ಅವರೆಲ್ಲಿ ನಾವೆಲ್ಲಿ..!


  ಅವರೆಲ್ಲಿ ನಾವೆಲ್ಲಿ..!

ಆ ದಿನ ನಮ್ಮ ಜುಮುಆ ಹಸನುಲ್ ಬಸ್ವರಿ ರವರ ಜೊತೆಯಾಗಿತ್ತು. ಜುಮುಆದ ನಂತರ ನಾವೆಲ್ಲರೂ ಮಹಾತ್ಮರಾದ ಹಸನುಲ್ ಬಸ್ವರಿಯವರ ಸುತ್ತಲೂ ನೆರೆದೆವು. ನಮ್ಮನ್ನು ಕಂಡದ್ದು ಮಹಾತ್ಮರು ಜೋರಾಗಿ ಅಳಲು ಪ್ರಾರಂಭಿಸಿದರು. ಏನು ಮಾಡಬೇಕೆಂದು ತೋಚದೆ ನಾವು ದಿಗ್ಭ್ರಾಂತರಾದೆವು. 
ಸಲ್ಮತ್ ಬಿನ್ ಆಮೀನ್ ಸ್ವಲ್ಪ ತಡವರಿಸಿ ನಂತರ ಮುಂದುವರೆಸುತ್ತಾರೆ 'ನಾವು ಮಹಾತ್ಮರೊಂದಿಗೆ ಕೇಳಿದೆವು' 
ಏನಾಯಿತು..? 
ತಾವು ಅಳುವುದೇ..? 
ಸ್ವರ್ಗ ಲಭಿಸುವುದೆಂದು ಸಂತೋಷವಾರ್ತೆ ತಿಳಿಸಲ್ಪಟ್ಟದ್ದಾಗಿ ಸ್ವಪ್ನವನ್ನು ಕಂಡ ವ್ಯಕ್ತಿಯಲ್ಲವೇ ತಾವು..! ಮತ್ತೇಕೆ ಹೀಗೆ ಅಳುತ್ತಿರುವುದು...? 
ಆ ಪ್ರಶ್ನೆ ಬೇಕಾಗಿರಲಿಲ್ಲ. ಕಾರಣ ಆ ಪ್ರಶ್ನೆ ಮಹಾತ್ಮರ ಅಳುವಿನ ಶಕ್ತಿಯನ್ನು ಹೆಚ್ಚಿಸಿತ್ತು. 
ಅಳು ನಿಲ್ಲಿಸಿದ ನಂತರ ಮಹಾತ್ಮರಾದ ಹಸನುಲ್ ಬಸ್ವರಿ ಹೇಳುತ್ತಾರೆ 'ನಾನು ಹೇಗೆ ಅಳದಿರಲಿ..! ಅಲ್ಲಾಹನ ರಸೂಲರ ಸ್ವಹಾಬಿಗಳಲ್ಲಿ ಯಾರಾದರೂ ನಮ್ಮ ಈ ಮಸ್ಜಿದ್ ಗೆ ಬರುವುದಾದರೆ ಈ ಕಿಬಲ ಮಾತ್ರವೇ ಅವರಿಗೆ ಸಿಗಬಹುದು. ಅಲ್ಲದೆ ನಮ್ಮಲೊಂದು ಹೇಳತಕ್ಕ ಸತ್ಕರ್ಮಗಳು ಯಾವುದೂ ಸಿಗಲಿಕ್ಕಿಲ್ಲ. 
ದುಃಖದೊಂದಿಗೆ ಮಹಾತ್ಮರು ಮುಂದುವರೆಸುತ್ತಾರೆ 'ಸ್ವಹಾಬಿಗಳನ್ನೂ ನಮ್ಮನ್ನೂ ನಾವು ಹೇಗೆ ತಾರತಮ್ಯಗೊಳಿಸಲು ಸಾಧ್ಯ..? 
ಅವರ ಹಾಗೂ ನಮ್ಮೆಡೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮನುಷ್ಯನನ್ನು ಅವನ ಅತ್ಯಾಸೆಗಳು ನಾಶಪಡಿಸುತ್ತದೆ. ಇಂದು ಮಾತಿನ ಕಸರತ್ತುಗಳು ಮಾತ್ರವೇ ನಮ್ಮಲ್ಲಿರುವುದು; ಪ್ರವರ್ತನಗಳಿಲ್ಲ. ಅಧಿಕವೂ ವಿಶ್ವಾಸದಲ್ಲಿ ದೃಢವಿಲ್ಲದವರಾಗಿದ್ದಾರೆ. ಮನುಷ್ಯರನ್ನು ನಾವು ಕಾಣುತ್ತಿದ್ದರೂ ಬುದ್ಧಿಯುಳ್ಳ ಮನುಷ್ಯರನ್ನು ನಾವು ಮನುಷ್ಯರನ್ನು ನಾವು ನಾವು ಕಾಣುತ್ತಿಲ್ಲ. ಇಂದು ಹಲವರ ಧರ್ಮ ನಾಲಗೆಯ ತುದಿಯಲ್ಲಿ ಮಾತ್ರ ಇರುವುದು. ಹೃದಯದಲ್ಲಿ ರೂಢಮೂಲವಾಗಿಲ್ಲ. ಅಂತ್ಯ ದಿನದ ಕುರಿತು ನಿನಗೆ ವಿಶ್ವಾಸವಿದೆಯೇ ಎಂದು ಕೇಳಿದರೆ ಅವನು ಹೇಳುತ್ತಾನೆ "ಅದೇ ನನಗೆ ವಿಶ್ವಾಸವಿದೆ. ಆದರೆ ಅಲ್ಲಾಹನಾಣೆ ಅವನು ಹೇಳುವುದು ಸುಳ್ಳಾಗಿದೆ. 
     
