ಉವೈಸುಲ್ ಖರ್ನಿ(ರ.ಅ):
ಉವೈಸುಲ್ ಖರ್ನಿ(ರ.ಅ):
ಭೌತಿಕ ಜೀವನದಲ್ಲಿ ನಯಾಪೈಸೆಯ ಆಸಕ್ತಿಯನ್ನೂ ತೋರದ ಮಹಾತ್ಮರಾಗಿದ್ದರು ಉವೈಸುಲ್ ಖರ್ನಿ(ರ.ಅ), ಇದರಿಂದ ಮನೆಯವರೂ ಸಹ ಅವರನ್ನು ಮಾನಸಿಕ ರೋಗಿಯಂತೆ ಕಂಡರು. ಅವರಿಗೆ ವಾಸಿಸಲು ಮನೆಯ ಪಕ್ಕದಲ್ಲಿ ಮತ್ತೊಂದು ಮನೆಯನ್ನು ನಿರ್ಮಿಸಿ ಕೊಡಲಾಯಿತು. ಉವೈಸುಲ್ ಖರ್ನಿ(ರ.ಅ) ಆ ಮನೆಯನ್ನು ಬಹಳ ಕಡಿಮೆ ಹೊತ್ತು ಉಪಯೋಗಿಸುತ್ತಿದ್ದರು, ಸುಬುಹಿ ಬಾಂಗ್ ಮೊಳಗುತ್ತಿದ್ದಂತೆ ಅವರು ಮನೆಯಿಂದ ಹೊರಡುತ್ತಿದ್ದರು. ಇಶಾಅ್ ನಮಾಝಿನ ಬಳಿಕ ಹಿಂದಿರುಗುತ್ತಿದ್ದರು. ತೀರಾ ಕೆಳ ಮಟ್ಟದ ಒಣ ಖರ್ಜೂರ ದೊರೆತರೆ ಅವರದನ್ನು ಉಪವಾಸ ತ್ಯಜಿಸಲು ಎತ್ತಿಡುತ್ತಿದ್ದರು. ಏನೂ ಸಿಗದಿದ್ದಲ್ಲಿ ಅವರು ಖರ್ಜೂರದ ಬೀಜಗಳನ್ನು ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದರು. ಅದರಿಂದ ದೊರೆತ ಹಣದಿಂದ ಉಪವಾಸ ತ್ಯಜಿಸಲು ಕಳಪೆ ಮಟ್ಟದ ಒಣ ಖರ್ಜೂರಗಳನ್ನು ಖರೀದಿಸುತ್ತಿದ್ದರು. ಇದು ಅವರ ಜೀವನ ರೂಢಿಯಾಗಿತ್ತು.
(ಇಹ್ಯಾ: 3/192).
Comments
Post a Comment