ಜ್ಞಾನಧಾರೆ


ಶ'ಅಬಾನ್ ತಿಂಗಳ ಮಹತ್ವ...

🌿🌿🌿🌿🌿🌿🌿🌿🌿🌿

ಹಲವಾರು ಸುವಿಶೇಷತೆಗಳು ಇರುವ ಪಾವನ ತಿಂಗಳು, ಹಿಜರಿ ಕ್ಯಾಲೆಂಡರಿನ ಎಂಟನೇ ತಿಂಗಳಾದ ಶ'ಅಬಾನ್‌ ರಜಬ್ ತಿಂಗಳ ಆಗಮನದೊಂದಿಗೆ ‌ವಿಶ್ವಾಸಿಗಳ‌ ಮನಸ್ಸು ಅತಿಯಾದ ಆನಂದದಿಂದಲೂ ರಜಬ್‌ ತಿಂಗಳಲ್ಲಿ ದೊರೆತ ‌ಆತ್ಮಾನುಭೂತಿ‌ಯು ರಮಳಾನ್ ಸ್ವೀಕರಿಸಲು ಇರುವ ಅಮಿತಾವೇಶದ ಕಾರಣದಿಂದಲೂ‌‌ ನಾವಿರುವ ಶ'ಅಬಾನ್ ತಿಂಗಳನ್ನು ಆರಾಧನೆ, ‌ಸತ್ಕರ್ಮಗಳಿಂದ ಧನ್ಯಗೊಳಿಸಬೇಕಾಗಿದೆ. 

ಪ್ರವಾದಿﷺ ಮತ್ತು ಅವರ ಅನುಯಾಯಿಗಳು ಈ ಒಂದು ತಿಂಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದು ಈ ತಿಂಗಳಲ್ಲಿ ಅನೇಕ ಸಂಭಾವ್ಯ ಘಟನೆಗಳು ನಡೆದಿದ್ದು ಅದೆಲ್ಲವೂ ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ.

 ◼️ ಮಹತ್ವ ತುಂಬಿದ ಪಾವನ ತಿಂಗಳು...

ಶ'ಅಬಾನ್ ಅನೇಕ ಸದ್ಗುಣಗಳಿಂದ ತುಂಬಿದ ತಿಂಗಳು. ಲೋಕ ನಾಯಕ ಪ್ರವಾದಿﷺ ಇದಕ್ಕೆ ಇತರ ತಿಂಗಳುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂದು ಹದೀಸುಗಳಿಂದ ತಿಳಿಯಲು ಸಾಧ್ಯವಾಗುತ್ತದೆ. ಬೀವಿ ಆಯಿಷಾ(ರ.ಅ) ಹೇಳುತ್ತಾರೆ: ಲೋಕ ನಾಯಕ ಪ್ರವಾದಿﷺ ಶ'ಅಬಾನ್ ತಿಂಗಳಲ್ಲಿ ಉಪವಾಸ ಹಿಡಿಯುವಂತೆ ಇತರ ತಿಂಗಳಲ್ಲಿ ಉಪವಾಸ ಅನುಷ್ಠಿಸುತ್ತಿರಲಿಲ್ಲ. (ಸ್ವಹೀಹುಲ್ ಬುಖಾರಿ 1834)
ಇಮಾಮ್ ಮುಸ್ಲಿಂ(ರ.ಅ) ನಿರೂಪಿಸಿದ ಹದೀಸ್‌ನಲ್ಲಿ ಈ ರೀತಿ ಇದೆ. ಪ್ರವಾದಿﷺ ಶ'ಅಬಾನ್‌ನಲ್ಲಿ ಕೆಲವು ದಿನಗಳನ್ನು ಹೊರತುಪಡಿಸಿ ಪ್ರತಿದಿನ ವೃತಾನುಷ್ಠಿಸುತ್ತಿದ್ದರು. (ಮುಸ್ಲಿಂ 1957) 

ಈ ಎರಡು ಹದೀಸ್‌ಗಳಲ್ಲಿ ಎರಡನೆಯ ಹದೀಸ್‌ ಮೊದಲನೆಯ ಹದೀಸಿನ ವಿವರಣೆಯಾಗಿದೆ. ಒಟ್ಟಾರೆಯಾಗಿ ಆಯಿಷಾ ಬೀವಿಯವರ ಹೇಳಿಕೆಯ ಒಳಾರ್ಥ 'ಶ'ಅಬಾನ್ ತಿಂಗಳ ಹೆಚ್ಚಿನ ದಿನಗಳು' ಆಗಿದೆ ಎಂದು ವಿದ್ವಾಂಸರು ವಿವರಿಸುತ್ತಾರೆ. ಇನ್ನು ಕೆಲವು ವಿದ್ವಾಂಸರು ಪ್ರಕಾರ ಕೆಲವು ವರ್ಷಗಳಲ್ಲಿ ಹೆಚ್ಚಿನ ದಿನ ಉಪವಾಸ ಅನುಷ್ಠಿಸುತ್ತಿದ್ದರು ಎಂದಾಗಿದೆ. ಒಟ್ಟಿನಲ್ಲಿ ಪ್ರವಾದಿﷺ ಮತ್ತು ಅನುಯಾಯಿಗಳು ತುಂಬಾ ಗೌರವದಿಂದ ಸ್ವೀಕರಿಸುತ್ತಿದ್ದ ಈ ಶ'ಅಬಾನ ತಿಂಗಳು ಈಗ ನಮ್ಮತ್ತ ಬಂದಾಗಿದ್ದು ಅದನ್ನು ಪ್ರವಾದಿﷺ ಪ್ರೀತಿಸಿದಂತೆ ಪ್ರೀತಿಸುವುದು, ಗೌರವ ಕಲ್ಪಿಸುವುದು ವಿಶ್ವಾಸಿಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ.
(ಮುಂದುವರೆಯುವುದು...)

✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಗಂಡಿಬಾಗಿಲು

NOORUL FALAH ISLAMIC ORGANISATION 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್