ಮಹಾತ್ಮರಾದ ಹಸನುಲ್ ಬಸ್ವರಿಯವರ ಜೀವನ ಕಾಲ ಹಿಜ್‌ರಾ 21 ರಿಂದ 110 ರವರೆಗಾಗಿದೆ. ಅಂದರೆ ತಾಬಿಯುಗಳ ಕಾಲಘಟ್ಟ. 70 ರಷ್ಟು ಬದ್ರ್ ಹುತಾತ್ಮರನ್ನು ಕಂಡ ಕಣ್ಣಾಗಿದೆ ಮಹಾತ್ಮರದ್ದು. ತನ್ನ ಕಾಲದ ಜನರ ವಿಶ್ವಾಸದಲ್ಲಿ ಕೂಡಾ ಮಹಾತ್ಮರಿಗೆ ಅವಘಡ ಸೂಚನೆಯನ್ನು ತಿಳಿದಿದ್ದರು. ಅವರ ಒಳ ಟೊಳ್ಳಾದ ಚಟುವಟಿಕೆಗಳನ್ನು ಮಹಾತ್ಮರು ಕೂಗಿ ಹೇಳಿದರು. ಅತ್ಯಂತ ಉತ್ತಮ ಸಮುದಾಯವೆಂದು ಪ್ರವಾದಿ ಹೇಳಿದ ಸಮುದಾಯದಲ್ಲೊಂದಾದ ಸಮುದಾಯವನ್ನಾಗಿದೆ ಹಸನುಲ್ ಬಸ್ವರಿ ಈ ರೀತಿ ಬೆಲೆ ಕಟ್ಟುವುದು. ಹಾಗಾದರೆ ನಮ್ಮ ಈ ಕಾಲ ಎಷ್ಟೊಂದು ಕಲುಷಿತವಾಗಿರಬಹುದು..! 
ಮಹಾತ್ಮರಾದ ಹಸನುಲ್ ಬಸ್ವರಿ ಹೇಳುತ್ತಾರೆ "70 ರಷ್ಟು ಬದ್ರ್ ಶುಹದಾಗಳನ್ನು ನಾನು ಕಂಡಿದ್ದೇನೆ. ನಾವು ಅಲ್ಲಾಹನು ನಿಷಿದ್ಧವಾಗಿಸಿದ ವಿಷಯದೊಂದಿಗೆ ಎಷ್ಟೊಂದು ಅಗಲವನ್ನು ಪಾಲಿಸುತ್ತೇವೆಯೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅಲ್ಲಾಹು ಅವರಿಗೆ ಅನುವದನೀಯವಾಗಿಸಿದ ವಿಷಯಗಳಲ್ಲೂ ಅವರು ಪರಿತ್ಯಾಗಿಗಳಾಗಿದ್ದರು. ಪರೀಕ್ಷೆಗಳಿಂದ ಮುಕ್ತವಾಗಿ ಸಂತೋಷವಾಗಿರಬೇಕೆಂದು ನಾವು ಚಿಂತಿಸುವುದಾದರೆ; ಅಲ್ಲಾಹನ ಪರೀಕ್ಷೆಗಳನ್ನು ಸಹಿಸಿ ವಿಜಶಾಲಿಗಳಾಗುವುದಾಗಿತ್ತು ಅವರಿಗೆ ಇಷ್ಟ. ನೀವು ಅವರನ್ನು ಕಾಣುವುದಾದರೆ ಅವರು ಹುಚ್ಚರೆಂದು ಹೇಳಬಹುದು. ಆದರೆ ನಮ್ಮಲ್ಲಿರುವ ಉನ್ನತ ವ್ಯಕ್ತಿಗಳನ್ನು ಕಂಡರೆ ಅವರು ಹೇಳುವುದು "ನಾಳೆ ಪರಲೋಕದಲ್ಲಿ ಇವರಿಗೇನೂ ಲಭಿಸಲಾರದು ಎಂದು. ಅದೇ ಸಂದರ್ಭದಲ್ಲಿ ನಮ್ಮಲ್ಲಿರುವ ಅತ್ಯಂತ ನೀಚನನ್ನು ಕಂಡರೆ ಅವರು ಹೇಳುತ್ತಾರೆ " ಇವನಿಗೆ ಪರಲೋಕದ ಕುರಿತು ವಿಶ್ವಾಸವಿಲ್ಲ ಎಂದು ಭಾವಿಸುತ್ತದೆ ಎಂದು. ಹಲಾಲ್ ಆದ ಸಂಪತ್ತನ್ನು ಅವರಿಗೆ ನೀಡಿದರೂ ಅದು ನಮಗೆ ಕೇಡಾಗಬಹುದೇ ಎಂದು ಭಾವಿಸಿ ಅದರಿಂದ ಬಿಟ್ಟು ನಿಲ್ಲುವುದಾಗಿತ್ತು ಸ್ವಹಾಬಿಗಳ ಸ್ವಭಾವ. 

