ಕ್ಷಮೆ ಕೇಳುತ್ತಿರಬೇಕು:
ಕ್ಷಮೆ ಕೇಳುತ್ತಿರಬೇಕು:
ನಮ್ಮಲ್ಲಿ ತಪ್ಪು ಸಂಭವಿಸುವುದು ಸಹಜವಾಗಿದೆ. ಮನುಷ್ಯನಾದ ಮೇಲೆ ತಪ್ಪು ಸಂಭವಿಸಲೇಬೇಕು. ಕೆಲವು ತಪ್ಪುಗಳು ವೈಯಕ್ತಿಕವಾದರೆ ಇನ್ನು ಕೆಲವು ತಪ್ಪುಗಳು ಇತರರಿಗೆ ದೋಷ ಉಂಟು ಮಾಡುವಂಥವುಗಳಾಗಿವೆ. ಇತರರಿಗೆ ನಮ್ಮಿಂದ ಯಾವುದೇ ತಪ್ಪು ಸಂಭವಿಸಿದರೆ ಅವರೊಂದಿಗೆ ಕ್ಷಮೆ ಕೇಳಬೇಕು. ಅದು ಎಷ್ಟು ಸಣ್ಣದಾದರೂ ಸರಿ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,
“ಆದಮರ ಎಲ್ಲಾ ಸಂತತಿಗಳು ತಪ್ಪೆಸಗುವವರಾಗಿದ್ದಾರೆ. ಅವರಲ್ಲಿ ಅತ್ಯುತ್ತಮನು ಪಶ್ಚಾತ್ತಾಪ ಪಡುವವನಗಿದ್ದಾನೆ.”
ನಾವು ಕ್ಷಮೆ ಕೇಳುವಾಗ ಅವರಿಗೆ ನಮ್ಮ ಮೇಲೆ ಗೌರವ ಮೂಡುತ್ತದೆ. ಇದರಿಂದಾಗಿ ನಮ್ಮ ಮತ್ತು ಅವರ ಮಧ್ಯೆ ಬಾಂಧವ್ಯ ಉಂಟಾಗುತ್ತದೆ.
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment