ತುಳಸಿ, (Myrtle, Basil, ريحان)
ತುಳಸಿ, (Myrtle, Basil, ريحان)
✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ
▪ ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹನು ಈ ತುಳಸಿಯ ಬಗ್ಗೆ ಉಲ್ಲೇಖಿಸಿದ್ದಾನೆ. "ಶಾಶ್ವತ ಭವನವಾದ ಸ್ವರ್ಗದಲ್ಲಿ ತುಳಸಿಯಿದೆ. ಸ್ವರ್ಗ ನಿವಾಸಿಗಳಿಗೆ ಅದರ ವಾಸನೆಯ ಸಹಾನುಭೂತಿಯೂ ಅಲ್ಲಿದೆ" ಎಂದು ಅಲ್ಲಾಹನು ಹೇಳಿರುವುದಾದರೆ ಅದರ ಮಹತ್ವದ ಬಗ್ಗೆ ಅರಿವಾಗುತ್ತದೆ.
▪ "ಮುತ್ತು, ಮಾಣಿಕ್ಯದಿಂದ ಅಲಂಕರಿಸಿದ ಪ್ರಕಾಶಭರಿತ ಸ್ವರ್ಗವು ತುಳಸಿಯ ವಾಸನೆಯಿಂದ ಘಮಘಮಿಸುತ್ತಿದೆ" ಎಂದು ಇಬ್‌ನ್ ಮಾಜಃ ವರದಿ ಮಾಡಿದ ಒಂದು ಹದೀಸಿನಲ್ಲಿದೆ. ಅಂತೆಯೇ "ಒಬ್ಬನಿಗೆ ಯಾರಾದರೂ ತುಳಸಿಯನ್ನು ಹದಿಯಯಾಗಿ ಕೊಟ್ಟರೆ ಅದನ್ನು ತಿರಸ್ಕರಿಸಬಾರದು" ಎಂದು ಬೇರೊಂದು ಹದೀಸಿನಲ್ಲಿ ವರದಿಯಾಗಿದೆ.
▪ ತುಳಸಿಯ ವಾಸನೆಯನ್ನು ಆಘ್ರಾಣಿಸುವುದರಿಂದ ಮೂಲವ್ಯಾಧಿ ಖಾಯಿಲೆಗೆ ಫಲ ಸಿಗುವುದೆಂದು ಇಬ್ನ್ ಸೀನಾರಂತಹಾ ವೈದ್ಯಲೋಕದ ಪಂಡಿತರು ಹೇಳಿರುತ್ತಾರೆ. ಅದರ ಎಲೆಯನ್ನು ಜಜ್ಜಿ ಗುಲಾಬಿ ನೀರಿನಲ್ಲಿ ಮಿಶ್ರಣ ಮಾಡಿ ಮೂಲವ್ಯಾಧಿಗೆ ಸವರಿದರೆ ಬಹಳ ಫಲ ಕೊಡುತ್ತದೆ.
▪ ಇದರ ಬೀಜವನ್ನು ಒಂಟೆಯ ರಕ್ತದಲ್ಲಿ ಮಿಶ್ರಣ ಮಾಡಿ ಕಂಕುಳಿಗೆ ಹಚ್ಚಿ ಎರಡು ತಾಸು ಕಳೆದು ತೊಳೆದರೆ ಅಲ್ಲಿನ ಕೆಟ್ಟ ವಾಸನೆ ಮಾಯವಾಗುತ್ತದೆ.
▪ ಇದರ ವಾಸನೆಯನ್ನು ಆಘ್ರಾಣಿಸುವುದರಿಂದ ತಲೆ ಸುತ್ತುವ ತೊಂದರೆ, ಮೂಗಿನಲ್ಲಿ ರಕ್ತ ಬರುವುದು ಇತ್ಯಾದಿ ತೊಂದರೆಗಳು ನಿವಾರಣೆಯಾಗುತ್ತವೆ.
▪ ರೈಹಾನನ್ನು ಮನೆ ಪರಿಸರದಲ್ಲಿ ನೆಡುವುದರಿಂದ ಹಲವಾರು ರೋಗಗಳಿಗೆ ಫಲ ಸಿಗುತ್ತವೆ. ಇದರ ಪರಿಮಳವನ್ನು ಆಘ್ರಾಣಿಸುವುದರಿಂದ ಶ್ವಾಸಕೋಶದ ಕಶ್ಮಲಗಳು ಹೊರಬರುತ್ತವೆ. ಅದನ್ನು ಜಜ್ಜಿ ಹಣೆಗೆ ಸವರಿದರೆ ತಲೆನೋವು ಗುಣವಾಗುತ್ತದೆ. ನೀರಿನಲ್ಲಿ ಹಾಕಿ ಆ ನೀರನ್ನು ಕುಡಿದರೆ ಮೂಗಿನ ತಟಸ್ಥ ನಿವಾರಣೆಯಾಗುತ್ತದೆ. ಹಳದಿಜ್ವರ ಗುಣವಾಗುತ್ತದೆ. ಗಾಯವಾದಲ್ಲಿ ಇದನ್ನು ಹುಡಿಮಾಡಿ ಹಾಕಿದರೆ ಗಾಯ ಗುಣವಾಗುತ್ತದೆ. ಶರೀರಕ್ಕೆ ಸವರಿ ಸ್ನಾನ ಮಾಡಿದರೆ ಚರ್ಮವು ನಯವಾಗಿ ಕಾಂತಿ ಬರುತ್ತದೆ. ಕೊಳೆ ಹೋಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಶರೀರವು ಯಾವಾಗಲೂ ಪರಿಮಳಪೂರಿತವಾಗಿರುತ್ತದೆ. ಇದರ ಎಲೆಯನ್ನು ಜಜ್ಜಿ ಸುರ್ಕದಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ. ಇದರ ಒಣಗಿಸಿದ ಎಲೆಯನ್ನು ಪುಡಿಮಾಡಿ ವಾಸಿಯಾಗದ ವೃಣಗಳ ಮೇಲೆ ಹಾಕಿದರೆ ಒಣಗುತ್ತದೆ. ಬಲವಿಲ್ಲದ ಕೈಕಾಲುಗಳಿಗೆ ಹಚ್ಚಿದರೆ ಬಲವಾಗುತ್ತದೆ. ಉಗುರು ಸುತ್ತಿಗೆ ಕಟ್ಟಿದರೆ ಗುಣವಾಗುತ್ತದೆ.
▪ ಸಾಬೂನಿನಂತೆ ದಿನಾಲೂ ಸ್ನಾನ ಮಾಡುವಾಗ ಇದನ್ನು ಬಳಸಿದರೆ ಬೆವರಿನ ವಾಸನೆ ಸಂಪೂರ್ಣವಾಗಿ ಇಲ್ಲದಾಗುತ್ತದೆ. ಕಂಕುಳಿನ ಕಪ್ಪು ಬಣ್ಣ ಹೋಗುತ್ತದೆ. ಕೆಟ್ಟ ವಾಸನೆ ಕಡಿಮೆಯಾಗುತ್ತದೆ. ತಲೆಹೊಟ್ಟು (Dandruff) ಸಂಪೂರ್ಣವಾಗಿ ಮಾಯವಾಗುತ್ತದೆ. ತಲೆ ಹುಣ್ಣು ವಾಸಿಯಾಗುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ. ಮನಸ್ಸಿಗೆ ಉಲ್ಲಾಸವಾಗುತ್ತದೆ. ಸುಖ ನಿದ್ರೆ ಸಿಗುತ್ತದೆ.
▪️ ತುಳಸಿಯ ಬೀಜವನ್ನು ಬೇಯಿಸಿ ಆ ನೀರನ್ನು ಸೇವಿಸುವುದರಿಂದ ಹೊಟ್ಟೆನೋವು, ಆಮಶಂಕೆ ಮುಂತಾದ ಖಾಯಿಲೆಗಳು ವಾಸಿಯಾಗುತ್ತವೆ. ಅತಿಸಾರಕ್ಕೆ ಕಡಿವಾಣ ಹಾಕುತ್ತದೆ. ಕೆಮ್ಮು ನಿಲ್ಲುತ್ತದೆ. ಹೃದಯ ಮತ್ತು ಶ್ವಾಸಕೋಶದ ತೊಂದರೆಗಳು ನಿವಾರಣೆಯಾಗುತ್ತವೆ. ಮೂತ್ರ ಹೆಚ್ಚಾಗುತ್ತದೆ. ಮೂತ್ರಕೋಶದ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಅನ್ನಾಶಯಕ್ಕೆ ಬಲ ಕೊಡುತ್ತದೆ. ಮಾತ್ರವಲ್ಲ ಅದನ್ನು ಜಜ್ಜಿ ಚೇಳು ಮತ್ತು ಜೇಡ ಕಡಿದಲ್ಲಿಗೆ ಹಚ್ಚಿದರೆ ಫಲ ಸಿಗುತ್ತದೆ. ಆದರೆ ಯಾವತ್ತೂ ತುಳಸಿಯ ಬೇರಿನಿಂದ ಹಲ್ಲು ಶುಚಿ ಮಾಡಬಾರದು. ಅದು ಹಲ್ಲಿಗೆ ತೊಂದರೆಯಾಗುವುದು.
