ಸ್ವರ್ಗ...
ಸ್ವರ್ಗ...
ಸ್ವರ್ಗ ಅಂದರೇನು...?
ಮನುಷ್ಯ ಬಹುಷಃ ಅದನ್ನು ಕಲ್ಪಿಸಿಕೊಳ್ಳುವಲ್ಲಿ ಸೋಲುತ್ತಾನೆ.
ಅದು ಅವನ ಊಹನೆಗೆ ನಿಲುಕದಷ್ಟು ಉನ್ನತವಾದುದು ವಿಚಿತ್ರವಾದುದು..
ಅದೊಂದು ವಿಸ್ಮಯ ಜಗತ್ತು.
ಹದೀಸ್ ವಚನದಲ್ಲಿ ಹೇಳಲಾದಂತೆ ಮನುಷ್ಯ ತನ್ನ ಹೃದಯದಲ್ಲೆಂದು ಊಹಿಸಿರದ,ಊಹಿಸಲಾಗದ,ಮನುಷ್ಯನ ಕಲ್ಪನೆಗೆ ಸಿಗದ ಎಲ್ಲವೂ ಅದರಲ್ಲಿದೆ..
ಅಲ್ಲಿ ಇಲ್ಲದಿರುದು ಒಂದು ಮಾತ್ರ ಇಲ್ಲ ಎನ್ನುದು?
ಮನುಷ್ಯನಿಗೆ ಸ್ವರ್ಗದ ಸಮಗ್ರ ಚಿತ್ರಣವನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾದರೂ ಅದನ್ನು ಅವನಿಗೆ ಪರಿಚಿತವಾದ ವಸ್ತುಗಳ ಮೂಲಕ ಖುರ್ ಆನ್ ಪರಿಚಯಿಸಿ ಕೊಡುತ್ತದೆ.
ಖುರ್ ಆನ್ ಈ ಬಗ್ಗೆ ನೀಡಿದ ವಿವರಣೆಗಳತ್ತ ಕಣ್ಣು ಹರಿಸೋಣ.
" ಸತ್ಯವಿಶ್ವಾಸಿಗಳು ಹಾಗೂ ಸತ್ಯವಿಶ್ವಾಸಿನಿಯರಿಗೆ ಅಲ್ಲಾಹನು ಸ್ವರ್ಗೋದ್ಯಾನಗಳನ್ನು ವಾಗ್ದಾನ ಮಾಡಿರುವನು.ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ.ಅವರದರಲ್ಲಿ ಸ್ಥಿರನಿವಾಸುಗಳಾಗಿರುವರು
ಶಾಶ್ವತ ವಾಸದ ಸ್ವರ್ಗಗಳಲ್ಲಿ ಉತ್ತಮವಾದ ಭವನಗಳನ್ನು ( ಅಲ್ಲಾಹು ಅವರಿಗೆ ವಾಗ್ದಾನ ಮಾಡಿರುವನು)ಅಲ್ಲಾಹನ ತೃಪ್ತಿಯು ಅತ್ಯಂತ ಹಿರಿದು
ಅದುವೇ ಮಹಾವಿಜಯ
(ಸೂರ ಅತ್ತೌಬಾ)
ನಿಶ್ಚಯ,ಭಯಭಕ್ತಿಯುಳ್ಳವರು ಉದ್ಯಾನಗಳಲ್ಲಿಯೂ
ಚೆಲುಮೆಗಳಲ್ಲಿಯೂ ಇರುವರು.ನಿರ್ಭಯರಾಗಿ ಶಾಂತಿಯಿಂದ ಅವುಗಳಿಗೆ ಪ್ರವೇಶ ಮಾಡಿರಿ(ಎಂದು ಅವರೊಂದಿಗೆ ಹೇಳಲಾಗುವುದು)ಅವರ ಹೃದಯಗಳಿಂದ ಕೆಡುಕುಗಳನ್ನೆಲ್ಲ ನಾವು ನಿವಾರಿಸಿ ಬಿಡುವೆವು.ಅವರು ಪರಸ್ಪರ ಸಹೋದರರಾಗಿ ಅಭಿಮುಖರಾಗಿ ಆಸನಗಳಲ್ಲಿ ಕುಳಿತುಕೊಳ್ಳುವರು
ಅವರಿಗೆ ಅಲ್ಲಿ ಯಾವುದೇ ಕ್ಷೇಶಗಳು ಸ್ಪರ್ಶಿಸದು
ಮತ್ತು ಅವರನ್ನು ಅಲ್ಲಿಂದ ಹೊರ ಹಾಕಲಾಗುವುದೂ ಇಲ್ಲ... ( ಸೂರ ಹಿಜ್ ರ್)
ಅಲ್ಲಾಹನು ಸತ್ಯವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡಿದವರನ್ನು ಸ್ವರ್ಗಗಳಿಗೆ ಪ್ರವೇಶಗೊಳಿಸುವನು.ಅವುಗಳ ತಳಭಾಗಗಳಲ್ಲಿ ನದಿಗಳು ಹರಿಯುತ್ತಿವೆ.ಅಲ್ಲಿ ಅವರಿಗೆ ಚಿನ್ನದ ಕಂಕಣಗಳನ್ನೂ,ಮುತ್ತುಗಳನ್ನೂ ತೊಡಿಸಲಾಗುತ್ತದೆ.ಅಲ್ಲಿ ಅವರ ಉಡುಪು ರೇಶ್ಮಯದ್ದಾಗಿರುವುದು(ಸೂರ ಅಲ್ ಹಜ್ಜ್)
ಅಂದು ಸ್ವರ್ಗವಾಸಿಗಳು ಸಂತುಷ್ಟತೆಯಲ್ಲಿ ತಲ್ಲೀನರಾಗಿ ಸುಖಾಸ್ವಾದನೆಯಲ್ಲಿರುವರು.ಅವರೂ,ಅವರ ಸಂಗಾತಿಗಳು ದಟ್ಟನೆರಳಲ್ಲಿ
ಸುಖಾಸನಗಳ ಮೇಲೆ ಒರಗಿಕೊಂಡಿರುವರು.ಅವರಿಗಲ್ಲಿ ವೈಧ್ಯಮಯ ಹಣ್ಣು ಹಂಪಲುಗಳಿವೆ.ಅವರೇನು ಬಯಸುತ್ತಾರೋ ಅವೆಲ್ಲವೂ ಅವರಿಗಲ್ಲಿ ಸಿದ್ದವಿದೆ.ದಯಾಮಯನಾದ ಪ್ರಭುವಿನಿಂದ ಸಲಾಮ್ ಎಂಬ ವಚನಾಭಿವಾಧ್ಯವಿದೆ ( ಸೂರ ಯಾಸೀನ್)
ತಮ್ಮ ಪ್ರಭುವಿನ ಮೇಲೆ ಭಕ್ತಿಯಿರಿಸಿದವರನ್ನು ಸ್ವರ್ಗಕ್ಕೆ ವಿವಿಧ ಗುಂಪುಗಳಾಗಿ ಕರೆದೊಯ್ಯಲಾಗುವುದು.ಅದರ ಬಾಗಿಲುಗಳನ್ನು ತೆರೆದಿಡಲಾದ ಸ್ಥಿತಿಯಲ್ಲಿ ಅವರು ಅಲ್ಲಿಗೆ ತಲುಪುವಾಗ ಅದರ ಕಾವಲುಗಾರರು ಅವರೊಂದಿಗೆ ನಿಮ್ಮ ಮೇಲೆ ಶಾಂತಿಯಿರಲಿ,ನೀವು ಉತ್ತಮರು;ಆದ್ದರಿಂದ ಸದಾಕಾಲ ನೆಲೆಸಲಿಕ್ಕಾಗಿ ಒಳಗೆ ಪ್ರವೇಶಮಾಡಿರಿ ಎಂದು ಹೇಳುವರು
( ಸೂರ ಅಝ್ಝಮರ್)
ನಿಶ್ಚಯ ಮುತ್ತಖೀಗಳು (ಭಯಭಕ್ತಿಯುಳ್ಳವರು) ಸುರಕ್ಷಿತ ತಾಣದಲ್ಲಿರುವರು.ಉದ್ಯಾನಗಳಲ್ಲೂ,ಚೆಲುಮೆಗಳಲ್ಲೂ,ಸುಂದುಸ್ ಮತ್ತು ಇಸ್ತಬ್ ರಖ್( ರೇಶ್ಮೆಯೆ ಎರಡು ಜಾತಿಗಳು) ನ ವಸ್ತ್ರಗಳನ್ನು ಧರಿಸಿ ಎದುರು ಬದುರಾಗಿರುವರು.ಅವರ ಸ್ಥಿತಿ ಹಾಗಿರುವುದು.ಅವರಿಗೆ ನಾವು ಹೂರ್,ಈನ್ ಗಳನ್ನು ಸಂಗಾತಿಗಳನ್ನಾಗಿ ಮಾಡುವೆವು.ಅಲ್ಲಿ ಅವರು ನಿಶ್ಚಿಂತರಾಗಿ ಎಲ್ಲಾ ತರದ ರುಚಿಕರವಾದ ಫಲವಸ್ತುಗಳನ್ನು ಕೇಳುವರು( ಸೂರ ಅದ್ದುಖಾನ್)
ಧರ್ಮನಿಷ್ಠರಿಗೆ ವಾಗ್ದಾನ ನೀಡಲಾದ ಸ್ವರ್ಗದ ಉಪಮೆಯೇನೆಂದರೆ ಅದರಲ್ಲಿ ಕಳಂಕವಿಲ್ಲದ ತಿಳಿನೀರಿನ ನದಿಗಳಿವೆ.
