ಕಳ್ಳರ ಮನೆಗೆ ಸ್ಥಳಾಂತರಗೊಂಡ ಇಮಾಮರು!
ಕಳ್ಳರ ಮನೆಗೆ ಸ್ಥಳಾಂತರಗೊಂಡ ಇಮಾಮರು!
▪️ ಪ್ರಖ್ಯಾತ ಪಂಡಿತ ಇಮಾಮ್ ಅಬೂ ಸಯೀದ್ (ರ) ರವರ ಮನೆಗೆ ಒಮ್ಮೆ ಕಳ್ಳರು ಬಂದರು. ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿರುವ ಕೆಲವು ಸಾಮಾನುಗಳನ್ನು ಬಿಟ್ಟು ಉಳಿದ ಎಲ್ಲಾ ಸಾಮನುಗಳನ್ನು ಕದ್ದುಕೊಂಡು ಹೋದರು.
▪️ ಅಷ್ಟರಲ್ಲಿ ಇಮಾಮರು ಅವರು ಬಾಕಿ ಬಿಟ್ಟ ಸಾಮಾನುಗಳನ್ನು ಹೊತ್ತುಕೊಂಡು ಅವರನ್ನು ಹಿಂಬಾಲಿಸಿ ನಡೆದರು. ಈ ಅದ್ಭುತ ದೃಶ್ಯವನ್ನು ಕಂಡ ಕಳ್ಳರು ಅವರಲ್ಲಿ ಕೇಳಿದರು. "ನೀವ್ಯಾಕೆ ಈ ಸರಂಜಾಮುಗಳನ್ನು ಹೊತ್ತುಕೊಂಡು ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದೀರಿ.? ನಿಮಗೆ ಏನು ಬೇಕು?" ಇಮಾಮರು ಹೇಳಿದರು. "ಏನಿಲ್ಲ. ನೀವು ನನ್ನ ಮನೆಯ ಹೆಚ್ಚಿನ ಎಲ್ಲಾ ಅಗತ್ಯವಾದ ಸಾಮಾನುಗಳನ್ನು ಕದ್ದುಕೊಂಡು ಬಂದಿದ್ದೀರಿ. ಬರೀ ಕೆಲವು ಅತ್ಯಗತ್ಯವಲ್ಲದ ಸಾಮಾನುಗಳನ್ನು ಬಿಟ್ಟಿದ್ದೀರಿ. ನನಗೆ ಇನ್ನು ಈ ಮನೆಯಲ್ಲಿ ವಾಸಮಾಡಬೇಕಾದರೆ ಎಲ್ಲವೂ ಹೊಸತಾಗಿ ಖರೀದಿಸಬೇಕು. ಅದಕ್ಕೋಸ್ಕರ ನೀವು ವಾಸಿಸುವ ಮನೆಯಲ್ಲಿಯೇ ಬಿಡಾರಮಾಡುವ ಎಂಬ ಉದ್ದೇಶದಿಂದ ಈ ಸಾಮಾನುಗಳನ್ನು ಹೊತ್ತುಕೊಂಡು ನಿಮ್ಮೊಂದಿಗೆ ಬಂದಿದ್ದೇನೆ."
▪️ ಇಮಾಮರಿಂದ ಈ ಬುದ್ಧಿಂತಿಕೆಯ ಮಾತುಗಳನ್ನು ಕೇಳಿದಾಗ ಕಳ್ಳರು ಕದ್ದ ಸಾಮಾನುಗಳನ್ನು ಅಲ್ಲೇ ಬಿಟ್ಟು ಹೋದರು.
✍🏻ಸಂಗ್ರಹ:ಚರಿತ್ರೆ ಗ್ರಂಥಗಳಿಂದ.
ಯೂಸುಫ್ ನಬ್‌ಹಾನಿ ಕುಕ್ಕಾಜೆ
NOORUL FALAH ISLAMIC ORGANISATION
Comments
Post a Comment