ದರವೇಷಿಯ ದಾಯಿರ
ದರವೇಷಿಯ ದಾಯಿರ
ಧಣಿವರಿಯದ ದಳವಾಯಿ
ದಳವಾಯಿ ಎಂದ ತಕ್ಷಣ ಯುದ್ಧ ಭೂಮಿಯಲಿ ರಕ್ತದಿ ಮಿಂದು ಖಡ್ಗ ಝಳಪಿಸುತ್ತಾ ರುಧ್ರ ತಾಂಡವವಾಡುವ ಸೇನಾ ಮುಖ್ಯಸ್ಥನ ಮುಖ ನಿಮ್ಮ ಮನದಲ್ಲಿ ಒಂದು ಕ್ಷಣ ಹಾದು ಹೋಗದಿರಲು ಸಾಧ್ಯವಿಲ್ಲ ಅದು *ದಳವಾಯಿ* ಎಂಬ ಹೆಸರಿಗಿರುವ ಗತ್ತು......
ಆದರೆ ನಾನು ಇಲ್ಲಿ ನಿಮಗೆ ಪರಿಚಯಿಸಲು ಇರುವ ದಳವಾಯಿ ಒಬ್ಬ ನಾಯಕನೋ,ಧೀರ ಸೇನಾನಿಯೋ ಅಲ್ಲ ಬದಲಾಗಿ ಜೀವನದ ಎಲ್ಲಾ ಮಜಲುಗಳಲ್ಲೂ ತನ್ನವರಿಗಾಗಿ ಧಣಿವರಿಯದೆ ದುಡಿದು ಕೊನೆಗೊಂದು ದಿನ ಸದ್ಧಿಲ್ಲದೆ ಅಂತಿಮ ಯಾತ್ರೆ ಹೊರಡುವ ಒಬ್ಬ ತಂದೆಯ ಕಥೆ.........!
ತಂದೆ ಎಂಬ ಪಾತ್ರದ ಬಗ್ಗೆ ಹೆಚ್ಚಾಗಿ ವಿವರಿಸುವ ಅಗತ್ಯವಿಲ್ಲ ಎಲ್ಲರಿಗೂ ತಿಳಿದಿರುವುದೇ ತಾನೆ
ಕೆಲವೊಬ್ಬರಿಗೆ ಮಿತ್ರನಾಗಿ ಕೆಲವರಿಗೆ ಸ್ಪೂರ್ತಿಯಾಗಿ ಕೆಲವರಿಗೆ ದುಷ್ಟನಾಗಿಯೂ ಕಾಣುವ ಒಬ್ಬರಿದ್ದರೆ ಅದು ತಂದಯೇ ಆಗಿದ್ದಾರೆ...
ಹೆಚ್ಚೇನು ಕಾಯಿಸದೆ ನಮ್ಮ ಕಥೆಗೆ ಹೋಗೋಣ ಬನ್ನಿ.......!
ಪರಿಚಯ.....!
ಅದೊಂದು ಸಣ್ಣ ಕುಗ್ರಾಮ ಕತ್ತಲೆಯಾಯಿತೆಂದರೆ ಸಾಕು ಎಲ್ಲಾ ಮನೆಗಳಲ್ಲಿಯೂ ಧೀವಟಿಗೆಯ ಬೆಳಕು ಮೆಲ್ಲನೆ ನಾಚುತ್ತಾ ತನ್ನ ಸೌಂಧರ್ಯವನ್ನು ತೋರಿಸಲು ಶುರುವಿಡುತ್ತಿತ್ತು ರಾತ್ರಿಯಲ್ಲಿ ಸುಂಯ್ಯನೆ ಬೀಸುವ ತಂಗಾಳಿಯು ಹೊತ್ತು ತರುತ್ತಿದ್ದ ಮಣ್ಣಿನ ಸುವಾಸನೆಯು ಗಂಧಕ್ಕಿಂತಲೂ ಸುವಾಸನೆಯಾಗಿತ್ತು......!
ಗ್ರಾಮವೆಂದರೆ ನಿಮಗೆ ತಿಳಿದಿರಬಹುದು ಅಲ್ಲಿ ಪಬ್ ಇಲ್ಲದೇ ಇದ್ದರೂ ಕಾಲಹರಣಕ್ಕಾಗಿ ಒಂದು ಹಳ್ಳಿ ಕಟ್ಟೆ ಇದ್ದೇ ಇರುತ್ತದೆ......
ಈ ಕಟ್ಟೆಯಲ್ಲಿ ಕುಳಿತು ಯಾವಾಗಲು ಹರಟೆ ಹೊಡೆಯುತ್ತಿದ್ದವರು ಒಂದು ಕ್ಷಣ ಮೌನವಾದರು ಅಲ್ಲಿಗೆ ಓಡಿ ಬಂದ ಮಾದ ಗಲಿಬಿಲಿಯಿಂದ ಲೋ ಕೆಂಪ ನಮ್ಮ ಗ್ರಾಮ ಇಂದು ಯಾಕೋ ಗಬ್ಬು ನಾತ ಹೊಡೆಯುತ್ತಿದೆ ಇಂದು ಬೀಸುತ್ತಿರುವ ಗಾಳಿ ಅದೇನೋ ಧುರ್ವಾಸನೆಯನ್ನು ಹೊತ್ತು ತಂದಂತಿದೆ....
ಅಲ್ಲೆ ಪಕ್ಕದಲ್ಲೇ ಕುಳಿತಿದ್ದ ಜಯ ಇಬ್ಬರು ಸ್ನೇಹಿತರನ್ನು ಕರೆದು ಲೋ ಮಾದ, ಕೆಂಪ ನನಗ್ಯಾಕೋ ಭಯ ಆಯ್ತದೆ ಕಣ್ರೋ ಇದ್ಯಾಕೋ ದೆವ್ವದ ಕೆಲಸ ಆಗಿರ್ಬೇಕು ಅಂದ
ಅದಕ್ಕೆ ಮಾದ ಹೇ...ss ಮುಚ್ಕೊಳೊ ದೆಯ್ಯಾನು ಇಲ್ಲ ಮಣ್ಣು ಇಲ್ಲ ಯಾವುದೋ ಪ್ರಾಣಿ ಸತ್ತಿರ್ಬೇಕು ಅದಿಕ್ಕೆ ಈ ತರ ವಾಸನೆ ಬರ್ತಿರಬಹುದು ಅಂದ ಆದರೆ ಸ್ವಲ್ಪ ಹೊತ್ತಿನಲ್ಲೇ ಆ ಧುರ್ವಾಸನೆ ಗ್ರಾಮವಿಡೀ ಪಸರಿಸಿತು ಗ್ರಾಮಸ್ಥರೆಲ್ಲರೂ ಗಲಿ-ಬಿಲಿಗೊಂಡು ಒಬ್ಬೊಬ್ಬರು ಒಂದೊಂದು ಕಥೆಯನ್ನು ಹೇಳಲು ಶುರುವಿತ್ತರು....
ಗ್ರಾಮಸ್ಥರೆಲ್ಲರ ಮಾತುಗಳನ್ನು ಆಲಿಸುತ್ತಾ ಕುಳಿತಿದ್ದ ನೀಲಾಂಬರಿ ಮಾತ್ರ ಸುಮ್ಮನಿದ್ದಳು
ಹೋ ಒಂದು ನಿಮಿಷ ಈ ನೀಲಾಂಬರಿ ಬೇರೆ ಯಾರು ಅಲ್ಲ ನಮ್ಮ ಕಥೆಯ ಕಥಾ ನಾಯಕಿ ಇವಳನ್ನು ಗ್ರಾಮಸ್ಥರು ಪ್ರೀತಿಯಿಂದ ನೀಲಿ ಎಂದೇ ಕರೆಯುತ್ತಿದ್ದರು ನಮ್ಮ ನೀಲಿ ಇತ್ತೀಚೆಗಷ್ಟೆ ಪಟ್ಟಣದಲ್ಲಿ ಕಾಲೇಜು ಮುಗಿಸಿ ತನ್ನ ಗ್ರಾಮಕ್ಕೆ ವಾಪಾಸ್ಸಾಗಿದ್ದಳು
ನೀಲಿ ಒಮ್ಮೆಲೆ ತನ್ನ ಮೌನವನ್ನು ಮುರಿದು ಗ್ರಾಮಸ್ಥರನ್ನುಧ್ಧೇಶಿಸಿ ಮಾತು ಪ್ರಾರಂಭಿಸಿದಳು
ನನ್ನ ಪ್ರೀತಿಯ ಅಕ್ಕ ಅಣ್ಣಂದಿರ ನೀವೆಲ್ಲ ಅಂದುಕೊಂಡಂತೆ ಈ ಧುರ್ವಾಸನೆ ದೆಯ್ಯಾನೊ ಭೂತಾನೊ ಓಡಾಡವುದರಿಂದಬರುತ್ತಿರುವುದು ಅಲ್ಲ ಈ ವಾಸನೆಯು ನಮ್ಮ ಊರ ಮೂಲೆಯಲ್ಲಿರುವ ಪಟೇಲರ ತೋಟದಿಂದ ಬರ್ತಾ ಇದೆ ನಾನು ಒಂದು ಸಲ ಅತ್ತ ಕಡೆ ಹೋದಾಗ ನನಗೆ ಅಲ್ಲಿ ಈ ವಾಸನೆಯ ಅನುಭವ ಆಗಿತ್ತು ಪಟೇಲರ ಮನೆಯಲ್ಲಿ ಜೀತ ಮಾಡ್ತಾ ಇದ್ದ ನನ್ನ ಅಪ್ಪಯ್ಯನ ಬಳಿ ಕೇಳೋಣ ಅಂದುಕೊಂಡೆ ಆದರೆ ಅಪ್ಪಯ್ಯ ಅಲ್ಲಿ ಇರಲಿಲ್ಲ ಅವರು ಪಟೇಲರೊಂದಿಗೆ ನಮ್ಮ ಊರಿಗೆ ಬೇಕಾಗುವ ಸರಂಜಾಮುಗಳನ್ನು ತೆಗೆದುಕೊಂಡು ಬರಲು ಹೋಗಿದ್ದಾರೆ ಎಂದು ಅಲ್ಲೆ ಕೆಲ್ಸ ಮಾಡ್ತ ಇದ್ದ ಮಾರ ಹೇಳಿದ್ದ
ಅದೆಲ್ಲ ಇರಲಿ ಈಗ ನಿಮಗೆಲ್ಲ ಈ ವಾಸನೆಯ ಜಾಡು ಹಿಡಿಯಬೇಕು ತಾನೆ ಎಲ್ಲರೂ ನನ್ನೊಂದಿಗೆ ಬನ್ನಿ ಅದೇನು ಎಂಬುವುದು ನೋಡಿಯೇ ಬರೋಣ ಎಂದಳು ನೀಲಿಯ ಈ ಮಾತಿಗೆ ಗ್ರಾಮಸ್ಥರೆಲ್ಲ ಆ ಧುರ್ನಾತವನ್ನು ಹಿಂಬಾಲಿಸುತ್ತಾ ನಡೆದರು ಸ್ವಲ್ಪ ದೂರ ನಡೆದ ನಂತರ ಗ್ರಾಮಸ್ಥರು ಆ ಧುರ್ನಾತ ಬೀರುವ ಸ್ಥಳಕ್ಕೆ ತಲುಪಿದರು
ಆದರೆ ಅಲ್ಲಿ ಕಂಡ ಘಟನೆ ಗ್ರಾಮಸ್ಥರ ಎದೆಯನ್ನು ಝಲ್ಲೆನ್ನಿಸಿತ್ತು ಯಾಕೆಂದರೆ ಅಲ್ಲಿ ಧುರ್ನಾತ ಬೀರುತ್ತಿದ್ದುದುಯಾವುದೋ ಪ್ರಾಣಿಯ ದೇಹದಿಂದಲ್ಲ ಬದಲಾಗಿ ಅಲ್ಲೊಬ್ಬ ಮನಷ್ಯ ಶವವಾಗಿ ಬಿದ್ದಿದ್ದ ಆ ಶರೀರದ ಮುಖ ನೋಡುತ್ತಲೇ ಗ್ರಾಮಸ್ಥರೆಲ್ಲರೂ ಒಡೆಯಾ ಎಂದು ಕೂಗುತ್ತ ಒಂದೇ ಸಮನೆ ಅಳತೊಡಗಿದರು ಇದನ್ನೆಲ್ಲ ನೋಡಿದ ನೀಲಿ ಮಾತ್ರ ಅರ್ಧ ಶವವಾಗಿದ್ದಳು.......!!!
ಲೊ ಮಾದ ನಮ್ಮ ಒಡೆಯನನ್ನ ಯಾರೊ ಸಾಯಿಸಿರಬಹುದು ಹತ್ತಾನೆ ಬಂದರೂ ಎದುರಿಸಿ ನಿಲ್ಲುವ ನಮ್ಮ ಒಡೆಯನಿಗೆ ಈ ಸ್ಥಿತಿ ಮಾಡಿದವರಿಗೆ ಒಂದು ಗತಿ ಕಾಣಿಸಿಲ್ಲ ಅಂದ್ರೆ ನಾವು ಒಡೆಯನಿಗೆ ದ್ರೋಹ ಮಾಡಿದ ಹಾಗೆ ಆಗಬಹುದು ಎಂದ.....
ಜಯ ಮತ್ತು ಕೆಂಪ ಮಾದನ ಮಾತಿಗೆ ತಲೆಯಾಡಿಸಿದರು
ಅಷ್ಟರಲ್ಲೆ ಅಲ್ಲಿಗೆ ಬಂದ ಪಟೇಲರು ಜೋರು ಧನಿಯಲ್ಲಿ
ನೀವೆಲ್ಲ ಅಲ್ಲಿ ಏನ್ ಮಾಡ್ತಾ ಇದೀರೊ ಇವತ್ತು ಯಾಕೆ ನೀವ್ಯಾರು ಮನೆಗೆ ಜೀತಕ್ಕೆ ಬರಲೇ ಇಲ್ಲ ಅದಿರಲಿ ಅಲ್ಲಿ ಏನು ನೋಡ್ತಾ ನಿಂತಿರೋದು ಎಂದು ಕೇಳಿದರು
ಅದಕ್ಕೆ ನೀಲಿ ಅಯ್ಯಾ ನನ್ನ ಅ.....
ಅಷ್ಟರಲ್ಲಿ ನೀಲಿ ನಿಧ್ಧೆಯಿಂದ ಎಚ್ಚೆತ್ತಳು ಮತ್ತಾದಾವುದೋ ಚಿಂತೆಯಲ್ಲಿ ಮುಳುಗಿದ ನೀಲಿಯನ್ನು ಯಾರೋ ಬೆನ್ನ ಹಿಂದೆ ತಟ್ಟಿದ ಹಾಗಾಯಿತು ಹಿಂದೆ ತಿರುಗಿ ನೋಡಿದಾಗ ಅಲ್ಲಿ ಪಕ್ಕದ ಮನೆಯ ಜಮುನಾ ಅಜ್ಜಿ ನಿಂತಿದ್ದರು......
ಅರೆ ನೀಲಿ ಇದೇನು ಯೋಚನೆ ಮಾಡ್ತಾ ಇದೀಯ ಏನಾದರೂ ಕೆಟ್ಟ ಕನಸು ಕಂಡೆಯ ಕೂಸೆ ಎಂದು ಕೇಳಿದರು ಅದಕ್ಕೆ ನೀಲಿ ಏನಿಲ್ಲ ಅಜ್ಜಿ ಅಂದು ನಮ್ಮ ಗ್ರಾಮದಲ್ಲಿ ನಡೆದ ಆ ಕರಾಳ ದಿನಗಳ ಕನಸು ಬಿದ್ದಿತ್ತು ಹಾಗಾಗಿ ಅದೇ ಚಿಂತೆ ಮತ್ತೆ ನನ್ನ ಕಾಡತೊಡಗಿತು ಎಂದಳು ಅದಿಕ್ಕೆ ಅಜ್ಜಿ ನೋಡಮ್ಮಾ ಅದೆಲ್ಲ ಮರೆತು ಬಿಡು ನೀನು ಅದನ್ನೇ ನೆನೆದುಕೊಳ್ತಾ ಇದ್ರೆ ನಿನ್ನ ಮನದ ಬ್ಯಾಸರ ಕಮ್ಮಿ ಆಯ್ತದಾ ಹೇಳು ಅದೆಷ್ಟೊ ವರ್ಷಗಳಾಯಿತು ಆ ಘಟನೆಗೆ ನಮ್ಮ ಒಡೆಯನನ್ನು ಕೊಂದವರಿಗೆ ನೀನು ನಿನ್ನ ಕೈಯ್ಯಾರೆ ಶಿಕ್ಷೆ ಕೊಡಿಸಿಯೂ ಆಯ್ತು ಇನ್ಯಾಕಮ್ಮ ಬೇಸರ ಕಳಕೊಂಡ ದಿನ,ವ್ಯಕ್ತಿಗಳು ಮತ್ತೆ ಬರೋದಿಲ್ಲ ಅನ್ನೋದು ನಿನಿಗೇ ಚೆನ್ನಾಗಿ ಗೊತ್ತಲ್ವ ಅದೆಲ್ಲ ಚಿಂತೆ ಬಿಡು ಈಗ ಉಣ್ಣೋಕೆ ಬಾ ಆ ಮ್ಯಾಲೆ ನಿನಗ ಒಡೆಯನ ಕಥೆ ಹೇಳುತ್ತೇನೆ ಎಂದಲು
ಅದಿಕ್ಕೆ ನೀಲಿ ಸರಿ ಅಜ್ಜಿ ಎನ್ನುತ್ತಾ ಊಟಕ್ಕೆ ಕುಳಿತಳು
ಸ್ವಲ್ಪ ಸಮಯದ ನಂತರ ಊಟ ಮುಗಿಸಿದ ನೀಲಿ ನೇರ ಅಜ್ಜಿಯ ಬಳಿಗೆ ನಡೆದಳು
ಅಜ್ಜಿ ನೀಲಿಗೆ ಮೊದಲೇ ಹೇಳಿದಂತೆ ಕಥೆ ಹೇಳಲು ಪ್ರಾರಂಭಿಸಿದಳು..........
ಅಂದು ನಮ್ಮ ಊರಿನಲ್ಲಿ ಒಂದು ದೊಡ್ಡ ಜಗಳ ನಡೀತಾ ಇತ್ತು ಅದು ಮೇಲ್ಜಾತಿ ಮತ್ತು ಕೀಳ್ಜಾತಿಯವರ ನಡುವಿನ ಜಗಳವಾಗಿತ್ತು ಅಂದು ನಮ್ಮ ಗ್ರಾಮಕ್ಕೆ ನುಗ್ಗಿದ ಕಿಡಿಗೇಡಿಗಳು ಕೈಯ್ಯಲ್ಲಿ ಮಾರಕಾಯುಧಗಳನ್ನು ಹಿಡಿದು ನಮ್ಮ ಗ್ರಾಮಸ್ಥರ ಮೇಲೆ ಒಂದೇ ಸಮನೆ ಮುಗಿ ಬಿದ್ದಿದ್ದರು ಅವರ ತೋಳ್ಬಲ ಮತ್ತು ಜನಬಲವನ್ನು ಕಂಡರೆ ಎಂತಹಾ ಗಟ್ಟಿ ಮನಸ್ಸು ಕೂಡ ಭಯದಿಂದ ನಡುಗುತ್ತಿತ್ತು
ಆದರೆ ಆ ಭಯ ಮಾತ್ರ
ಸ್ವಲ್ಪ ಹೊತ್ತಿನಲ್ಲೇ ನಮ್ಮಿಂದ ದೂರ ಆಯ್ತು ಯಾಕೆಂದರೆ.....
ಕಡಲಿನಂತಿದ್ದ ಶತ್ರುಗಳ ಮಧ್ಯೆ ಸುನಾಮಿಯಂತೆ ಒಂದು ಶಕ್ತಿ ಅಬ್ಬರಿಸುತ್ತಿತ್ತು ನಮ್ಮನ್ನು ಕೊಲ್ಲಲು ಬಂದ ಶತ್ರುಗಳೆಲ್ಲ ದಿಕ್ಕಾ ಪಾಲಾಗಿ ಓಡುತ್ತಿದ್ದರು
ಯಾಕೆ ಹೀಗೆಲ್ಲ ನಡೀತಾ ಇದೆ ಎಂದು ನೋಡಿದರೆ
ಆ ಶತ್ರುಗಳ ನಡುವೆ ನಿಂತು ನಮ್ಮವನೇ ಆದ ಒಬ್ಬ ವ್ಯಕ್ತಿ ಅಬ್ಬರಿಸುತ್ತಿದ್ದರು ನಾವೆಲ್ಲ ಆ ವ್ಯಕ್ತಿ ಯಾರಾಗಿರಬಹುದೆಂದು ನೋಡಿದರೆ ಅದು ನಮ್ಮ ಒಡೆಯ ಆಗಿದ್ದರು ಅವರ ವೀರಾವೇಶಕಂಡ ಗ್ರಾಮಸ್ಥರೆಲ್ಲರೂ ಒಡೆಯನ ಜೊತೆ ಕೈ ಜೋಡಿಸಿದರು ನಂತರ ಅಲ್ಲಿ ನಮಗೆ ವಿಜಯವಾಯಿತು....
ಆ ಗಲಾಟೆಯ ನಂತರ ನಮ್ಮ ಒಡೆಯ ನಮಗೆ ಸಿಕ್ಕಿದ್ದು ಶವವಾಗಿ ಎಂದು ಕಣ್ಣೀರಿಡಲು ಪ್ರಾರಂಭಿಸಿದಳು.......
ಒಡೆಯನ ಕಥೆ ಪ್ರಾರಂಭ........!
ತುಸು ಸಾವರಿಸಿಕೊಂಡ ಅಜ್ಜಿ ಒಡೆಯನ ಪೂರ್ತಿ ಕಥೆಯನ್ನು ಹೇಳಲು ಆರಂಭಿಸಿಧಳು....
ನಮ್ಮ ಈ ಗ್ರಾಮ ಮೊದಲು ಹೀಗೆ ಇರಲಿಲ್ಲ ಇಲ್ಲಿ ಬರೇ ಸ್ಮಶಾನ ಮೌನ ಎಲ್ಲೆಂದರಲ್ಲಿ ಹಸಿವಿನಿಂದ ಕಂಗಾಲಾದವರ ರೋಧನೆ ಧಣಿಕರ ಧರ್ಪವೇ ಮೇಲೈಸಿತ್ತು.......
ಧಣಿಗಳು ನಮಗೆ ಹೊಡೆದರೂ ಬಡಿದರೂ ನಾವು ಉಸಿರೆತ್ತುವ ಹಾಗೆ ಇರಲಿಲ್ಲ ಕೆಲವೊಮ್ಮೆನಮ್ಮ ಹಟ್ಟಿಯ ಹೆಣ್ಣುಮಕ್ಕಳ ಮಾನಭಂಗ ಮಾಡುತ್ತಿದ್ದರು ಆದರೂ ನಾವು ಅದನ್ನೆಲ್ಲ ವಿರೋಧಿಸುವಂತಿಲ್ಲ ಯಾಕೆಂದರೆ ನಾವೆಲ್ಲ ಅವರ ಜೀತದಾಳುಗಳು ಅವರ ಮನೆಯ ಅಂಗಳದಿಂದ ಹಿಡಿದು ಅವರ ಕೈಯ್ಯ ಅಂಗುಳದವರೆಗೂ ಏನೇ ಕೆಲಸವಿದ್ದರು ಎದುರುತ್ತರಿಸದೆ ಮಾಡಬೇಕಿತ್ತು ಒಂದು ದಿನ ನಾನು ಮತ್ತು ಅಮ್ಮ ಅವರ ಮನೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ ಅಲ್ಲಿಗೆ ಒಬ್ಬ ಮುದೀ ತಂದೆ ಒಬ್ಬ ಬಾಲಕನನ್ನೂ ಕರೆದುಕೊಂಡು ನಮ್ಮ ಪಟೇಲರ ಮನೆಗೆ ಕೆಲಸ ಕೇಳಿಕೊಂಡು ಬಂದಿದ್ದರು
ಪಟೇಲರು ಇಬ್ಬರನ್ನೂ ಕೆಲಸಕ್ಕೆ ನೇಮಿಸಿಕೊಂಡರು.......
ಮಾರನೇ ದಿನ ಬೆಳಗ್ಗೆ.........!
ಹೇಯ್ ಹುಡುಗ ನಿನ್ನ ಹೆಸರೇನು ಎಂದು ನಾನು ಆ ಹುಡುಗನ ಬಳಿ ಕೇಳಿದೆ ಅದಕ್ಕವನು ಸ್ವಲ್ಪ ಗಡಸು ಧ್ವನಿಯಲ್ಲಿ ನನ್ನ ಹೆಸರು *ವೀರ* ನಿನ್ನ ಹೆಸರೇನು ಅದಕ್ಕೆ ನಾನು ನನ್ನ ಹೆಸರು ಜಮುನ ನೀನು ನನ್ನನ್ನು ಅಕ್ಕ ಅಂತ ಕರೀಬಹುದು ಅಂದೆ ಅದಕ್ಕವನು ತಲೆಯಾಡಿಸುತ್ತಾ ಹೂಂ......... ಸರಿ ಅಕ್ಕ ಎಂದ
ಆವಾಗ ನಾನಿನ್ನೂ ಸಣ್ಣವಳು ನಮಗೆ ಓದು ಬರಹ ಎಲ್ಲ ಕಲಿಯಲು ಅವಕಾಶ ಇರಲಿಲ್ಲ ಅಂದು ಬರೇ ಧಣಿಯವರ ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದರು ಅವರನ್ನು ನೋಡುತ್ತಾ ನಾವಿಬ್ಬರೂ ನಾವೂ ಶಾಲೆಗೆ ಹೋಗಬೇಕು ಚೆನ್ನಾಗಿ ಓದಿ ಈ ಊರಿಗೆ ಪಟೇಲ ಆಗಬೇಕು ಅಂತ ಮಾತಾಡುತ್ತಾ ಇರಬೇಕಾದರೆ ಇಬ್ಬರ ಬೆನ್ನಿಗೂ ಅದ್ಯಾರೋ ಬಾರುಕೋಲಿನಿಂದ ಬೆನ್ನ ಮೇಲೆ ಬಾಸುಂಡೆ ಬರುವಂತೆ ಎರಡೇಟು ಹೊಡೆದರು ಹೊಡೆದವರು ಯಾರು ಎಂದು ತಿರುಗಿ ನೋಡಿದರೆ........
ಪಟೇಲರು ಏನ್ಲಾ ಭಿಕಾರಿಗಳ ನೀವು ಪಟೇಲ ಆಗಬೇಕಾ ನಿಮಿಗೆ ಶಾಲೆಗೆ ಹೋಗಬೇಕಾ ಎಂದು ಗಧರಿಸಿದ
ಅಷ್ಟರವರೆಗೆ ಸುಮ್ಮನಿದ್ದ ವೀರ ಒಂದೇ ಸಮನೆ ಎದ್ದು ನಿಂತು ಅಯ್ಯಾ ನಿಮ್ಮ ಮಕ್ಕಳ ಹಾಗೆ ನಾವು ಕೂಡ ಮಕ್ಕಳೇ ತಾನೆ ನಮಗೂ ಆಸೆಗಳು ಇದ್ದೇ ಇರುತ್ತದೆ ನಿಮ್ಮ ಮನೆಯ ಜೀತದಾಳುಗಳು ಓದಬಾರದು ಕಲಿಯಬಾರದು ಎಂಬುವುದು ಎಷ್ಟು ಸರಿ ಎಂದು ಕೇಳಿದ......
ಅದಕ್ಕೆ ಪಟೇಲರು ವೀರನ ಎದೆಗೆ ಜಾಡಿಸಿ ಒದ್ದರು ನೋವನ್ನು ತಾಳಲಾರದೆ ವೀರ ಜೋರಾಗಿ ಕಿರುಚಿದ ಆ ಕಿರುಚಾಟವನ್ನು ಕೇಳಿ ವೀರನತಂದೆ ಓಡಿ ಬಂದವರೇ ಪಟೇಲನ ಕಾಲಿಗೆ ಬಿದ್ದು ಅಯ್ಯಾ ಮಕ್ಕಳು ಏನೋ ಗೊತ್ತಿಲ್ಲದೆ ತಪ್ಪು ಮಾಡಿರಬಹುದು ದೊಡ್ಡ ಮನಸ್ಸು ಮಾಡಿ ಕ್ಷಮಿಸು ಬುದ್ದೀ ಎಂದು ಬೇಡಿಕೊಂಡರು ಅದಕ್ಕೆ ಪಟೇಲ ಸರಿ ಇನ್ನೊಮ್ಮೆ ಈ ತರ ಮಾಡಿದರೆ ಈ ಊರಿನಿಂದ ಬಹಿಷ್ಕಾರ ಮಾಡಿ ಬಿಡುವೆ ಎಂದು ದರ್ಪದಿ ಹೇಳಿ ಅಲ್ಲಿಂದ ಹೊರಟು ಹೋದರು.........
ಆದರೆ ವೀರ ಮಾತ್ರ ಸುಮ್ಮನಿರಲಿಲ್ಲ ಅವನು ಹೇಳಿ ಮಾಡುವವನಲ್ಲ ಮಾಡಿ ತೋರಿಸುವವನಾಗಿದ್ದ.......
ಅವನ ತೇಜಸ್ಸು ಗಾಂಭೀರ್ಯ ಆ ದಿನಾನೇ ನನಗೆ ಅರ್ಥವಾಗಿತ್ತು........
ಹೀಗೆ ಹಲವು ಸಂವತ್ಸರಗಳು ಕಳೆದವು ನಾವು ಬೆಳೆದು ದೊಡ್ಡವರಾಗಿದ್ದೆವು ಆದರೆ ಸರಿ ತಪ್ಪು ಅರ್ಥೈಸುವ ಜ್ಞಾನ ಇನ್ನೂ ಬಂದಿರಲಿಲ್ಲ........
ಹೀಗೆ ಒಂದು ದಿನ ನಮ್ಮೂರ ಹೆಣ್ಣೈಕ್ಳು ಎಲ್ಲರೂ ಸೇರಿ ನಮ್ಮೂರ ಸಂಧಿಯಲ್ಲಿ ಇರುವ ಕೆರೆಗೆ ಸ್ನಾನಕ್ಕೆಂದು ಹೋಗಿದ್ದೆವು ಅಲ್ಲಿ ನಾವೆಲ್ಲ ಸ್ನಾನ ಮಾಡ್ತಾ ಇರಬೇಕಾದರೆ ಅಲ್ಲಿಗೆ ಪಟೇಲರ ಮಗ ಶಶಿ ಬಂದಿದ್ದ.
ಬಂದವನೇ ನಮ್ಮನ್ನ ನೋಡಿ ಹೇಯ್ ಬಿನ್ನಾನಿಗಿತ್ತೀರ ಇವತ್ತು ಯಾಕೆ ಯಾರು ಕೆಲ್ಸಕ್ಕೆ ಬಂದಿಲ್ಲ ನಿಮ್ಮನ್ನೆಲ್ಲ ಕೆಲ್ಸಕ್ಕೆ ಕರೆಯೋದಿಕ್ಕೆ ನಾವೆ ಹುಡುಕಿಕೊಂಡು ಬರಬೇಕೇನೊ ಎಂದು ಕೇಳಿದ......
ಅದಕ್ಕೆ ನಾನು ಅದು ಹಂಗಲ್ಲ ಬುದ್ದೀ ದಿನಾ ಕೆಲ್ಸ ಅಂತ ಹೇಳಿ ಅಲ್ಲೆ ಇರ್ತೀವಿ ತಾನೆ ಇವತ್ತು ಒಂದು ದೀನ ಸುತ್ತಾಡೋಣ ಅಂತ ಇಲ್ಲಿಗೆ ಬಂದೆವು......
ಜಮುನಾಳ ಮಾತಿಗೆ ಕಿವಿಕೊಡದ ಶಶಿ ಹೇಯ್ ನೀನು ಇಲ್ಲೆ ಇರು ಅವರೆಲ್ಲ ಇಲ್ಲಿಂದ ಹೋಗಲಿ ಅಂದ ಇದನ್ನು ಕೇಳಿದ್ದೇ ತಡ ಅಲ್ಲಿದ್ದ ಜಮುನಾಳ ಸ್ನೇಹಿತರೆಲ್ಲ ಓಡಿ ಹೋದರು ಜಮುನ ಕೂಡ ಅವರ ಜೊತೆಗೆ ಹೋಗಲು ಮುಂದಾದಾಗ ಶಶಿ ಅವಳ ಕೈಯ್ಯನ್ನು ಬಲವಾಗಿ ಹಿಡಿದುಕೊಂಡ ಜಮುನ ಎಷ್ಟು ಬೇಡಿದರೂ ಶಶಿ ಅವಳ ಕೈಯ್ಯನ್ನು ಬಿಡಲೇ ಇಲ್ಲ ಸ್ವಲ್ಪ ಸಮಯದ ನಂತರ ಅಲ್ಲಿ ಯಾರು ಇಲ್ಲವೆಂದು ಖಚಿತ ಪಡಿಸಿಕೊಂಡು ಜಮುನಾಳ ಮಾನಭಂಗಕ್ಕೆ ಯತ್ನಿಸಿದ ಆದರೆ ಶಶಿಯ ಪ್ರಯತ್ನ ವ್ಯರ್ಥವಾಗಿತ್ತು ಸ್ವಲ್ಪದರಲ್ಲೆ ಶಶಿ ನಿಶ್ಚಲನಾಗಿ ನೆಲಕ್ಕುರುಳಿದ..........!
ಜಮುನಾ ಶಶಿಯನ್ನು ಎಷ್ಟು ಗೋಗರೆದರೂ ಶಶಿ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ ಶಶಿ ಇನ್ನೇನು ಜಮುನಾಳ ಮೇಲೆರಗಬೇಕು ಆಗಲೇ ಅದಾವುದೋ ಒಂದು ಬಲವಾದ ಹೊಡೆತಕ್ಕೆ ನೆಲ ಕಚ್ಚಿದ
ಜಮುನ ಆಶ್ಚರ್ಯದಿಂದ ಯಾರು ಇದು ಎಂದು ನೋಡಿದರೆ ಅಲ್ಲಿ ವೀರ ಹಲ್ಲು ಕಚ್ಚಿ ನಿಂತಿದ್ದ.
ವೀರ ಹೆಸರಿಗೆ ತಕ್ಕಂತೆಯೇ ಒಬ್ಬ ಪರಾಕ್ರಮಿಯಾಗಿದ್ದ ಅವನ ಧೈರ್ಯದ ಮುಂದೆ ಅದೆಂತಹ ಶಕ್ತಿಯಾದರೂ ತಲೆ ಬಾಗಲೇ ಬೇಕು ಅವನು ಎಷ್ಟು ಒರಟಾನೋ ಅದರ ದುಪ್ಪಟ್ಟು ಹೃದಯವಂತನಾಗಿದ್ದ ಸ್ವಾಮಿ ನಿಷ್ಠೆ ಎಂಬುವುದು ವೀರನ ರಕ್ತಗತವಾಗಿರುವುದು ಆದರೆ ಅದೇ ಸ್ವಾಮಿ ಅನ್ಯಾಯ ಮಾಡಿದರೆ ಸುಮ್ಮನಿರುವವನೂ ಅಲ್ಲ ನಮ್ಮ ವೀರ......!
ಲೋ ವೀರ.....
ಇದೇನೋ ಮಾಡ್ದೆ ಯಾಕೊ ಅವನಿಗೆ ಹೊಡೆದೆ ಇದೆಲ್ಲಾ ನಮಿಗೆ ಮಾಮೂಲು ಅವರು ಏನೇ ಮಾಡಿದರೂ ನಾವು ಅವರ ವಿರುದ್ಧ ನಾವು ಉಸಿರೆತ್ತೊ ಹಾಗೇ ಇಲ್ಲ ಅಂತದರಲ್ಲಿ ನೀನು ಅವನ ಮೇಲೆ ಕೈ ಮಾಡಿದ್ದೀಯ ಅಂತ ಗೊತ್ತಾದ್ರೆ ಪಟೇಲರು ನಿನ್ನ ಸಾಯಿಸಿಯೇ ಬಿಡ್ತಾರೆ.
ನೀನು ಇನ್ನು ಒಂದು ಕ್ಷಣಾನೂ ಇಲ್ಲಿ ನಿಲ್ಲಬೇಡ ಯಾರಾದರೂ ನೋಡೋದಕ್ಕಿಂತ ಮೊದಲು ಹೋಗು ಇಲ್ಲಿಂದ ಎಂದು ಜಮುನ ವೀರನಿಗೆ ಹೇಳಿದಳು........!
ಆದರೆ ವೀರ ಅಲ್ಲಿಂದ ಕದಲಲಿಲ್ಲ ಬದಲಾಗಿ ವೀರ ಜಮುನಾಳ ಬಳಿ ಹೇಳಿದ ಅಕ್ಕ ನೀವೆಲ್ಲಾ ಧನಿಕರಿಗೆ ಹೀಗೆ ಭಯ ಪಟ್ಟರೆ ಇಂದು ನಿಮ್ಮ ಮಾನ ನಾಳೆ ನಿಮ್ಮ ಪ್ರಾಣವೂ ಹೋಗುವುದರಲ್ಲಿ ಸಂಶಯವಿಲ್ಲ.
ನಿಮ್ಮ ಮನಸ್ಸಿನ ಭಯವೆಂಬ ಪೆಢಂಭೂತವನ್ನು ನೀವು ಎಲ್ಲಿಯವರೆಗೆ ಬೆಳೆಸುತ್ತೀರೋ ಅಲ್ಲಿಯವರೆಗೆ ನೀವಾಗಲೀ ಇಲ್ಲಿರುವ ಜನರಾಗಲಿ ಸಾಯುವವರೆಗೂ ಗುಲಾಮರಾಗಿಯೇ ಸಾಯುತ್ತೀರಿ ನಿಮ್ಮ ನಂತರದ ತಲೆಮಾರು ಕೂಡ ಗುಲಾಮರಾಗಿಯೇ ಇರುತ್ತಾರಲ್ಲದೆ ಅವರು ಎಂದಿಗೂ ಸ್ವತಂತ್ರರಾಗಲಾರರು...
ಅಕ್ಕ ನೀನು ಭಯ ಪಡಬೇಡ ನಾನಿವನಿಗೆ ಹೊಡೆಯಲೋಸ್ಕರ ಇಲ್ಲಿಗೆ ಬಂದಿದ್ದು ಅಲ್ಲ ಆದರೆ ಇಲ್ಲಿ ನಡೆಯುತ್ತಿರುವ ಅನ್ಯಾಯ ನೋಡಿ ಸುಮ್ಮನಿರಲಾಗದೆ ಅವನಿಗೆ ಹೊಡೆದುಬಿಟ್ಟೆ ಇಲ್ಲಿ ನಾವಿಬ್ಬರೇ ಇರುವುದರಿಂದ ಈ ವಿಷಯ ನಮ್ಮಲ್ಲೇ ಇರಲಿ ಇದು ನಿನ್ನ ಮಾನದ ಪ್ರಶ್ನೆ ಆದ್ದರಿಂದ ನೀನು ಇದನ್ನು ಇಲ್ಲಿಯೇ ಮರೆತುಬಿಡು ಎಂದ.....
ಅದಕ್ಕೆ ಜಮುನ ಸಮ್ಮತಿಸಿದಳು
ನಂತರ ಕೆಳಗೆ ಬಿದ್ದಿದ್ದ ಶಶಿಯನ್ನು ನೋಡುತ್ತಾ ಅಯ್ಯಾ ವೀರನೆ ನಿನ್ನಪರಾಕ್ರಮದಿ ಹೊಡೆತ ತಿಂದು ಬಿದ್ದಿರುವ ಈತನನ್ನು ಎಬ್ಬಿಸು ಇವನು ಇಲ್ಲೇ ಬಿದ್ದಿದ್ದರೆ ನಮ್ಮಿಬ್ಬರಿಗೂ ದೊಡ್ಡ ಸಮಸ್ಯೆಯಾದೀತು ಎಂದು ವೀರನ ಬಳಿ ಹೇಳಿದಳು.....
ವೀರ ಶಶಿಯ ಪಕ್ಕ ಕುಳಿತು ಲೋ ಚಾಂಡಾಲ ಎದ್ದೇಳೊ ಮೇಲೆ ಮಲಗಿದ್ದು ಸಾಕು ಎದ್ದು ಮನೆ ಸೇರು ಎಂದ ಆದರೆ ಶಶಿಯ ಕಡೆಯಿಂದ ಯಾವುದೇ ಉತ್ತರವಿಲ್ಲ ಅವನು ಕಣ್ಣು ತೆರೆಯಲೂ ಇಲ್ಲ ಇದರಿಂದ ಸಂಶಯಗೊಂಡ ಜಮುನ ಅವನ ಮೂಗಿನ ಬಳಿ ಕೈಯ್ಯಾಡಿಸಿದಳು ಜಮುನಾ ಭಯಭೀತಳಾಗಿ ಒಂದು ಹೆಜ್ಜೆ ಹಿಂದೆ ಸರಿದಳು ಇದನ್ನು ಕಂಡ ವೀರ ಅಕ್ಕ ಯಾಕೆ ಹೀಗೆ ಗಾಬರಿಯಾಗ್ತಾ ಇದೀಯ ಏನಾಯ್ತು ಹೇಳು ಎಂದ
ಅದಕ್ಕೆ ಜಮುನ ನಡುಗುತ್ತಾ
ಲ್....ಲ್..ಲೋ ವೀರ ಶಶಿಯ ಉಸಿರು ನಿಂತೋಗಿದೆ ಅವನನ್ನು ಕೊಂದೆ ಬಿಟ್ಯಲ್ಲೊ ಇದೇನಾದರು ಪಟೇಲರಿಗೆ ಗೊತ್ತಾದರೆ ನಮ್ಮನ್ನ ಜೀವಂತವಾಗಿ ಸುಡುತ್ತಾರೆ ಎಂದಳು.......!
ಆದರೆ ವೀರ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ
ಅಕ್ಕಾ.... ಆಗಿದ್ದು ಆಗಿ ಹೋಯ್ತು ನಾನು ಬೇಕೆಂದು ಮಾಡಿದ್ದಲ್ಲ ಅವನನ್ನು ತಡೆಯಲು ಬಂದಾಗ ಆಕಸ್ಮಿಕವಾಗಿ ಬಲವಾದ ಪೆಟ್ಟು ಬಿತ್ತು ಸರಿ ನೀನು ಸುಮ್ಮನಿರು ಹೇಗೂ ಇಲ್ಲಿ ಯಾರು ಇಲ್ಲ ತಾನೆ ಬೇಗನೆ ಇವನನ್ನು ಇಲ್ಲೆ ಎಲ್ಲಾದರು ಮಣ್ಣು ಬಿಡೋಣ ಎಂದ
ಈಗ ಜಮುನಾಳಿಗೆ ವೀರನ ಮಾತು ಸರಿ ಎನಿಸಿತು ಅವಳು ವೀರನ ಬಳಿ ಹೇಳಿದಳು
ವೀರ ಸರಿ ನೀನು ಹೇಳಿದಂತೆಯೇ ಮಾಡೋಣ ನೀನು ಅವನನ್ನು ಹೆಗಲಲ್ಲಿ ಹಾಕಿಕೊ ಪಕ್ಕದ ಕಾಡಿನಲ್ಲಿ ಇವನನ್ನು ಮಣ್ಣು ಮಾಡೋಣ ಎಂದಳು
ಇನ್ನೆನು ವೀರ ಶಶಿಯ ಶವವನ್ನು ಎತ್ತಿ ಹೆಗಲಿಗೆ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ದೂರದಿಂದ ಯಾರೋ ಮೂರು ಜನ ಇದನ್ನೆಲ್ಲಾ ನೋಡುತ್ತಿದ್ದರು.....
ಇದನ್ನು ಕಂಡ ಜಮುನ ಲೋ ವೀರ ನಮ್ಮ ಕತೆ ಮುಗೀತು ಅಲ್ಲಿ ನೋಡು ಯಾರೋ ನಮ್ಮನ್ನು ನೋಡ್ತಾ ಇದಾರೆ ಎಂದಳು............
ಅಷ್ಟರಲ್ಲಿ ಆ ಮೂವರು ಅಲ್ಲಿಂದ ಕಾಲ್ಕಿತ್ತರು...........!!!
ಓಡುತ್ತಿದ್ದ ಮೂವರನ್ನು ಹಿಂಬಾಲಿಸಿದ ವೀರನಿಗೆ ಕಡೆಗೂ ಅವರು ಸಿಕ್ಕೇ ಬಿಟ್ಪರು.......
ವೀರ ಅವರನ್ನು ಹಿಡಿದು ಲೇಯ್ ಯಾಕ್ರೋ ಓಡ್ತಾ ಇದೀರ ನೀವು ಇಲ್ಲಿ ನೋಡಿದ್ದನ್ನು ಪಟೇಲರಿಗೆ ಹೇಳುವುದಾದರೆ ನೀವು ಇಲ್ಲಿಂದ ಒಂದಿಂಚೂ ಮುದೆ ಹೋಗಲಾರಿರಿ ಎಂದು ಗದರಿಸಿದ.......