ಸ್ವಲ್ಪವೂ ರುಚಿ ಬದಲಾಗದ
ಹಾಲಿನ ನದಿಗಳಿವೆ.ಕುಡಿಯುವವರಿಗೆ ರುಚಿಕರವಾದ ಮದ್ಯದ ನದಿಗಳಿವೆ.ಸಂಸ್ಕರಿಸಲಾದ ಶುದ್ಧ ಜೇನಿನ ನದಿಗಳಿವೆ.ಅವರಿಗಾಗಿ ಎಲ್ಲಾ ಬಗೆಯ ಫಲಗಳೂ ಇವೆ.ಅವರ ಪ್ರಭುವಿನ ಕಡೆಯಿಂದ ಕ್ಷಮೆಯೂ ಇದೆ.( ಸೂರ ಮುಹಮ್ಮದ್)
ನಿಶ್ಚಯ,ಮುತ್ತಖೀಗಳು ಉದ್ಯಾನಗಳಲ್ಲೂ ನದಿಗಳಲ್ಲೂ ಇರುವರು.ಸತ್ಯದ ಸೋಪಾನದಲ್ಲಿ ಪರಮಶಕ್ತನಾದ ಸಾಮ್ರಾಟನ ಸನ್ನಿಧಿಯಲ್ಲಿ ( ಸೂರ ಅಲ್ ಖಮರ್)
ತನ್ನ ಪ್ರಭುವಿನ ಸನ್ನಿಧಿ ( ವಿಚಾರಣೆ) ಯನ್ನು ಭಯಪಡುವವರಿಗೆ ಎರಡು ಸ್ವರ್ಗಗಳಿವೆ...
ಗೊನೆ ತುಂಬಿದ ರೆಂಬೆಗಳಿರುವ ಹುಲುಸಾದ
ಸ್ವರ್ಗೋದ್ಯಾನಗಳು...ಅವರೆಡರಲ್ಲೂ ಹರಿಯುತ್ತಿರುವ
ಎರಡು ಚೆಲುಮೆಗಳಿವೆ..
ಅವೆರಡರಲ್ಲಿ ಎಲ್ಲಾ ತರದ ಫಲವರ್ಗಗಳ ಜೋಡಿಗಳಿವೆ
ಅವರು ಮೆತ್ತಗಿನ ಹಾಸುಗಳಲ್ಲಿ ಒರಗಿಕೊಂಡಿರುವರು...ಅವುಗಳ ಒಳಭಾಗವು ದಪ್ಪ ರೇಶ್ಮೆಗಳಿಂದ ತುಂಬಿವೆ ಮತ್ತು ಎರಡು ಉದ್ಯಾನಗಳ ಫಲಗಳು ಅವರ ಬಳಿಗೆ ಬಾಗುತ್ತಿರುತ್ತವೆ..ಅವುಗಳಲ್ಲಿ ಕಣ್ಣುಗಳನ್ನು ತಮ್ಮ ಸಂಗಾತಿಗಳಿಗೆ ಮೀಸಲಿಟ್ಟ ತರುಣಿಯರಿದ್ದಾರೆ.ಇವರಿಗಿಂತ ಮುಂಚೆ ಅವರನ್ನು ಮಾನವನಾಗಲೀ,ಜಿನ್ನ್ ಗಳಾಗಲೀ ಸ್ಪರ್ಶಿಸಿಲ್ಲ...
ಅವರು ಮುತ್ತು ಮಾಣಿಕ್ಯಗಳಂತಿರುವರು....ಒಳಿತಿನ ಪ್ರತಿಫಲ ಒಳಿತಲ್ಲದೆ ಇನ್ನೇನು?
ಆ ಎರಡು ಸ್ವರ್ಗಗಳಲ್ಲದೆ
ಬೇರೆರೆಡು ಸ್ವರ್ಗೋದ್ಯಾನಗಳಿವೆ...ಹಸಿರು ತುಂಬಿ ಕಪ್ಪಾಗಿರುವ ಉದ್ಯಾನಗಳು,ಅವೆರಡರಲ್ಲಿ ಚಿಮ್ಮುತ್ತಿರುವ ಎರಡು ನೀರ್ಝರಿಗಳಿವೆ,ಅವೆರಡರಲ್ಲಿ ಧಾರಾಳ ಫಲಗಳೂ,
ಖರ್ಜೂರವೂ,ದಾಳಿಂಬೆಯೂ ಇವೆ,
ಅವೆರಡರಲ್ಲಿ ಉತ್ತಮರಾದ ಚೆಂದುಳ್ಳಿಗಳಿದ್ದಾರೆ...
ಗುಡಾರಗಳಲ್ಲಿ ಕಾದಿರಿಸಲಾದ ಬೆಡಗಿಯರು,ಇವರಿಗೆ ಮುಂಚೆ ಯಾವನೇ ಮಾನವನಾಗಲೀ ಜಿನ್ನ್ ಆಗಲೀ ಅವರನ್ನು ಸ್ಪರ್ಶಿಸಿಲ್ಲ
ಅವರು ಹಸಿರು ರತ್ನ ಗಂಬಳಿಗಳ ಮೇಲೆ ನುಣುಪಾದ ಶ್ರೇಷ್ಠ ಹಾಸುಗಳಲ್ಲಿ ಸುಖಾಸೀನರಾಗಿರುವರು( ಸೂರ ಅರ್ರಾಹ್ಮಾನ್)
(ವಿಶ್ವಾಸ ಮತ್ತು ಕರ್ಮಗಳಲ್ಲಿ) ಮುನ್ನಡೆ ಸಾಧಿಸಿದವರು ಪರಲೋಕದಲ್ಲೂ ಮುನ್ನಡೆದವರು.ಅಲ್ಲಾಹನ ಸಾಮೀಪ್ಯ ಪಡೆದವರು ಅವರೇ.ಅವರು ಅನುಗ್ರಹೀತ ಸ್ವರ್ಗಗಳಲ್ಲಿರುವರು.ಪೂರ್ವಿಕರಲ್ಲಿ ಒಂದು ಕೂಟ ಹಾಗೂ ನಂತರದವರಲ್ಲಿ?
ಕೆಲವರು.ರತ್ನಗಳ ದಪ್ಪನಾರುಗಳಿಂದ ಹೊಸೆಯಲಾದ ಮಂಚಗಳಲ್ಲಿರುವರು.ಅದರ ಮೇಲೆ ಎದುರು ಬದುರಾಗಿ ಒರಗಿರುವರು.
ಚಿರಬಾಲಕರು ಸೇವೆಗಾಗಿ ಅವರನ್ನು ಸುತ್ತುತ್ತಿರುವರು.ಹರಿವ ಒರತೆಯಿಂದ ಸುರೆಯನ್ನು ತುಂಬಿಸಿದ ಪಾತ್ರೆಗಳನ್ನು,ಹೂಜಿಗಳನ್ನು,ಪಾನಲೋಟಗಳನ್ನು ಹಿಡಿದುಕೊಂಡು ಸುತ್ತಾಡುವರು.ಅದನ್ನು ಕುಡಿದ ಕಾರಣದಿಂದ ಅವರಿಗೆ ತಲೆ ಸುತ್ತು ಹೊಡೆಯದು ಮತ್ತು ಅಮಲಾಗದು.ಅವರು ಇಷ್ಟಪಟ್ಟು ಆಯ್ಕೆ ಮಾಡುವಂತಹ ತರತರದ ಹಣ್ಣು ಹಂಪಲುಗಳೊಂದಿಗೆ(ಆ ಬಾಲಕರು ಸುತ್ತುವರು)
ಅವರು ಬಯಸುವ ಪಕ್ಷಿಗಳ ಮಾಂಸದೊಂದಿಗೆ.ಅವರಿಗಾಗಿ ಸುಂದರ ಬೊಗಸೆ ಕಣ್ಣುಗಳ ಅಪ್ಸರೆಯರಿರುವರು.ಚಿಪ್ಪಿಗಳೊಳಗೆ ಬಚ್ಚಿಡಲಾದ ಮುತ್ತುಗಳಂತವರು,ಅವರು(ಭೂಲೋಕದಲ್ಲಿ) ಮಾಡುತ್ತಿದ್ದ ಸತ್ಕರ್ಮಗಳ ಫಲವಾಗಿ.ಅಲ್ಲಿ ಅವರು ಯಾವುದೇ ಅಸಭ್ಯವನ್ನೋ,ದೂರುಗಳನ್ನೋ ಕೇಳಲಾರರು.ಸಲಾಮ್,ಸಲಾಮ್ ಎಂಬ ಮಾತಿನ ಹೊರತು.
ಬಲಗಡೆಯವರು! ಬಲಗಡೆಯವರ ಸೌಭಾಗ್ಯವೇನು.ಅವರು ಮುಳ್ಳಿಲ್ಲದ ಬೊಗರಿ ಮರಗಳು, ಹಣ್ಣುಗಳು ತುಂಬಿದ ಬಾಳೆಗಿಡಗಳು,ಬಹುದೂರ ಹಬ್ಬಿರುವ ನೆರಳು, ಸದಾ ಹರಿಯುತ್ತಿರು ನೀರು, ಮತ್ತೆ ಎಂದೆಂದೂ ಮುರಿಯದ ,ಅಡೆತಡೆಯಿಲ್ಲದ ಸದಾ ಸುಖಾನುಭವದಲ್ಲಿರುವರು.ನಾವು ಆ ತರುಣಿಯರನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿರುವೆವು.ಅವರನ್ನು ನಾವು ಚಿರಕನ್ಯೆಯರನ್ನಾಗಿ ಮಾಡಿರುವೆವು ಅವರು ಪ್ರೀತಿ ತುಂಬಿದವರು,ಸಮಪ್ರಾಯದವರು,ಇವೆಲ್ಲ ಬಲಗಡೆಯವರಿಗಿರುವುದು
( ಸೂರ ವಾಕಿಯಾ)
ಅಲ್ಲಾಹನು ಅವರಿಗೆ ಅವರ ಸಹನೆಯ ಫಲವಾಗಿ ಸ್ವರ್ಗೋದ್ಯಾನವನ್ನೂ ರೇಶ್ಮೆಯುಡುಪನ್ನೂ ದಯಪಾಲಿಸುವನು.ಅಲ್ಲಿ ಅವರು ಆರಾಮ ಮಂಚಗಳ ಮೇಲೆ ಒರಗಿರುವರು.ಬಿಸಿಲಿನ ಧಗೆಯಾಗಲೀ..ಚಳಿಯ ತೀವ್ರತೆಯಾಗಲೀ ಅವರು ಅನುಭವಿಸಲಾರರು.ಅವರ ನೆರಳು ಅವರಿಗೆ ನಿಕಟವಿರುವುದು ಮತ್ತು ಅದರ ಹಣ್ಣುಗೊನೆಗಳು ಅವರಿಗೆ ಬಯಕೆಗಳಿಗೆ ಅನುಸರಿಸುವಂತಿರುವುದು
.ಬೆಳ್ಳಿಯ ಪಾತ್ರೆಗಳನ್ನೂ,ನುಣುಪಿನಿಂದ ಸ್ಪಟಿಕದಂತಾದ ಬೆಳ್ಳಿಹೂಜಿಗಳನ್ನೂ ಅವರ ಸುತ್ತ ತರಲಾಗುವುದು.ಅವು ಬೆಳ್ಳಿಯಿಂದಲೇ ನಿರ್ಮಿತವಾದ ಸ್ಪಟಿಕ ಪಾತ್ರೆಗಳು. ಅವರು ( ಸೇವಕರು) ಅದನ್ನು ಬೇಕಾದ ಪ್ರಮಾಣಗಳಲ್ಲೇ ಸಿದ್ದಪಡಿಸಿರುವರು.ಅಲ್ಲಿ ಅವರಿಗೆ ಮದ್ಯ ತುಂಬಿದ ಪಾತ್ರೆಗಳಿಂದ ಕುಡಿಸಲಾಗುವುದು.ಅದರ ಮಿಶ್ರಿತ ವಸ್ತು ಶುಂಠಿಯಾಗಿರುವುದು.ಸಲ್ ಸಬೀಲ್ ಎಂಬ ಹೆಸರಿನ ಚಿಲುಮೆ ಅದರಲ್ಲಿದೆ.ಕೆಲವು ಚಿರಕುಮಾರರು ಅವರನ್ನು ಸುತ್ತುತ್ತಿರುವರು.ತಾವು ಅವರನ್ನು ಕಂಡರೆ ಹರಡಿದ ಮುತ್ತುಗಳೆಂದೆ ಭಾವಿಸುವಿರಿ.ಅಲ್ಲಿ ತಾವು ಎತ್ತನೋಡಿದರೂ ಅನುಗ್ರಹಗಳನ್ನೂ ಒಂದು ಬೃಹತ್ ಸಾಮ್ರಾಜ್ಯವನ್ನೂ ಕಾಣುವಿರಿ.ಹಸಿರು ಬಣ್ಣದ ವಸ್ತ್ರಗಳು, ತೆಳು ರೇಶ್ಮೆಯ,ದಪ್ಪ ರೇಶ್ಮೆಯ ವಸ್ತ್ರಗಳು ಅವರ ಮೇಲಿರುವುದು.ಅವರಿಗೆ ಬೆಳ್ಳಿಯ ಬಳೆಗಳನ್ನು ತೊಡಿಸಲಾಗುವುದು.ಅವರ ಪ್ರಭು ಅವರಿಗೆ ನಿರ್ಮಲ
ಪಾನೀಯವನ್ನು ಕುಡಿಸುವನು( ಸೂರ ಅಲ್ ಇನ್ಸಾನ್)
ನಿಶ್ಚಯ; ಧರ್ಮನಿಷ್ಠರಿಗೆ ರಕ್ಷಣೆಯ ತಾಣವಿದೆ.ತೋಟಗಳಿವೆ,ದ್ರಾಕ್ಷೆಗಳಿವೆ,ಎದೆಯುಬ್ಬಿದ ಸಮವಯಸ್ಕ ತರುಣಿಯರಿದ್ದಾರೆ.ತುಂಬಿ ತುಳುಕುವ ಪಾನ ಪಾತ್ರೆಗಳಿವೆ.ಅಲ್ಲಿ ಅವರು ಅನಗತ್ಯ ಹಾಗೂ ಸುಳ್ಳು ಮಾತುಗಳನ್ನು ಕೇಳಲಾರರು.ಇದು ತಮ್ಮ ಪ್ರಭುವಿನ ವತಿಯಿಂದ ಉದಾರ ಕೊಡುಗೆಯಾಗಿದೆ
( ಸೂರ ಅನ್ನಬ ಅ್)
ಪವಿತ್ರ ಕುರ್ ಆನ್ ಮುಂದಿಡುವ ಸ್ವರ್ಗದ ವಿವರಣೆಯ ಕೆಲವು ಭಾಗಗಳಿವು.
ಹದೀಸ್ ವಚನಗಳಲ್ಲಿ ಸ್ಪಷ್ಟವಿರುವಂತೆ ಅಲ್ಲಿನ ಆಹಾರಗಳು ರುಚಿ, ಪ್ರಕೃತಿಯ ರಮಣಿಯತೆ
ತರುಣಿಯರ ಸೌಂದರ್ಯ
ಸುಖಾಸ್ವಾದನೆಯ ಇತರ ವಸ್ತುಗಳು ಇವುಗಳನ್ನು ಮನುಷ್ಯನು ಊಹಿಸಿಕೊಳ್ಳಲು ಅಸಕ್ತನಾಗಿರುವನು
ಅವು ಅಷ್ಟು ಉತ್ಕ್ರಷ್ಟ ಮಟ್ಟದಲ್ಲಿವೆ.....
,ಸ್ವರ್ಗವೆಂದರೆ ಒಂದು ಬೃಹತ್ ಅರಮನೆಯಾಗಿರಬಹುದೇ...?ಅಲ್ಲ; ಅದೊಂದು ಜಗತ್ತು, ಅತಿವಿಶಾಲವಾದ ಜಗತ್ತು
ಸೂರ ಅಲ್ ಇಮ್ರಾನ್ ನ133ನೇ ಸೂಕ್ತದಲ್ಲಿ ಸ್ವರ್ಗವನ್ನು ಭೂಮ್ಯಾಕಾಶಗಳ ವಿಶಾಲವಿರುವಂತದ್ದು ಎಂದು ಬಣ್ಣಿಸಿದೆ.
