ವಸ್ತ್ರಧಾರಣೆ ಸರಳ ಮತ್ತು ಶುದ್ಧವಾಗಿರಬೇಕು:
ವಸ್ತ್ರಧಾರಣೆ ಸರಳ ಮತ್ತು ಶುದ್ಧವಾಗಿರಬೇಕು:
ಓರ್ವನ ವಸ್ತ್ರಧಾರಣೆಯು ಜನರು ಅವನನ್ನು ನೋಡುವ ದೃಷ್ಟಿಕೋನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಸರಳವೂ ಶುಭ್ರವೂ ಆದ ವಸ್ತ್ರ ಧರಿಸಿದ ಓರ್ವ ವ್ಯಕ್ತಿ ಏನಾದರೂ ಹೇಳುತ್ತಾನೆಂದಾದರೆ ಅದನ್ನು ಆಲಿಸಲು ಜನರಿರುತ್ತಾರೆ. ಅವನ ಮಾತಿಗೆ ಮನ್ನಣೆ ಲಭಿಸುತ್ತದೆ. ಜನರು ಅಂಥವರೊಂದಿಗೆ ಸಹವಾಸ ಬೆಳೆಸಲು ಬಯಸುತ್ತಾರೆ. ಶುದ್ಧಿ ಮತ್ತು ಸರಳತೆಗೆ ಇಸ್ಲಾಮ್ ಮಹತ್ವ ನೀಡಿದೆ. ಶುದ್ಧಿಯು ವಿಶ್ವಾಸದ ಅರ್ಧಾಂಶವಾಗಿದೆ.
ಈ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡಿರುವವನು ಖಂಡಿತವಾಗಿಯೂ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ಜನರ ವಧ್ಯೆ ಅಂತಹ ವ್ಯಕ್ತಿಗಳ ಪದವಿಯು ಉನ್ನತಿಗೇರಿರುತ್ತದೆ. ಆದ್ದರಿಂದ ನಾವು ಈ ಗುಣಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೈಗೂಡಿಸಿಕೊಳ್ಳಬೇಕು.
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment