ಬರಾಅತ್ ರಾತ್ರಿಯ ಮಹತ್ವ
ಬರಾಅತ್ ರಾತ್ರಿಯ ಮಹತ್ವ
ಪುಣ್ಯಗಳ ಆಗರ ಬರಾಅತ್ ರಾತ್ರಿಯ ಮಹತ್ವಗಳು...!!
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಗದಗ
🔹ಶ'ಅಬಾನ್ 14 ರ ಅಸ್ತಮಿಸಿದ 15 ರ ರಾತ್ರಿಯಾಗಿದೆ ಬರಾಅತ್ ರಾತ್ರಿ. ನರಕದಿಂದ ತನ್ನ ಧಾರಾಳ ದಾಸರನ್ನು ಮೋಚಿಸುವ ರಾತ್ರಿಯಾಗಿರುವುದರಿಂದ 'ಮೋಚನೆ' ಎಂಬರ್ಥ ಬರುವ ಬರಾಅತ್ ಎಂಬ ಇದಕ್ಕೆ ಬಂದದ್ದು.
إِنَّآ أَنزَلْنَٰهُ فِى لَيْلَةٍۢ مُّبَٰرَكَةٍ ۚ إِنَّا كُنَّا مُنذِرِينَ.
فِيهَا يُفْرَقُ كُلُّ أَمْرٍ حَكِيمٍ
أَمْرًۭا مِّنْ عِندِنَآ ۚ إِنَّا كُنَّا مُرْسِلِينَ
ನಿಶ್ಚಯವಾಗಿಯೂ ನಾವು ಇದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ. ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ. ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುತ್ತದೆ.
ನಾವು ಸಂದೇಶವಾಹಕರನ್ನು ಕಳುಹಿಸುತ್ತಿರುವವರಾಗಿರುವೆವು."(ಸೂ.ದುಖಾನ್: 3,4)
ಈ ಎರಡು ಆಯತನ್ನು ವಿದ್ವತ್ ಶ್ರೇಷ್ಠರಾದ ಖುರ್'ಆನ್ ವಿವರ್ತಕರು ವಿವರಿಸುವುದು ಈ ರೀತಿಯಾಗಿದೆ
'ಅನುಗ್ರಹೀತ ರಾತ್ರಿ’ಯ ಉದ್ದೇಶ ಲೈಲತುಲ್ ಖದ್‍ರ್ ಎಂದಾಗಿದೆ ಬಹುಮತಾಭಿಪ್ರಾಯ. ‘ಖುರ್-ಆನನ್ನು ರಮಳಾನಿನಲ್ಲಿ ಇಳಿಸಲಾಗಿದೆ. (ಸೂರ: ಅಲ್-ಬಖರ) ಎಂದೂ ಲೈಲತುಲ್ ಖದ್‍ರ್‍ನಂದು ಇಳಿಸಿದ್ದೇವೆ. (ಸೂರ: ಅಲ್‍ಖದರ್) ಎಂದೂ ಖುರ್-ಆನಿನಲ್ಲೇ ಇದೆ. ಲೈಲತುಲ್ ಖದ್‍ರ್ ರಮಳಾನಿನಲ್ಲಿ ಎಂಬುದು ಹದೀಸ್‍ಗಳಿಂದ ಸ್ಪಷ್ಟ. ಇಬ್ನು ಜರೀರ್(ರ.ಅ) ಈ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದಾರೆ, ಶಅಬಾನ್ ಹದಿನೈದನೇ ರಾತ್ರಿ ಇಲ್ಲಿನ ಉದ್ದೇಶ ಎಂದು ಕೆಲವರು ಅಭಿಪ್ರಾಯಪಟ್ಟಿದ್ದು ಈ ಅಭಿಪ್ರಾಯಕ್ಕೆ ಯಾವುದೇ ಪುರಾವೆಯನ್ನು ನಾನು ಕಂಡಿಲ್ಲ ಎಂದು ಅಲ್ಲಾಮಾ ನೈಸಾಬೂರಿ(ರ.ಅ) ತನ್ನ ಗರಾಇಬುಲ್ ಖುರ್'ಆನ್ ಎಂಬ ತಫ್ಸೀರ್‍ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಆಯತ್ ಬರಾಅತ್ ರಾತ್ರಿಯ ಬಗ್ಗೆ ಅಲ್ಲ ಎಂದು ಬಹುಮತಾಭಿಪ್ರಾಯವಿದೆಯೆಂಬ ಕಾರಣದಿಂದ ಬರಾಅತ್ ರಾತ್ರಿಗೆ ಮಹತ್ವವಿಲ್ಲ ಎಂದರ್ಥವಲ್ಲ. ಒಂದು ರಾತ್ರಿಯ ಮಹತ್ವಕ್ಕೆ ಒಂದೇ ಆಯತ್‍ನ ಪುರಾವೆಯೇ ಆಧಾರವಲ್ಲ. ಬದಲಾಗಿ ಬರಾಅತ್ ರಾತ್ರಿಯ ಮಹತ್ವದ ಬಗ್ಗೆ ಹಲವು ಹದೀಸ್‍ಗಳಿವೆ. ಆ ಹದೀಸ್‍ಗಳನ್ನು ಉಲ್ಲೇಖಿಸಿದ ಬಳಿಕ ಇಮಾಮ್ ಇಬ್ನು ಹಜರಿಲ್ ಹೈತಮೀ(ರ.ಅ) ಬರೆಯುತ್ತಾರೆ. “ಒಟ್ಟಿನಲ್ಲಿ ಬರಾಅತ್ ರಾತ್ರಿಗೆ ಮಹತ್ವವಿದೆ. ಪಾಪಕ್ಕೆ ಪರಿಹಾರ ಹಾಗೂ ಪ್ರಾರ್ಥನೆಗೆ ವಿಶೇಷ ಉತ್ತರ ಈ ರಾತ್ರಿಯ ವೈಶಿಷ್ಟ್ಯತೆ. ಆದ್ದರಿಂದಲೇ ಇಮಾಮ್ ಶಾಫಿಈ(ರ.ಅ) ರವರು; ಈ ರಾತ್ರಿ ಪ್ರಾರ್ಥನೆಗೆ ಉತ್ತರವಿದೆ ಎಂದು ಪ್ರಸ್ತಾಪಿಸಿದ್ದು”. (ಫತಾವಲ್ ಕುಬ್‍ರಾ 2:
ದುಖಾನ್ 3,4)
ತಿದ್ದುಪಡಿಗೆ ಎಡೆಯಿಲ್ಲದ ವಿಧದಲ್ಲಿ ಅಲ್ಲಾಹನಿಂದ ಸುಶಕ್ತ ಕಾರ್ಯಗಳು ಆ ರಾತ್ರಿ ವಿವರಿಸಲ್ಪಡುತ್ತದೆ. ಎಲ್ಲದರ ಮೂಲ ದಾಖಲೆಯಾದ ಲೌಹುಲ್ ಮಹ್ಫೂಳ್‍ನಿಂದ ಹಾಲಿ ವರ್ಷದ ವಿಶ್ವದ ಚಟುವಟಿಕೆಗಳನ್ನು ಮಲಕ್‍ಗಳಿಗೆ ಆ ರಾತ್ರಿ ವಿವರಿಸಲಾಗುತ್ತದೆ. ಇಬ್ನುಉಮರ್(ರ.ಅ) ಮುಜಾಹಿದ್(ರ.ಅ), ಳಹ್ಹಾಕ್(ರ.ಅ), ಅಬೂ ಮಾಲಿಕ್(ರ.ಅ) ಮುಂತಾದವರ ಪ್ರಸ್ತಾಪನೆಯೂ ಇವರಂತೆ ಹಲವು ಮುಫಸ್ಸಿರ್‍ಗಳು ನೀಡಿದ ವ್ಯಾಖ್ಯಾನವೂ ಇದಾಗಿದ್ದು ಇದರ ಉದ್ದೇಶ ಬರಾಅತ್ ರಾತ್ರಿ ಎಂದು ವಿವರಿಸಲಾಗಿದೆ ಎಂದು ಅನೇಕ ವಿದ್ವಾಂಸರು ಹೇಳಿದ್ದಾರೆ.
