ಧರ್ಮಭ್ರಷ್ಟ:
ಧರ್ಮಭ್ರಷ್ಟ:
ಸತ್ಯ ವಿಶ್ವಾಸಿಯಾಗಿರಬೇಕಾದುದೂ ವೃತ ಸಿಂಧುವಾಗಲಿಕ್ಕಿರುವ ಒಂದು ನಿಬಂಧನೆಯಾಗಿದೆ. ಆದ್ದರಿಂದ ವೃತಸ್ಥ ಪವಿತ್ರ ಇಸ್ಲಾಂನಿಂದ ಧರ್ಮಭ್ರಷ್ಟ (ಮುರ್‌ತದ್) ನಾದರೆ ವೃತ ಭಂಗವಾಗುತ್ತದೆ. ಕೂಡಲೇ ಅದರಿಂದ ಮರಳಿ ಬಂದರೂ ಸರಿ.
ಧರ್ಮಭ್ರಷ್ಟನಾದಂತೆ ಯಾವುದೆ ಸತ್ಕರ್ಮಗಳೂ ಅವನಿಂದ ಸ್ವೀಕರಿಸಲಾಗುವುದಿಲ್ಲ. ಆದ್ದರಿಂದಲೆ ಈ ಸಂದರ್ಭದಲ್ಲಿ ಅವನ ಮೇಲೆ ಕಡ್ಡಾಯವಾಗುವ ನಮಾಝ್, ಉಪವಾಸಗಳಂತಹ ಕಾರ್ಯಗಳನ್ನೆಲ್ಲವೂ ನಂತರ ದೀನಿಗೆ ಮರಳಿ ಬಂದರೆ ಖಳಾಅ್ ಸಂದಾಯಿಸುವುದು ಕಡ್ಡಾಯವಾಗಿರುತ್ತದೆ.
ಧರ್ಮಭ್ರಷ್ಟ ಅತ್ಯಂತ ಮಹಾಪಾಪವಾಗಿದೆ. ಇತರ ದೋಷಕೃತ್ಯಗಳನ್ನೆಲ್ಲಾ ಅಲ್ಲಾಹು ಇಚ್ಚಿಸುವವರಿಗೆ ಕ್ಷಮಿಸಿ ಕೊಡುವನು. ಆದರೆ ಧರ್ಮಭ್ರಷ್ಟ ಮಾತ್ರ ಒಮ್ಮೆಯೂ ಕ್ಷಮಿಸುವಂತಿಲ್ಲ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸಿದೆ. ಅಲ್ಲಾಹನು ನಮ್ಮೆಲ್ಲರನ್ನೂ ಅದರಿಂದ ಕಾಪಾಡಲಿ. ಆಮೀನ್
Comments
Post a Comment