ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 136

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 136

قُولُوٓا۟ ءَامَنَّا بِٱللَّهِ وَمَآ أُنزِلَ إِلَيْنَا وَمَآ أُنزِلَ إِلَىٰٓ إِبْرَٰهِۦمَ وَإِسْمَٰعِيلَ وَإِسْحَٰقَ وَيَعْقُوبَ وَٱلْأَسْبَاطِ وَمَآ أُوتِىَ مُوسَىٰ وَعِيسَىٰ وَمَآ أُوتِىَ ٱلنَّبِيُّونَ مِن رَّبِّهِمْ لَا نُفَرِّقُ بَيْنَ أَحَدٍۢ مِّنْهُمْ وَنَحْنُ لَهُۥ مُسْلِمُونَ

ಅರ್ಥ:⤵️
▪️ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದುದರಲ್ಲಿ, ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಖ್, ಯಅ್‌ಖೂಬ್ ಹಾಗೂ ಅವರ ವಂಶ ಪರಂಪರೆಯವರಿಗೆ ಅವತೀರ್ಣವಾದುದರಲ್ಲಿ, ಮೂಸಾ, ಈಸಾರವರಿಗೂ ಮತ್ತಿತರ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತಿರುವ ಆದರ್ಶಗಳಲ್ಲಿ ನಾವು ವಿಶ್ವಾಸವಿಟ್ಟಿರುವೆವು, ಪ್ರವಾದಿಗಳ ಪೈಕಿ ಯಾರೊಬ್ಬರಿಗೂ ನಾವು ಭೇದ ಬಗೆಯುವುದಿಲ್ಲ⁷⁰. ನಾವು ಅಲ್ಲಾಹನ ಆದೇಶಕ್ಕೆ ಬದ್ಧರಾಗಿದ್ದೇವೆ’ ಎಂದು ಘೋಷಿಸಿರಿ.

ವಿವರಣೆ:⤵️
70.ಯಅ್‌ಖೂಬ್‍ರ ಸಂತತಿಗಳು ಎಂಬ ಪ್ರಸ್ತಾಪದಲ್ಲಿರುವ ‘ಅಸ್ಬಾತ್’ ಎಂಬ ಪದದ ಉದ್ದೇಶ ಪ್ರವಾದಿ ಯಅ್‌ಖೂಬರ ಸಂತಾನ ಪರಂಪರೆಯಲ್ಲಿ ಸೇರಿದ ಗೋತ್ರಗಳು. ಅವರ ನಡುವೆ ನಾವು ಬೇಧ ಬಗೆಯುವುದಿಲ್ಲ ಎಂದರೆ ಕೆಲವರಲ್ಲಿ ವಿಶ್ವಾಸವಿರಿಸಿಕೊಂಡು ಇನ್ನು ಕೆಲವರನ್ನು ನಿಷೇಧಿಸುವುದಿಲ್ಲ ಎಂದರ್ಥ. ಪರಂತು ಉತೃಷ್ಟ ಗುಣಮಹಾತ್ಮೆಗಳಲ್ಲಿ ಎಲ್ಲರೂ ಸಮಾನರು ಎಂದಲ್ಲ. ಮೂಸಾ(ಅ.ಸ) ಮತ್ತು ಈಸಾ(ಅ.ಸ)ರಿಗೆ ಲಭ್ಯವಾದದ್ದು ಎಂದರೆ ಅವರಿಗೆ ಅವತೀರ್ಣಗೊಂಡ ತೌರಾತ್ ಮತ್ತು ಇಂಜೀಲ್. ಅವುಗಳ ಯಥಾವತ್ ಆಶಯವನ್ನು ನಾವು ಅಂಗೀಕರಿಸುತ್ತೇವೆ ಎಂದರ್ಥ. ಪರಂತು ಜೂದ ಕ್ರೈಸ್ತರು ಇಂದು ಅವಲಂಭಿಸುತ್ತಿರುವ ಸತ್ಯವೇದ ಪುಸ್ತಕಗಳಲ್ಲ. ಏಕೆಂದರೆ ಅವು ಪ್ರವಾದಿ ಈಸಾ(ಅ.ಸ)ರನ್ನು ಆಕಾಶಾರೋಹಣ ಮಾಡಿಸಿ ಎರಡು ಶತಮಾನಗಳ ನಂತರ ರಚಿತವಾದ ಗ್ರಂಥಗಳಾಗಿವೆ.


   ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್