ಪ್ರಸ್ತುತ ಆಯತಿನ ಕುರಿತ ವ್ಯಾಖ್ಯಾನದಲ್ಲಿ ಇಮಾಮ್ ರಾಝೀ(ರ.ಅ) ಹೇಳುತ್ತಾರೆ: ಇಕ್ರಿಮಾ(ರ.ಅ) ಮತ್ತು ವಿದ್ವಾಂಸರ ಗುಂಪೊಂದು ಹೇಳಿದರು; "ಅದು ಬರಾಅತಿನ ರಾತ್ರಿಯಾಗಿದೆ. ಶ'ಅಬಾನ್ ಹದಿನೈದರ ರಾತ್ರಿ."(ತಫ್ಸಿರುಲ್ ಕಬೀರ್ 27/237).
ಇಮಾಮ್ ಕುರ್ತುಬಿ(ರ.ಅ) ಉದ್ಧರಿಸುತ್ತಾರೆ: ಇಕ್ರಿಮಾ(ರ.ಅ) ಹೇಳಿದರು: ಅದು ಶ'ಅಬಾನಿನ ಅರ್ಧಭಾಗದ ರಾತ್ರಿಯಾಗಿದೆ, ಆ ರಾತ್ರಿಯಲ್ಲಿ ಒಂದು ವರ್ಷದ ಎಲ್ಲಾ ವಿಷಯಗಳನ್ನು ನಿರ್ಧರಿಸಲಾಗುತ್ತದೆ. ಮರಣ ಹೊಂದಿದವರನ್ನು ಜೀವಿಸಿರುವವರಿಂದ ಬೇರ್ಪಡಿಸಿ ಒಂದು ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಮತ್ತು ಈ ವರ್ಷ ಹಜ್ಜಿಗೆ ಹೋಗುವವರನ್ನು ನಿಶ್ಚಯಿಸಲಾಗುತ್ತದೆ. ಇದು ಮುಂದೆ ನಿಶ್ಚಯಿಸಿದಕ್ಕಿಂತ ಹೆಚ್ಚಾಗುವುದೋ ಅಥವಾ ಕಡಿಮೆಯಾಗುವುದೋ ಇಲ್ಲ."(ಕುರ್ತುಬಿ 16/126)
ಇಮಾಮ್ ಇಸ್ಮಾಯಿಲ್ ಹಿಕ್ಕೀ(ರ.ಅ) ಉಲ್ಲೇಖಿಸುತ್ತಾರೆ: ಮನುಷ್ಯನ ಆಹಾರ, ವಯಸ್ಸು, ಯಶ ಮತ್ತು ಸೋಲು ಸೇರಿದಂತೆ ಒಂದು ವರ್ಷದವರೆಗಿನ ಎಲ್ಲಾ ಕಾರ್ಯವನ್ನೂ ಆ ರಾತ್ರಿ ನಿರ್ಧರಿಸಲಾಗುತ್ತದೆ." (ರೂಹುಲ್ ಬಯಾನ್ 8/404).
