ಖಲೀಫಾ ಅಳುತ್ತಿದ್ದಾರೆ..!


  ಖಲೀಫಾ ಅಳುತ್ತಿದ್ದಾರೆ..!

ಉಮರ್ ರಳಿಯಲ್ಲಾಹು ಅನ್ಹುರನ್ನು ಕಂಡರೆ ಪಿಶಾಚಿ ದಾರಿ ಬದಲಿಸಿ ನಡೆಯುತ್ತಿತ್ತು. ಸ್ವರ್ಗ ಪ್ರವೇಶ ಖಚಿತ ಎಂದು ಪ್ರವಾದಿ ﷺ ಪ್ರವಚಿಸಿ ಆಣೆ ಹಾಕಿ ಹೇಳಿರುವವರಲ್ಲಿ ಒಬ್ಬರು ಮಹಾತ್ಮರಾದ ಉಮರ್ ರಳಿಯಲ್ಲಾಹು ಅನ್ಹು ಆಗಿದ್ದಾರೆ.

'ನನ್ನ ನಂತರ ನೀವು ಸಿದ್ದೀಖ್ ರಳಿಯಲ್ಲಾಹು ಅನ್ಹುರನ್ನೂ ಉಮರ್ ರಳಿಯಲ್ಲಾಹು ಅನ್ಹುರನ್ನೂ ಹಿಂಬಾಲಿಸಿರಿ'. ಎಂದು ಪ್ರವಾದಿ ﷺ ಗ್ಯಾರಂಟಿ ನೀಡಿದ ನಾಯಕ.
ಇಸ್ಲಾಮಿಕ್ ರಿಪಬ್ಲಿಕ್‌ನ ನೀತಿಯ ಪ್ರತಿರೂಪವಾಗಿದ್ದರು ಉಮರ್ ರಳಿಯಲ್ಲಾಹು ಅನ್ಹು ಎಂಬ ನಿಷ್ಠಾವಂತ ಆಡಳಿತಗಾರ. ಮರಣವು ಮಹಾತ್ಮರನ್ನು ತಲುಪಿದ ಸಂದರ್ಭ. ಸುತ್ತಲೂ ಜನರು ನೆರೆದಿದ್ದಾರೆ. ಉಮರ್ ರಳಿಯಲ್ಲಾಹು ಅನ್ಹು ಅಳಲು ಪ್ರಾರಂಭಿಸಿದರು. 
'ಯಾಕಾಗಿ ಅಳುತ್ತಿರುವುದು...!' ನೆರೆದವರಲ್ಲೊಬ್ಬ ಕೇಳುತ್ತಾರೆ. ಉಮರ್ ಅಳುವಿನ ಕಾರಣ ಹೇಳುತ್ತಾರೆ; 'ನಾನೇನಾದರೂ ತಪ್ಪು ಮಾಡಿ ಅದನ್ನು ಅತ್ಯಂತ ಲಘುವಾಗಿ ಕಂಡು ಯಜಮಾನನಾದ ಅಲ್ಲಾಹು ಅದನ್ನು ಗಂಭೀರವಾದ ತಪ್ಪಾಗಿ ಪರಿಗಣಿಸಿದರೆ' ಎಂದು ಆಲೋಚಿಸಿ ಅಳುತ್ತಿದ್ದೇನೆ.

ನೀತಿ:ಸ್ವರ್ಗವು ಉಮರ್ ರಳಿಯಲ್ಲಾಹು ಅನ್ಹುರವರಿಗೆ ನಿಶ್ಚಯವಾಗಿದೆ. ಆದರೂ ಯಾತಕ್ಕಾಗಿ ಮಹಾತ್ಮರು ಅಳುತ್ತಿರುವುದು..?

ಸ್ವರ್ಗವಲ್ಲ ಅವರ ಗುರಿ. ಅಲ್ಲಾಹನ ಇಷ್ಟವಾಗಿದೆ. ನಾನವನೊಂದಿಗೆ ಅವನಿಗಿಷ್ಟವಿಲ್ಲದ್ದನ್ನು ಮಾಡಿದ್ದರೆ ಎಂಬುವುದನ್ನು ಅಲೋಚಿಸಿಯುಳ್ಳ ದುಃಖ. ಅಲ್ಲಾಹನು ನನ್ನ ಕುರಿತು ಏನು ಭಾವಿಸಿಯಾನು ಎಂಬ ಶಂಕೆ.
ಸ್ವರ್ಗವೆಂಬುವುದು ಸ್ನೇಹವು ನೀಡುವ ಸನ್ಮಾನವಾಗಿದೆ. ಆದರೆ ಅಲ್ಲಾಹನ ಪ್ರೇಮವಾಗಬೇಕು. ಪ್ರಣಯವಲ್ಲವೇ, ಪ್ರಣಯ ನೀಡುವ ಸನ್ಮಾನಗಳಲ್ಲಿ ಅತ್ಯಂತ ದೊಡ್ಡದು..!

✍🏻 ಶಂಸುದ್ದೀನ್ ಅಹ್ಸನಿ ಬಳ್ಕುಂಜೆ

ಪ್ರಚಾರ:
NOOR-UL-FALAH ORGANIZATION

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್