ಪ್ರವಾದಿ ಪ್ರಪಂಚ
ಪ್ರವಾದಿಯ ಪ್ರಪಂಚ
▪️ ಒಂದು ದಿನ ಪ್ರವಾದಿ ಮುಹಮ್ಮದ್ ﷺ ರ ಪ್ರೀತಿಯ ಪುತ್ರಿ ಬೀವಿ ಫಾತಿಮಾಃ (ರ) ರವರು ಪ್ರವಾದಿ ﷺ ರ ಬಳಿ ಬಂದರು. ಕೆಲವು ದಿನಗಳಿಂದ ಆಹಾರ ಸಿಗದೆ ಹಸಿವಿನಿಂದ ಕಂಗಾಲಾಗಿದ್ದ ಅವರ ಮುಖವು ರಕ್ತ ಸಂಚಾರವಿಲ್ಲದೆ ಕಪ್ಪಾಗಿತ್ತು. ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ತನ್ನ ಪ್ರೀತಿಯ ಮಗಳನ್ನು ಕಂಡಾಗ ಮನ ಕರಗಿದ ಪ್ರವಾದಿ ಮುಹಮ್ಮದ್ ﷺ ರು ಅವರನ್ನು ತನ್ನ ಹತ್ತಿರ ಬಂದು ಕುಳಿತುಕೊಳ್ಳಲು ಹೇಳಿದರು. ಹತ್ತಿರ ಬಂದು ಕುಳಿತ ಪುತ್ರಿಯ ಎದೆಯ ಮೇಲೆ ಕೈಯಿಟ್ಟು ಪ್ರವಾದಿ ﷺ ರು ಅಲ್ಲಾಹನಲ್ಲಿ ಈ ರೀತಿ ದುಆ ಮಾಡಿದರು. "ಹಸಿದವನ ಹಸಿವನ್ನು ನೀಗಿಸುವ ಅಲ್ಲಾಹನೇ.., ನನ್ನ ಪ್ರೀತಿಯ ಪುತ್ರಿ ಫಾತಿಮಳ ಹಸಿವನ್ನು ನೀನು ನೀಗಿಸು. ಅವಳ ಕಪ್ಪಾದ ಸುರುಳಿಗಟ್ಟಿದ ಮುಖಕ್ಕೆ ಪೂರ್ವ ಕಾಂತಿಯನ್ನು ಕೊಡು."
▪️ ಸುಬ್‌ಹಾನಲ್ಲಾಹ್. ಅಷ್ಟು ಹೇಳಿದ್ದೇ ತಡ. ಅವರ ಹಸಿವು ಹೋಗುವುದಲ್ಲದೆ ಪೂರ್ವ ಸ್ಥಿತಿಗೆ ಮರಳಿ ಬಂದರು.
▪️ ಗಮನಾರ್ಹವೆಂದರೆ ಇದರ ಬಳಿಕ ಅವರಿಗೆ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಆಹಾರ ಸಿಗದಿದ್ದರೂ ಹಸಿವು ಎಂಬ ತೊಂದರೆ ಅವರ ವಫಾತಿನ ತನಕ ಒಮ್ಮೆಯೂ ಉಂಟಾಗಿಲ್ಲ.
✍🏻ಸಂಗ್ರಹ: ಇಮಾಮ್ ಹಲಬಿಯ ಅಸ್ಸೀರತುಲ್ ಹಲಬಿಯ್ಯ ಎಂಬ ಗ್ರಂಥದಿಂದ.
Comments
Post a Comment