ಆದಾಗ್ಯೂ, ಲೈಲಾತುಲ್ ಖದ್ರ್‌ನಲ್ಲಿ ಇದು ನಡೆಯುತ್ತದೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಇಮಾಂ ರಾಝಿ(ರ.ಅ) ಬರೆಯುತ್ತಾರೆ: ಕೆಲವು ವಿದ್ವಾಂಸರು ಸಕಲ ವಿಷಯಗಳನ್ನು ದಾಖಲಿಸಲಾದ ಲೌಹುಲ್ ಮಹಫೂಲ್‌ನಿಂದ ಒಂದು ವರ್ಷದ ಪದ್ಧತಿಗಳೆಲ್ಲಾ ಬರೆದು ತೆಗೆಯುವುದಕ್ಕೆ ಬರಾಅತಿನ ಬೆಳಿಗ್ಗೆ ಪ್ರಾರಂಭಿಸಿ ಲೈಲಾತುಲ್ ಖದ್ರ್‌ಗೆ ಕೊನೆಗೊಳ್ಳುವುದು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. " 27/240)
ಬರಾಅತ್ ರಾತ್ರಿಗೆ ನಾಲ್ಕು ಪ್ರಮುಖ ಸುವಿಶೇಷತೆ ಇದೆ ಎಂದು ಇಮಾಮ್ ರಾಝಿ(ರ.ಅ) ಉಲ್ಲೇಖಿಸುತ್ತಾರೆ:
1. ಎಲ್ಲಾ ತರ್ಕಬದ್ಧ ವಿಷಯಗಳ ನಿರ್ಧಾರ. ಇದಕ್ಕೆ ಸಾಕ್ಷಿ ಕುರ್‌ಆನ್‌ನಲ್ಲಿದೆ, "ಆ ರಾತ್ರಿ ಪ್ರತಿಯೊಂದು ತರ್ಕಬದ್ಧ ವಿಷಯವನ್ನು ಬೇರ್ಪಡಿಸಿ ವಿವರಿಸಲಾಗುವುದು"( ಸೂ.ದುಖಾನ್- 04)
2. ಪ್ರಸ್ತುತ ರಾತ್ರಿಯ ಕುರಿತು ಪ್ರವಾದಿﷺ ಹೇಳುತ್ತಾರೆ: ಬರಾಅತ್ ರಾತ್ರಿ 10 ರಕ್ಅತ್ ನಮಾಝ್ ನಿರ್ವಹಿಸಿದರೆ ಅಲ್ಲಾಹನು ಅವನಿಗೆ 100 ಮಲಕುಗಳನ್ನು ನಿಶ್ಚಯಿಸಿ ಕೊಡುತ್ತಾನೆ. 30 ಜನರಿಗೆ ಅವನಿಂದ ಸ್ವರ್ಗದ ಸುವಾರ್ತೆಯನ್ನು ತಿಳಿಸಲು, 30 ಜನರಿಗೆ ಅವನಿಂದ ನರಕದ ಶಿಕ್ಷೆಯಿಂದ ಮೋಚನೆಯ ಸುದ್ದಿ ತಿಳಿಸಲು, 30 ಜನರಿಗೆ ಅವನಿಂದ ಐಹಿಕ ಲೋಕದ ವಿಪತ್ತುಗಳಿಂದ ರಕ್ಷಿಸಲು ಬೇಕಾಗಿದೆ ಹಾಗೂ 10 ಜನರಿಗೆ ಅವನಿಂದ ಪೈಶಾಚಿಕ ದುಷ್ಕೃತ್ಯದಿಂದ ರಕ್ಷಿಸಲು ಆಗಿದೆ.
3. ಅಲ್ಲಾಹನ ಕೃಪಕಟಾಕ್ಷ ವರ್ಷಿಸುವ ರಾತ್ರಿ.
ಪ್ರವಾದಿﷺ ಹೇಳಿದರು: ಕಲ್ಬ್ ಬುಡಕಟ್ಟಿನ ಕುರಿಗಳ ರೋಮಗಳ ಸಂಖ್ಯೆಗೆ ಅನುಗುಣವಾಗಿ ಆ ರಾತ್ರಿ ಅಲ್ಲಾಹನು ನನ್ನ ಸಮುದಾಯಕ್ಕೆ ಪಾಪಮೋಚನೆ ನೀಡುವನು.
4. ಪಾಪಮೋಚನೆ. ಪ್ರವಾದಿﷺ ಹೇಳಿದರು: ಜ್ಯೋತಿಷಿ, ಪರಸ್ಪರ ದ್ವೇಷಿಸುವವನು, ಮದ್ಯ ಸೇವಿಸುವವನು, ತನ್ನ ಪೋಷಕರಿಗೆ ಚಿತ್ರಹಿಂಸೆ ಕೊಡುವವನು, ಸದಾ ಹಾದರಗಿತ್ತಿಯಲ್ಲಿ(ವ್ಯಭಿಚಾರಿ) ಏರ್ಪಡುವವಳ ಹೊರತುಪಡಿಸಿ ಪ್ರತಿಯೊಬ್ಬ ಮುಸ್ಲಿಮರಿಗೂ ಅಲ್ಲಾಹನು ಆ ದಿನ ಪಾಪಮೋಚನೆ ನೀಡುವನು.
