ಜೇನು ತುಪ್ಪದ ಔಷಧಿಯ ಗುಣಗಳು....

ಜೇನು ತುಪ್ಪದ ಔಷಧಿಯ ಗುಣಗಳು....


ರಹ್ಮಾನನೂ ರಹೀಮ‌ನೂ ಆದ ಅಲ್ಲಾಹನ ನಾಮದಿಂದ ಸರ್ವಲೋಕ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನ ಸ್ವಲಾತ್ ಸಲಾಮ್ ಗಳು ಅಂತ್ಯ ಪ್ರವಾದಿ ಮುಹಮ್ಮದ್‌ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೂ ಅವರ ಬಂಧುಗಳು ಹಾಗೂ ಅನುಚರರಾದ ಸ್ವಹಾಬಿಗಳ ಮೇಲೂ ಸದಾ ವರ್ಷಿಸುತ್ತಿರಲಿ.

ಮಾನ್ಯ ಓದುಗರೇ ನಿಮ್ಮ ಕೈಗೆ ತಲುಪಿದ ಈ ಲೇಖನ ನಿತ್ಯ ಜೀವನದಲ್ಲಿ ನಮಗೆ ಬಾಧಿಸುವಂತಹ ಹಲವು ತರದ ಅನಾರೋಗ್ಯ ಸಮಸ್ಯೆಗಳಿಗೆ ಜೇನು ತುಪ್ಪದಿಂದ ಯಾವ ರೀತಿಯಲ್ಲಿ ಪರಿಹಾರ ಕಂಡು ಕೊಳ್ಳಬಹುದು ಎಂಬುವುದರ ಬಗ್ಗೆ ತುಂಬಾ ಸರಳವಾದ ರೀತಿಯಲ್ಲಿ ತಿಳಿಸಿ ಕೊಡಲಾಗಿದೆ. ಜೇನಿನ ಕುರಿತು ವಿಶುದ್ಧ ಖುರ್ಆನಿನಲ್ಲಿ ಒಂದು ಅಧ್ಯಾಯವೇ ಇರುವಾಗ ಹದೀಸ್ ಗಳ ಗ್ರಂಥಗಳಲ್ಲಿ ಸಾಕಷ್ಟು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನುಡಿಗಳಿರುವಾಗ ಅಧುನಿಕ ವೈದ್ಯ ವಿಜ್ಙಾನ ಜೇನು ತುಪ್ಪದ ಕುರಿತು ಈಗಲೂ ಸಂಶೋಧನೆ ಮುಂದುವರಿಸುತ್ತಿರುವಾಗ ನಾವು ಅದರ ಔಷಧಿಯ ಗುಣಗಳ ಕುರಿತು ತಿಳಿದು ಕೊಳ್ಳುವುದು ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಈ ಕಿರು ಲೇಖನ ಎಲ್ಲರಿಗೂ ಪ್ರಯೋಜನವಾಗಲಿ. ಅಲ್ಲಾಹನು ಈ ಚಿಕ್ಕ ಪ್ರಯತ್ನವನ್ನು ಕಬೂಲ್ ಮಾಡಲಿ.....

        ಉಬ್ಬಸ

01. ಕೊತ್ತಂಬರಿ ಬೀಜದ ಕಷಾಯ ಮಾಡಿ ಚೆನ್ನಾಗಿ ತಣಿಸಿ ಎಂಟನೇ ಒಂದು ಪಾಲು ಜೇನು ಸೇವಿಸುವುದರಿಂದ ಗುಣವಾಗುವುದು.

02. ಪ್ರತಿದಿನ ಮಲಗುವುದಕ್ಕಿಂತ ಮುಂಚೆ ಎರಡು ಚಮಚ ಶುದ್ಧ ಜೇನು ತುಪ್ಪವನ್ನು ಕಾಯಿಸಿ ತಣಿಸಿದ ಒಂದು ಸಣ್ಣ ಕಪ್ ನೀರಿನಲ್ಲಿ ಚೆನ್ನಾಗಿ ಮಿಶ್ರ ಮಾಡಿ ಸೇವಿಸಬೇಕು....