▪ ಇದನ್ನು ಬೇಯಿಸಿದ ನೀರಿನಲ್ಲಿ ಕುಳಿತರೆ ಗುಪ್ತಾಂಗಗಳ ಸೋಂಕುಗಳು ಸಾಯುತ್ತವೆ. ಹಾಗೆಯೇ ಅಪಘಾತದಲ್ಲಿ ಗಾಯವಾಗಿ ಎಲುಬು ನೋವು ಮತ್ತು ಸಂಧಿನೋವು ಇರುವುದಾದರೆ, ಆ ನೀರಿನಿಂದ ತಾಪ ಕೊಟ್ಟರೆ ಒಳ್ಳೆಯ ಫಲ ಸಿಗುತ್ತದೆ.
▪ ತುಳಸಿಯ ಎಲೆಯನ್ನು ಒಣಗಿಸಿ ಪುಡಿಮಾಡಿ ನಶ್ಯ ಸೇದುವಂತೆ ಸೇದಿದರೆ ಕೆಮ್ಮು, ನೆಗಡಿ, ಶೀತ ವಾಸಿಯಾಗುತ್ತವೆ. ರಾತ್ರಿ ನಿದ್ರೆ ಕಡಿಮೆ ಇರುವ ಮಕ್ಕಳಿಗೆ ಇದರ ತೈಲ ಬಳಸಿದರೆ ಸುಖ ನಿದ್ರೆ ಸಿಗುತ್ತದೆ.
▪ ನಿರಂತರ ಶೂ (ಪಾದರಕ್ಷೆ) ಮತ್ತು ಕಾಲುಕವಚ ಧರಿಸುವ ಕಾರಣದಿಂದ ಕಾಲು ಬೆರಳುಗಳ ಎಡೆಯಲ್ಲಿ ಸೋಂಕು ಇರುವುದಾದರೆ ತುಳಸಿಯನ್ನು ಜಜ್ಜಿ ಅಲ್ಲಿಗೆ ಹಚ್ಚಿ ಸ್ವಲ್ಪ ಕಳೆದು ತೊಳೆದರೆ, ಒಳ್ಳೆಯ ಫಲ ಸಿಗುತ್ತದೆ.
▪ ತುಳಸಿಯ ಎಲೆಯನ್ನು ಹುಡಿಮಾಡಿ ನೀರು ಮತ್ತು ಝೈತೂನ್ ತೈಲ ಮಿಶ್ರಣ ಮಾಡಿ ಆ ಜಲಪಿಷ್ಠವನ್ನು ಚರ್ಮ ಸಂಬಂಧವಾದ ಎಲ್ಲಾ ವೃಣ, ಕಜ್ಜಿ, ಹುಣ್ಣುಗಳಿಗೆ ಸವರಿದರೆ ಗುಣವಾಗುತ್ತವೆ.
✍🏻ಸಂಗ್ರಹ : ಇಮಾಮ್ ಖಝ್‌ವೀನಿಯ ಅಜಾಯಿಬುಲ್ ಮಖ್‌ಲೂಖಾತ್, ಇಮಾಮ್ ಶಿಹಾಬುದ್ದೀನ್ ಅಲ್ ಉಮರಿಯ ಮಸಾಲಿಕುಲ್ ಅಬ್‌ಸ್ವಾರ್ತ್ತು ಇಮಾಮ್ ಬಿನ್ ಖಯ್ಯಿಮ್ ಅಲ್ ಜವ್‌ಝಿಯ ಅತ್ತಿಬ್ಬುನ್ನಬವೀ ಎಂಬ ಗ್ರಂಥಗಳಿಂದ.
NOORUL FALAH ISLAMIC ORGANISATION
Comments
Post a Comment