ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು ಸಲಹೆಗಳು:


ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು ಸಲಹೆಗಳು:

1). ಧೂಮಪಾನ ಮಾಡಬೇಡಿ ಧೂಮಪಾನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ನೀವು ಹೆಚ್ಚು ಧೂಮಪಾನ ಮಾಡಿದಂತೆ ಕ್ಯಾನ್ಸರ್ ಮತ್ತಿತರ ದೀರ್ಘಕಾಲದ ಎದೆಗೆಮ್ಮು ಮತ್ತು ವಾತಶೋಥ ಹೊಂದಿರುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಧೂಮಪಾನ ಅತಿ ಕೆಟ್ಟದ್ದಾಗಿದ್ದು ಇದು ಕೇವಲ ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವಾಗ ಅವರ ಸುತ್ತಲಿರುವವರಿಗೂ ಇದು ಪರಿಣಾಮವನ್ನು ಬೀರುತ್ತದೆ
  2). ಸ್ವಚ್ಚವಾದ ಗಾಳಿ ಮುಖ್ಯ 155 ಮಿಲಿಯನ್‌‌ಗೂ ಹೆಚ್ಚು ಜನರು ವಾಯು ಮಾಲಿನ್ಯ ಅಧಿಕವಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ!. ವಾಯುಮಾಲಿನ್ಯದಿಂದ ಅಸ್ಥಮಾ ಅಥವಾ COPD ಮಾತ್ರವಲ್ಲ ಇದು ಮನುಷ್ಯನನ್ನು ಕೊಂದುಬಿಡುವಷ್ಟು ಕೆಟ್ಟ ಪರಿಣಾಮ ಬೀರುತ್ತದೆ.ನೀವು ಕಾಯಿದೆಗಳನ್ನು ಬೆಂಬಲಿಸುವುದರ ಮೂಲಕ ಪರಿಸರದ ಸ್ವಚ್ಚತೆಯನ್ನು ಕಾಪಾಡಲು ಸಹಕರಿಸಬೇಕು ಇದರಿಂದ ವಾಯುಮಾಲಿನ್ಯ ತಡೆಯಬಹುದು. ವಾಯುಮಾಲಿನ್ಯವನ್ನು ತಡೆಯಲು ಕಸವನ್ನು ಸುಡುವುದು,ಹೆಚ್ಚು ಎಲೆಕ್ಟ್ರಿಸಿಟಿ ಬಳಕೆ,ವಾಹನಗಳ ಅಧಿಕ ಚಲಾವಣೆ ಇವುಗಳನ್ನು ಮೊದಲು ತಡೆಯಬೇಕು.
  3). ಕೇವಲ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶ ಬಲಿಷ್ಠವಾಗಲಾರದು ಆದರೆ ವ್ಯಾಯಾಮ ಮಾಡುವುದರಿಂದ ಕೆಲವು ಸಮಸ್ಯೆಗಳಿಂದ ದೂರವಿರಬಹುದು. ನೀವು ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡುವುದರಿಂದ ಶ್ವಾಸಕೋಶ ಇನ್ನಿತರ ದೇಹದ ಅಂಗಗಳಿಗೆ ಅಗತ್ಯ ಆಮ್ಲಜನಕವನ್ನು ಪೂರೈಸುವಲ್ಲಿ ಸಹಾಯಕವಾಗುತ್ತದೆ.ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪ್ರತಿದಿನದ ವ್ಯಾಯಾಮ ಅತಿ ಅವಶ್ಯಕವಾಗಿದೆ.
   4). ಒಳಗಿನ ಗಾಳಿ ಉತ್ತಮವಾಗಿರಲಿ:ವಾಯುಮಾಲಿನ್ಯ ಕೇವಲ ಹೊರಗೆ ಮಾತ್ರವಲ್ಲ. ಮನೆಯ ಒಳಗೂ ಕೂಡ ವಾಯುಮಾಲಿನ್ಯ ಇರುತ್ತದೆ. ಉದಾಹರಣೆಗೆ ಸುಡುವ ಒಲೆ,ಕಟ್ಟಿಗೆ ಒಲೆಗಳು, ನಿರ್ಮಾಣ ಸಾಮಗ್ರಿಗಳು, ಕೆಲವು ಸಾಕುಪ್ರಾಣಿಗಳಿಂದ, ಏರ್ ಫ್ರೆಶ್ನರ್, ಕೆಲವು ಸುಗಂಧಭರಿತ ಮೇಣದ ಬತ್ತಿಗಳು ಇವುಗಳೆಲ್ಲ ವಾಯುಮಾಲಿನ್ಯಕ್ಕೆ ಅಸ್ತಮಾ ಹೆಚ್ಚಲು ಕಾರಣವಾಗಬಹುದು.ಇಂತಹ ಸಂದರ್ಭದಲ್ಲಿ ಹೊರಗಿನ ಗಾಳಿ ಸೂಕ್ತವಾಗಿ ಬರುವಂತೆ ಮಾಡುವುದು ಜೊತೆಗೆ ಏರ್ ಕ್ಲೀನರ್ ಬಳಸುವುದರಿಂದ ಆಮ್ಲಜನಕದ ಪ್ರಾಮಾಣವನ್ನು ಹೆಚ್ಚಿಸಬಹುದು.ಏರ್ ಕ್ಲೀನರ್ ಬೇಡದ ಕಣಗಳನ್ನು ನಾಶಮಾಡುತ್ತದೆ ಮತ್ತು ಇದು ಗ್ಯಾಸ್ ಉತ್ಪತ್ತಿ ಮಾಡುವುದಿಲ್ಲ ಇದರಿಂದ ವಾಯುಮಾಲಿನ್ಯವಾಗುವುದಿ 
   5). ಆರೋಗ್ಯಕರ ಆಹಾರವನ್ನು ಬಳಸಿ ಆಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳು ಶ್ವಾಸಕೋಶಕ್ಕೆ ಸಹಾಯಕ ಎನ್ನಲಾಗುತ್ತದೆ.೨೦೧೧ ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಹೂ ಕೋಸು, ಎಲೆ ಕೋಸು, ಬ್ರೋಕೊಲಿ ಇವುಗಳನ್ನು ಹೆಚ್ಚು ತಿಂದವರು ಕಡಿಮೆ ಬಲಸಿದವರಿಗಿಂತ ಹೆಚ್ಚು ಶ್ವಾಸಕೋಶದ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.ಹಸಿರು ಎಲೆ ಮತ್ತು ತರಕಾರಿಗಳು ಶ್ವಾಸಕೋಶದ ಅರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸೂಕ್ತ ಎನ್ನಲಾಗುತ್ತದೆ.

=============================
                         ಸಂಗ್ರಹ:
                  ಮನೆ ಮದ್ದುಗಳು
              ಸಂ: ✒️ಅಬೂರಿಫಾನ 
=============================
ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ
ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ.
اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.
=============================
✤𝙇𝙞𝙠𝙚 & 𝙎𝙝𝙖𝙧𝙚✤
✦𝙋𝙧𝙖𝙮 𝙛𝙤𝙧 𝙪𝙨 ✦
𝗔𝗥𝗨𝗥 𝗖𝗥𝗘𝗔𝗧𝗜𝗩𝗘
𝗡𝗢𝗢𝗥-𝗨𝗟-𝗙𝗔𝗟𝗔𝗛
💢💢💢💢💢💢

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್