ಸ್ವಹಾಬಿಗಳೊಂದಿಗೆ ಹೆಗಲು ಕೊಟ್ಟು ಜೀವಿಸಿದ ಮಹಾತ್ಮರಾದ ಹಸನುಲ್ ಬಸ್ವರಿ ಹಾಗೂ ಅವರ ಕಾಲದಲ್ಲಿ ಜೀವಿಸಿದವರೂ ಸ್ವಹಾಬತ್ ನ ಜೀವನ ಶೈಲಿಯನ್ನು ಕಂಡು ಅದ್ಭುತಗೊಂಡ ಮಹಾತ್ಮರನ್ನಾಗಿದೆ ಮೇಲೆ ಓದಿದ್ದು. 70 ರಷ್ಟು ಬದ್ರ್ ಶುಹದಾಗಳನ್ನು ಪ್ರತ್ಯಕ್ಷವಾಗಿ ಕಂಡ ಹಸನುಲ್ ಬಸ್ವರಿರವರಿಗೆ ತನ್ನ ಕಾಲದ ಕುರಿತು ಇಷ್ಟೊಂದು ಅಳಲು ಇದ್ದರೆ ನಮ್ಮನ್ನು ಅವರು ಕಾಣುವುದಾದರೆ ಹೇಗೆ ತುಲನೆ ಮಾಡಬಹುದು..!? ಆದ್ದರಿಂದ ಈ ಸ್ವಹಾಬಿಗಳನ್ನು ಮಧ್ಯವರ್ತಿಯನ್ನಾಗಿಸಿ ವಿಜಯಕ್ಕೆ ಮಾರ್ಗವನ್ನು ಹುಡುಕುವುದಾದರೆ ನಮ್ಮ ಮುಂದಿನ ಅತ್ಯಂತ ಸುಲಭ ಮಾರ್ಗ ಅದಾಗಿದೆ.

