ಉಪವಾಸದ ಕಡ್ಡಾಯ ನಿಯಮಗಳು:
ಉಪವಾಸದ ಕಡ್ಡಾಯ ನಿಯಮಗಳು:
ಉಪವಾಸಕ್ಕೆ ಕಡ್ಡಾಯವಾದ ಕಾರ್ಯಗಳು ಹೆಚ್ಚೇನೂ ಇಲ್ಲ. ಆದರೆ, ವಿವರಣೆಗಳು ಹೆಚ್ಚಿವೆ. ನಿಯ್ಯತ್ ಹಾಗೂ ಉಪವಾಸ ಮುರಿಯುವ ಕಾರ್ಯಗಳನ್ನು ವರ್ಜಿಸುವುದು ಉಪವಾಸದ ಫರ್‌ಳ್ ಅಥವಾ ಕಡ್ಡಾಯ ನಿಯಮಗಳಾಗಿವೆ.
ಉಪವಾಸ ಮೊದಲ ನಿಬಂಧನೆ ನಿಯ್ಯತ್ ಸಂಕಲ್ಪಿಸುವುದು. ಉಪವಾಸ ಹಿಡಿಯುವ ಉದ್ದೇಶದಿಂದ ಸಹರಿ ಸೇವಿಸುವವನೂ ಸಹ ನಿಯ್ಯತ್ ಸಂಕಲ್ಪಿಸಬೇಕು . ಅದು ಕಡ್ಡಾಯ. ವುಳೂಅ್ ನಿರ್ವಹಿಸಿ, ಮಸೀದಿಯ ಒಳಗೆ ಹೋಗಿ ಇಮಾಮರ ಹಿಂದೆ ನಿಲ್ಲುವವನ ಮನಸಿನಲ್ಲೂ ತಾನು ನಮಾಝ್ ಮಾಡಲು ಹೊರಟಿದ್ದೇನೆ ಎಂಬ ಪ್ರಜ್ಞೆಯಿರುತ್ತದೆಯಲ್ಲವೇ.? ಅವನೂ ಸಹ ನಿಯ್ಯತ್ ಸಂಕಲ್ಪಿಸಲೇಬೇಕು. ಹಾಗೆಯೇ ಉಪವಾಸ ವ್ರತದ ನಿಯ್ಯತ್ ಕೂಡ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ. ನಿಶ್ಚಯವಾಗಿಯೂ ಕರ್ಮಗಳು ಸ್ವೀಕರಿಸಲ್ಪಡುವುದು ನಿಯ್ಯತ್‌ನ ಮೂಲಕವಾಗಿದೆ. (ಬುಖಾರಿ) ಇಂತಿಂಥ ಉಪವಾಸ, ನಮಾಝ್ ಎಂದೇ ನಿಯ್ಯತ್ ಸಂಕಲ್ಪಿಸಬೇಕೆಂಬುದನ್ನು ಈ ಪ್ರವಾದಿ ವಚನ ಸ್ಪಷ್ಟಪಡಿಸುತ್ತದೆ.
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment