ತಸ್‌ಬೀಹ್ ನಮಾಝ್
ತಸ್‌ಬೀಹ್ ನಮಾಝ್
ಇದು ಒಂಟಿಯಾಗಿ ನಿರ್ವಹಿಸಲ್ಪಡುವ ನಮಾಝ್ ಗಳ ಸಾಲಿಗೆ ಸೇರಿದೆ. ಈ ನಮಾಝಿಗೆ ಬಹಳಷ್ಟು ಸ್ರೆಷ್ಠತೆಯಿದೆ.
ಸಾಧ್ಯವಾದವರು ಈ ನಮಾಝನ್ನು ಪ್ರತಿ ದಿನವೂ ನಿರ್ವಹಿಸಬೇಕು. ಇಲ್ಲವೇ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕೊಮ್ಮೆ ಈ ರೀತಿಯಲ್ಲಾದರು ನಿರ್ವಹಿಸಬೇಕು.
ಈ ನಮಾಝ್ ನ ಅರಿತ ಬಳಿಕವೂ ಇದನ್ನು ತೊರೆಯುವವನು ಧರ್ಮ ಶ್ರದ್ಧೆಯಿಲ್ಲದ ಉದಾಸೀನನಾಗಿರುವವನು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ...
ತಸ್ ಬೀಹ್ ನಮಾಝ್ ನಾಲ್ಕು ರಕ್ ಅತ್. ಹಗಲು ನಿರ್ವಹಿಸುವುದಾದರೆ ನಾಲ್ಕು ರಕ್ ಅತ್ ಗಳನ್ನು ಜೊತೆಯಾಗಿ ಒಂದೇ ಸಲಾಮಿನಲ್ಲಿ ಹಾಗೂ ರಾತ್ರಿ ನಿರ್ವಹಿಸುವುದಾದರೆ ಎರಡು ಸಲಾಂಗಳಲ್ಲಿ ತಲಾ ಎರಡು ರಕ್ ಅತ್ ಗಳನ್ನು ನಿರ್ವಹಿಸುವುದು ನಮಾಝ್ ನ ಉತ್ತಮ ಕ್ರಮವಾಗಿದೆ...
ತಸ್ ಬೀಹ್ ನಮಾಝ್ 4 ರಕಅತ್ 300 ತಸ್ ಬೀಹ್ ಗಳು
ತಸ್ ಬೀಹ್ ನಮಾಝ್ ನ ಕ್ರಮ
" ತಸ್ಬೀಹ್ ನಮಾಝ್ ಎರಡು ರಕಅತ್ ಅಲ್ಲಾಹನಿಗಾಗಿ ನಾನು ನಿರ್ವಹಿಸುವೆನು " (ನಾಲ್ಕು ರಕಅತ್ ಗಳನ್ನು ಒಟ್ಟಿಗೆ ನಿರ್ವಹಿಸುವುದಾದರೆ ನಾಲ್ಕು ರಕಅತ್ ಎಂದು ನಿಯ್ಯತ್ ಮಾಡಬೇಕು) ಎಂದು ನಿಯ್ಯತ್ ಮಾಡಿ ತಕ್ಬೀರತುಲ್ ಇಹ್ರಾಂ ಹೇಳಿದ ಬಳಿಕ ದುಆಉಲ್ ಇಫ್ತಿತಾಹ್ (ವಜ್ಜಹ್ತು), ಸೂರತುಲ್ ಫಾತಿಹ, ಸೂರತುತ್ತಕಾಸುರ್ (ಅಲ್ ಹಾಕು ಮುತ್ತಕಾಸುರ್), ಇವುಗಳನ್ನು ಕ್ರಮವಾಗಿ ಓದಬೇಕು.
ಆ ಬಳಿಕ
سُبْحَانَ الْلَّهِ، وَالْحَمْدُ لِلَّهِ، وَلَا إِلَهَ إِلَّا الْلَّهُ، وَالْلَّهُ أَكْبَر
(ಸುಬ್ ಹಾನಲ್ಲಾಹಿ ವಲ್ ಹಂದುಲಿಲ್ಲಾಹ್ ವ ಲಾಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್)-15
ರುಕೂಅ್ ನಲ್ಲಿ -10
ಇಅ್ತಿದಾಲಿನಲ್ಲಿ -10
ಸುಜೂದ್ ನಲ್ಲಿ- 10
ಸುಜೂದ್ ಮದ್ಯದ ಕೂರುವಿಕೆಯಲ್ಲಿ -10
ಇಸ್ತಿರಾಹತ್ತಿನಲ್ಲಿ -10
ಅತ್ತಹಿಯ್ಯಾತ್ ಓದುವುದಕ್ಕೆ ಮುಂಚಿತವಾಗಿ -10
ಹೀಗೆ ಒಂದು ರಕ ಅತಿನಲ್ಲಿ *75 ತಸ್ಬೀಹ್ ಗಳು* ಪೂರ್ಣವಾಗುತ್ತದೆ.
ಯಾವುದಾದರೂ ತಸ್ ಬೀಹ್ ಬಿಟ್ಟು ಹೋದರೆ ನಿಲ್ಲುವಿಕೆ ಅಥವಾ ಅತ್ತಹಿಯ್ಯಾತಿನಲ್ಲಿ ಸೇರಿಸಿ ಹೇಳಬಹುದು.
ಇದೇ ರೀತಿ ನಂತರದ ಎಲ್ಲಾ ರಕಅತ್ ಗಳಲ್ಲೂ ಮಾಡಬೇಕು.
ಆದರೆ ಒಂದನೇ ರಕಅತಿನಿಂದ ಎದ್ದೇಳುವಾಗ ಕುಳಿತು ಹೇಳುವ 10 ತಸ್ ಬೀಹ್ ಗಳನ್ನು ಎರಡನೇ ರಕಅತಿನಲ್ಲಿ ಅತ್ತಹಿಯ್ಯಾತ್ ಓದುವುದಕ್ಕೆ ಮುಂಚೆ ಹೇಳಬೇಕು. ಎರಡೆರಡು ರಕಅತ್ ಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದಾದರೆ ಎರಡನೇ ರಕಅತಿನಲ್ಲಿ ಅತ್ತ ಹಿಯ್ಯಾತ್ ಓದಿದ ಬಳಿಕ ಸಲಾಂ ಹೇಳಿ ಪುನಃ ನಿಯ್ಯತ್ ಮಾಡಿ ಇದೇ ರೀತಿ ಎರಡು ರಕಅತ್ ನಿರ್ವಹಿಸಬೇಕು.
ಹೀಗೆ 4 ರಕಅತ್ ಗಳಲ್ಲಿ 300 ತಸ್ ಬೀಹ್ ಗಳು ಪೂರ್ಣವಾಗುತ್ತದೆ.
°°°°°°°°°°°°°°°°°°°°°°°°°°°°°°
ಪಾರಾಯಣ ಮಾಡಬೇಕಾದ ಸೂರತ್ ಗಳು
ಒಂದನೇ ರಕಅತಿನಲ್ಲಿ
بِسْمِ اللَّهِ الرَّحْمَنِ الرَّحِيمِ
أَلْهَاكُمُ التَّكَاثُرُ (1) حَتَّى زُرْتُمُ الْمَقَابِرَ (2) كَلَّا سَوْفَ تَعْلَمُونَ (3) ثُمَّ كَلَّا سَوْفَ تَعْلَمُونَ (4) كَلَّا لَوْ تَعْلَمُونَ عِلْمَ الْيَقِينِ (5) لَتَرَوُنَّ الْجَحِيمَ (6) ثُمَّ لَتَرَوُنَّهَا عَيْنَ الْيَقِينِ (7) ثُمَّ لَتُسْأَلُنَّ يَوْمَئِذٍ عَنِ النَّعِيمِ (8)
••••••••••••••••••••••••••••••••••
ಎರಡನೇ ರಕಅತಿನಲ್ಲಿ
بِسْمِ اللّهِ الرَّحْمَنِ الرَّحِيمِ
وَالْعَصْرِ ﴿١﴾ إِنَّ الْإِنسَانَ لَفِي خُسْرٍ ﴿٢﴾ إِلَّا الَّذِينَ آمَنُوا وَعَمِلُوا الصَّالِحَاتِ وَتَوَاصَوْا بِالْحَقِّ وَتَوَاصَوْا بِالصَّبْرِ ﴿٣﴾
••••••••••••••••••••••••••••••••••
ಮೂರನೇ ರಕಅತಿನಲ್ಲಿ
بِسْمِ اللَّهِ الرَّحْمَنِ الرَّحِيمِ
قُلْ يَا أَيُّهَا الْكَافِرُونَ (1) لَا أَعْبُدُ مَا تَعْبُدُونَ (2) وَلَا أَنْتُمْ عَابِدُونَ مَا أَعْبُدُ (3) وَلَا أَنَا عَابِدٌ مَا عَبَدْتُمْ (4) وَلَا أَنْتُمْ عَابِدُونَ مَا أَعْبُدُ (5) لَكُمْ دِينُكُمْ وَلِيَ دِينِ (6)
••••••••••••••••••••••••••••••••••
ನಾಲ್ಕನೇ ರಕಅತಿನಲ್ಲಿ
بِسْمِ اللَّهِ الرَّحْمَنِ الرَّحِيمِ
قُلْ هُوَ اللَّهُ أَحَدٌ (1) اللَّهُ الصَّمَدُ (2) لَمْ يَلِدْ وَلَمْ يُولَدْ (3) وَلَمْ يَكُنْ لَهُ كُفُوًا أَحَدٌ (4)
■■■■■■■■■■■■■■■
✍🏼 ಶಿಹಾಬ್ ಅಲ್ ವಫಾ
Comments
Post a Comment