ಅಂದರೆ ಅದು ಅನಂತ ವಿಸ್ತೃತವಾದ ಒಂದು ಜಗತ್ತು ಎಂದಾಯ್ತು?
ಆ ಅದ್ಬುತಮಯ ಜಗತ್ತಿಗೆ ಪ್ರವೇಶ ಮಾಡಲು ಅದರ ಸೃಷ್ಟಿಕರ್ತನು ಅದಕ್ಕೆ ಪ್ರತ್ಯೇಕ ಬಾಗಿಲುಗಳನ್ನು
ನಿಗದಿಪಡಿಸಿದ್ದಾನೆ....
ಸ್ವರ್ಗದ ಬಾಗಿಲುಗಳು
ಖುರ್ ಆನ್ ಮತ್ತು ಹದೀಸ್ ವಚನಗಳಲ್ಲಿ ಸ್ವರ್ಗ ಲೋಕದ ಬಾಗಿಲುಗಳ ಪ್ರಸ್ತಾಪವಿದೆ.
ಧರ್ಮನಿಷ್ಠರಿಗೆ ಉತ್ಕ್ರಷ್ಟವಾದ ನೆಲೆಯಿದೆ.ಶಾಶ್ವತವಾದ ಸ್ವರ್ಗಗಳಿದ್ದು ಅವುಗಳ ಕದಗಳು ಅವರಿಗೆ ತೆರೆದಿಡಲಾಗಿದೆ ( ಸೂರ ಸ್ವಾದ್)
ಸ್ವರ್ಗದ ಬಾಗಿಲು ಕೇವಲ ಒಂದು ಆಲಂಕಾರಿಕವಾಗಿರಬಹುದೇ..?ಅಲ್ಲ..ನಬಿ( ಸ) ಸ್ವರ್ಗದ ಬಾಗಿಲಿನ ವಿಶಾಲತೆಯನ್ನು ವಿವರಿಸುತ್ತಾರೆ...
ದ್ವಾರದ ಒಂದು ಬದಿಯಿಂದ ಇನ್ನೊಂದು ಬದಿಗಿರುವ ಅಂತರ ಮಕ್ಕಮತ್ತು ಬಹ್ ರೈನ್ ನ ಹಜರ್ ನ ನಡುವಿನ ಅಂತರವಂತೆ!
ಅಷ್ಟು ಬೃಹತ್ ಗಾತ್ರದ ಬಾಗಿಲು?
ಹೌದು ಸ್ವರ್ಗದ ಬಾಗಿಲು ಮನುಷ್ಯನ ಕಲ್ಪನೆಯೊಳಗೆ
ಅಷ್ಟು ಸುಲಭದಲ್ಲಿ ಬರಲಾರದು: ಅದೊಂದು ವಿಸ್ಮಯ....
ಸ್ವರ್ಗಕ್ಕೆ 8 ಕವಾಟಗಳಿವೆ?
ವಿವಿಧ ಸತ್ಕರ್ಮಗಳನ್ನು ಮಾಡಿದವರಿಗೆ ಆದರಣೀಯ ಪ್ರವೇಶಕ್ಕಾಗಿ
ನಿಗದಿಪಡಿಸಲಾಗಿದೆ...
1 ಶ್ರೇಷ್ಠ ನಮಾಝ್ ಗಾರರಿಗೆ
2 ಶ್ರೇಷ್ಠ ಯೋಧರಿಗೆ
3 ಶ್ರೇಷ್ಠ ದಾನಿಗಳಿಗೆ
4 ಉಪವಾಸಿಗರಿಗೆ
5 ಪಶ್ಚಾತ್ತಾಪದ ವಿಷ್ಯದಲ್ಲಿ ಉನ್ನತರಿಗೆ
6 ತಂದೆ- ತಾಯಿಗೆ ಒಳಿತು ಮಾಡುವವರಿಗೆ
7 ಅಲ್ಲಾಹನ ವಿಧಿಯಲ್ಲಿ ಸಂತೃಪ್ತರಾದವರಿಗೆ
8 ಅಲ್ಲಾಹನ ಮೇಲೆ ತವಕ್ಕುಲ್ ಮಾಡಿದವರಿಗೆ
ಹೀಗೆ ಸತ್ಕರ್ಮಗಳನ್ನು ಮುಂದಿಟ್ಟು ಸ್ವರ್ಗಕ್ಕೆ ಪ್ರವೇಶ ನೀಡಲು ಈ ವಿಶೇಷ ಕವಾಟಗಳು
ಈ ಎಲ್ಲಾ ಕವಾಟಗಳಿಂದ ಕರೆಯಲ್ಪಡುವರಿರುವರೇ
ಅಬೂಬಕರ್ ಸಿದ್ದೀಖ್(ರ)
ನಬಿ( ಸ) ರವರತ್ರ ಕೇಳಿದರು
ಹೌದು ಇದ್ದಾರೆ! ತಾವು ಅವರ ಪೈಕಿ ಸೇರುದನ್ನು ನಾನು ಬಯಸುವೆನು" ಎಂದು ನಬಿ(ಸ) ಅಬೂಬಕರ್ ಸಿದ್ದೀಖ್ (ರ)ಕೊಟ್ಟ ಕೊಡುಗೆಯದು!!
ಸ್ವಹಾಬಿ ಪ್ರಮುಖ ಅಬೂ ಹುರೈರಾ( ರ) ನಬಿ( ಸ)ರೊಂದಿಗೆ ಸ್ವರ್ಗದ ಬಗ್ಗೆ ನಮಗೆ ತಿಳಿಸಿಕೊಡಿ,ಅದರ ಕಟ್ಟಡ ಯಾವುದರಿಂದ ನಿರ್ಮಿಸಲಾಗಿದೆ??
ನಬಿ( ಸ)ರವರು ನೀಡಿದ ಉತ್ತರ;-ಅದರ ಕಟ್ಟಡಗಳ ಕಲ್ಲು ಒಂದು ಚಿನ್ನದಾದರೆ ಜತೆ ಸೇರುದು ಬೆಳ್ಳಿಯದ್ದು ಅದನ್ನು ಕಟ್ಟಲು ಬಳಸಿರುವ ಸಿಮೆಂಟು ಶುದ್ಧ ಕಸ್ತೂರಿ ಕಮ್ಮನೆಯ ಕುಂಕುಮ.ಸ್ವರ್ಗ ಪ್ರವೇಶಿಸುವರು ನಿರಾಸೆಯಾಗದೆ ಅಲ್ಲಿನ ಅನುಗ್ರಹಗಳನ್ನು ಅನುಭವಿಸುವರು.ಅವರಿಗಲ್ಲಿ ಮರಣವಿಲ್ಲ.ಅವರ ವಸ್ತ್ರ ಹಳತಾಗುದಿಲ್ಲ..ಅವರ ಯೌವ್ವನ ಮುಗಿಯುದಿಲ್ಲ??
ಅಲೀ( ರ) ರಿಂದ ವರದಿ:- ಪಾರತ್ರಿಕ ಯಶಸ್ಸು ಪಡೆದ ಅಲ್ಲಾಹನ ಇಷ್ಟದಾಸರು ತಂಡೋಪತಂಡವಾಗಿ ಸ್ವರ್ಗದತ್ತ ಸಾಗುವರು.ಸ್ವರ್ಗದ ಬಾಗಿಲ ಬಳಿ ಒಂದು ವೃಕ್ಷವಿದ್ದು ಅದರ ಬುಡದಿಂದ ಎರಡು ನದಿ ಹರಿಯುತ್ತಿರುತ್ತದೆ
ಅವುಗಳ ಪೈಕಿ ಒಂದರ ಹತ್ತಿರ ಸಾಗಿ ಆ ನದಿಯಿಂದ
ಅವರು ನೀರನ್ನು ಕುಡಿಯುತ್ತಾರೆ.ಅದರೊಂದಿಗೆ ಅವರ ಒಳಗಿನ ಎಲ್ಲಾ ಕೇಡುಗಳನ್ನು ಅದು ನಿವಾರಿಸಿ ಬಿಡುತ್ತದೆ.
ಬಳಿಕ ಇನ್ನೊಂದು ನದಿಯಿಂದ ತಮ್ಮನ್ನು ಶುಚಿಗೊಳಿಸುತ್ತಾರೆ.
ಅದರೊಂದಿಗೆ ಅವರ ಶರೀರಕ್ಕೆ ವಿಶೇಷ ಹೊಳಪು ಮೂಡುತ್ತದೆ,ಅದು ನಂತರ ಬದಲಾಗುದಿಲ್ಲ...ಬಳಿಕ ಸ್ವರ್ಗದ ಬಾಗಿಲ ಬಳಿ ತಲುಪುತ್ತಾರೆ,ಅದರ ಕಾವಲುಗಾರರು ಅವರಿಗೆ ಸಲಾಮ್ ಹೇಳಿ ಚಿರವಾಸಿಗಳಾಗಿ ಈ ಸ್ವರ್ಗವನ್ನು ಪ್ರವೇಶಿಸಿರಿ ಎನ್ನುವರು?