5. ಲೋಕ ನೇತಾರ ಪ್ರವಾದಿﷺ ರ ಶಫಾಅತ್. ಅಂದಿನ ರಾತ್ರಿ ಅಲ್ಲಾಹನು ತನ್ನ ಹಬೀಬಿಗೆ ಸಂಪೂರ್ಣ ಶಿಫಾರಸ್ಸು ನೀಡಿದ್ದಾನೆ. ಶ'ಅಬಾನಿನ 13 ರ ರಾತ್ರಿ, ಪ್ರವಾದಿﷺ ತನ್ನ ಸಮುದಾಯಕ್ಕೆ ಇರುವ ಶಫಾಅತನ್ನು ಕೇಳಿದಾಗ ಅಲ್ಲಾಹನು ಪ್ರವಾದಿﷺ ರಿಗೆ ಮೂರರಲ್ಲೊಂದು ಭಾಗ ಅಧಿಕಾರವನ್ನು ನೀಡಿದನು. ಹದಿನಾಲ್ಕನೆಯ ರಾತ್ರಿ ಕೇಳಿದಾಗ ಮೂರನೇ ಎರಡರಷ್ಟು ಅಧಿಕಾರ ನೀಡಿದನು, ಕೊನೆಗೆ ಹದಿನೈದನೇ ರಾತ್ರಿ ಕೇಳಿದಾಗ ಶಿಫಾರಸ್ಸು ಮಾಡುವ ಸಕಲ ಅಧಿಕಾರವನ್ನು ನೀಡಿದನು." (ರಾಝಿ- 27/238)
ಮುಲ್ಲಾ ಅಲಿಯ್ಯಿಲ್ ಖಾರಿ(ರ.ಅ) ಹೇಳುತ್ತಾರೆ: ಇಲ್ಲಿ ಕಲ್ಬ್ ವಿಭಾಗವನ್ನು ಪ್ರತ್ಯೇಕವಾಗಿ ಹೇಳಿದ ಕಾರಣ ಅಂದು ಇತರ ಅರಬಿಗಳಿಂತ ಹೆಚ್ಚು ಆಡು, ಕುರಿಗಳು ಇದ್ದ ಬುಡಕಟ್ಟು ಜನಾಂಗದವರಾಗಿದ್ದರು ಕಲ್ಬ್." (ಮಿರ್ಖಾತ್- 2/172)
ಬರಾಅತ್ ರಾತ್ರಿಯನ್ನು ಆರಾಧನೆಗಳಿಂದ ಧನ್ಯಗೊಳಿಸಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಬರಾಅತ್ ರಾತ್ರಿಯನ್ನು ಸಜ್ಜನರಾದ ಮಹಾತ್ಮರು ಬಹಳ ಪ್ರಾಮುಖ್ಯತೆಯಿಂದ ಕಾಣುತ್ತಿದ್ದರು. ಇಹ್ಯಾ ಉಲೂಮುದ್ದೀನಿನ ವ್ಯಾಖ್ಯಾನದಲ್ಲಿ ಕಾಣಬಹುದು: "ಬರಾಅತ್ ರಾತ್ರಿ ಮೂರು ಯಾಸಿನ್ ಪಾರಾಯಣ ಮಾಡಬೇಕು ಹಾಗೂ ಆ ರಾತ್ರಿ ಹೆಚ್ಚಾಗಿ ಪ್ರಾರ್ಥಿಸಬೇಕು.
ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ
اللهم صل على سيدنا محمد عدد ما في علم الله صلاة دائمة بدوام ملك الله
ಸಾಧ್ಯವಾದಷ್ಟು ಜನರಿಗೆ ತಲುಪಿಸಿರಿ...
Comments
Post a Comment