ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 150


ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 150

وَمِنْ حَيْثُ خَرَجْتَ فَوَلِّ وَجْهَكَ شَطْرَ ٱلْمَسْجِدِ ٱلْحَرَامِ ۚ وَحَيْثُ مَا كُنتُمْ فَوَلُّوا۟ وُجُوهَكُمْ شَطْرَهُۥ لِئَلَّا يَكُونَ لِلنَّاسِ عَلَيْكُمْ حُجَّةٌ إِلَّا ٱلَّذِينَ ظَلَمُوا۟ مِنْهُمْ فَلَا تَخْشَوْهُمْ وَٱخْشَوْنِى وَلِأُتِمَّ نِعْمَتِى عَلَيْكُمْ وَلَعَلَّكُمْ تَهْتَدُونَ

ಅರ್ಥ:⤵️
▪️ನೀವು ಎತ್ತ ಹೊರಟಿದ್ದರೂ ಮಸ್ಜಿದುಲ್ ಹರಾಮಿನ ಕಡೆಗೆ ಅಭಿಮುಖರಾಗಿರಿ. (ಸತ್ಯವಿಶ್ವಾಸಿಗಳೇ) ನೀವು ಎಲ್ಲಿರುವಿರಾದರೂ ಆ ದಿಕ್ಕಿಗೆ ನಿಮ್ಮ ಮುಖ ತಿರುಗಿಸಿರಿ. ಇದು ಅವರ ಪೈಕಿ ಕೆಲವು ಮಂದಿ (ತರ್ಕಕ್ಕೆ ನಿಲ್ಲುವ) ದುರಾತ್ಮರ ಹೊರತು, ಉಳಿದ  ಜನರಿಗೆ ನಿಮ್ಮ ವಿರುದ್ಧ ಯಾವುದೇ ಪುರಾವೆ (ಸಾಕ್ಷಿ) ದೊರೆಯದಿರಲು⁷⁷. ನೀವು ಅವರಿಗೆ ಭಯಪಡಬೇಡಿರಿ. ಪ್ರತಿಯಾಗಿ ನನಗೆ ಭಯಪಡಿರಿ. ಇದು ನನ್ನ ವರದಾನವನ್ನು ನಿಮಗೆ ನಾನು ಪೂರ್ಣಗೊಳಿಸಲು ಹಾಗೂ ನೀವು ಸತ್ಪಥಿಕರಾಗಲು.

ವಿವರಣೆ:⤵️
  77. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಅ್‌ಬಾವನ್ನು ಖಿಬ್‍ಲಾ ಮಾಡುವರು ಎಂಬ ಅವರ ವೇದಗ್ರಂಥದಲ್ಲಿರುವ ಪರಾಮರ್ಶೆಯನ್ನು ಎತ್ತಿತೋರಿಸಿ ಈ ಪ್ರವಾದಿ ಖಿಬ್‍ಲಾ ಬದಲಾಯಿಸಿಲ್ಲ, ಆದ್ದರಿಂದ ನಮ್ಮ ವೇದದಲ್ಲಿ ಪ್ರಸ್ತಾಪಿಸಿದ ಪ್ರವಾದಿ ಇವರಲ್ಲ ಎಂದು ವಾದಿಸುತ್ತಿದ್ದರು. ಅದೇ ಪ್ರಕಾರ ಇಬ್ರಾಹೀಮ್ ನಬಿ(ಅ.ಸ) ಯವರ ವಂಶದಲ್ಲಿ ಜನಿಸಿದ ಓರ್ವ ವ್ಯಕ್ತಿ, ಆ ನಬಿಯವರ ಸತ್ಯಮಾರ್ಗವನ್ನೇ ನಾನು ಬೋಧಿಸುತ್ತಿದ್ದೇನೆ ಎಂದು ಘೋಷಿಸುತ್ತ, ಅವರು ಪುನರ್ನಿರ್ಮಿಸಿದ ಕಅ್‌ಬಾವನ್ನು ಬಿಟ್ಟು ಇನ್ನೊಂದನ್ನು ಖಿಬ್‍ಲಾ ಮಾಡುವಾಗ ಅವರ ಪ್ರವಾದಿತ್ವದ ಬಗ್ಗೆ ವಿರುದ್ಧ ಸಾಕ್ಷ್ಯವನ್ನು ತರಲು ಮುಶ್ರಿಕರಿಗೂ ಅವಕಾಶವಿತ್ತು. ಇಂಥ ಅವಕಾಶವನ್ನು ತಪ್ಪಿಸುವುದು ಕೂಡಾ ಖಿಬ್‍ಲಾ ಬದಲಾವಣೆಯ ಉದ್ದೇಶಗಳಲ್ಲೊಂದು.

𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔
ವಿ.ಸೂ;ಈ ಸಂದೇಶವನ್ನು ಎಡಿಟ್(Edit) ಮಾಡಿ, ಹೆಸರು ಬದಲಿಸಿ ಇತರೆ ಗ್ರೂಪ್‌ಗಳಿಗೆ/ಇತರರಿಗೆ ಕಳುಹಿಸುವುದು ಸಮ್ಮತಾರ್ಹವಲ್ಲ. ಅತೃಪ್ತಿದಾಯಕವಾಗಿದೆ. ಇಂತಹ ಕಾರ್ಯಗಳನ್ನು ಅಲ್ಲಾಹನು ಮೆಚ್ಚಲಾರನು.

   ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್