ಜ್ಞಾನಧಾರೆ
ಬದ್ರ್ ಸ್ವಹಾಬಿಗಳ ಮಹತ್ವ!
ಒಮ್ಮೆ ಪ್ರವಾದಿﷺ ರಲ್ಲಿ ಮಲಕ್ ಜಿಬ್ರೀಲ್(ಅ) ಪ್ರಶ್ನಿಸಿದರು: ನಿಮ್ಮ ಪೈಕಿ ಬದ್ರ್'ನಲ್ಲಿ ಭಾಗವಹಿಸಿದವರನ್ನು ನೀವು ಯಾವ ರೀತಿ ಕಾಣುತ್ತೀರಿ..!?
ಉತ್ತರ; ಅವರು ನಮ್ಮ ಪೈಕಿ ಅತ್ಯಂತ ಶ್ರೇಷ್ಠರು, ಅತ್ಯುತ್ತಮರು.
ಆಗ ಜಿಬ್ರೀಲ್(ಅ) ಹೇಳಿದರು: ಮಲಕುಗಳ(ಫರಿಸ್ತೇಗಳ) ಪೈಕಿ ಬದರಿನಲ್ಲಿ ಭಾಗವಹಿಸಿದವರನ್ನು ನಾವು ಕೂಡ ಅದೇ ರೀತಿ ಕಾಣುತ್ತೇವೆ..[ಅದ್ದುರ್ರುಲ್ ಮನ್ಸೂರ್: 2/307]
ಬದ್ರೀಙಲೆ ಕಿಸ್ಸ ಹೇಳುವುದು, ಬದ್ರ್ ಸ್ವಹಾಬಿಗಳ ಮೌಲೀದ್ ಎಲ್ಲವೂ ಅನುವದನೀಯವಾಗಿದ್ದು ಮಹಾಮಾರಿಯಿಂದ ಮುಕ್ತಿ ಹೊಂದಲು ಅವರ ಮುಂದಿರಿಸಿ ನಾವು ದುಆಃ ಮಾಡೋಣ. ಅಲ್ಲಾಹು ಅವರ ಬರಕತಿನಿಂದ ನಮ್ಮೆಲ್ಲರನ್ನೂ ಮಹಾಮಾರಿಯಿಂದ ಕಾಪಾಡಲಿ, ಆಮೀನ್
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗಂಡಿಬಾಗಿಲು
Comments
Post a Comment