ಮಹಾತ್ಮರುಗಳು ಹೇಳುವುದಾಗಿ ಕಾಣಬಹುದು "ಯಾರಾದರೂ ಬದ್ರ್ ರಕ್ತ ಸಾಕ್ಷಿಗಳೊಂದಿಗಿನ ಇಷ್ಟ ಕಾರಣದಿಂದ ಅವರ ಹೆಸರನ್ನು ಬರೆದು ತನ್ನ ಶರೀರದಲ್ಲೋ , ಮನೆಯಲ್ಲೋ ಇಟ್ಟರೆ ಆಂತರಿಕ ಹಾಗೂ ಬಾಹ್ಯವಾದ ಎಲ್ಲಾ ಪರೀಕ್ಷೆಗಳಿಂದ ಅಲ್ಲಾಹನು ಅವನನ್ನು ಸಂರಕ್ಷಿಸುವನು. ಅದಲ್ಲದೆ ಯಾವ ಉದ್ದೇಶವಿಟ್ಟು ಒಬ್ಬನು ಅಸ್ಮಾಉಲ್ ಬದ್ರ್ ಹೇಳಿದರೂ ಆತನಿಗೆ ಆ ಉದ್ದೇಶವು ಈಡೇರುವುದು. ಅದೇ ರೀತಿ ಯಾವುದೇ ರೋಗವಿರುವವರೂ 3, 7, 9 ದಿನಗಳಲ್ಲಿ ಎಡೆಮುರಿಯದೆ ಅಸ್ಮಾಉಲ್ ಬದ್ರ್ ಹೇಳಿದರೆ ಅದು ಪೂರ್ಣವಾಗಿ ಗುಣಮುಖವಾದದ್ದೂ ಅನುಭವದಲ್ಲಿದೆ. 

ನೀತಿ: ಬದ್ರ್ ಶುಹದಾಗಳು ತ್ಯಾಗವನ್ನು ಸಹಿಸಲು ಸನ್ನದ್ಧರಾದ ಕಾರಣದಿಂದ ಇಂದು ನಾವು ತಲೆಯೆತ್ತಿ ಅಭಿಮಾನದಿಂದ ಇಸ್ಲಾಮ್ ಧರ್ಮದ ಅನುಯಾಯಿಯೆಂದು ಹೇಳುವುದು. ಆದ್ದರಿಂದಲೇ ಲೋಕಾಂತ್ಯವರೆಗಿನ ಯಾವುದೇ ಒಬ್ಬ ಮುಸಲ್ಮಾನನೂ ಬದ್ರ್ ರಕ್ತ ಸಾಕ್ಷಿಗಳೊಂದಿಗೆ ಋಣಿಗಳಾಗಿದ್ದಾರೆ. ಬದ್ರ್ ರನ್ನೂ ಬದ್ರ್ ಶುಹದಾಗಳನ್ನೂ ಇನ್ನೂ ಹತ್ತಿರದಿಂದ ತಿಳಿಯಲೂ ಅವರ ಜೀವನ ಪರಿಸರವನ್ನು ನಮ್ಮ ಜೀವನಕ್ಕೆ ಅಳವಡಿಸಲೂ ಶ್ರಮವಿರಬೇಕು.

✍🏻 ಶಂಸುದ್ದೀನ್ ಅಹ್ಸನಿ ಬಳ್ಕುಂಜೆ


ಪ್ರಚಾರ:
NOOR-UL-FALAH ORGANIZATION

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್