ಸ್ವರ್ಗ ಪ್ರವೇಶವಾದೊಡನೇ
ಸ್ವರ್ಗದ ಸುಂದರ ಬಾಲಕರು ಅವರನ್ನು ಸುತ್ತುವರಿದು ಅವರಿಗೆ ಸ್ವಾಗತಿಸುವರು.ಆ ಬಾಲಕರು ಸ್ವರ್ಗೀಯ ಮಹಿಳೆಯರ ಬಳಿ ಸಾಗಿ
" ಇಂತಿಂತಹವರು ಆಗಮಿಸಿರುವರು" ಎಂದು ತಿಳಿಸುತ್ತಾರೆ!
ಅವರನ್ನು ನೀವು ಕಂಡಿರುವಿರಾ?ಎಂದು ಮಕ್ಕಳೊಂದಿಗೆ ಸ್ವರ್ಗ ಸ್ತ್ರೀಯರು ಕೇಳುವರು,
ಸ್ವರ್ಗದ ಆ ಮಕ್ಕಳು " ಹೌದು ಇಗೋ ಇಲ್ಲಿದ್ದಾರೆ"
ಎನ್ನುತ್ತಾ ತಾವು ಕರಕೊಂಡು ಹೋದವರನ್ನು
ಅವರ ಬಳಿ ಬಿಡುವರು.
ಹೂರುನ್ ಈನ್ ಗಳು ಬಾಗಿಲ ಬಳಿಗೆ ಬಂದು ಕರೆದೊಯ್ಯುವರು....
ಸ್ವರ್ಗ ಪ್ರವೇಶವಾದ ಮಂದಿ
ಅಲ್ಲಿನ ಅಚ್ಚರಿಗಳನ್ನು ಕಂಡು ವಿಸ್ಮಯಗೊಂಡು
ಅಲ್ ಹಮ್ದುಲಿಲ್ಲಾಹ ಎನ್ನತ್ತಾ ಅಲ್ಲಾಹನನ್ನು ಸ್ತುತಿಸುವರು....
"ಸ್ವರ್ಗದಲ್ಲೊಂದು ವೃಕ್ಷವಿದೆ; ವಾಹನದಲ್ಲಿ ಸಾಗುವವರು ಅದರ ನೆರಳಿನಲ್ಲಿ 100 ವರ್ಷ ಕಾಲ ಸಾಗುವನು!!
ಸೂರ ವಾಖಿಆದಲ್ಲಿ "ಉದ್ದಕಿರುವ ನೆರಳು" ಎಂದು ಹೇಳಿರುದು ಇದರ ಬಗ್ಗೆಯೇ...
ನೆರಳು ಉಂಟಾಗಲು ಬಿಸಿಲು ಬೇಡವೆ ಎಂಬ ಪ್ರಶ್ನೆ ಇಲ್ಲಿ ಹುಟ್ಟಬಹುದು.
ಪ್ರಶ್ನೆ ಭೌತಿಕ ವ್ಯವಸ್ಥೆಗೆ ಸಂಬಂಧಪಟ್ಟದ್ದು!!
ಸ್ವರ್ಗ ಲೋಕದಲ್ಲಿ ಸೂರ್ಯನೇ ಇಲ್ಲದಿರುವಾಗ ಬಿಸಿಲಿನ ತಾಪದ ಪ್ರಶ್ನೆ ಇಲ್ಲ!
ನೆರಳು ಎನ್ನುವ ಪದ ನಮಗೆ ತಿಳಿಯುವ ಸಲುವಾಗಿಯಷ್ಟೇ...?
ಮನುಷ್ಯ ಸಹಜವಾಗಿ ನೆರಳು ಇಷ್ಟಪಡುದರಿಂದ ಸ್ವರ್ಗದಲ್ಲಿ ನೆರಳು ನೀಡುವ
ವಿಶೇಷ ಅನುಭೂತಿ ಅಲ್ಲಿನ
ವೃಕ್ಷದಿಂದ ಸಿಗುತ್ತದೆ":
ಇದು ಒಂದು ವೃಕ್ಷದ ವಿಷ್ಯ?
ಉಳಿದ ವೃಕ್ಷಗಳು ಇಲ್ಲಿ ವಿಶೇಷವಾದುದೇ
ಸ್ವರ್ಗದ ವೃಕ್ಷದ ಕಾಂಡ ಚಿನ್ನದ್ದು ಎನ್ನತ್ತದೆ ಹದೀಸ್:
ಸ್ವರ್ಗದಲ್ಲಿ ಸಿದ್ ರತುಲ್ ಮುಂತಹಾ ಎನ್ನುವುದು ಸ್ವರ್ಗದ ಇನ್ನೊಂದು ವೃಕ್ಷ
ಇಸ್ರಾಹ್- ಮಿಅ್ ರಾಜ್ ನ ರಾತ್ರಿಯಂದು ಈ ವೃಕ್ಷವನ್ನು ನಬಿ( ಸ)ರಿಗಾಗಿ ಅಲಂಕರಿಸಲಾಗಿತ್ತು;
ಪವಿತ್ರ ಖುರ್ ಆನ್
' ಅದನ್ನು ಆವರಿಸುವುದೆಲ್ಲವೂ ಆವರಿಸಿಕೊಂಡಿತು" ಎಂದು ಆ ಅದ್ಬುತ ವೃಕ್ಷದ ಅಲಂಕಾರದ ಬಗ್ಗೆ ಹೇಳಿದೆ:
ಸ್ವರ್ಗದ ಎರಡು ನದಿಗಳು ಈ ವೃಕ್ಷದಿಂದ ಹುಟ್ಟುತ್ತದೆ...
ಸಾಕಷ್ಟು ಸಸಿಗಳನ್ನು ನೆಡಲು ಇಬ್ರಾಹೀಮ್ ( ಅ) ಇಸ್ರಾಅ್ ನ ರಾತ್ರಿ ನಬಿ( ಸ) ರ ಮೂಲಕ ನಮಗೆ ನೀಡಿದ ಸಂದೇಶ ಇಲ್ಲಿ ವೃಕ್ಷ ಬೆಳೆಯುವ ರಹಸ್ಯವನ್ನು ತಿಳಿಸುತ್ತದೆ;
ಸುಬ್ ಹಾನಲ್ಲಾಹಿವಲ್ ಹಮ್ದುಲಿಲ್ಲಾಹಿವಲಾ ಇಲಾಹಇಲ್ಲಲ್ಲಾಹು ಅಲ್ಲಾಹು ಅಕ್ಬರ್
ಎಂಬ ದ್ಸಿಕ್ರ್ ಹೇಳುವಾಗ ಅವನಿಗಾಗಿ ಸ್ವರ್ಗದಲ್ಲೊಂದು ವೃಕ್ಷ ಬೆಳೆಯುತ್ತದೆ?
ಆಕಾಶ ಭೂಮಿಗಳಷ್ಟು ವಿಶಾಲದ ಸ್ವರ್ಗದಲ್ಲಿ ಎಷ್ಟು
ಕೋಟಿ ವೃಕ್ಷಗಳನ್ನು ನೆಡಬಹುದು ತಾನೇ??
ಸ್ವರ್ಗದಲ್ಲಿ ಇಷ್ಟೊಂದು ವೃಕ್ಷಗಳು ಯಾಕೆ?
ಇಹದಂತೆ ಅಲ್ಲಿನ ಬದುಕು ಮುಗಿಯುದಿಲ್ಲ.ಬಯಸಿದ್ದೆಲ್ಲವೂ ಸಿಗುವ ಸ್ವರ್ಗ ದಲ್ಲಿ
ತಿನ್ನಲು ಹಣ್ಣು- ಹಂಪಲು ಬಯಸಿದವನಿಗೆ ಎಲ್ಲಿ ಬೇಕಾದರೂ ಕೈಗೆಟುಕುವಂತಿರುತ್ತದೆ.ವೃಕ್ಷ ಮನುಷ್ಯ ಬಯಸುವ ಪ್ರಕೃತಿ ಸೌಂದರ್ಯ...
ಈ ಸೌಂದರ್ಯ ಅಲ್ಲಿ ತುಂಬಿ ನಿಂತಿದೆ;
ತೂಬಾ ಎಂಬ ಒಂದು ವಿಶೇಷ ವೃಕ್ಷದ ಪ್ರಸ್ತಾಪವೂ ಇತರ ಕೆಲವು ಹದೀಸ್ ಗಳಲ್ಲಿವೆ.....
