ಸ್ರ್ತೀಯರ ಕುರಿತಿರುವ ವಸ್ವಿಯ್ಯತ್


ಸ್ರ್ತೀಯರ ಕುರಿತಿರುವ ವಸ್ವಿಯ್ಯತ್

ಅಮ್ರ್‌ಬಿನುಲ್ ಅಹ್‌ವಸ್(ರ) ನಿವೇದನೆ: 
ಹಜ್ಜತುಲ್‌ವಿವಾಅ್ (ವಿದಾಯ ಹಜ್ಜ್) ನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅಲ್ಲಾಹನನ್ನು ಸ್ತುತಿಸಿ ಆರಂಭಿಸಿದ ಭಾಷಣದಲ್ಲಿ ಜನರಿಗೆ ಉಪದೇಶಿಸಿದ ನಂತರ ಹೇಳಿದರು, 
ತಿಳಿಯಿರಿ, ಸ್ತ್ರೀಯರಿಗೆ ನೀವು ಒಳಿತನ್ನು ಉಪದೇಶಿಸಿರಿ, ಅವರು ನಿಮ್ಮ ಬಳಿ ಸೆರೆಯಾಳುಗಳಂತೆ ಜೀವಿಸುತ್ತಿದ್ದಾರೆ. ಅದನ್ನು (ಸಮಾಗಮ) ಹೊರತುಪಡಿಸಿ ಅವರ ಮೇಲೆ ನಿಮಗೆ ಬೇರೆ ಯಾವ ಅಧಿಕಾರವೂ ಇಲ್ಲ. ಅವರು ದುರ್ಮಾರ್ಗದಲ್ಲಿ ಏರ್ಪಟ್ಟಿದ್ದಾರೆಂದು ಸ್ಪಷ್ಟವಾದರೆ ಅವರನ್ನು ನೀವು ನಿಮ್ಮ ಹಾಸಿಗೆಯಿಂದ ದೂರವಿರಿಸಿ. ಗಾಯವಾಗದ ರೀತಿಯಲ್ಲಿ ಹೊಡೆಯಿರಿ. ಅವಳು ನಿಮ್ಮನ್ನು ಅನುಸರಿಸಿದರೆ ಅನಂತರ ನೀವು ಅವಳ ಮೇಲೆ ಬೇರೆ (ಶಿಕ್ಷೆಯ) ಮಾರ್ಗಗಳನ್ನು ಹುಡುಕದಿರಿ, 
ತಿಳಿಯಿರಿ, ನಿಮಗೆ ಸ್ತ್ರೀಯರೊಂದಿಗೆ ಹಾಗೂ ಸ್ತ್ರೀಯರಿಗೆ ನಿಮ್ಮೊಂದಿಗೆ ಕೆಲವು ಬಾಧ್ಯತೆಗಳಿವೆ. ನಿಮಗೆ ಇಷ್ಟವಿಲ್ಲದವರನ್ನು ಮನೆಗೆ ಪ್ರವೇಶಗೊಳಿಸದಿರುವುದು ಹಾಗೂ ನಿಮ್ಮ ಹಾಸಿಗೆಗೆ ಬರಮಾಡಿಕೊಳ್ಳದಿರುವುದು ಅವರಿಗೆ ನಿಮ್ಮ ಮೇಲಿರುವ ಭಾದ್ಯತೆಯಾಗಿದೆ. ತಿಳಿಯಿರಿ, ವಸ್ತ್ರ ಮತ್ತು ಆಹಾರದಲ್ಲಿ ಅವರಿಗೆ ಹಿತವನ್ನುಂಟುಮಾಡುವುದು ನಿಮಗೆ ಅವರ ಮೇಲಿರುವ ಬಾಧ್ಯತೆಯಾಗಿದೆ.
 (ತಿರ್ಮುದಿ).

ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
=============================
ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ.
اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.

=============================
Let me recommend you this noorulfalah application
https://bit.ly/3qsRGcF
✤𝙇𝙞𝙠𝙚 & 𝙎𝙝𝙖𝙧𝙚✤
✦𝙋𝙧𝙖𝙮 𝙛𝙤𝙧 𝙪𝙨 ✦
𝗡𝗢𝗢𝗥-𝗨𝗟-𝗙𝗔𝗟𝗔𝗛
💢💢💢💢💢💢

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್