ಝಕಾತ್ ಝಕಾತ್ ಝಕಾತ್

ಝಕಾತ್ ಝಕಾತ್ ಝಕಾತ್

ಬಾಡಿಗೆ ಕುಳಿತವರು

*ಲೀಸ್‌ಗೆ ಕುಳಿತವರು*

ಇದನ್ನು ಓದಿ....

595 ಗ್ರಾಮ್ ಬೆಳ್ಳಿಯ ಹಣ ಒಂದು ವರ್ಷ ಸಂಗ್ರಹ ಇದ್ದರೆ ಝಕಾತ್ ನೀಡಬೇಕು. 25/4/2021 ರಂದು ಒಂದು ಗ್ರಾಮ್ ಬೆಳ್ಳಿಯ ಹಣ 70 ರುಪಾಯಿ.( ಆಯಾ ದಿವಸ ರೇಟ್ ಏರುಪೇರಾಗುತ್ತದೆ.) ಹಾಗಾದರೆ 70×595= 41650

 ಇಂದಿನ ಬೆಳ್ಳಿಯ ರುಪಾಯಿಯಂತೆ ಒಬ್ಬನ ಕೈ ವಶ ಅಥವಾ ಈತನ ಹಣ ಬೇರೆಯವರ ಕೈ ವಶ 41650 ರುಪಾಯಿ ಇದ್ದರೆ ಅದರ ಎರಡು ವರೆ ಶೇಕಡಾ ಝಕಾತ್ ನೀಡಬೇಕು.

ಗಮನಿಸಿ:

👉 *41650 ರುಪಾಯಿ ಯಷ್ಟು ಹಣ ಅಥವಾ ಅದಕ್ಕಿಂತ ಜಾಸ್ತಿ ಬಾಡಿಗೆಗಾಗಿ ಅಡ್ವಾನ್ಸ್ ನೀಡಿದವರು*

👉 *41650 ರುಪಾಯಿ ಹಾಗೂ ಅದಕ್ಕಿಂತ ಅಧಿಕ ಹಣ ಲೀಸ್‌ಗಾಗಿ ನೀಡಿದವರು*

ಅವರ ಮೇಲೆ ಝಕಾತ್ ಕಡ್ಡಾಯವಾಗಿದೆ. ನಾವು ಬಡವರು ಹಾಗಾಗಿ ನಾವು ಝಕಾತ್ ನೀಡಬೇಕೆ ? ಎಂದು ಕೇಳುವವರು ಇರಬಹುದು. ಬಡತನ ಎಂಬುದು ಇಲ್ಲಿ ಮಾನದಂಡ ವಲ್ಲ. ಝಕಾತ್ ಪಡೆಯಲು ಅರ್ಹತೆ ಇರುವವರು ಕೆಲವೊಮ್ಮೆ ಝಕಾತ್ ನೀಡಲು ಅರ್ಹರಾಗುತ್ತಾರೆ.

ಬಾಡಿಗೆ ಕುಳಿತವರು,ಲೀಸ್‌ಗೆ ಕುಳಿತವರು ಕನಿಷ್ಠ 41650 ರುಪಾಯಿಗಳು ಅಥವಾ ಹೆಚ್ಚು ಮೊತ್ತವನ್ನು ನೀವು ಭದ್ರತಾ ಠೇವಣಿಯಿಗಿ ಇಟ್ಟಿದ್ದರೆ ಅದರ ಲೆಕ್ಕ ಮಾಡಿ ಝಕಾತ್ ನೀಡಿರಿ. ಅದು ನಿಮ್ಮ ಮೇಲೆ ಕಡ್ಡಾಯ ವಾಗಿದೆ.

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್