ಖುರ್ ಆನ್ ನಲ್ಲಿ ಜನ್ನತ್ ಎಂದು ಸ್ವರ್ಗದ ಬಗ್ಗೆ ಹಳಲಾದ ಹೆಚ್ಚಿನ ಕಡೆಗಳಲ್ಲೆಲ್ಲ ಅದರ ಬೆನ್ನಿಗೆ" ಅದರ ತಳಭಾಗಗಳಲ್ಲಿ ನದಿಗಳು ಹರಿಯುತ್ತಿವೆ" ಎನ್ನಲಾಗಿದೆ?
ಸೂರ ಮುಹಮ್ಮದ್ ನಲ್ಲಿ ನದಿಗಳ ಬಗ್ಗೆ ಹೆಚ್ಚು ವಿವರಣೆಗಳಿವೆ.
ಹಾಲಿನ ನದಿ
ಜೇನಿನ ನದಿ
ಮದಿರೆಯ ನದಿ
ಇವು ಸ್ವರ್ಗದ ವಿಶೇಷ?
ಹಾಲು,ಜೇನು, ಮದಿರೆಯ ಹೆಸರು ನಮ್ಮ ಕಲ್ಪನೆಗೆ ತರಲು ಮಾತ್ರ....
ಸ್ವರ್ಗದ ಹಾಲು,ಜೇನು, ಮದಿರೆ ಕುಡಿದಷ್ಟು ಸಾಕೆನಿಸದ ಅದ್ಬುತ ರುಚಿಯುಳ್ಳದ್ದೆಂದು ಬೇರೆ ಹೇಳಬೇಕಿಲ್ಲವಷ್ಟೇ.....
ಸ್ವರ್ಗದ ನದಿಗಳಲ್ಲಿ ಕೆಲವನ್ನು ಖುರ್ ಆನ್,ಮತ್ತು ಹದೀಸ್ ಗಳು ಹೆಸರಿಸಿವೆ.
ಅವುಗಳಲ್ಲಿ ಶ್ರೇಷ್ಠವಾದದ್ದು ನಬಿ( ಸ) ರಿಗೆ ಅಲ್ಲಾಹು ಕೊಡುಗೆಯಾಗಿ ನೀಡಿರುವ
ಕೌಸರ್
ಇದು ಹೌಳುಲ್ ಕೌಸರ್ ಎಂದು ಕರೆಯಲ್ಪಟ್ಟಿದೆ.
ದಾಹದಿಂದ ಬಳಲಿದ ಸತ್ಯವಿಶ್ವಾಸಿಗಳಿಗೆ ಅಂತ್ಯದಿನದಲ್ಲಿ ನಬಿ( ಸ) ರು ಈ ನದಿಯಿಂದ ನೀರನ್ನು ಕುಡಿಯಲು ಕೊಡುವರು..
ಮಂಜುಗಡ್ಡೆಗಿಂತ ಬಿಳಿವರ್ಣವುಳ್ಳ ಜೇನಿಗಿಂತ ಮಧುರವುಳ್ಳ
ಇದರ ಪಾನೀಯದ ವರ್ಣನೆ ಹದೀಸ್ ಗ್ರಂಥಗಳಲ್ಲಿ ಧಾರಾಳವಿದೆ?
ಸ್ವರ್ಗದ ಇನ್ನೊಂದು ನದಿ
ಸಲ್ ಸಬೀಲ್
ಖುರ್ ಆನ್ ಹೇಳಿದಂತೆ ಶುಂಠಿ ಮಿಶ್ರಿತ ಪಾನೀಯವಿದು;
ಈ ನದಿಯ ಪಾನೀಯವನ್ನು ಬಲಗಡೆಯವರು ಎನ್ನಲಾದ ಅಸ್ವ್ ಹಾಬುಲ್ ಯಮೀನ್ ಗೆ ಕೊಡಲಾಗುವುದು ಎಂದು ಖುರ್ ಆನ್ ಹೇಳಿದೆ..
ಇನ್ನೊಂದು ನದಿ ತಸ್ ನೀಮ್
ಸ್ವರ್ಗದ ಕಸ್ತೂರಿ ಮಿಶ್ರಣಗೊಂಡ ಈ ನದಿಯ ಪಾನೀಯ ಮುಖರ್ರಬ್ ಗಳಿಗೆ ಇರುವಂತದ್ದು.
ಇನ್ನೊಂದು ನದಿ ಅಲ್ ಬೈದಖ್ ಹುತಾತ್ಮರು ಸ್ಥಾನ ಮಾಡುವ ನದಿಯಿದು...
ಹುತಾತ್ಮರು ಆಹಾರ ಸೇವನೆಗಾಗಿ ಪ್ರತ್ಯೇಕ ಗೌರವಿಸಲ್ಪಡುವ ಇನ್ನೊಂದು ನದಿ ತೀರವಿದೆ;
ಬಾರಿಖ್ ಎಂದು ಹೆಸರು
ಇವುಗಳಲ್ಲದೆ ಹಲವು ನದಿಗಳು ಸ್ವರ್ಗದ ಸೌಂದರ್ಯದ ವಿಶೇಷ ಆಕರ್ಷಣೆಗಳಾಗಿವೆ.
ಹಲವು ನದಿಗಳು ಅಲ್ಲಾಹನ ಅರ್ಶ್ ನಿಂದ ಹುಟ್ಟಿ ಹರಿಯುತ್ತದೆ;
ಕೆಲವು ಸಿದ್ ರತುಲ್ ಮುಂತಹಾದಿಂದ,ಫಿರ್ ದೌಸ್ ನಿಂದ, ಹರಿಯುತ್ತಲೇ ಇರುತ್ತದೆ
ಒಂದೊಂದು ನದಿಯ ಉದ್ದ ಎಷ್ಟು ಗೊತ್ತಾ?
1000 ವರ್ಷದ ಸಂಚಾರ ದೂರ?
ಬಯಸಿದ್ದೆಲ್ಲವೂ ಸಿಗುವ ತಾಣವಾಗಿದೆ ಸ್ವರ್ಗ!
ತಾನು ಬಯಸಿದ ಆಹಾರ, ಪಾನೀಯ ತಕ್ಷಣ ಅವನೆದುರು ಸಿದ್ದಗೊಳ್ಳುತ್ತದೆ!
ಫಾಕಿಹಾತ್
ವಿವಿಧ ತರದ ಹಣ್ಣು- ಹಂಪಲುಗಳು
ಸೂರ ಅರ್ರಹ್ಮಾನ್ ನಲ್ಲಿ
ಹಣ್ಣು- ಹಂಪಲು ಹೇಳಿ ಖರ್ಜೂರ ಮತ್ತು ದಾಳಿಂಬೆಯನ್ನು ಹೆಸರಿಸಲಾಗಿದೆ.....
ತಾನಿಚ್ಚಿಸಿದ ಹಣ್ಣು ಗೊಂಚಲುಗಳು ಕುಳಿತೆಡೆಗೆ ಬಾಗಿ ಬರುವ ಅದ್ಬುತವಿದೆ ಸ್ವರ್ಗದಲ್ಲಿ?
ಸೂರ ವಾಖಿಆದಲ್ಲಿ ಅವರು ಬಯಸುವ ಪಕ್ಷಿಯ ಮಾಂಸವಿದೆವೆಂದಿದೆ,
ಪಕ್ಷಿ ಮಾಂಸ ಅಲ್ಲಿನ ಆಹಾರ ವಸ್ತು?
ಸ್ವರ್ಗದಲ್ಲಿ ಮಾಂಸಕ್ಕೆ ಪ್ರಾಶಸ್ತ್ಯವಿದೆ.
ಸ್ವರ್ಗ ಪ್ರವೇಶವಾದೊಡನೆ
ಮೀನು
ಬೀಫು
ಮತ್ತು ಸಲ್ ಸಬೀಲ್ ಪಾನೀಯದ ಮೊದಲ ಆತಿಥ್ಯ ದೊರಕುವುದೆನ್ನುತ್ತದೆ ಹದೀಸ್ ವಚನ?
ಆಹಾರ ಪಾನೀಯ ಸೇವನೆಗೆ ಹಸಿವು ಮತ್ತು ದಾಹ ಬೇಕು ತಾನೆ?
ಸ್ವರ್ಗದಲ್ಲಿ ಹಸಿವು ಇರದು!
ಹೌಳುಲ್ ಕೌಸರ್ ನಿಂದ ನೀರು ಕುಡಿದವರಿಗೆ
ದಾಹವೂ ಇರದು...
ಹಾಗಿರುವಾಗ ಸ್ವರ್ಗದವರು
ಆಹಾರ ಸೇವಿಸುದೇಕೆ?
