ಮದರಸ ಕಲಿಯುತ್ತಿದ್ದಾಗ ಮಲಕುಗಳು ಭೇಟಿಯಾಗುತ್ತಿದ್ದರು!


ಮದರಸ ಕಲಿಯುತ್ತಿದ್ದಾಗ ಮಲಕುಗಳು ಭೇಟಿಯಾಗುತ್ತಿದ್ದರು!

أنه سئل:متى علمت أنك ولي لله تعالى؟قال: كنت وأنا ابن عشر سنين في بلدنا أخرج من داري وأذهب إلى المكتب فأرى الملائكة عليهم السلام تمشي حولي , فإذا وصلت إلى المكتب سمعت الملائكة يقولون:أفسحوا الطريق لولي الله حتى يجلس " 
فمر بنا رجل لم أعرفه يومئذ فسمع الملائكة يومئذ تقول ذلك فقال لأحدهم ما هذا الصبي فقال له يكون له شأن عظيم هذا يعطى فلا يمنع ويمكن فلا يحجب ويقرب فلا يمكر به ثم عرفت ذلك الرجل بعد أربعين سنة فإذا هو من ابدال ذلك الوقت-(بهجة الأسرار-٢١)

ಶೈಖ್ ಅಬ್ದುರ್ರಝಾಖ್ (ರ) ವಿವರಿಸುತ್ತಾರೆ:ಓರ್ವರು ಶೈಖ್ ಅಬ್ದುಲ್ ಖಾದಿರ್(ರ)ರವರ ಬಳಿ ಬಂದು ತಾವು ಅಲ್ಲಾಹನ ವಲಿಯ್ಯ್ ಎಂದು ತಮಗೆ ಯಾವಾಗ ತಿಳಿದದ್ದು.ನಾನು ಹತ್ತು ವಯಸ್ಸಿನ ವರೆಗೆ ತಾಯ್ನಾಡಿನಲ್ಲೇ ಇದ್ದೆ. ಮನೆಯಿಂದ ದೀನಿ ಜ್ಞಾನ ಕರಗತ ಮಾಡಲು ಮದರಸಕ್ಕೆ ಹೋಗುವಾಗ ಅಲ್ಲಿ ತನ್ನ ಸಹಪಾಠಿಗಳೊಂದಿಗೆ ಅಲ್ಲಾಹನ ಮಲಾಇಕತ್‌ಗಳು ನನ್ನ ಕುರಿತು ಈ ರೀತಿ ಹೇಳುದಾಗಿ ನಾ ಕೇಳಿದೆ "ಮಕ್ಕಳೇ ನೀವು ಅಲ್ಲಾಹನ ಇಷ್ಟ ದಾಸರಿಗೆ ಕೂರಲು ಸ್ಥಳ ಬಿಟ್ಟು ಕೊಡಿ"!!!
ಹೀಗೆ ಒಂದು ದಿವಸ ನಮ್ಮ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಬಂದರು ಅವರೂ ಕೂಡ ಮಲಕುಗಳು ಈ ರೀತಿ ಹೇಳುವುದನ್ನು ಕೇಳಿದರು.ಆಗ ಮಲಕುಗಳಲ್ಲೊಬ್ಬರಲ್ಲಿ ಅವರು‌ ಕೇಳಿದರು ಈ ಮಗುವಿನ ಸ್ಥಿತಿಗತಿಯೇನು? ಅವರು ಹೇಳಿದರು: "ಈ ಮಗುವಿನ ಪರಿಸ್ಥಿತಿ ಮಹತ್ವದ್ದು, ಇದಕ್ಕೆ ಎಲ್ಲಾವನ್ನು ನೀಡಲಾಗುತ್ತದೆ, ಯಾವುದನ್ನು ಕಮ್ಮಿ ಮಾಡುವಂತಿಲ್ಲ, ಎಲ್ಲಾ ಸವಲತ್ತುಗಳನ್ನು ನೀಡುವೆವು,ವಂಚಿಸುವಂತಿಲ್ಲ,ಎಂದು ಹೇಳಿದರು.ಆ ಅಪರಿಚಿತ ವ್ಯಕ್ತಿ ಯನ್ನು ನಾನು ನಲವತ್ತು ವರ್ಷಗಳ ನಂತರ ಪರಿಚಯ ಮಾಡಿಕೊಂಡಾಗ ಅವರೊಬ್ಬರು ಅಬ್‌ದಾಲ್ ಎಂಬ ಔಲಿಯಾ ಪಟ್ಟವನ್ನು ಅಲಂಕರಿಸಿದ್ದರು.
💎💎💎💎💎💎💎💎
 ಮಲಾಯಿಕತ್ತ್‌ಗಳು ಮಹೋನ್ನತ ವ್ಯಕ್ತಿಗಳನ್ನು ಸಮೀಪಿಸಿ ಅವರೊಂದಿಗೆ ಮಾತನಾಡುತ್ತಾರೆ ಎಂಬುದು ಪರಿಶುದ್ಧ ಖುರ್ಆನಿನಲ್ಲೂ ಹದೀಸಿನಲ್ಲೂ ಸಾಬೀತುಗೊಂಡಿದೆ.
ಉದಾಹರಣೆ :-وَإِذْ قَالَتِ الْمَلَائِكَةُ يَا مَرْيَمُ إِنَّاللَّهَ اصْطَفَاكِ وَطَهَّرَكِ وَاصْطَفَاكِ عَلَىٰ نِسَاءِ الْعَالَمِينَ- (آل عمران-٤٢)
ಈ ಆಯತ್ತಿನಲ್ಲಿ ಮಲಕುಗಳು ಮರಿಯಂ ಬೀವಿ(ರ)ರೊಂದಿಗೆ ಮಾತನಾಡಿದ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ನೌಷಾದ್ ಸಖಾಫಿ ಮುರ

💠 ➪ ಪ್ರಚಾರ:
NOOR-UL-FALAH ORGANIZATION

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್