿಳಿದಿದೆ ಫುಳಾಲ.
ಫುಳಾಲ ಹೆದರಿ ನಡುಗಿಹೋದರು. ಕಾರುಣ್ಯ ನಿಧಿಯಾದ ಪ್ರವಾದಿ ಮುಹಮ್ಮದ್ ﷺ ತನ್ನ ಸುತ್ತಲೂ ನಾಲ್ಕು ಭಾಗವನ್ನೊಮ್ಮೆ ತಿರುಗಿ ನೋಡಿದರು. ನಂತರ ಫುಳಾಲರೊಂದಿಗೆ ಹೇಳಿದರು:- ಫುಳಾಲ ರಕ್ಷೆ ಹೊಂದು ಫುಳಾಲ ಯಾರೂ ಕೂಡ ನಿನ್ನನ್ನು ನೋಡಲಿಲ್ಲ ಫುಳಾಲ. ನನ್ನ ಸ್ವಹಾಬತ್ ನೋಡಲಿಲ್ಲ. ಅವರೆಲ್ಲರೂ ನೋಡುವುದಕ್ಕಿಂತ ಮೊದಲೇ ರಕ್ಷೆ ಹೊಂದು (ಇಲ್ಲಿಂದ ಬೇಗ ಒಮ್ಮೆ ಹೊರಟು ಹೋಗು ) ಫುಳಾಲ. ಈ ಮಾತನ್ನು ಕೇಳಿದಾಗ ಫುಳಾಲ ಆಶ್ಚರ್ಯಚಕಿತರಾದರು. ಫುಳಾಲ ಗಳಗಳನೆ ಅತ್ತು ಬಿಟ್ಟರು. ಅಲ್ಲಿಂದ ನೇರ ಪ್ರವಾದಿಯವರ ಕಾಲಿಗೆ ಬಿದ್ದರು. ನಂತರ ಹೇಳಿದರು ನೆಬಿಯೇ ಅಶ್ ಹದು ಅಲ್ಲಾಇಲಾಹ ಇಲ್ಲಲ್ಲಾಹ್ ವ ಅಶ್ ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್
ಪುಣ್ಯ ಪ್ರವಾದಿಯವರ ﷺ ಕಾಲಿಗೆ ಬಿದ್ದು ತನ್ನ ತಲೆ ಕೂದಲನ್ನು ಹಿಡಿದು ಹೊರಳಾಡುತ್ತಾ ಸ್ವತಃ ಹೇಳುತ್ತಾರೆ ಏ ಫುಳಾಲ ನೀನು ಎಷ್ಟು ಪಾಪಿಯಾಗಿದ್ದಿ. ತನ್ನ ತಲೆಯ ಕೂದಲನ್ನು ಹಿಡಿದು ಕಅಬಾಲಯದ ಮತಾಫಿಗೆ ಬಡಿಯಲು ಶುರುಮಾಡಿದರು. ನಂತರ ಫುಳಾಲ ತನ್ನ ಸ್ವಂತ ಶರೀರದೊಂದಿಗೆ ಕೇಳುತ್ತಾರೆ ಇಷ್ಟು ದಿವಸ ಯಾರನ್ನು ನೀನು ಕೊಲ್ಲಲು ಬೇಕಾಗಿ ಕಾದು ನಿಂತದ್ದು. ಇಷ್ಟು ದಿವಸ ಯಾರೊಂದಿಗೆ ಇರುವ ದ್ವೇಷದಿಂದ ನೀನು ನಡೆದದ್ದು. ಈ ಮನುಷ್ಯನನ್ನಾಗಿದೆಯಾ ನೀನು ಕೊಲ್ಲಲು ಹೋದದ್ದು. ಏ ಫುಳಾಲ ನೀನು ಎಷ್ಟು ಪಾಪಿಯಾಗಿದ್ದಿ ಎಂದು ಹೇಳುತ್ತಾ ತನ್ನ ಸ್ವಂತ ತಲೆಕೂದಲನ್ನು ಹಿಡಿದು ಬಡಿದರು.
ಅಲ್ಲಿಂದ ನೇರ ತನ್ನ ಮನೆಗೆ ಫುಳಾಲ ನಡೆದು ಹೋದರು. ಅರ್ಧ ದಾರಿಗೆ ತಲುಪಿದಾಗ ಒಂದು ವೇಶ್ಯ ಸ್ತ್ರೀಯು ಫುಳಾಲರನ್ನು ಕರೆಯುತ್ತಾರೆ ಓ ಫುಳಾಲ ಇಲ್ಲಿಗೆ ಬಾ ಫುಳಾಲ ನಿನಗೆ ಬೇಕಾಗಿ ನಾನು ನನ್ನ ಮಲಗುವ ಕೋಣೆಯನ್ನು ಸಿದ್ದಪಡಿಸಿದ್ದೇನೆ. ಆ ಸಮಯದಲ್ಲಿ ಫುಳಾಲ ಆ ವೇಶ್ಯ ಸ್ತ್ರೀಯೊಂದಿಗೆ ಹೇಳುತ್ತಾರೆ:- ಇಲ್ಲ ಇಲ್ಲ ಫುಳಾಲ ಇನ್ನು ಮುಂದೆ ವ್ಯಭಿಚಾರ ಮಾಡುವುದಿಲ್ಲ. ಒಂದು ಗಂಟೆಯ ಮೊದಲು ಪ್ರವಾದಿಯವರ ﷺ ಮುಂದೆ ನಿಂತು ಫುಳಾಲ ಮುಸ್ಲಿಮ್ ಆಗಿದ್ದಾನೆ. ಇನ್ನು ಮುಂದೆ ಈ ಫುಳಾಲವನ್ನು ವ್ಯಬಿಚಾರ ಮಾಡಲು ಸಿಗುವುದಿಲ್ಲ. ಈ ಫುಳಾಲ ಇನ್ನು ಮುಂದೆ ಮಧ್ಯ ಕುಡಿಯುವುದಿಲ್ಲ. ಈ ಫುಳಾಲ ಬಡ್ಡಿ ತೆಗಿಯುವುದಿಲ್ಲ. ಎಂದು ಹೇಳಿದರು.
✍️ ಅಹ್ಮದ್ ನವಾಝ್ ಕೊಣಾಜೆ ಪದವು
ಮೂಲ:ಕಬೀರ್ ಬಾಖವಿಯವರ ಮಲಯಾಳಂ ಮತ ಪ್ರಭಾಷಣದಿಂದ ಕನ್ನಡಕ್ಕೆ ಅನುವದಿಸಲಾಗಿದೆ.
ಮುತ್ತು ನೆಬಿ ಮುಹಮ್ಮದ್ ಮುಸ್ತಫಾ ﷺ ತಂಙಳ್ ರ ಮೇಲೆ ಪ್ರೀತಿಯಿಂದ ಒಂದು ಸ್ವಲಾತ್ ಹೇಳಿರಿ
أَللَّهُمَّ صَلِّ عَلَى رُوحِ مُحَمَّدٍ فِي الْأَرْوَاحِ وَعَلَى جَسَدِهِ فِي الْأَجْسَادِ وَعَلَى قَبْرِهِ فِي الْقُبُورِ
NOORUL FALAH ISLAMIC ORGANISATION
Comments
Post a Comment