ಜ್ಞಾನಧಾರೆ
ಬದ್ರ್; ಪ್ರವಾದಿﷺ ತಙಲರ ಪ್ರವಚನ!
ಅನಸ್ ಬ್ನ್ ಮಾಲಿಕ್(ರ.ಅ) ರಿಂದ ನಿವೇದನೆ: ಮಹಾನರು ಹೇಳುತ್ತಾರೆ, "ನಮ್ಮಲ್ಲಿ ಉಮರ್ ಬ್ನ್ ಖತ್ತಾಬ್(ರ.ಅ) ಬದ್ರ್ ಸ್ವಹಾಬಿಗಳ ಕುರಿತು ಸ್ಮರಿಸುತ್ತಾ ಹೇಳಿದರು, "ಖಂಡಿತಾ, ಪ್ರವಾದಿﷺ ಯುದ್ಧದಲ್ಲಿ ಹಾಜರಾಗಿದ್ದರು, ಒಬ್ಬೊಬ್ಬರು ಹುತಾತ್ಮರಾಗಿ(ಮರಣಹೊಂದುವ) ಬೀಳುವ ಜಾಗ ನಮಗೆ ತೋರಿಸಿಕೊಡುತ್ತಾ ಈ ರೀತಿ ಹೇಳಿದ್ದರು, ಇಲ್ಲಿ ಆಗಿದೆ(ಇನ್ಶಾ ಅಲ್ಲಾಹ್) ನಾಳೆ ಈ ಸ್ವಹಾಬಿ(ಶಹೀದ್ ಆಗುವ ಸ್ವಹಾಬಿಗಳ ಕುರಿತು) ಮರಣ ಹೊಂದುವ ಸ್ಥಳ. ಇಲ್ಲಿ ಆಗಿದೆ ನಾಳೆ(ಇನ್ಶಾ ಅಲ್ಲಾಹ್) ಈ ಸ್ವಹಾಬಿ ಮರಣ ಸ್ಥಳ. ಉಮರ್(ರ.ಅ) ಮುಂದುವರೆಸುತ್ತಾರೆ, "ಸತ್ಯದೂತರಾಗಿ ಪ್ರವಾದಿﷺ ತಙಲರನ್ನು ಕಳುಹಿಸಿದ ಅಲ್ಲಾಹನಾಣೆ, ಪ್ರವಾದಿﷺ ಅಂದು ಎಳೆದ ರೇಖೆ ಯಾರೂ ಕೂಡ ಒಂದಲ್ಪವೂ ದಾಟಿಲ್ಲ." [ತ್ವಬ್'ರಾನಿ]
ಪ್ರವಾದಿﷺ ಮುಹ್'ಜಿಝತ್ ಮೂಲಕ ಸ್ವಹಾಬಿಗಳು ಹುತಾತ್ಮರಾಗಿ ಬೀಳುವ ಜಾಗ ಮೊದಲೇ ಬಾಕಿ ಸ್ವಹಾಬಿಗಳಿಗೆ ತೋರಿಸಿಕೊಟ್ಟಿದ್ದರು. ಆ ಬದ್ರ್ ಸ್ವಹಾಬಿಗಳ ಬರಕತಿನಿಂದ ಅಲ್ಲಾಹು ನಮ್ಮೆಲ್ಲರಿಗೂ ಪರಮ ಆರೋಗ್ಯದ ಜೊತೆ ದೀರ್ಘಾಯುಷ್ಯ ನೀಡಿ ಕರುಣಿಸಲಿ, ಆಮೀನ್
ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment