ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 154
ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 154
وَلَا تَقُولُوا۟ لِمَن يُقْتَلُ فِى سَبِيلِ ٱللَّهِ أَمْوَٰتٌۢ ۚ بَلْ أَحْيَآءٌۭ وَلَٰكِن لَّا تَشْعُرُونَ
ಅರ್ಥ:⤵️
▪️ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ಮೃತರೆನ್ನಬೇಡಿರಿ. ಅವರು ಸಜೀವರು ⁷⁸. ಆ ಕುರಿತು ನೀವು ಪ್ರಜ್ಞಾಶೂನ್ಯರು ⁷⁸ಂ.
ವಿವರಣೆ:⤵️
78.ಅರ್ಥಾತ್ ಅವರು ಈಗಲೇ ಜೀವಂತವಿರುವರು. ಅಲ್ಲಾಹನು ಅವರೆಡೆಗೆ ಪ್ರತಿಫಲ ಸೇರ್ಪಡೆಗೊಳಿಸಲಿಕ್ಕಾಗಿ ಅವರನ್ನು ಜೀವಂತಗೊಳಿಸುತ್ತಿರುವನು. ಇದು ಬಹುತೇಕ ಮುಫಸ್ಸಿರ್‍ಗಳ ಅಭಿಪ್ರಾಯ. ಗೋರಿಯೊಳಗಿನ ಶಿಕ್ಷೆಯ ಬಗ್ಗೆ ಪ್ರತಿಪಾದಿಸುವ ಖುರ್‍ಆನ್ ಸೂಕ್ತಗಳು ಗೋರಿಯೊಳಗಿನ ಪುಣ್ಯಫಲವನ್ನೂ ಸಮರ್ಥಿಸಬಲ್ಲವು. ಇದರ ಅರ್ಥ ‘ನಂತರ ಜೀವಂತಗೊಳ್ಳುವರು’ಎಂದಾಗಿದ್ದರೆ ಇದನ್ನು ಪ್ರತ್ಯೇಕ ಎತ್ತಿಹೇಳುವ ಅಗತ್ಯವಿರುತ್ತಿರಲಿಲ್ಲ. ಅಲ್ಲದೆ ಜನರು ಶುಹದಾಗಳ ಗೋರಿಗಳನ್ನು ಝಿಯಾರತ್ ಮಾಡುತ್ತಿರುವುದು ಮತ್ತು ಅವುಗಳನ್ನು ಗೌರವಿಸುತ್ತಿರುವುದು ಕೂಡಾ ಅವರ ಜೀವಂತಿಕೆಯ ಸಂಕೇತವಾಗಿದೆ. (ರಾಝಿ 4/162) 78ಂ. ಅರ್ಥಾತ್ ಅವರ ಅವಸ್ಥೆಯನ್ನು ನೀವು ತಿಳಿಯಲಾರಿರಿ. ಇದು, ಅವರ ಜೀವನವು ಶಾರೀರಿಕವಲ್ಲ, ಗೋಚರ ಜಡವರ್ಗದ್ದೂ ಅಲ್ಲ. ಪರಂತು ಅದು ದಿವ್ಯಸಂದೇಶ ಮೂಲಕವೇ ಹೊರತು ಬುದ್ಧಿಯಿಂದ ತಿಳಿಯಲು ಸಾಧ್ಯವಿಲ್ಲದ ಕಾರ್ಯ ಎಂಬುದರ ಸೂಚನೆಯಾಗಿದೆ. ಮಾತ್ರವಲ್ಲ, ಈ ಸೂಕ್ತದಲ್ಲಿ ಆತ್ಮಗಳು ಸ್ವಯಂ ನೆಲೆಗೊಳ್ಳುವ ಮೂರ್ತರೂಪಿಗಳು. ಅವು ಮರಣಾನಂತರವೂ ಪ್ರಜ್ಞಾಪೂರ್ಣವಾಗಿರುತ್ತವೆ ಎಂಬ ಮಾತಿಗೆ ಆಧಾರವಿದೆ. ಸಹಾಬಿಗಳು ಮತ್ತು ತಾಬಿಇಗಳ ಆಶಯವಿದು. ಖುರ್‍ಆನ್, ಹದೀಸ್‍ಗಳು ಇದಕ್ಕೆ ಪೂರಕವಾಗಿವೆ. ಇದರ ಪ್ರಕಾರ, ಶುಹದಾಗಳನ್ನು ಮಾತ್ರ ಇಲ್ಲಿ ಪ್ರತ್ಯೇಕಗೊಳಿಸಿದ್ದು ಏಕೆಂದರೆ, ಅವರು ಅಲ್ಲಾಹನೆಡೆಗೆ ನಿಕಟರಾಗಿದ್ದು ಮಹತ್ವ ಹಾಗೂ ಕರಾಮತ್‍ನ ಆಧಿಕ್ಯದ ಮೂಲಕ ಪ್ರತ್ಯೇಕರಾಗಿದ್ದಾರೆ ಎಂಬುದಕ್ಕಾಗಿದೆ. (ಬೈಳಾವಿ 117)
ಸಂ: ✒️ಅಬೂರಿಫಾನ ಕುಂದಾಪುರ
Comments
Post a Comment