ಇದನ್ನು ಕೇಳಿದ ಆ ಮೂವರು ಒಂದೇ ಸಮನೆ ಅಳುತ್ತಾ ಅಯ್ಯಾ ವೀರ ನಾವು ಇಲ್ಲಿ ನೋಡಿದ್ದನ್ನು ಯಾರಿಗೂ ಹೇಳಲಾರೆವು ಪಟೇಲರಿಗೇ ಅಲ್ಲ ನಮ್ಮ ಮನೆಯವರಿಗೂ ಕೂಡ ಹೇಳಲಾರೆವು ನಿನಗೆ ಧಮ್ಮಯ್ಯ ವೀರಣ್ಣ ನಮ್ಮನ್ನು ಬಿಟ್ಟು ಬಿಡು ಎಂದು ಅಂಗಲಾಚಿದರು.......
ಇದನ್ನೆಲ್ಲ ನೋಡಿದ ವೀರನಿಗೆ ಆ ಮೂವರ ಮೇಲೆ ಕನಿಕರ ಬಂದು ಅವರಲ್ಲಿ ಹೇಳಿದ ಸರಿ ನೀವು ಮನೆಗೆ ಹೋಗಬಹುದು ಆದರೆ ಒಂದು ಷರತ್ತು ಅಲ್ಲಿ ಬಿದ್ದಿರುವ ಆ ಚಾಂಡಾಲನ ದೇಹವನ್ನು ಹೂಳಲು ನನಗೆ ಸಹಾಯ ಮಾಡುವಿರಾದರೆ ನೀವು ಇಲ್ಲಿಂದ ಹೋಗಬಹುದು ಇಲ್ಲದಿದ್ದರೆ ನಿಮ್ಮ ಮನೆಯನ್ನು ನೀವು ಮರೆತು ಬಿಡಬೇಕು ಎಂದ
ಇದನ್ನು ಕೇಳಿದ ಮೂವರು ವೀರನ ಮಾತಿಗೆ ಒಪ್ಪಿದರು.
*(ಅಷ್ಟಕ್ಕೂ ಈ ಮೂವರು ಬೇರಾರೂ ಅಲ್ಲ ನಮ್ಮ ಚಿರ ಪರಿಚಯರಾದ ಮಾದ ಕೆಂಪ ಮತ್ತು ಜಯ )*
ವೀರ ಅವರನ್ನು ಶಶಿಯ ಬಳಿ ಕರೆದು ಕೊಂಡು ಹೋಗಬೇಕಾದರೆ ಅವರ ಬಳಿ ಕೇಳಿದ ನೀವ್ಯಾಕೆ ನಾನು ಹರಾಮಿಯನ್ನು ಹೊಡೆದು ಹಾಕಿದ್ದು ನೋಡಿ ಓಡಿದ್ದು ಎಂದು ಕೇಳಿದ.
ಅದಕ್ಕೆ ಕೆಂಪ ಅಣ್ಣಾ ನಾವಿನ್ನೂ ಚಿಕ್ಕ ಮಕ್ಕಳು ತಾನೆ ಅದೂ ಅಲ್ಲದೆ ಇಂತಹ ಘಟನೆ ನಮ್ಮ ಗ್ರಾಮದಲ್ಲಿ ಎಂದಿಗೂ ನಡೆದದ್ದಿಲ್ಲ ನಾವು ಕಂಡದ್ದೂ ಇಲ್ಲ ಆದ್ದರಿಂದ ಭಯಪಟ್ಟು ಓಡಿದ್ದೇ ಹೊರತು ಈ ವಿಷಯವನ್ನು ಪಟೇಲರಿಗೆ ಹೇಳುವುದಕ್ಕೋಸ್ಕರ ಅಲ್ಲ.....
ಅಷ್ಟರಲ್ಲಿ ಮಾದ ವೀರಣ್ಣ ಅಲ್ಲಿ ಸತ್ತು ಮಲಗಿದವನು ನಮ್ಮನ್ನು ಮಕ್ಕಳೂ ಎಂಬ ಕನಿಕರವೂ ತೋರದೆ ಮನಸೋ ಇಚ್ಛೆ ಹಿಂಸೆ ಕೊಡುತ್ತಿದ್ದವನು ಈಗ ಅವನು ಸತ್ತರೆ ನಮಗೆ ನೆಮ್ಮದಿ ತಾನೆ.....
ಅದಕ್ಕೆ ಜಯ ಲೋ ಸುಮ್ಮನಿರಿ ಇವನು ಸತ್ತರೆ ಸ್ವಲ್ಪ ಶಾಂತಿ ಸಿಗಬಹುದು ಆದರೆ ನಮ್ಮ ಮುದಿಯ ಪಟೇಲ ಇರುವವರೆಗೆ ನಾವು ಅವನ ಕಾಲಡಿಯಲ್ಲೇ ಬದುಕಬೇಕು ಎಂದ.......
ಮೂವರ ಮಾತುಗಳನ್ನು ಕೇಳಿದ ವೀರ ಪರವಾಗಿಲ್ಲ ಕಣ್ರೋ ನಿಮಗೂ ಧೈರ್ಯ ಇದೆ ಅಂತಾಯ್ತು ಈ ಧೈರ್ಯಾನ ಬೆಳೆಸಿಕೊಳ್ಳಿ ಅದು ಬೆಳೆಯುತ್ತಿದ್ದಂತೆಯೇ ಒಂದಲ್ಲಾ ಒಂದು ದಿನ ಈ ಗುಲಾಮತ್ವ ಅಂತ್ಯವಾಗಲೂ ಬಹುದು ಎಂದ......
ನಾಲ್ವರೂ ಮಾತಾಡುತ್ತಾ ಮೃತದೇಹವಿದ್ದಲ್ಲಿಗೆ ತಲುಪಿದರು.....
ಇದನ್ನು ಕಂಡ ಜಮುನ ಒಮ್ಮೆ ಹೌಹಾರಿದಳು ಲೋ ವೀರ ನಿನಗೆ ಬುದ್ಧಿ ಇಲ್ವೇನೋ ಈ ಮಕ್ಕಳನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದೆ ಎಂದು ಕೇಳಿದಳು ಅದಕ್ಕೆ ವೀರ ಅಕ್ಕಾ ನೀನು ಭಯ ಪಡುವಂತದ್ದೇನೂ ಇಲ್ಲ ಇವರು ಇಲ್ಲಿ ಕಂಡದ್ದನ್ನು ಯಾರಿಗೂ ಹೇಳಲಾರರು ನಾವು ಹೀಗೆ ಮಾತಾಡುತ್ತಾ ನಿಂತಿದ್ದ ಬೇರೆ ಯಾರಾದರೂ ನಮ್ಮನ್ನು ನೋಡಬಹುದು ಆದಷ್ಟು ಬೇಗ ಇವನ ದೇಹವನ್ನು ಮಣ್ಣು ಹಾಕಿ ಹೂತು ಬಿಡೋಣ ಎಂದ.
ಅಂತೆಯೇ ಐವರೂ ಸೇರಿ ಶಶಿಯ ಶವವನ್ನು ಹೊತ್ತು ಜಮುನ ತಯಾರಿಸಿಟ್ಟಿದ್ದ ಗುಂಡಿಗೆ ಹಾಕಿ ಮಣ್ಣು ಮುಚ್ಚಿ ಎಲ್ಲರೂ ಒಂದು ಸಲ ನಿಟ್ಟುಸಿರು ಬಿಟ್ಟರು.
ನಂತರ ವೀರ ಆ ಮೂವರು ಮಕ್ಕಳಿಗೂ ಲೋ ಮಕ್ಕಳಾ ಇಲ್ಲಿ ನಡೆದಿರುವ ಘಟನೆ ನಮ್ಮಲ್ಲೇ ಇರಲಿ ಇದನ್ನು ಗ್ರಾಮದೊಳಗೆ ಯಾರಿಗೂ ಹೇಳಬೇಡಿ ಎಂದ.
ಅದಕ್ಕೆ ಆ ಮೂವರೂ ಕೂಡ ಸಮ್ಮತಿಸಿ ಅಲ್ಲಿಂದ ಮನೆಯ ಕಡೆ ಹೆಜ್ಜೆ ಹಾಕಿದರು........
ಮರುದಿನ ಚಂದಮಾಮ ತನ್ನ ಹೊಳಪನ್ನು ಕಡಿಮೆಗೊಳಿಸಿ ಸೂರ್ಯೋದಯಕ್ಕೆ ಅನುವು ಮಾಡಿ ಕೊಟ್ಟ ಕೋಳಿ ಕೊ ಕ್ಕೋ ಎಂದು ಕೂಗಲು ಪ್ರಾರಂಭಿಸಿತು.
ಊರೆಲ್ಲ ಬೆಳಗಿನ ತಮ್ಮ ಕಾರ್ಯಗಳಲ್ಲಿ ತೊಡಗಿರಲು ದೂರದಲ್ಲಿ ಒಂದಿಡೀ ಪಟಾಲಂ ಗ್ರಾಮದ ಒಳಗಡೆ ಬರುತ್ತಿತ್ತು ಇದನ್ನು ಕಂಡ ಗ್ರಾಮಸ್ಥರು ಆಶ್ಚರ್ಯದಿಂದ ಅದನ್ನೇ ನೋಡುತ್ತಾ ನಿಂತಿದ್ದರು.
ಅಷ್ಟರಲ್ಲಿ ಆ ಪಟ್ಟಾಲಂ ಊರಿನ ಹೆಬ್ಬಾಗಿಲ ಒಳಗೆ ಪ್ರವೇಶಿಸಿ ಅಲ್ಲೆ ನಿಂತು ಬಿಟ್ಟಿತು.
ಗ್ರಾಮಸ್ಥರಿಗೆ ಕುತೂಹಲ ಹೆಚ್ಚಾಯಿತು ಯಾಕೆಂದರೆ ಇದುವರೆಗೂ ಇಂತಹ ಒಂದು ಪಟಾಲಂ ಆ ಗ್ರಮದೊಳಗೆ ಬಂದೇ ಇರಲಿಲ್ಲ ಅದೂ ಅಲ್ಲದೆ ಆ ಪಟಾಲಂನ ಮಧ್ಯೆ ಒಂದು ಐಷಾರಾಮಿ ಕಾರು ಕೂಡ ಬಂದಿತ್ತು.
ಗ್ರಾಮಸ್ಥರೆಲ್ಲ ಆ ಕಾರನ್ನು ನೋಡುತ್ತ ಯಾರಾಗಿರಬದು ಎಂದು ತಲೆಕೆಡಿಸಿಕೊಳ್ಳುತ್ತಿರಬೇಕಾದರೆ,
ಆ ಕಾರಿನಿಂದ ಯಾರೋ ಒಬ್ಬ ವ್ಯಕ್ತಿ ಇಳಿದು ಗಾಂಭೀರ್ಯದಿಂದ ನಡೆದುಕೊಂಡು ಬರುತ್ತಿದ್ದ ಅವನ ವೇಷ ಭೂಷಣವು ಅಷ್ಟೆ ಗಾಂಭೀಯದಿಂದ ಕೂಡಿತ್ತು
ಅವನನ್ನು ನೋಡಿದ ಗ್ರಾಮಸ್ಥರೆಲ್ಲರೂ ಒಂದು ಕ್ಷಣ ಭಯದಿಂದ ನಲುಗಿದರು
ಅಷ್ಟೊತ್ತೂ ಇದ್ದ ಕುತೂಹಲ ಈಗ ಅವರಲ್ಲಿ ಇಲ್ಲವಾಗಿತ್ತು ಯಾಕೆಂದರೆ ಆ ಬರುತ್ತಿರುವ ವ್ಯಕ್ತಿ ಅಷ್ಟೊಂದು ಕ್ರೂರನಾಗಿದ್ದ
ಆ ವ್ಯಕ್ತಿ.
ಅವನನ್ನು ನೋಡಿದರೆ ಅವರಿಗೆ ಅವನ ಕ್ರೂರತನವೇ ಕಣ್ಣ ಮುಂದೆ ಬರುತ್ತಿತ್ತು ಅವನು ಹತ್ತಿರ ಬರುತ್ತಿದ್ದಂತೆಯೇ ಮುನಿಯ ಮುಂದೆ ಬಂದು........
ಮುನಿಯ ಆ ವ್ಯಕ್ತಿಯ ಕಾಲು ತೊಳೆಯಲು ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಬಂದ ಮುನಿಯ ಆ ವ್ಯಕ್ತಿಯ ಕಾಲು ತೊಳೆಯುತ್ತಿಂದ್ದಂತೆಯೇ ಆ ವ್ಯಕ್ತಿ ಮುನಿಯನ ಎದೆಗೆ ಬಲವಾಗಿ ಒದ್ದ ಆ ಏಟಿಗೆ ಮುನಿಯ ನೋವಿನಿಂದ ನರಳಾಡುತ್ತಿದ್ದ ನಂತರ ಸಾವರಿಸಿಕೊಂಡು ಬುದ್ದೀ... ಯಾಕಿಷ್ಟು ಕೋಪ ಏನಾಯ್ತು ಖುದ್ದು ನೀವೇ ಗ್ರಾಮಕ್ಕೆ ಬಂದಿದ್ದೀರಾ ಅಂದ್ರೆ ಅದೇನೋ ದೊಡ್ಬ ವಿಸ್ಯಾನೇ ಇರ್ಬೇಕು ಅಂದ (ಪಾಪ ಮುನಿಯ ಆ ವ್ಯಕ್ತಿಯನ್ನು ಎದುರಿಸುವಂತಿರಲಿಲ್ಲ ಯಾಕೆಂದರೆ ಆ ವ್ಯಕ್ತಿ ಬೇರಾರೂ ಅಲ್ಲ ಅವನು ಆ ಊರಿನ ಪಟೇಲನಾಗಿದ್ದ.)
ಪಟೇಲ ಮುನಿಯನ ಮಾತಿಗೆ ಉತ್ತರಿಸುತ್ತಾ ಲೋ ನಾಯಿಗಳ ನನ್ನ ಮನೆಯಲ್ಲಿ ಎಂಜಲು ತಿನ್ನುವ ನೀವು ನನ್ನನ್ನೇ ಪ್ರಶ್ನೆ ಮಾಡುವಷ್ಟು ಬೆಳೆದು ಬಿಟ್ಟಿದ್ದೀರ..
ಅದಕ್ಕೆ ಮುನಿಯ ಬುದ್ದೀ *(ಅಂದಿನ ಗ್ರಾಮಸ್ಥರು ಪಟೇಲರನ್ನು ಗೌರವದಿಂದ ಬುದ್ದೀ ಎಂದು ಕರೆಯುತ್ತಿದ್ದರು.)*
ನಾವು ನಿಮ್ಮ ಅನ್ನದ ಋಣದಿಂದ ಬದುಕುವವರು ನಮಗೆಲ್ಲಿಂದ ಬರಬೇಕು ನಿಮ್ಮನ್ನು ಪ್ರಶ್ನಿಸುವ ಧೈರ್ಯ ನೀವು ಖುದ್ದಾಗಿ ನಮ್ಮ ಗ್ರಾಮಕ್ಕೆ ಬಂದಿದ್ದೀರಾ ಎಂದರೆ ಏನಾದರೂ ವಿಷಯ ಇರಬೇಕಲ್ವ ಎಂದ.
ಅದಕ್ಕೆ ಪಟೇಲ ಲೇಯ್ ನಾಯಿಗಳ ನನ್ನ ಮಗ ಎರಡು ದಿನಗಳಿಂದ ಮನೆಗೆ ಬಂದಿಲ್ಲ ಅವನು ಕಾಣೆಯಾಗುವ ಮೊದಲು ಇದೇ ಗ್ರಾಮಕ್ಕೆ ಬಂದಿದ್ದ ಅನ್ನೊ ಮಾಹಿತಿ ಸಿಕ್ಕಿತು. ನಿಮ್ಮಲ್ಲಿ ಯಾರಾದರೂ ಅವನನ್ನ ನೋಡಿದ್ದೀರ ಎಂದು ಕೇಳಿದ ಇದನ್ನು ಕೇಳಿದ ವೀರ ಮತ್ತವನ ಜೊತೆಗಿದ್ದವರು ಒಮ್ಮೆಗೆ ಭಯಭೀತರಾದರು ನಂತರ ವೀರ ಮೆಲ್ಲನೆ ಸಾವರಿಸಿಕೊಂಡು ಅಯ್ಯಾ ನಿಮ್ಮ ಮಗ ಒಂದು ವೇಳೆ ನಮ್ಮ ಗ್ರಾಮಕ್ಕೆ ಬಂದಿದ್ದನೇ ಆದರೆ ಈ ಎರಡು ದಿನ ಅವರು ಯಾಕೆ ಇಲ್ಲಿ ಇರಬೇಕು ಅವರು ಗ್ರಾಮಕ್ಕೆ ಬಂದಿರುವುದು ನಾವ್ಯಾರು ಕಂಡೆ ಇಲ್ಲ ಎಂದ.
ಅದಕ್ಕೆ ಪಟೇಲ ಸರಿ ಹಾಗಾದರೆ ನನಗೆ ನನ್ನ ಮಗನನ್ನು ಈ ಊರಿಗೆ ಬರುವುದನ್ನು ಕಂಡ ಅದೇ ವ್ಯಕ್ತಿಯನ್ನು ಕರೆದು ಕೇಳುತ್ತೇನೆ ಎಂದ.
ಇದನ್ನು ಕೇಳಿದ ವೀರ ಮತ್ತವನ ಜೊತೆಗಿದ್ದವರು ಬೆವತು ಹೋಗಿದ್ದರು ಯಾರಾಗಿರಬಹುದು ಆ ವ್ಯಕ್ತಿ ಎಂದು ನೋಡುತ್ತಿದ್ದಂತೆಯೇ.
ಪಟೇಲ ಗ್ರಾಮಸ್ಥರ ಕಡೆಗೆ ಬೆಟ್ಟು ಮಾಡಿ ಅವರ ಮಧ್ಯದಲ್ಲೇ ನಿಂತುಕೊಂಡಿದ್ದ ಒಬ್ಬ ಹುಡುಗನನ್ನು ಕರೆದ
ಪಟೇಲರ ಕರೆಗೆ ಉತ್ತರಿಸುತ್ತ ಆ ಹುಡುಗ ಗ್ರಾಮಸ್ಥರ ಮಧ್ಯದಿಂದ ಎದ್ದು ಬಂದ.
ಇದನ್ನು ಕಂಡ ವೀರ ಮತ್ತು ಜಮುನಾಳ ಎದೆಯಲ್ಲಿ ನಡುಕ ನಡುಕ ಶುರುವಾಗಿ ಬಿಟ್ಟಿತ್ತು.
ಆ ಹುಡುಗ ಬೇರಾರೂ ಅಲ್ಲ ವೀರನ ಜೊತೆಯಲ್ಲಿದ್ದ ಮಾದ ಆಗಿದ್ದ ಮಾದ ಮುಂದೆ ಬಂದವನೇ ಪಟೇಲರಲ್ಲಿ ಹೇಳಿದ, ಹೂಂ ಪಟೇಲರೆ ನಾನು ನಮ್ಮ ಚಿಕ್ಕೆಜಮಾನರನ್ನು ನಮ್ಮೂರ ಕೆರೆಯ ಪಕ್ಕ ನೋಡಿದ್ದೆ ಅದೇ ನಾನು ಕಡೆಯದಾಗಿ ನೋಡಿರೋದು ನಂತರ ನಾನು ನೋಡೇ ಇಲ್ಲ ಎಂದ ಆದರೆ ನಾನು ನಾನು ಅಲ್ಲಿ ನೋಡುವ ಸಂದರ್ಭದಲ್ಲಿ ಅಲ್ಲಿ ವೀರ ಮತ್ತು ಜಮುನಕ್ಕ ಕೂಡ ಇದ್ದರು ಇಬ್ಬರು ಚಿಕ್ಕೆಜಮಾನರ ಬಳಿ ಏನೋ ಮಾತಾಡುತ್ತಾ ಇರುವುದನ್ನೂ ಕಂಡೆ ಎಂದ.
ಪಟೇಲ ಮಾದನ ಬಳಿ ಮತ್ತೆ ಕೇಳಿದ ಅದರ ನಂತರ ಅವನು ಎಲ್ಲಿಗೆ ಹೋದ ಎಂದು ನೀನು ನೋಡಿದೆಯಾ ಎಂದು ಕೇಳಿದ ಅದಕ್ಕೆ ಮಾದ ಅಯ್ಯಾ ನಾನು ಅವರನ್ನು ಅದೇ ಕಡೆಯದಾಗಿ ನೋಡಿದ್ದು ನಂತರ ನಾನು ನಿಮ್ಮ ಮನಗೇ ಬಂದಿದ್ದೆ ಎಂದ.
ಇದನ್ನೆಲ್ಲ ಕೇಳಿದ ಪಟೇಲ ಏನ್ರೋ ಇಷ್ಟು ಸಾಕಲ್ವ ನೀವು ಸುಳ್ಳು ಬೊಗಳ್ತಾ ಇದೀರ ಅನ್ನೋದಕ್ಕೆ ಸಾಕ್ಷಿ ಎಂದು ಕೇಳಿದ.
ಪಾಪ ಜಮುನಾ ಮತ್ತು ವೀರ ನಾವಿವತ್ತು ಸತ್ತೇ ಹೋದೆವು ಎಂದು ಮನದಲ್ಲೇ ಭಯ ಪಡುತ್ತಿದ್ದರು ವೀರ ಮಾದನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ.
ಇಷ್ಟರಲ್ಲಿ ಪಟೇಲ ವೀರನನ್ನು ಕರೆದ ಪಟೇಲ ತನ್ನನ್ನು ಕರೆಯುವುದನ್ನು ಕಂಡ ವೀರ ಇನ್ನೇನು ನಾನು ಸಿಗಾಕಿಕೊಂಡೆ ಇನ್ನೇನಿದ್ದರೂ ನನಗೆ ಸಾವು ನಿಶ್ಚಿತ ನಾನು ಸಾಯುವುದಕ್ಕಿಂತ ಮೊದಲು ಈ ಪಟೇಲನನ್ನು ಮುಗಿಸಿಯೇ ಸಾಯುವೆ ಎಂದು ನಿರ್ಧರಿಸಿ ಮುಷ್ಠಿ ಬಿಗಿಯಾಗಿಸಿ ಪಟೇಲನ ಮುಂದೆ ಬಂದ ಆದರೆ.............
ಲೊ ವೀರಾ... ಮಾದ ಹೇಳಿದ್ದು ನಿಜಾನ ನೀನು ನನ್ನ ಮಗನನ್ನು ನೋಡಿದ್ದೀಯ ಎಂದು ಗದರಿಸಿದ.
ಅದಕ್ಕೆ ವೀರ ಹೂಂ ಅಯ್ಯ ನಮ್ ಚಿಕ್ಕ ಧಣಿಯೋರು ಆ ಕೆರೆ ಪಕ್ಕ ಬಂದಿದ್ದು ಕಂಡೆ ಅವರು ಅಲ್ಲಿ ಬಂದಿರುವುದನ್ನು ನೋಡಿ ನಾನು ಅವರ ಬಳಿ ಹೋಗಿ ಯಜಮಾನರೆ ನೀವೇನು ಇಲ್ಲಿ ಎಂದು ಕೇಳಿದೆ ಅದಕ್ಕವರು ಏನು ಇಲ್ಲ ವೀರ ಪೇಟೆ ಕಡೆಗೆ ಹೋಗೋದಿತ್ತು ನೀನು ನನ್ನ ಜೊತೆ ಬರುವೆಯಾ ಎಂದು ಕೇಳಿದರು ನಾನು ಒಲ್ಲೆ ಎಂದಿದ್ದಕ್ಕೆ ಅವರು ಅಲ್ಲಿಂದ ಹೊರಟು ಹೋದರು ಆ ವೇಳೆ ಮಾದ ನಮ್ಮನ್ನು ನೋಡಿರಬಹುದು ಎಂದು ಜಾಣ್ಮೆಯಿಂದ ಉತ್ತರಿಸಿದ...
ಪಟೇಲನಿಗೆ ವೀರನ ಮಾತಿನಮೇಲೆ ನಂಬಿಕೆ ಬಂದಂತ್ತಿತ್ತು ಹೂಂ ಸರಿ ಹಾಗಾದರೆ ನಿಮಗ್ಯಾರಿಗೂ ನನ್ನ ಮಗ ಎಲ್ಲಿದ್ದಾನೆ ಎಂಬುವುದು ಗೊತ್ತಿಲ್ಲ ಈ ಮಾತು ನಿಜವೇ ಆಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳಿ ಒಂದು ವೇಳೆ ನಿಮ್ಮೆಲ್ಲರ ಮಾತು ಸುಳ್ಳಾದರೆ ಇಲ್ಲಿ ರಕ್ತದ ಹೋಕುಳಿ ಹರಿಯುವುದು ಖಂಡಿತ ಎಂದು ಹೇಳಿ ತನ್ನ ಪಟಾಲಂನ್ನು ಕರೆದುಕೊಂಡು ಅಲ್ಲಿಂದ ತನ್ನ ಬಂಗಲೆಯ ಕಡೆಗೆ ಹೊರಟ.
ಪಟೇಲ ಹೋಗಿದ್ದನ್ನು ನೋಡಿ ಗ್ರಾಮಸ್ಥರಿಗೆ ತುಸು ಸಮಾಧಾನವಾಯಿತು ಆದರೂ ಪಟೇಲ ಹೇಳಿದ ಮಾತಿನ ಬಗ್ಗೆ ಅವರಿಗೆ ಒಂದು ಕಡೆ ಭಯವೂ ಇತ್ತು ಪಟೇಲರ ಮಗನನ್ನು ನಮ್ಮ ಗ್ರಾಮಸ್ಥರು ಏನಾದರು ಮಾಡಿರುವರೇ ಎಂಬ ಸಂಶಯವೂ ಅವರನ್ನೆಲ್ಲ ಕಾಡುತ್ತಿತ್ತು ಏಕೆಂದರೆ ಅಂದಿನ ಕಾಲದಲ್ಲಿ ಗುಲಾಮಗಿರಿಯ ವಿರುಧ್ಧ ಎಲ್ಲೋ ಒಂದು ಕಡೆ ಸಮರವೂ ನಡೆಯುತ್ತಿತ್ತು ಆ ಸಮರದಲ್ಲಿ ಗ್ರಾಮದ ಯುವಕರು ಸೇರಿಕೊಂಡಿರಬಹುದೆಂಬ ಸಂಶಯವೂ ಅವರಿಗಿತ್ತು ಆದರೇನು ಮಾಡಲಾಗುವುದು ಎಲ್ಲಾ ಬಾರವನ್ನು ದೇವನ ಮೇಲೆ ಹಾಕಿ ಅಲ್ಲಿದ್ದವರೆಲ್ಲರೂ ತಮ್ಮ ತಮ್ಮ ಗುಡಿಸಲಿನೊಳಗೆ ಸೇರಿಕೊಂಡರು.......
ಸೂರ್ಯನೂ ಕೂಡ ತನ್ನ ಪ್ರಕಾಶಮಾನ ಬೆಳಕನ್ನು ಕಡಿತಗೊಳಿಸಿ ಮೆಲ್ಲನೆ ಆಕಾಶದುದರದೊಳಗೆ ಸೇರಿಕೊಂಡ
ಗ್ರಾಮವಿಡೀ ಕತ್ತಲಿನಿಂದ ಕೂಡಿತ್ತು ಕೆಲವು ಯುವಕರು ಎಂದಿನಂತೆ ಕಟ್ಟೆಯಲ್ಲಿ ಕುಳಿತು ಹರಟೆಯೊಡೆಯುತ್ತಿದ್ದರು ಅಲ್ಲಿ ಒಬ್ಬ ಹುಡುಗ ಮಾತ್ರ ಒಂದು ಬದಿಯಲ್ಲಿ ಕುಳಿತು ಏನೋ ಚಿಂತಿಸುತ್ತಿದ್ದ ಅವನ ಜೊತೆ ಜಯ ಮತ್ತು ಕೆಂಪ ಕೂಡ ಇದ್ದರು ಸ್ವಲ್ಪ ಹೊತ್ತು ಕಳೆದು ಆ ಮೂವರೂ ಗಾಢವಾದ ಚರ್ಚೆ ಶುರುವಿತ್ತರು ಅವರ ನಡುವೆ ಇದ್ದ ಮಾದ ಅವರಿಬ್ಬರಲ್ಲೂ ಕ್ಷಮೆಯಾಚಿಸುತ್ತಿದ್ದ ಅಷ್ಟರಲ್ಲಿ ಅಲ್ಲಿಗೆ ವೀರ ಬಂದ ಮಾದನನ್ನು ಕಂಡೊಡನೆಯೇ ವೀರನ ಕೋಪ ನೆತ್ತಿಗೇರಿತ್ತು ಇನ್ನೇನು ವೀರ ಮಾದನಿಗೆ ಹೊಡೆದೇ ಬಿಡುತ್ತಾನೆ ಎನ್ನುವಷ್ಟರಲ್ಲಿ ಮಾದ ವೀರನ ಕಾಲಿಗೆ ಬಿದ್ದು ವೀರಣ್ಣಾ ನಾನು ಮಾಡಿದ್ದು ದೊಡ್ಡ ತಪ್ಪು ಎಂಬುವುದು ನನಗೆ ಗೊತ್ತು ಆದರೆ ನಾನು ಪಟೇಲರಲ್ಲಿ ಆ ರೀತಿ ಹೇಳಿರದೆ ಇದ್ದಿದ್ದರೆ ಸುಮ್ಮನೆ ನಮ್ಮ ಗ್ರಾಮವೇ ಹೊತ್ತಿ ಉರೀತಾ ಇತ್ತು ಒಂದು ನಿಮಿಷ ನನ್ನ ಮಾತು ಕೇಳು ಆ ಮೇಲೆ ನೀನು ನನ್ನ ಕೊಲ್ಲುವುದಾದರೂ ಅಡ್ಡಿಯಿಲ್ಲ ಎಂದ. ಅದಕ್ಕೆ ವೀರ ಹೂಂ ಸರಿ ಅದೇನಾಯ್ತು ಅಂತ ಬಿಡಿಸಿ ಹೇಳು ಎಂದ.
ಅದಕ್ಕೆ ಮಾದ ಅಣ್ಣಾ ನಾನು ಪಟೇಲರ ಮನೆಗೆ ಜೀತಕ್ಕೆ ಹೋಗಿದ್ದಸಂದರ್ಭ ಪಟೇಲರು ಅಲ್ಲಿದ್ದ ಜೀತದಾಳುಗಳೆಲ್ಲರಿಗೂ ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗ ಹೊಡೀತಾ ಇದ್ದರು ನಾನು ಇದನ್ನು ದೂರದಿಂದಲೇ ನೋಡುತ್ತಿರಬೇಕಾದರೆ ಪಟೇಲರ ಕಾವಲಿಗ ರಾಜು ನನ್ನನ್ನೂ ಅಲ್ಲಿಗೆ ಕರೆದ ನಾನು ಭಯದಿಂದ ಒಲ್ಲೆ ಎಂದುಬಿಟ್ಟೆ ಅಷ್ಟರಲ್ಲಿ ಪಟೇಲರು ನನ್ನ ಬಳಿಗೆ ಬಂದು ನನ್ನ ಎದೆಗೆ ಒದ್ದು ಏನೋ ಎಂಜಲು ನಾಯಿ ಎಲ್ಲರೂ ಅಲ್ಲಿ ಇರಬೇಕಾದರೆ ನಿನಗೇನು ಕೆಲಸ ಇಲ್ಲಿ ಎಂದು ಕೇಳಿದ ಅದಕ್ಕೆ ನಾನು ಭಯದಿಂದ ಪಟೇಲರೆ ನಿಮ್ಮ ಮಗ ಅಂದೆ ಅಷ್ಟೆ ನಂತರ ಪಟೇಲರ ಕೋಪ ನೆತ್ತಿಗೇರಿತ್ತು ಅವರು ನನಗೆ ಸರಿಯಾಗಿ ಹೊಡೆದರು ಅವರ ಹೊಡೆತ ತಾಳಲಾರದೆ ನಿನ್ನ ಹೆಸರನ್ನು ಹೇಳಿ ಬಿಟ್ಟೆ ಕ್ಷಮಿಸು ವೀರಣ್ಣಾ ಎಂದು ಅಳಲು ಶುರುವಿತ್ತ ವೀರನಿಗೆ ಮಾದನ ಮೇಲೆ ಮರುಕ ಹುಟ್ಟಿ ಅವನು ಮಾದನನ್ನು ಕ್ಷಮಿಸಿ ಬಿಟ್ಟ ನಂತರ ಅವರೆಲ್ಲ ಸೇರಿ ಜೋರಾಗಿ ನಗಲು ಶುರುವಿತ್ತರು ಕೆಂಪ ವೀರನನ್ನು ಕರೆದು ಅಯ್ಯಾ ಏನೇ ಆಗಲಿ ನೀನು ಪಟೇಲರನ್ನೇ ಮೂರ್ಖನನ್ನಾಗಿಸಿದೆ ನಿನ್ನ ಧೈರ್ಯ ಮೆಚ್ಚಲೇ ಬೇಕು ನಾವಾದರೋ ನಿಜ ಹೇಳುವುದಿದ್ದರೂ ಭಯದಿಂದ ಸರಿಯಾದ ಮಾತು ಹೊರ ಬರದೆ ಚಡಪಡಿಸಬೇಕಿತ್ತು ಎಂದ.
ಅದಕ್ಕೆ ಹೇಯ್ ಸುಮ್ಮನಿರಿ ಇಲ್ಲಿ ಯಾಕೆ ಆ ವಿಷಯ ಮಾತಾಡುತ್ತಾ ಇದೀರ ಯಾರಾದರು ಕೇಳಿಸಿಕೊಂಡರೆ ನಮ್ಮ ಸಾವಿಗೆ ನಾವೇ ಮುನ್ನುಡಿ ಬರೆದಂತಾದೀತು ಎಂದ ಇದನ್ನು ಕೇಳಿದ ಎಲ್ಲರೂ ಸುಮ್ಮನಾದರು ಅಷ್ಟರಲ್ಲಿ ದೂರದಲ್ಲಿ ಯಾರೋ ಒಂದಷ್ಟು ಮಂದಿ ಧೀವಟಿಗೆಯನ್ನು ಕೈಯ್ಯಲ್ಲಿ ಹಿಡಿದು ಅದೇನೋ ಘೋಷವಾಕ್ಯ ಮೊಳಗಿಸುತ್ತಾ ಗ್ರಾಮದೊಳಕ್ಕೆ ಬಂದರು ಅವರು ಬಂದೊಡನೆಯೇ ಅಚ್ಚರಿಯೆಂಬಂತೆ ಗ್ರಾಮದಲ್ಲಿದ್ದವರೆಲ್ಲರೂ ಅವರ ಸುತ್ತ ಬಂದು ನಿಂತುಕೊಂಡರು ಅವರಲ್ಲಿ ಯಾರೊಬ್ಬರೂ ಪರಿಚಯವಿದ್ದಂತೆಯಿರಲಿಲ್ಲ ಎಲ್ಲರೂ ಮುಸುಕು ಧಾರಿಗಳಾಗಿದ್ದರು ಅವರ ಕೈಯ್ಯಲ್ಲಿ ಒಂದು ಕೋವಿಯೂ ಇತ್ತು ವೀರ ಮತ್ತವನ ಜೊತೆಗಾರರು ಇವರನ್ನೆಲ್ಲ ನೋಡಿ ಆಶ್ಚರ್ಯಚಕಿತರಾದರು ಅದರಲ್ಲಿ ಒಬ್ಬ ದೂರದಲ್ಲಿದ್ದವೀರನನ್ನು ಕಂಡು ಕೈ ಬೀಸಿ ಕರೆದ.....
ವೀರ ಅವರ ಬಳಿಗೆ ಹೋಗುತ್ತಿದ್ದಂತೆಯೇ ಅವರ ಕೈಯ್ಯಲ್ಲಿದ್ದ ಬಾವುಟವನ್ನು ಕಂಡು ದಿಗ್ಭ್ರಾಂತನಾದ ಇಲ್ಲಿಯವರಗೆ ಗ್ರಾಮಸ್ಥರು ಹೇಳುತ್ತಿದ್ದ ಬಂಡಾಯಗಾರರು ಇವರೇ ಆಗಿರಬಹುದೇನೋ ಅಂದುಕೊಂಡ... ವೀರ ಅವರ ಬಳಿಗೆ ತಲುಪಿದಾಗ ಅದರಲ್ಲಿ ಒಬ್ಬ ವೀರನನ್ನು ಅಪ್ಪಿಕೊಂಡು ಅವನನ್ನು ಭರಮಾಡಿಕೊಂಡ ನಂತರ ಆ ವ್ಯಕ್ತಿ ಹೇಳಿದ ವಿಷಯ ಕೇಳಿ ವೀರ ಮೂಕವಿಸ್ಮಿತನಾಗಿ ನಿಂತು ಬಿಟ್ಟ...................
ವೀರ ಪೂರ್ತಿಯಾಗಿ ಬೆವತುಹೋಗಿದ್ದ ಇನ್ನೇನು ಮಾಡುವುದು ಇವರೆಲ್ಲರೂ ಈ ವಿಷಯ ಪಟೇಲರಿಗೆ ಹೇಳಿದರೆ ಈ ಊರಿನ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ ಅಷ್ಟಕ್ಕೂ ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದೆಲ್ಲಾ ಚಿಂತಿಸುತ್ತಿರಬೇಕಾದರೆ ಆ ಗುಂಪಿನಲ್ಲಿ ಇದ್ದ ಒಬ್ಬ ವೀರನ ಕೊರಳಿಗೆ ಹೂವಿನ ಹಾರ ಹಾಕಿ ಕೆಚ್ಚೆದೆಯ ವೀರನಿಗೆ ಭಂಡಾಯ ಸಂಘಕ್ಕೆ ಸ್ವಾಗತ ಎಂದ ವೀರನಿಗೆ ಸಂತೋಷ ಮತ್ತು ಆತಂಕ ಉಂಟಾಯಿತು ಅವರು ವೀರನನ್ನು ಪಂಚಾಯ್ತಿ ಕಟ್ಟೆಯಲ್ಲಿ ಕುಳ್ಳಿರಿಸಿದರು ನಂತರ ಅವರಲ್ಲೊಬ್ಬ ಅಲ್ಲಿ ನರೆದಿದ್ದ ಭಂಡಾಯಗಾರರನ್ನು ಉದ್ಧೇಶಿಸಿ ಮಾತನಾಡಲು ಶುರುವಿತ್ತ ವೀರರೆ ನಾವು ಇಲ್ಲಿ ಸೇರಿದುದರ ಉದ್ಧೇಶ ನಿಮಗೆಲ್ಲ ತಿಳಿದಿರಬಹುದು ನಮ್ಮ ಗ್ರಾಮದಲ್ಲಿ ಗುಲಾಮತನ ನಿಲ್ಲಬೇಕೆಂದರೆ ಇಲ್ಲಿ ಅತಿ ಶಕ್ತವಾದ ಹೋರಾಟದ ಅಗತ್ಯವಿದೆ ಇದರಲ್ಲಿ ನಾವು ನಮ್ಮ ಅಮೂಲ್ಯವಾದ ಕೆಲವನ್ನು ಕಳೆದುಕೊಳ್ಳಲೂಬಹುದು ಇದಕ್ಕೆಲ್ಲ ನೀವು ಸಿದ್ಧರಿದ್ದರೆ ನಮ್ಮ ಮುಂದಿನ ತಲೆಮಾರು ಸ್ವತಂತ್ರವಾಗಿ ಇಲ್ಲಿ ಬದುಕಬಹುದು ಈ ಹೋರಾಟ ಕೇವಲ ನಮ್ಮೂರಿನ ಪಟೇಲನ ವಿರುದ್ಧ ಮಾತ್ರವಲ್ಲ ನಮ್ಮಂತಹಾ ಕುಗ್ರಾಮನ್ನು ತಮ್ಮ ಕಪಿ ಮುಷ್ಠಿಯಲ್ಲಿ ಇಟ್ಟಿರುವ ಎಲ್ಲಾ ಪಟೇಲರಿಗೂ ನಮ್ಮ ಹೋರಾಟದ ಬಿಸಿ ಮುಟ್ಟಬೇಕು ಇದೆಲ್ಲ ಸಾಧ್ಯವಾಗಬೇಕೆಂದರೆ ಇಲ್ಲಿ ಶಿಕ್ಷಣದ ಕ್ರಾಂತಿ ಅಗತ್ಯವಾಗಿದೆ ಆದ್ದರಿಂದ ನಾಳೆ ಇದೇ ಜಾಗದಲ್ಲಿ ನಮ್ಮ ಗುಂಪಿನ ಕೆಲವು ಸದಸ್ಯರು ನಿಮಗೆ ಅಕ್ಷರ ಭೋಧನೆ ಮಾಡಲಿದ್ದಾರೆ ನೀವು ಪ್ರತಿದಿನವೂ ಸಹಕರಿಸುವಂತೆ ನಾಳೆಯೂ ಅವರೊಂದಿಗೆ ಸಹಕರಿಸಬೇಕು ಎಂದ.
ಈ ಮಾತನ್ನು ಕೇಳಿ ಅಲ್ಲಿದ್ದವರಿಗೆಲ್ಲ ಸಂತೋಷ ಉಕ್ಕಿ ಬಂದಿತ್ತು ಆದರೆ ಅವರಲ್ಲಿ ಒಂದು ಭಯವೂ ನಾವೆಲ್ಲ ಅಕ್ಷರಭ್ಯಾಸ ಮಾಡುವುದು ಪಟೇಲನಿಗೆ ತಿಳಿದರೆ ನಮ್ಮ ಶಿರಚ್ಛೇದವಾಗುವುದು ಖಂಡಿತ ಆದರೂ ಅವರೆಲ್ಲರೂ ಧೈರ್ಯ ತಂದುಕೊಂಡು ಶಿಕ್ಷಣ ಕ್ರಾಂತಿಗೆ ಒಪ್ಪಿಕೊಂಡರು
ನಂತರದ ದಿನದಲ್ಲಿ ಗ್ರಾಮದಲ್ಲಿರುವ ಅರ್ಧದಷ್ಟು ಮಕ್ಕಳು ದೊಡ್ಡವರೆಲ್ಲ ಶೈಕ್ಷಣಿಕವಾಗಿ ಸ್ವಲ್ಪ ಮಟ್ಟಿಗೆ ಮುಂದುವರೆದಿದ್ದರು ಈ ಶಿಕ್ಷಣದ ಮಧ್ಯೆ ಶಾಲೆಯಲ್ಲಿ ಒಂದು ಸುಂದರ ಪ್ರೇಮಕಥೆ ಆರಂಭವಾದದ್ದು ಗ್ರಾಮದಲ್ಲಾರಿಗೂ ತಿಳಿಯಲೇ ಇಲ್ಲ ಆ ಪ್ರೇಮಿಗಳು ಬೇರಾರು ಅಲ್ಲ ನಮ್ಮ ನಾಯಕ ವೀರ ಮತ್ತು ಮುನಿಯನ ಮಗಳು ನಳಿನಿ.
ನಳಿನಿ ಕೃಷ್ಣ ಸುಂದರಿಯಾಗಿದ್ದಳು ಅದರಂತೆಯೇ ಅವಳ ಮನಸ್ಸು ಹಾಲಿನಂತೆ ಯಾರನ್ನೂ ನೋಯಿಸದೆ ಗ್ರಾಮದ ಜನರಿಗೆ ಅಚ್ಚು ಮೆಚ್ಚಿನವಳು ಆದರೆ ನಳಿನಿಗೆ ಸ್ವಲ್ಪ ಗಂಡುಬೀರಿ ಸ್ವಭಾವದವಳು ಯಾರಿಗೂ ಬಗ್ಗದವಳು ಗರ್ವ ಪರ್ವತವನ್ನೂ ನಾಚಿಸುವಂತಿತ್ತು ಇಷ್ಟೆಲ್ಲಾ ಇದ್ದರೂ ನಮ್ಮ ನಳಿನಿಗೆ ವೀರ ಎಂದರೆ ಬೆಟ್ಟದಷ್ಟು ಪ್ರೀತಿ ಯಾರ ಮಾತಿಗೂ ಬಗ್ಗದವಳು ವೀರನ ಮುಂದು ಮೌನಿಯಾಗಿರುತ್ತಿದ್ದಳು.
ವೀರನೂ ಅಷ್ಟೆ ನಳಿನಿಯನ್ನು ಬಹಳ ಹಚ್ಚಿಕೊಂಡಿದ್ದ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದರು ಒಂದೊಂದು ಬಾರಿ ಕದ್ದು ಮುಚ್ಚಿ ಊರ ಬಾಗಿಲಲ್ಲಿರುವ ಗುಡಿಯಲ್ಲಿ ಬೇಟಿಯಾಗುತ್ತಿದ್ದರು ಹೀಗಿರಬೇಕಾದರೆ ಒಂದು ದಿನ ಅವರಿಬ್ಬರೂ ಗುಡಿಯಲ್ಲಿ ಕುಳಿತು ಮಾತಾಡುತ್ತಿರಬೇಕಾದರೆ ಅಲ್ಲಿಗೆ ನಳಿನಿಯ ತಂದೆ ಮುನಿಯ ಬಂದಿದ್ದು ಅವರು ಗಮನಿಸಲೇ ಇಲ್ಲ ಮುನಿಯ ಗುಡಿಯೊಳಗೆ ಬರುತ್ತಿದ್ದಂತೆಯೇ ಅಲ್ಲಿ ತನ್ನ ಮಗಳು ಮತ್ತು ಮುನಿಯ ಕೈ ಕೈ ಹಿಡಿದುಕೊಂಡು ಮಾತಾಡುವುದನ್ನು ಅವನು ನೋಡಿದ ಅವರನ್ನು ಕಂಡ ಮುನಿಯನಿಗೆ ಕೋಪ ಬಂದಿತ್ತಾದರೂ ಅದು ಗುಡಿಯಾಗಿದ್ದರಿಂದ ಸುಮ್ಮನಿದ್ದ ಮುನಿಯ ನಳಿಯನ್ನು ಎಳೆದುಕೊಂಡು ಮನಯ ಕಡೆ ಹೊರಟ ವೀರ ಅವರು ಹೋಗುವುದನ್ನೇ ನೋಡುತ್ತ ದುಖತಪ್ತನಾಗಿ ಕುಳಿತ ಸ್ವಲ್ಪ ಸಮಯದ ನಂತರ ಕೆಂಚ ವೀರನ ಬಳಿಗೆ ಓಡುತ್ತಾ ಬಂದು ಏದುಸಿರು ಬಿಡುತ್ತಾ ವೀರಣ್ಣ ನಮ್ಮ ಊರಹಿರಿಯರೆಲ್ಲ ಪಂಚಾಯ್ತಿ ಕಟ್ಟೆಯ ಬಳಿ ಸೇರಿದ್ದಾರೆ ಅಲ್ಲಿಗೆ ಪಟೇಲರೂ ಬಂದಿದ್ದಾರೆ ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ ನೀನು ನನ್ನ ಜೊತೆ ಬಾ ಎಂದ
ಕೆಂಚನ ಮಾತು ಕೇಳಿದ ವೀರನಿಗೆ ಮನದಲ್ಲಿ ಭಯ ಶುರುವಾಗಿತ್ತು ಯಾಕಾಗಿರಬಹುದು ಪಟೇಲರು ನನ್ನನ್ನು ಕರೆದುಕೊಂಡು ಬರಲು ಹೇಳಿರುವುದು ಒಂದು ವೇಳೆ ಪಟೇಲರಿಗೆ ನಮ್ಮ ಬಂಡಾಯಗಾರರ ಬಗ್ಗೆ ತಿಳಿದಿರಬಹುದೇ ಅಥವಾ ಶಶಿಯ ವಿಚಾರವೇನಾದರೂ ಆಗಿರಬಹುದೇ ಎಂದು ಒಳಗೊಳಗೆಯೇ ಚಿಂತಿಸುತ್ತಾ ಪಂಚಾಯ್ತಿ ಕಟ್ಟೆಯ ಬಳಿಗೆ ಬಂದ..............
ವೀರ ಪಟೇಲರು ನನ್ನನ್ನು ಕರೆತರಲು ಹೇಳಿದ್ದಾರೆಂದರೆ ಅದೇನೋ ನನ್ನ ತಲೆ ಹೋಗುವ ವಿಷಯವೇ ಆಗಿರಬೇಕು ಅಂದು ನಾನು ಶಶಿಯನ್ನು ಕೊಂದಾಗ ಆ ಬಂಡಾಯಗಾರ ಎಲ್ಲೊ ಅವಿತು ಅದನ್ನು ನೋಡಿದ್ದ ಒಂದು ವೇಳೆ ಅವನು ಆ ವಿಷಯ ಪಟೇಲರಿಗೆ ಹೇಳಿರಬಹುದೇ ಆ ವಿಷಯವೇನಾದರೂ ಅವನು ಪಟೇಲರಿಗೆ ಹೇಳಿದ್ದರೆ ಇಷ್ಟೊತ್ತಿಗೆ ನಮ್ಮ ಗ್ರಾಮ ರಣರಂಗವಾಗಬೇಕಿತ್ತು ಹಾಗಾಗಲಿಲ್ಲ ಹಾಗಾದರೆ ಯಾಕಿರಬಹುದು ಎಂದು ಮತ್ತೊಮ್ಮೆ ಯೋಚಿಸಲು ಶುರುಮಾಡುವ ಮೊದಲೇ ವೀರ ಪಂಚಾಯ್ತಿ ಕಟ್ಟೆ ಮುಂದೆ ತಲುಪಿದ್ದ.
ವೀರ ಅಲ್ಲಿಯ ದೃಶ್ಯ ನೋಡಿ ಧಂಗಾಗಿಬಿಟ್ಟ ಯಾಕೆಂದರೆ ಅಂದು ಶಶಿಯ ಕೊಲೆಯನ್ನು ನೋಡಿದ ಆ ಬಂಡಾಯಗಾರ ಕಟ್ಟೆಯ ಮುಂದೆ ನಿಂತಿದ್ದ ಅವನ ಪಕ್ಕದಲ್ಲಿ ಮುನಿಯ ಮತ್ತು ನಳಿನಿ ನಿಂತಿದ್ದನ್ನೂ ಕಂಡ ಈಗ ವೀರನಿಗೆ ಅಲ್ಲಿಯ ವಿಷಯ ಸ್ವಲ್ಪ ಅರ್ಥವಾಗಿತ್ತಾದರೂ ಪೂರ್ತಿ ಅರ್ಥೈಸುವ ಸಮಯ ಅವನಿಗಿರಲಿಲ್ಲ ಅಷ್ಟೊತ್ತಿಗಾಗಲೆ ಅವನ ಕೈಯ್ಯಲ್ಲಿ ಹರಿಶಿಣ ದಾರವನ್ನು ಕೊಟ್ಟು ಅದನ್ನು ನಳಿನಿಯ ಕೊರಳಿಗೆ ಕಟ್ಟುವಂತೆ ಪಟೇಲ ಆಜ್ಞಾಪಿಸಿದ ಪಟೇಲನ ಆಜ್ಞೆಯಂತೆ ವೀರ ನಳಿನಿಯ ಕೊರಳಿಗೆ ಆ ಹರಿಶಿಣ ದಾರವನ್ನು ಕಟ್ಟಿದ ಈಗ ವೀರನಿಗೆ ಯೋಚಿಸಲು ಏನೂ ಉಳಿದಿಲ್ಲ ಯಾಕೆಂದರೆ ಅಲ್ಲಿಯ ನೈಜ ಚಿತ್ರಣ ವೀರನಿಗೆ ಅರಿವಾಯಿತು ಇದೆಲ್ಲ ಈ ನನ್ನ ಗಂಡು ಬೀರಿಯದ್ದೇ ಕೆಲಸವಾಗಿರಬೇಕು ಅಂದುಕೊಂಡ ಅಂತೂ ನೆನೆಯದೆಯೇ ತಾನು ಪ್ರೀತಿಸಿದವಳ ಕೈ ಹಿಡಿದ ವೀರನ ಸಂತೋಷಕ್ಕೆ ಪಾರವೇ ಇರಲಿಲ್ಲ ಪಟೇಲ ವೀರನ ಬಳಿಗೆ ಬಂದು ಇನ್ನು ಮುಂದೆಯಾದರೂ ಊರು ಬಸವನ ಹಾಗೆ ಅಲೆಯುವುದು ಬಿಟ್ಟು ಮೈ ಬಗ್ಗಿಸಿ ದುಡಿ ಇನ್ನು ನೀನು ನನ್ನ ಮನೆಯ ಮುಖ್ಯ ಕೆಲಸಗಾರನಾಗಿರು ಎಂದು ಹೇಳಿ ಪಟೇಲ ಸಂಚಿನ ನಗು ಬೀರಿ ಅಲ್ಲಿಂದ ಹೊರಟ.
ನಂತರ ವಧು-ವರರು ಹಿರಿಯರ ಆಶೀರ್ವಾದ ಪಡೆದು ಮುನಿಯನ ಬಳಿಗೆ ಬಂದು ನಿಂತರು ಆಗ ಮುನಿಯ ಅಯ್ಯಾ ವೀರ ಈ ನನ್ನ ಮಗಳ ಚೇಷ್ಟೆಯಿಂದಾಗಿ ಅವಳನ್ನು ನಿನಗೇ ಮದುವೆ ಮಾಡಿಸುವ ಅನಿವಾರ್ಯ ಬಂದು ಬಿಟ್ಟಿತ್ತು ಇವಳು ಪಂಚಾಯ್ತಿ ಸೇರಿಸಿದ್ದರಿಂದ ಪಟೇಲರೂ ಇಲ್ಲಿಗೆ ಬಂದು ನಿನ್ನನ್ನು ಕರೆದುಕೊಂಡು ಬಂದು ಇವಳ ಕೊರಳಿಗೆ ತಾಳಿ ಕಟ್ಟಿಸುವಂತಾಯ್ತು ಇನ್ನು ಇವಳ ಜವಾಬ್ಧಾರಿ ನಿನ್ನದು ನೂರ್ಕಾಲ ಸುವಾಗಿ ಬಾಳಿ ಎಂದು ಅವರಿಬ್ಬರನ್ನು ಆಶೀರ್ವದಿಸಿದ.
ಈಗ ನಮ್ಮ ನಳಿನಿಯ ನಾಚಿಕೆಗೆಮಿತಿಯೇ ಇರಲಿಲ್ಲ ಅವಳು ವೀರನ ಕೈ ಹಿಡಿದು ಅವನ ಮನೆಗೆ ಹೊರಟಳು ಇದನ್ನು ಕಂಡ ಕೆಂಚ ಹೋ ಹೋ ನೋಡು ನೋಡು ನಮ್ಮ ಗಂಡು ಬೀರಿಗೂ ನಾಚಿಕೆಯಾಗುತ್ತೆ ಎಂದು ನಳಿಯನ್ನು ಗೇಲಿ ಮಾಡಿದ ಅದಕ್ಕೆ ವೀರ ಲೋ ಯಾಕ್ರೊ ಅವಳನ್ನ ಗೋಳು ಹೊಯ್ಕೋತೀರ ಅಂದ ಅದಕ್ಕೆ ಜಯ ಹೋಯ್ ಹೋಯ್ ನಮ್ಮ ಬಂಡೆಗೆ ಈ ಗಂಡುಬೀರಿ ಮೇಲೆ ಇವಾಗ್ಲೆ ಕಾಳಜಿ ಬಂದು ಬಿಟ್ಟಿದೆ ಇನ್ನು ನಮ್ಮ ಗತಿ ಅಧೋ ಗತಿ ಎಂದ ಅದಕ್ಕೆ ವೀರ ಲೇಯ್ ನೀವೆಲ್ಲಾ ಈಗ ಸುಮ್ಮನಿದ್ದರೆ ಸರಿ ಇಲ್ಲ ಅಂದ್ರೆ ನಿಮಗ್ಯಾರಿಗೂ ಮದುವೆಯ ಊಟ ಕೊಡಲಾರೆ ಎಂದ.
ಇದನ್ನು ಕೇಳಿದ ಮೂರು ಛೋಟ ಮೆಟಸಿನಕಾಯಿಗಳು ಸುಮ್ಮನೆ ವೀರ ಮತ್ತು ನಳಿನಿಯ ಹಿಂದೆ ನಡೆಯತೊಡಗಿದರು.
ಮಧ್ಯಾಹ್ನದ ಸೂರ್ಯ ತಲೆಯ ಸುಡುತ್ತಿದ್ದಂತೆಯೇ ವೀರನ ಮನೆಯ ಮುಂದೆ ತೆಂಗಿನ ಗರಿಯಿಂದ ಕೂಡಿದ ತಂಪಗಿನ ಸುಂದರವಾದ ಚಪ್ಪರ ತಲೆಯೆತ್ತಿ ನಿಂತಿತ್ತು ಅದರ ಕೆಲಗಡೆ ಹಾಸು ಹಾಸಿ ಊಟದ ವ್ಯವಸ್ಥೆಯೂ ಮಾಡಲಾಗಿತ್ತು ಗ್ರಾಮಸ್ಥರೆಲ್ಲ ಖುಷಿಯಾಗಿ ಮದುವೆಯ ಔತಣ ಸ್ವೀಕರಿಸಿ ವಧುವರರಿಗೆ ಹಾರೈಸಿದರು ಸ್ವಲ್ಪ ಹೊತ್ತಿನ ಬಳಿಕ ಊಟದ ಪಂಕ್ತಿ ಮುಗಿದು ವಧು-ವರರು ತಮ್ಮ ಮುಂದಿನ ಕಾರ್ಯಕ್ಕೆ ಸಿದ್ಧವಾದರು ಜಮುನ ಅವರಿಬ್ಬರನ್ನೂ ಆರತಿ ಬೆಳಗಿಸಿ ಮನೆಯ ಒಳಗಡೆ ಬರಮಾಡಿ ಅವರನ್ನು ಕೋಣೆಗೆ ಕಳುಹಿಸಿಕೊಟ್ಟಳು ಇಷ್ಟರಲ್ಲಿ ಆಗಸದಲ್ಲಿ ಚಂದಿರ ತನ್ನ ಛಾಪು ಮೂಡಿಸಿದ್ದ ನವ ದಂಪತಿಗಳು ಅದನ್ನು ನೋಡುತ್ತಲೇ ತಮ್ಮ ಮೊದಲ ರಾತ್ರಿಯ ಖುಷಿಯನ್ನು ಹಂಚಿಕೊಂಡರು.
ಮತ್ತೆ ಬೆಳಗಾಗುತ್ತಿದ್ದಂತೆಯೇ ವೀರನ ಮನೆಯ ಮುಂದೆ ಯಾರೋ ನಾಲ್ಕು ದಾಂಢಿಗರು ಬಂದು ನಿಂತಿದ್ದರು ಮುನಿಯ ಅವರಬಳಿ ಬಂದು ಅಯ್ಯಾ ಯಾರು ನೀವೆಲ್ಲ ಇಲ್ಲಿ ಯಾಕೆ ನಿಂತಿದ್ದೀರ ಎಂದು ಕೇಳಿದ ಅದಕ್ಕೆ ಅವರು ನಾವು ವೀರನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ ಇಂದು ಪಟೇಲರ ಮನೆಯಲ್ಲಿ ಬಲಿ ಪೂಜೆ ನಡೆಯುವುದಿದೆ ಆದ್ದರಿಂದ ವೀರ ಪಟೇಲರ ಮುಖ್ಯ ಕೆಲಸಗಾರನಾಗಿ ಅಲ್ಲಿಯ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಬೇಕು ಅದಕ್ಕಾಗಿ ಈಗ ವೀರನನ್ನು ನಮ್ಮ ಜೊತೆ ಕಳುಹಿಸಿಕೊಡಿ ಎಂದ ಇದನ್ನು ಕೇಳಿದ ಮುನಿಯ ಅಯ್ಯಾ ಅವನಿಗೆ ನಿನ್ನೆ ತಾನೆ ಮದುವೆಯಾಯಿತು ಈ ಶುಭ ಸಂದರ್ಭದಲ್ಲಿ ಅವನನ್ನು ಬಲಿಪೂಜೆಗೆ ಅದೂ ಕೂಡ ಆ ರಾಕ್ಷಸೀಯ ಬಲಿ ಪೂಜೆಗೆ ಕಳುಹಿಸುವುದು ಸರಿಯೇ ಎಂದು ಕೇಳಿದ.
ಅದಕ್ಕವರು ಅದೆಲ್ಲ ನಮಗೆ ಗೊತ್ತಿಲ್ಲ ಪಟೇಲರು ನಮಗೆ ಹೇಳಿದ ಕೆಲಸ ಮಾಡುವುದಷ್ಟೆ ನಮಗೆ ಗೊತ್ತು ನೀವು ವೀರನನ್ನು ಕರೆಯಿರಿ ಎಂದ ಅಷ್ಟರಲ್ಲಿ ವೀರ ಹೊರಗೆ ಬಂದು ಅವರ ಮಾತನ್ನೆಲ್ಲ ಕೇಳಿಸಿಕೊಂಡ ನಂತರ ನಳಿನಿಯ ಹಣೆಗೆ ಪ್ರೀತಿಯ ಮುದ್ರೆಯೊತ್ತಿ ವಿದಾಯ ಹೇಳಿ ಅವರೊಂದಿಗೆ ಹೊರಟ.....
ವೀರ ಮತ್ತು ಅವನನ್ನು ಕರೆತರಲು ಬಂದಿದ್ದ ಆ ನಾಲ್ವರು ದಾಂಡಿಗರು ಪಟೇಲರ ಮನೆಗೆ ತಲುಪಿದರು ವೀರನನ್ನು ನೋಡಿದ ಪಟೇಲ ಬಾ ವೀರ ಮೊದಲನೇಯ ಬಾರಿ ಈ ಮನೆಯೊಳಗೆ ಬರುತ್ತಿದ್ದೀಯ ಸ್ವಲ್ಪ ಮಜ್ಜಿಗೆ ಕುಡಿದು ಧಣಿವಾರಿಸಿಕೊಳ್ಳುವಿಯಂತೆ ನಂತರ ಪೇಟೆಗೆ ಹೋಗಿ ಪೂಜಾ ಸಾಮಾಗ್ರಿಗಳನ್ನು ತರೋಣ ಎಂದ ವೀರ ಸರಿ ಬುದ್ದಿ ನೀವೇಳಿದ ಹಾಗೇ ಆಗಲಿ ಎಂದ ಪಟೇಲ ಮಾತು ಮುಂದುವರಿಸುತ್ತಾ ವೀರ ಅಂದಹಾಗೆ ಈ ಬಲಿ ಪೂಜೆ ಯಾಕೆ ಗೊತ್ತಾ ಎಂದು ಕೇಳಿದ.
ಅದಕ್ಕೆ ವೀರ ಬುದ್ದಿ ಗೊತ್ತಿಲ್ಲ ಎಂದು ಹೇಗೆ ಹೇಳಲಿ ಪ್ರತೀ ವರ್ಷದಂತೆ ಈ ವರ್ಷವೂ ಒಳ್ಳೆಯ ಮಳೆ ಬೆಳೆಯಾಗಲಿ ಎಂಬ ಉದ್ಧೇಶದಿಂದ ತಾನೆ ಈ ಬಲಿಪೂಜೆ ಎಂದು ಹೇಳಿದ ಅದಕ್ಕೆ ಪಟೇಲ ಅದೇನೋ ಸರಿ ವೀರ ಆದರೆ ಇಂದಿನ ಈ ಪೂಜೆ ನನ್ನ ಮಗ ಶಶಿಯನ್ನುಕೊಂದವರನ್ನು ಆ ಮಹಾಕಾಳಿ ನನಗೆ ತೋರಿಸಿ ಕೊಡುತ್ತಾಳೆ ಅದಕ್ಕಾಗಿ ಅವಳಿಗೆ ನೈವೇಧ್ಯವಾಗಿ ನರ ಬಲಿಯನ್ನು ಅರ್ಪಿಸುತ್ತಿದ್ದೇನೆ ಎಂದ.
ವೀರ ಒಂದು ಕ್ಷಣ ಬೆಚ್ಚಿ ಬಿದ್ದ ಆದರೂ ಸುಧಾರಿಸಿಕೊಂಡು ಪಟೇಲರೇ ಇದೇನು ಹೇಳುತ್ತಾ ಇದ್ದೀರ ನೀವು ಶಶಿ ಯಜಮಾನರನ್ನು ಕೊಲೆ ಮಾಡಿದ್ದಾರೆಯೇ ಅಯ್ಯೋ ಪಾಪ ಚಿಕ್ಕ ಧಣಿಯವರನ್ನು ಕೊಲೆ ಮಾಡಿದ ಆ ಚಾಂಡಾಲ ಯಾರು ಎಂಬುವುದು ಗೊತ್ತಾಯಿತೇ ಎಂದು ಕೇಳಿದ.
ಅದಕ್ಕೆ ಪಟೇಲ ಇಲ್ಲ ವೀರ ನನಗನ್ನಿಸುತ್ತದೆ ಇದೆಲ್ಲ ಪಕ್ಕದೂರಿನ ಪಟೇಲನ ಕುತಂತ್ರವಾಗಿರಬೇಕು ಅವನೇ ನನ್ನ ಮಗನನ್ನು ಕೊಲ್ಲಿಸಿರಬೇಕು ನಿನ್ನೆ ನನ್ನ ಮಗನ ಶವ ಊರಿನ ಕೆರೆಯ ಪಕ್ಕದಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಯಿತು ಆ ಕೆರೆ ಮತ್ತು ಆ ಪಟೇಲನ ಮನೆಗೆ ತುಂಬಾ ದೂರವೇನು ಇಲ್ಲ ಒಂದು ನೂರು ಹೆಜ್ಜೆಯ ಅಂತರ ಅಷ್ಟೆ ಹಾಗಾಗಿ ನನ್ನ ಮಗನನ್ನು ಅವನೇ ಕೊಲೆ ಮಾಡಿರಬೇಕು ಎಂಬ ಸಂಶಯ ಎಂದ.
ವೀರ ಮರು ಮಾತನಾಡದೆ ಮಜ್ಜಿಗೆ ಕುಡಿದು ಮುಗಿಸಿ ಲೋಟವನ್ನು ಪಕ್ಕಕ್ಕಿಟ್ಟು ಪಟೇಲರೆ ತಡವಾಗುತ್ತಾ ಇದೆ ಪೂಜಾ ಸಾಮಾಗ್ರಿ ತರಲು ಪೇಟೆಗೆ ಹೊರಡೋಣವೇ ಎಂದು ಕೇಳಿದ. ಅದಕ್ಕೆ ಪಟೇಲ ಹೂಂ ಸರಿ ವೀರ ಹೊರಡೋಣ ಎಂದು ಕಾರಿನಲ್ಲಿ ಕುಳಿತು ಪೇಟೆಗೆ ಹೊರಡಲಣಿಯಾದ ವೀರ ಪಟೇಲನ ಹಿಂದೆಯೇ ಕಾರಿನಲ್ಲಿ ಹತ್ತಲು ಮುಂದಾದಾಗ ಪಟೇಲ ವೀರನ ಎದೆಗೆ ಒದ್ದು ಹೊರ ಹಾಕಿದ ನಂತರ ಕಾರಿನಿಂದ ಕೆಳಗಿಳಿದು ನನ್ನ ಮನೆಯ ಎಂಜಲು ತಿನ್ನುವ ನಾಯಿ ನೀನು ಏನೋ ಒಂದೆರಡು ಮಾತು ಸಲುಗೆಯಿಂದ ಆಡಿದರೆ ಅದನ್ನೇ ಬಂಡವಾಳ ಮಾಡಿಕೊಂಡು ನನ್ನ ತಲೆ ಮೇಲೆ ಹತ್ತಿ ಕೂರುತ್ತೀಯ ಇನ್ನೊಮ್ಮೆ ಹೀಗೇನಾದರು ಆವರ್ತಿಸಿದರೆ ಸಿಗಿದು ಊರ ಬಾಗಿಲಿಗೆ ತೋರಣ ಕಟ್ಟಿ ಬಿಡುತ್ತೇನೆ ಎಂದ.
ಪಾಪ ವೀರ ಅವನಿಗಿದೇನೂ ತಿಳಿಯದು ಹೇಗೂ ಪೂಜೆಯ ಸಾಮಾನು ತರಬೇಕಲ್ಲವೇ ಅದೂ ಅಲ್ಲದೆ ಪಟೇಲ ಬೇರೆ ಜೊತೆಗೇ ಹೋಗೋಣ ಎಂದಿದ್ದ ಆದರೆ ಆ ಜೊತೆ ಪಟೇಲನ ಕಾರಿನ ಹಿಂದೆ ಇರುವ ಎತ್ತಿನ ಬಂಡಿಯಲ್ಲಿ ಎನ್ನುವುದು ಅವನಿಗೆ ಗೊತ್ತೇ ಇರಲಿಲ್ಲ ವೀರ ಅವಮಾನ ಮತ್ತು ಕೋಪವನ್ನು ನುಂಗಿಕೊಂಡು ಪಟೇಲನ ಬಳಿ ಕ್ಷಮೆ ಕೇಳಿ ಎತ್ತಿನಗಾಡಿ ಏರಿ ಕುಳಿತ.
ತುಸು ಹೊತ್ತಿನ ಬಳಿಕ ವೀರ ಮತ್ತು ಪಟೇಲ ಪೇಟೆಗೆ ತಲುಪಿದರು.
ಪಟೇಲ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಖರೀದಿಸಿ ಅದನ್ನೆಲ್ಲ ಗಾಡಿಗೆ ತುಂಬಿಸುವಂತೆ ವೀರನಿಗೆ ಹೇಳಿದ ವೀರ ಪಟೇಲನ ಮಾತಿನಂತೆ ಆ ಸಾಮಾಗ್ರಿಗಳನ್ನೆಲ್ಲ ಎತ್ತಿನ ಬಂಡಿಯಲ್ಲಿ ತುಂಬಿಸಿ ಮತ್ತೆ ಪಟೇಲನ ಮನೆಯ ಕಡೆಗೆ ಹೊರಟ ಪಟೇಲ ತುಸು ಬೇಗನೆ ಮನೆಗೆ ಹೋಗಿದ್ದರಿಂದ ವೀರ ಒಬ್ಬನೆ ಮೆಲ್ಲಗೆ ಎತ್ತಿನ ಗಾಡಿಯನ್ನು ಓಡಿಸುತ್ತಾ ಬರುತ್ತಿದ್ದ. ಇನ್ನೇನು ಪಟೇಲನ ಮನೆಗೆ ತಲುಪಲು ಒಂದೆರಡು ಮೈಲಿಯಷ್ಟೆ ಇರುವಾಗ ಅಚಾನಕ್ಕಾಗಿ ಅವನ ಗಾಡಿಯನ್ನು ಯಾರೋ ಇಬ್ಬರು ಮುಸುಕುಧಾರಿಗಳು ತಡೆದು ನಿಲ್ಲಿಸಿದರು ವೀರ ಅವರಿಗೆ ಭಯ ಪಡದೆ ಗಾಡಿ ಮುಂದಕ್ಕೆ ಎಳೆಯುವಂತೆ ಎತ್ತಿಗೆ ಒಂದೆರಡು ಪೆಟ್ಟು ಕೊಟ್ಟ ಆ ಪೆಟ್ಟಿಗೆ ಎತ್ತುಗಳು ಗಾಡಿಯನ್ನು ಎಳೆದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದವು ಇದನ್ನು ಕಂಡ ಆ ಮುಸುಕು ದಾರಿಗಳು ಕೋಪದಿಂದ ತಮ್ಮ ಸೊಂಟದಲ್ಲಿ ಸಿಕ್ಕಿಸಿದ್ದ ಖಡ್ಗವನ್ನು ಹೊರಗೆಳೆದು ಇನ್ನೇನು ವೀರನ ಕಡೆಗೆ ಬೀಸಬೇಕೆನ್ನುವಷ್ಟರಲ್ಲಿ ಎರಡೂ ಎತ್ತುಗಳು ಒಮ್ಮೆಲೆ ನಿಂತೇ ಬಿಟ್ಟವು ಆ ಇಬ್ಬರೂ ಮುಸುಕುಧಾರಿಗಳು ಖಡ್ಗವನ್ನು ಓರೆಯೊಳಗೆ ಹಾಕಿ ವೀರನನ್ನು ಗಾಡಿಯಿಂದ ಕೆಳಗಿಳಿಯುವಂತೆ ಹೇಳಿದರು ವೀರ ಅವರ ಮಾತಿನಂತೆ ಗಾಡಿಯಿಂದ ಕೆಳಗಿಳಿದು ಅವರ ಮುಂದೆ ನಿಂತು ಅಯ್ಯಾ ನೀವ್ಯಾರೆಂದು ನನಗೆ ಗೊತ್ತಿಲ್ಲ ನನ್ನ ದಾರಿಗೆ ಯಾಕೆ ಅಡ್ಡವಾಗಿದ್ದೀರ ನಾನು ಆದಷ್ಟು ಬೇಗ ಪಟೇಲರ ಮನೆಗೆ ತಲುಪಬೇಕು ಅವರೆಲ್ಲ ನನಗಾಗಿಯೇ ಕಾಯತ್ತಿರುತ್ತಾರೆ ನನಗೆ ದಾರಿ ಬಿಡಿ ನಾನು ಹೋಗಬೇಕು ಇಲ್ಲದಿದ್ದಲ್ಲಿ ನಿಮ್ಮಿಬ್ಬರನ್ನು ಹೊಡೆದು ಹಾಕಿ ನನ್ನ ದಾರಿ ನಾನು ನೋಡಬೇಕಾಗುತ್ತದೆ ಎಂದ.
ಅದಕ್ಕೆ ಆ ಇಬ್ಬರೂ ಮುಸುಕುಧಾರಿಗಳು ತಮ್ಮ ಮುಸುಕನ್ನು ಸರಿಸಿ ವೀರನಿಗೆ ತಮ್ಮ ಗುರುತು ತೋರಿಸಿಕೊಟ್ಟು ಅಯ್ಯಾ ವೀರ ನಾವು ನಿನ್ನನ್ನು ಉಪದ್ರವಿಸಲು ಇಲ್ಲಿಗೆ ಬಂದಿಲ್ಲ ಪಟೇಲನ ಮನೆಯಲ್ಲಿ ನಡೆಯುವ ಬಲಿಪೂಜೆಯ ಬಗ್ಗೆ ನಿನ್ನ ಬಳಿ ಒಂದು ವಿಷಯ ಹೇಳಬೇಕಿತ್ತು ಎಂದು ಹೇಳಿದ.
ವೀರ ಅವರನ್ನು ಗುರುತು ಹಿಡಿದ ಅವರು ಹೇಳಿದ ಮಾತು ಕೇಳಿ ವೀರ ಧಂಗಾಗಿಬಿಟ್ಟ.........
ನಾಳೆ ಬಲಿಪೂಜೆ👺.....
✍🏻ಅಶ್ಫಾಖ್ ಅಶ್ಶು ಆಲಾಡಿ
NOORUL FALAH ISLAMIC ORGANISATION
Comments
Post a Comment