ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 156



ಅಧ್ಯಾಯ:2 ಸೂಕ್ತ: 156

ٱلَّذِينَ إِذَآ أَصَٰبَتْهُم مُّصِيبَةٌۭ قَالُوٓا۟ إِنَّا لِلَّهِ وَإِنَّآ إِلَيْهِ رَٰجِعُونَ

ಅಂಥವರಿಗೆ ವಿಪತ್ತೇನಾದರೂ ಬಾಧಿಸಿದರೆ, (ಆಪತ್ಕಾಲದಲ್ಲಿ) ಅವರು ‘ನಿಜವಾಗಿಯೂ ನಾವು ಅಲ್ಲಾಹನಿಗೆ ಇರುವವರು, ಅವನೆಡೆಗೆ ನಿರ್ಗಮಿಸುವವರು’ ಅನ್ನುವರು ⁷⁹.

ವಿವರಣೆ:
79. ವಿಪತ್ತುಗಳ ಸಂದರ್ಭದಲ್ಲಿ ಅದು ಎಷ್ಟೇ ಕ್ಷುಲ್ಲಕವಿದ್ದರೂ ಕೂಡಾ ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್ ಎಂದು ಹೇಳಬೇಕು. ಸಹನಾಶೀಲರ ವಿಶೇಷ ಗುಣವಾದ ಈ ದ್ಸಿಕ್ರ್‍ಗೆ ವಿಶೇಷ ಪುಣ್ಯ ವಾಗ್ದಾನ ಮಾಡಲಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೀಗೆ ಹೇಳಿರುವರು, `ಓರ್ವನ ಮಗು ತೀರಿದರೆ ಮಲಕ್‍ಗಳಲ್ಲಿ ಅಲ್ಲಾಹು ಕೇಳುವನು; ನೀವು ನನ್ನ ದಾಸನ ಮಗುವಿನ ಪ್ರಾಣ ವಶಪಡಿಸಿದಿರಾ? ಮಲಕ್‍ಗಳು ಹೌದು ಎನ್ನುವರು. ನೀವು ಅವನ ಕರುಳಕುಡಿಯ ಪ್ರಾಣವನ್ನು ವಶಪಡಿಸಿದಿರಾ? ಎಂದು ಎರಡನೇ ಬಾರಿ ಅಲ್ಲಾಹನು ಕೇಳುವನು. ಮಲಕ್‍ಗಳು ಹೌದು ಎನ್ನುವರು. ಆಗ ಅವನು ಏನು ಹೇಳಿದ? ಎಂದು ಕೇಳಿದಾಗ ಮಲಕ್‍ಗಳು ಹೇಳುವರು; ಅವನು ನಿನ್ನನ್ನು ಸ್ತುತಿಸಿದನು ಮತ್ತು ಇನ್ನಾಲಿಲ್ಲಾಹಿ... ಹೇಳಿದನು. ಆಗ ಅಲ್ಲಾಹು ಹಾಗಾದರೆ ಸ್ವರ್ಗದಲ್ಲಿ ಅವನಿಗಾಗಿ ಒಂದು ವಿಶೇಷ ಭವನವನ್ನು ನಿರ್ಮಿಸಿರಿ. ಅದಕ್ಕೆ `ಬೈತುಲ್ ಹಮ್‍ದ್' ಎಂದು ಹೆಸರಿಡಿ’ ಎಂದು ಹೇಳುವನು. (ಅಹ್ಮದ್, ತಿರ್ಮುದಿ) ಅಬೂಬಕರುರ್ರಾಝೀ   ಯವರು ಹೇಳುತ್ತಾರೆ; ಈ ಶ್ಲೋಕದಲ್ಲಿ ಎರಡು ವಿಧಿಗಳಿವೆ. ಒಂದು ಫರ್ಲ್ (ಕಡ್ಡಾಯ). ಮತ್ತೊಂದು ಸುನ್ನತ್ (ಐಚ್ಛಿಕ). ಕಡ್ಡಾಯ ಏನೆಂದರೆ ಅಲ್ಲಾಹನ ಕ್ರಮಕ್ಕೆ ಸಂಪೂರ್ಣ ವಿಧೇಯತ್ವ. ಅವನ ತೀರ್ಪಿನಲ್ಲಿ ತೃಪ್ತಿ. ಅವನ ಕಡ್ಡಾಯ ಆಜ್ಞಾಪಾಲನೆಯಲ್ಲಿ ಸಹನೆ. ಇಹದ ಯಾವುದೇ ವಿಪತ್ತುಗಳು ಆಜ್ಞಾಪಾಲನೆಗೆ ಅಡ್ಡಿಯಾಗದಿರುವುದು. ಸುನ್ನತ್ತಾದ ವಿಧಿ ಯಾವುದೆಂದರೆ ಈ ವಿಶ್ವಾಸವನ್ನು `ಇನ್ನಾಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್ ಎಂದು ಬಾಯಲ್ಲಿ ಹೇಳುವ ಮೂಲಕ ಪ್ರಕಟಗೊಳಿಸುವುದು. ಈ ಪ್ರಕಟಣೆಯಲ್ಲಿ ಅನೇಕ ಪ್ರಯೋಜನಗಳಿವೆ. 
1. ಯಾರಾದರೂ ಅದನ್ನು ಕೇಳಿದರೆ ಅನುಕರಿಸುವುದು. 
2. ಅಲ್ಲಾಹನ ಧರ್ಮ, ಅದರ ಮೇಲೆ ಸ್ಥಿರತೆ, ಧರ್ಮಾನುಸರಣೆಯಲ್ಲಿ ತನ್ನ ಅವಿಶ್ರಾಂತ ಪರಿಶ್ರಮದ ಬಗ್ಗೆ ಸತ್ಯನಿಷೇಧಿಗಳು ಅರಿಯುವುದು ಹಾಗೂ ಈಷ್ರ್ಯೆ ತಾಳುವುದು. (ರಾಝಿ 4/173)

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್