ಮರಣ:
ಮರಣ:
ಮರಣ ಎಂಬುದು ನಿರಾಕರಿಸಲಾಗದ ವಾಸ್ತವಿಕತೆಯಾಗಿದೆ. ಎಲ್ಲರೂ ಮರಣದ ರುಚಿಯನ್ನು ಅನುಭವಿಸುವರು. ಜನಿಸಿದ ಪ್ರತೀ ಜೀವಕ್ಕೂ ಮರಣವಿದೆ. ಮರಣವನ್ನು ಬಯಸಿದರೂ ಬಯಸದಿದ್ದರೂ ಅದು ಬಂದೇ ಬರುತ್ತದೆ. ಅದು ಯಾರ ಅನುಮತಿಗೂ ಕಾಯುವುದಿಲ್ಲ. ಮರಣವು ಬರುವಾಗ “ನನಗೀಗ ಬರಲು ಪುರುಸೊತ್ತಿಲ್ಲ. ಮುಂದಿನ ಬಾರಿ ನೋಡುವಾ” ಎಂದು ಸಾಗ ಹಾಕಿ ಕಳುಹಿಸಲು ಯಾವುದಾದರೂ ಆತ್ಮಕ್ಕೆ ಸಾಧ್ಯವಿದೆಯೇ.?
ಅಲ್ಲಾಹನು ಪ್ರತಿಯೊಂದು ಆತ್ಮಕ್ಕೂ ಒಂದು ಅವಧಿಯನ್ನು ನಿಶ್ಚಯಿಸಿದ್ದಾನೆ. ಆ ಸಂದರ್ಭ ಬಂದೊದಗಿದಾಗ ಮರಣವು ಆವರಿಸಿಯೇ ತೀರುವುದು. ನಾವು ಯಾವ ಸ್ಥಿತಿಯಲ್ಲಿದ್ದರೂ ಸರಿ. ಅಲ್ಲಾಹನು ಹೇಳುತ್ತಾನೆ.
“ಪ್ರತಿಯೊಂದು ಜನಾಂಗಕ್ಕೆ ಒಂದು ಕಾಲಾವಧಿ ನಿಶ್ಚಿತವಿದೆ. ಅದರ ಕಾಲಾವಧಿಯು ಮುಗಿದಾಗ ಒಂದು ಕ್ಷಣ ಹಿಂದೆ ಅಥವಾ ಮುಂದೆ ಆಗುವುದಿಲ್ಲ.”
(ಅಅ್‌ರಾಫ್-34)
ಎಷ್ಟೇ ದೊಡ್ಡ ಅಕ್ರಮಿಯಾದರೂ ಮರಣದ ಮುಂದೆ ಕುಬ್ಜನಾಗುತ್ತಾನೆ. ತನ್ನ ಶಕ್ತಿ, ಸಾಮರ್ಥ್ಯದಿಂದ ಜಗತ್ತಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿದವರೂ ಅಕ್ರಮಗಳನ್ನೆಸಗಿದವರೂ ಮರಣ ಸಂಭವಿಸಿದರೆ ನಿಶ್ಚಲರಾಗುತ್ತಾರೆ. ದಷ್ಟ ಪುಷ್ಟವಾದ ಅಂಗಸೌಷ್ಠ್ಯವವಿದ್ದರೂ ಮಣ್ಣಿನ ಹುಳಗಳಿಗೆ ಆಹುತಿಯಾಗುತ್ತಾರೆ. ಅಲ್ಲಾಹನು ಮಾಡಲು ಹೇಳಿರುವ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿರುವ ಕೆಲಸಗಳನ್ನು ಮರಣಕ್ಕಿಂತ ಮುಂಚೆಯೇ ಮಾಡಬೇಕು. ಮರಣ ಸಮೀಪಿಸುವಾಗ ನನಗೆ ಸ್ವಲ್ಪ ಒಳಿತುಗಳನ್ನು ಮಾಡಲಿಕ್ಕಿದೆ ಎಂದು ಮರಣ ದೊಂದಿಗೆ ಹೇಳಲು ಸಾಧ್ಯವೇ.? ಇನ್ನು ಹಾಗೆ ಹೇಳಿದರೆ ಮರಣವು ಮರಳಿ ಹೋಗಬಹುದೇ.?
ಮರಣದ ಸ್ಮರಣೆಯು ಓರ್ವನಲ್ಲಿ ಸದಾ ನೆಲೆಸಿದ್ದರೆ ಅವನ ಕರ್ಮಗಳು ಒಳಿತಿನಿಂದ ಕೂಡಿರುತ್ತವೆ. ಅವುಗಳು ಉತ್ತಮ ಪ್ರತಿಫಲಕ್ಕೆ ಅರ್ಹವಾದ ಕರ್ಮಗಳಾಗಿ ಮಾರ್ಪಾಡುತ್ತವೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,
ಸುಖಭೋಗಗಳ ಹಂತಕನಾದ ಮರಣವನ್ನು ನೀವು ಸದಾ ಸ್ಮರಿಸುತ್ತಿರಬೇಕು. ಸಂಕಷ್ಟದ ಸಂದರ್ಭದಲ್ಲಿ ಓರ್ವನು ಮರಣವನ್ನು ಸ್ಮರಿಸಿದರೆ ಜೀವನವು ಅವನಿಗೆ ವಿಶಾಲವಾಗಿ ತೋರುವುದು. ಸುಭಿಕ್ಷೆಯ ಸಂದರ್ಭದಲ್ಲಿ ಮರಣವನ್ನು ಸ್ಮರಿಸಿದರೆ ಜೀವನವು ಅವನಿಗೆ ಇಕ್ಕಟ್ಟಾಗಿ ತೋರುವುದು.”
ಮರಣದ ಚಿಂತೆಯು ಮನಸ್ಸಿಗೆ ಬಂದರೆ ಅವನು ಸ್ವಂತ ಅಸ್ತಿತ್ವದ ಕುರಿತು ಪ್ರಜ್ಞಾವಂತನಾಗುತ್ತಾನೆ.
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment