ವ್ರತವು ಒಂದು ರಕ್ಷಾಕವಚವಾಗಿದೆ:
ವ್ರತವು ಒಂದು ರಕ್ಷಾಕವಚವಾಗಿದೆ:
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ:
"ವ್ರತವು ಒಂದು ರಕ್ಷಾಕವಚವಾಗಿದೆ. ಆದ್ದರಿಂದ ಉಪವಾಸಿಗನು ಅಶ್ಲೀಲ ನುಡಿಯುವುದಾಗಲೀ, ದುರ್ಗುಣ ದುರಾಚಾರಗಳಿಗೆ ಕೈ ಹಾಕುವುದಾಗಲೀ ಬೇಡ. ಯಾರಾದರೂ ತನ್ನನ್ನು ಬೈದರೆ ಅಥವಾ ತನ್ನೊಂದಿಗೆ ಜಗಳಕ್ಕಿಳಿದರೆ ಆತನೊಂದಿಗೆ ನಾನು ಉಪವಾಸಿಗನೆಂದು ಹೇಳಿಬಿಡಲಿ." (ಬುಖಾರಿ)
ವ್ರತಚರಿಸುವವನು ಅಕ್ರಮ ಕೃತ್ಯಗಳಿಂದಲೂ ಅನಗತ್ಯ ಮಾತುಗಳಿಂದಲೂ ಸಂಪೂರ್ಣ ಮುಕ್ತನಾಗಿರತಕ್ಕದ್ದು. ಇಲ್ಲದಿದ್ದರೆ ಹಗಲಿಡೀ ಹಸಿದು ಬಳಲುವುದಲ್ಲದೆ ಉಪವಾಸದ ನೈಜ ಫಲವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುತ್ತಾರೆ.
ಒಬ್ಬ ವ್ಯಕ್ತಿ ಹೀನ ಮಾತುಗಳನ್ನೂ ಕುಕೃತ್ಯಗಳನ್ನೂ ಉಪೇಕ್ಷಿಸದೆ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದರಲ್ಲಿ ಅಲ್ಲಾಹನಿಗೆ ಯಾವುದೇ ಅಗತ್ಯವಿಲ್ಲ."
ಅನ್ನ ಪಾನೀಯಗಳ ವರ್ಜನೆ ಮೂಲಕ ದೈಹಿಕ ಮತ್ತು ಮಾನಸಿಕ ನಿಯಂತ್ರಣವಾಗಿದೆ. ಉಪವಾಸದ ನೈಜ ಗುಟ್ಟು ಎಂಬುವುದು ಈ ಹದೀಸ್‌ನಿಂದ ಮನಗಾಣಬಹುದು.
Comments
Post a Comment