ಹಸಿವು, ದಾಹ ಇರದಿದ್ದರು
ಆಹಾರ, ಪಾನೀಯದ ಬಯಕೆ,ಮತ್ತು ರುಚಿ ಇರುತ್ತದೆ
ಅದು ಸ್ವರ್ಗದ ವೈಶಿಷ್ಟ್ಯತೆ?
ತಿಂದರೆ ಮುಗಿಯದಷ್ಟು ಇರುವ ಕಾರಣ ನನಗೆ ಸಾಕಾಗದು ಎನ್ನುವ ಆತಂಕವಿಲ್ಲ...ಒಮ್ಮೆ ತಿಂದ ವಸ್ತುವಿನ ರುಚಿ ಇನ್ನೊಮ್ಮೆಗೆ ಅರೋಚಕವೆನಿಸುವುದೂ ಇಲ್ಲ...
ಒಂದು ಫಲವೆಂದು ಅದೇ ರೂಪದಲ್ಲಿ ಇರುವ ಇನ್ನೊಂದು ಫಲ ಕಿತ್ತಾಗ
ಅದರ ರುಚಿ ಬೇರೆಯೇ ತರವಿರುತ್ತದೆ!
ಖುರ್ ಆನ್ ಹೆಸರಿಸಿದಂತೆ
ನೀರು
ಹಾಲು
ಮದಿರೆ
ಮುಂತಾದ ಪಾನೀಯಗಳೆಲ್ಲ ಅಲ್ಲಿವೆ.ಮದ್ಯ ಕುಡಿದರೆ ಅಮಲೇರದು
ಸ್ವರ್ಗೀಯ ಸಂಗಾತಿ ಕೊಟ್ಟ ಪಾನೀಯ ಕುಡಿದಾಗ ಮೊದಲಿದ್ದ ಸೌಂದರ್ಯದ ಮುಮ್ಮಡಿ ಸೌಂದರ್ಯವನ್ನು ಅವನು ಅವಳಲ್ಲಿ ಕಾಣುತ್ತಾನೆ?
ಸ್ವರ್ಗದಲ್ಲಿ ಹೀಗೆ ಬೇಕಾಬಿಟ್ಟಿ ತಿನ್ನುತ್ತಾ,ಕುಡಿಯುತ್ತ ಇದ್ದರೆ
ಹೊಟ್ಟೆ ಸೇರಿದ್ದು ಹೊರಬರಬೇಡವೆ!
ಇಲ್ಲ.... ಸ್ವರ್ಗದ ಆಹಾರ, ಪಾನೀಯಗಳಲ್ಲಿ ವೇಸ್ಟ್ ಇದ್ದರೆ ತಾನೇ ಹೊರಹಾಕಬೇಕಾಗುವುದು.ಅಲ್ಲಿ ತಿಂದದ್ದೆಲ್ಲವೂ ಜೀರ್ಣ..ಎಲ್ಲವೂ ಶರೀರಕ್ಕೆ
ಹದೀಸ್ ವಚನ ಇದನ್ನು ಸ್ಪಷ್ಟಪಡಿಸಿದೆ
"ಅವರು ಅಲ್ಲಿ ಮಲಮೂತ್ರ
ವಿಸರ್ಜಿಸುವುದಿಲ್ಲ,ಸಿಂಬಳ ಹೊರಹಾಕುದಿಲ್ಲ.
ಉಗುಳುವುದಿಲ್ಲ.ಹೊಟ್ಟೆ ತುಂಬಿದಾಗ ಕಸ್ತೂರಿಯ ಸುವಾಸನೆಯೊಂದಿಗೆ ಬಾಯಿಂದ ತೇಗಿನಂತ ಒಂದು ಶಬ್ದ ಹೊರಡುವುದಷ್ಟೇ....
( ಹದೀಸ್)
ಪವಿತ್ರ ರಮಳಾನ್ ನಲ್ಲಿ
ಈಗಷ್ಟೇ ಅತ್ತಾಳಕ್ಕೇ
ತಯಾರಾಗಿರುವ ನೀವ್ಯಾರು ಸ್ವರ್ಗದ ಆಹಾರದ ಪಾನೀಯದ ಬಗ್ಗೆ ಅಲ್ಲಿರುವ ಅದ್ಬುತದ ಬಗ್ಗೆ ಅಚ್ಚರಿ ಪಡಬೇಡಿ...
ಅದು ಸ್ವರ್ಗ ...ಅಚ್ಚರಿಯ ವಿಸ್ಮಯದ ಲೋಕ .ಅಲ್ಲಿ ಮರಣ ಇಲ್ಲ...
ರೋಗ ಇಲ್ಲ...
ಚಿಂತೆ ಇಲ್ಲ..
ಭಯ ಇಲ್ಲ
ದುಃಖ ಇಲ್ಲ
ನಿರಾಸೆ ಇಲ್ಲ
ನಮಗಿಂತ ಬೇರೆಯವರಿಗೆ ಜಾಸ್ತಿ ಸ್ಥಾನ ಸ್ವರ್ಗದಲ್ಲಿ ಸಿಕ್ಕಿದರೆ ಇಲ್ಲಿನಂತೆ ಅಸೂಯೆ, ಮತ್ಸರ ಇಲ್ಲ
ಯಾಕೆಂದರೆ ನಮಗೆ ಸಿಕ್ಕಿದ್ದೇ ಮಹಾ ಎನ್ನುವಂತೆ ಎಲ್ಲರು ಖುಷಿಯಾಗಿ ಇರುತ್ತಾರೆ....
ಅದು ಖುಷಿಯ ಲೋಕ,ವಿಚಿತ್ರ, ವಿಸ್ಮಯದ ಅದ್ಬುತ ಲೋಕ...
ಅಕ್ಷರದಲ್ಲಿ ಅದನ್ನು ವಿವರಿಸಲು ಸಾದ್ಯವಿಲ್ಲ...
ಅಲ್ಲಾಹನ ಕರುಣೆಯಿಂದ
ಆ ಸೌಭಾಗ್ಯ ನನಗೂ,ನಿಮಗೂ ನಬಿ( ಸ)ರ ಎಲ್ಲಾ ಉಮ್ಮತ್ ಗೆ ಸ್ವರ್ಗ ಸಿಗ್ಲೀ
ಆಮೀನ್?
ಸ್ವರ್ಗ ನಿವಾಸಿಗಳು ಸ್ವರ್ಗದಲ್ಲಿ ನಿದ್ದೆ ಮಾಡುವರೇ
ಸಹಾಬಿಯೊಬ್ಬರು ನಬಿ( ಸ) ರತ್ರ ಕೇಳಿದರು
ನಿದ್ದೆ ಮರಣದ ಸಹೋದರ; ಸ್ವರ್ಗೀಯರು ನಿದ್ದೆ ಮಾಡುದಿಲ್ಲ" ಎಂದರು ನಬಿ( ಸ) ರು!
ನಿದ್ದೆಯೆನ್ನುದು ಆಯಾಸದ
ಬಳಿಕದ ವಿಶ್ರಾಂತಿ. ಸ್ವರ್ಗದಲ್ಲಿ ಆಯಾಸವೇ ಇಲ್ಲದಿರುವಾಗ ಶರೀರಕ್ಕೆ ಆಯಾಸದ ಪರಿಹಾರವೂ ಅಗತ್ಯವಿರುದಿಲ್ಲ ತಾನೇ?
ಹಾಗೊಂದು ಆಯಾಸ ಪರಿಹಾರಕ್ಕಲ್ಲದೆ ನಿದ್ದೆ ಮಾಡಿದರೆ ಆ ನಿದ್ದೆ ವೇಸ್ಟ್ ಅಲ್ಲವೇ?
ಅಲ್ಲದಿದ್ದರೂ ನೇಮತ್ತುಗಳು ತುಂಬಿ ತುಳುಕುವ ಸ್ವರ್ಗದಲ್ಲಿ
ಸುರಸುಂದರಿಯರು ಸುತ್ತುವರಿದಿರುವಾಗ ನಿದ್ದೆ ಬಂದೀತೇ??
ನಿದ್ದೆ ಇಲ್ಲವೆನ್ನುವಾಗ
ಸ್ವರ್ಗದಲ್ಲಿ
ಹಗಲುರಾತ್ರಿ ಇದೆಯೇ? ಎಂಬ ಪ್ರಶ್ನೆ ಎದ್ದು ಬರಬಹುದು...
ರಾತ್ರಿ ಹಗಲೆನ್ನುವುದು ಸೂರ್ಯ- ಭೂಮಿಯ ಸಂಕ್ರಮಣಗಳ ಫಲ.ಅದು ಭೂಮಿಯ ವೈಶಿಷ್ಟ್ಯ..
ಸ್ವರ್ಗ ಲೋಕಕ್ಕೆ ಸೂರ್ಯನು ಇಲ್ಲ...
