ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 161


ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 161

إِنَّ ٱلَّذِينَ كَفَرُوا۟ وَمَاتُوا۟ وَهُمْ كُفَّارٌ أُو۟لَٰٓئِكَ عَلَيْهِمْ لَعْنَةُ ٱللَّهِ وَٱلْمَلَٰٓئِكَةِ وَٱلنَّاسِ أَجْمَعِينَ

ಅರ್ಥ:⤵️
▪️ಸತ್ಯವನ್ನು ನಿಷೇಧಿಸಿದ ಮತ್ತು ಅವಿಶ್ವಾಸಿಗಳಾಗಿಯೇ ಮರಣ ಹೊಂದಿದವರಿಗೆ ಅಲ್ಲಾಹು, ಮಲಾಇಕತ್ ಹಾಗೂ ಸರ್ವ ಜನರ ಶಾಪವಿದೆ ⁸¹.

*ವಿವರಣೆ:⤵️*
*81.* ಕುಫ್ರ್ ಎಂಬ ಪದವನ್ನು ‘ಈಮಾನ್’ನ ವಿರೋಧಾರ್ಥದಲ್ಲಿ ಬಳಸಲಾಗುತ್ತದೆ. ಈಮಾನ್ ಎಂದರೆ ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ಅಲ್ಲಾಹನಿಂದ ತಂದಿರುವುದೆಂದು ಖಚಿತವಾದ ವಿಚಾರಗಳಲ್ಲಿ ಅವರು ಪೂರ್ಣವಾಗಿಯೂ ಸತ್ಯಸಂಧರೆಂದು ಅಂಗೀಕರಿಸಿ ಆ ವಿಚಾರಗಳಲ್ಲಿ ದೃಢನಂಬಿಕೆ ತಾಳುವುದು. ಅದಕ್ಕೆದುರಾಗಿ ಕುಫ್ರ್ ಎಂದರೆ ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ತಂದ ಆಶಯವೆಂದು ಖಚಿತವಾಗಿರುವ ಒಂದು ವಿಚಾರವನ್ನು ನಿಷೇಧಿಸುವುದು. (ಬೈಳಾವಿ 1/23)

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್