ಚಂದ್ರನು ಇಲ್ಲ...
ಅಲ್ಲಿ ಮಂದ ಪ್ರಕಾಶ ಮಾತ್ರವಿದೆ!
ಸೂರ ಮರ್ಯಮ್ ನ 62 ನೇ ಸೂಕ್ತದಲ್ಲಿ ಸ್ವರ್ಗೀಯರಿಗೆ ಬೆಳಗ್ಗು ಮತ್ತು ಸಾಯಂಕಾಲಗಳಲ್ಲಿ
ಅವರ ಆಹಾರವಿದೆ ಎನ್ನಲಾಗಿದೆಯಲ್ಲವೇ?
ಬೆಳಗ್ಗು ಮತ್ತು ಸಾಯಂಕಾಲ ರಾತ್ರಿ ಮುಗಿಯುವ ಮತ್ತು ರಾತ್ರಿ ಆರಂಭವಾಗುವ ಹೊತ್ತಲ್ಲವೇ ಎಂದು ಕೇಳುವವರಿರಬಹುದು...
ದುನಿಯಾದಲ್ಲಿ ಹಾಗೆ?
ಆದರೆ ಸ್ವರ್ಗದಲ್ಲಿ ಹಾಗಲ್ಲ;
ಅಲ್ಲಿ ಬುಕ್ ರತ್ ಮತ್ತು ಅಶಿಯ್ಯ್ ನ ಅರ್ಥ ಸದಾಕಾಲವೆಂದು ಮಾತ್ರವಿದೆ...ವ್ಯಾಖ್ಯಾನ ಗ್ರಂಥಗಳಲ್ಲಿ ಇದರ ವಿವರಣೆಯನ್ನು ಕಾಣಬಹುದು????
ಸ್ವರ್ಗ ವೆಂಬ ಕಲ್ಪನೆ ಇರುವ
ಧರ್ಮಗಳಲ್ಲೆಲ್ಲ ಸ್ವರ್ಗ ಕನ್ಯೆಯರ ಕಲ್ಪನೆಯೂ ಇದೆ!
ಸ್ವರ್ಗ ಕನ್ಯೆಯೊಬ್ಬಳು ಭೂಮಿಗೇನಾದರು ಬಂದರೆ
ಇಡೀ ಭೂಮಿಯೇ ಅವಳ ಸೌಂದರ್ಯದಿಂದ ಬೆಳಗುತ್ತಿತ್ತು.ಅವಳ ಸುವಾಸನೆ ಎಲ್ಲೆಡೆ ಹರಡುತ್ತಿತ್ತು!
ಮನುಷ್ಯನ ಊಹೆಗೆ ಎಟುಕದ,ಕಲಾಗಾರರ ಕುಂಚಗಳಿಗೆ ಸಿಲುಕದ,ವರ್ಣನೆಯ ಪದಕಸರತ್ತುಗಳೊಳಗೆ ಬಂಧಿಯಾಗದ ಸೌಂದರ್ಯ ಸ್ವರ್ಗ ಕನ್ಯೆಯದ್ದು!
ಸುಖ ಸಾಮ್ರಾಜ್ಯದ ಸ್ವರ್ಗದಲ್ಲಿ ಸ್ವರ್ಗ ಕನ್ಯೆಯರ
ಪಾತ್ರವನ್ನು ಖುರ್ ಆನ್ ಹಲವೆಡೆ ಎತ್ತಿ ತೋರಿಸಿದೆ.ಹದೀಸ್ ವಚನಗಳಲ್ಲಿ ಸ್ವರ್ಗ ಕನ್ಯೆಯರ ಬಗ್ಗೆ ಧಾರಾಳ ಪ್ರಸ್ತಾಪಗಳಿವೆ...
ಹೆಣ್ಣಿನ ಸೌಂದರ್ಯಕ್ಕೆ ,ಆಕರ್ಷಣೆಗೆ ಮನುಷ್ಯ ಮೈಮರೆತು ಬಿಡುತ್ತಾನೆ ಎನ್ನುವುದುಂಟು....ನಿಜವಾಗಿ ಇದು ಸಂಭವಿಸುದು ಸ್ವರ್ಗದಲ್ಲಿ....
ಸ್ವರ್ಗ ಕನ್ಯೆಯ ಮೈಮಾಟಕ್ಕೆ,ಸೌಂದರ್ಯಕ್ಕೆ ಮನುಷ್ಯ ಸೋತು ಹೋಗುತ್ತಾನೆ
ಹದೀಸ್ ವಚನ ವಿವರಿಸುವಂತೆ ಸ್ವರ್ಗನಿವಾಸಿಗಳು ತಮ್ಮ ಸಂಗಾತಿಯ ಜತೆ ಕುಳಿತು ಅನೇಕ ವರ್ಷಗಳ ಕಾಲ ಸರಸ ಮಾತುಗಳಲ್ಲೇ ಮುಳುಗುವರಂತೆ?
ಖುರ್ ಆನ್ ಸ್ವರ್ಗ ಕನ್ಯೆಯರನ್ನು ಅಝ್ವಾಜುನ್ ಮುತಹ್ಹರಃ ಎಂದಿದೆ
ಪರಿಶುದ್ಧ ಸಂಗಾತಿಗಳು ಎಂದರ್ಥ.... ಹೃದಯವು ಅದೇ ತರ.ಯಾವ ಕೇಡುಗಳು ಅದಕ್ಕೆ ತಟ್ಟುದಿಲ್ಲ.ಅವರ ಸ್ವಭಾವ, ಮಾತುಕತೆ, ವಸ್ತ್ರಗಳು
ನಡತೆ ಸೇರಿ ಎಲ್ಲವೂ ಶುದ್ಧ
ಖೈರಾತ್ ಹಿಸಾನ್ ಖುರ್ ಆನ್ ಅವರಿಗೆ ನೀಡಿದ ಬಿರುದು
ಖೈರಾತ್ ಅವರ ಉತ್ತಮ ಗುಣನಡತೆಗಳನ್ನು ಸೂಚಿಸಿದರೆ
ಹಿಸಾನ್ ಅವರ ಸೌಂದರ್ಯ ಬಿಂಬಿಸುವ ಪದ....
ಹೂರ್ ಈನ್ ಗಳನ್ನು ಖುರ್ ಆನ್ ಚಿಪ್ಪಿಗಳೊಳಗೆ
ಬಚ್ಚಿಡಲಾದ ಮುತ್ತುಗಳಂತವರು ಎಂದಿದೆ!
ಯಾರು ಸ್ವರ್ಶಿಸದ ಸಂಶುದ್ದ ಮುತ್ತಿನಂತ ಹೆಣ್ಣು!
ಹೌದು ಸ್ವರ್ಗ ಪ್ರವೇಶಿಸುವ ಪುರುಷರಿಗೆ ಇವರನ್ನು ಚಿಪ್ಪಿಯೊಳಗಿನ ಮುತ್ತಿನಂತೆ ಕಾಯ್ದಿರಿಸಲಾಗಿದೆ!!!
ಸ್ವರ್ಗದಲ್ಲಿ ಬಜಾರ್ ಇದೆ,ಬ್ಯೂಟಿಪಾರ್ಲರ್ ಇದೆ
ಸಂಬಂಧಿಕರ ಬೇಟಿಯಿದೆ..
ಒಂಟೇ,ಕುದುರೆಯ ಗಾತ್ರ
ಸ್ವರ್ಗದ ಮಕ್ಕಳು
ಸ್ವರ್ಗ ಸ್ತ್ರೀಯ ಸೇವಕಿಯರು
ಕೊನೆಗೆ ಅಲ್ಲಾಹನ ದರ್ಶನ?
ಬರೆಯಲು ತುಂಬಾ ಇದೆ?
ಸಾಕಲ್ವ...???
ಅಲ್ಲಾಹನನ್ನು ಸ್ತುತಿಸಿ ದಾವುದ್( ಅ) ಹಾಡುತ್ತಾರೆ,
ಅವರ ಸುಮಧುರವಾದ ಧ್ವನಿಯಲ್ಲಿ ಇಡೀ ಸ್ವರ್ಗನಿವಾಸಿಗಳು ನಿಶಬ್ದವಾಗಿ ಅವರ ಸ್ಥುತಿಗಾನವನ್ನು ಆಲಿಸುತ್ತಾರೆ....
ದಾವುದ್(ಅ)ರ ಆ ಹಾಡು ಕೇಳುವ ಜನರಲ್ಲಿ ನಮ್ಮನ್ನು
ಸೇರಿಸು ಅಲ್ಲಾ...🤲
ಲೇಖಕರು :N.F ಪಾಣೆಮಂಗಳೂರು
NOORUL FALAH ISLAMIC ORGANISATION
Comments
Post a Comment