03. ಒಂದು ಚಮಚ ಜೇನನ್ನು ಒಂದು ಕಪ್ ನೀರಿನಲ್ಲಿ ಕುಡಿಯಬೇಕು. ಹಾಗೂ ಜೇನನ್ನು ಬೆರಳಿಗೆ ಇಲ್ಲವೇ ಹತ್ತಿ ತುಂಡಿಗೆ ಹಚ್ಚಿ ಮೂಸುತ್ತಿರಬೇಕು.

04. ಜೇನನ್ನು ಹಾಲಿನಲ್ಲಿ ಅಥವಾ ತುಪ್ಪದಲ್ಲಿ ಸೇರಿಸಿ ಸೇವಿಸಬೇಕು.

05. ನೂರು ಗ್ರಾಮ್ ಜೇನು ತುಪ್ಪ ಸಣ್ಣ ಸಣ್ಣದಾಗಿ‌ ತುಂಡು ಮಾಡಿದ ನೀರುಳ್ಳಿ ಐನೂರು ಗ್ರಾಮ್ ಹಾಗೂ ಕಲ್ಲು ಸಕ್ಕರೆ ಇವೆಲ್ಲವನ್ನು ಒಂದು ಲೀಟರ್ ನೀರಿನಲ್ಲಿ ಸಣ್ಣ ಬೆಂಕಿಯಲ್ಲಿ ಕಾಯಿಸಬೇಕು. ಸಾಧಾರಣ ಮೂರು ನಿಮಿಷ ಕಾಯಿಸಿ ನಂತರ ಶುದ್ಧವಾದ ಬಾಟಲಲ್ಲಿ ಭದ್ರವಾಗಿ ತೆಗೆದಿಡಬೇಕು. ಉಬ್ಬಸಕ್ಕೆ ಮಕ್ಕಳಿಗೆ ಒಂದು ಚಮಚ ದೊಡ್ಡವರಿಗೆ ಎರಡು ಚಮಚದಂತೆ ಬಿಸಿ ಮಾಡಿ ಸೇವಿಸಬೇಕು. ದಿವಸಕ್ಕೆ ಮೂರು ವಾರಗಳ ತನಕ ಕೊಡಬಹುದು. ದೀರ್ಘಕಾಲದ ಉಬ್ಬಸವಾದರೆ ಚಿಕಿತ್ಸೆ ದೀರ್ಘಿಸಬೇಕು.

           ಕೆಮ್ಮು

01. ಒಂದು ಚಮಚ ಜೇನಿಗೆ ಒಂದುವರೆ ಗ್ರಾಂ ಕಾಳುಮೆಣಸು ಚೂರ್ಣ ಹಾಕಿ ಚೆನ್ನಾಗಿ ಜಾಳಿಸಿ ನೆಕ್ಕಿದರೆ ಗುಣವಾಗುವುದು....

02. ರಾತ್ರಿ ಮಲಗುವುದಕ್ಕಿಂತ ಮುಂಚೆ ಎರಡು ಚಮಚ ಶುದ್ಧ ಜೇನುತುಪ್ಪವನ್ನು ಕಾಯಿಸಿ ತಣಿಸಿದ ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಮಿಶ್ರ ಮಾಡಿ ಸೇವಿಸಬೇಕು....

03. ಮಕ್ಕಳ ನಾಯಿ ಕೆಮ್ಮು ಮತ್ತು ಇತರ ಕೆಮ್ಮುಗಳಿಗೆ: ಜೇನು ತುಪ್ಪ ಒಂದು ಚಮಚ ಬೆಳ್ಳುಳ್ಳಿ ರಸ ಅರ್ಧ ಚಮಚ ಎರಡನ್ನು ಮಿಶ್ರ ಮಾಡಿ ಮಕ್ಕಳಿಗೆ ನೆಕ್ಕಿಸಬೇಕು. ದೊಡ್ಡವರು ದಿನದಲ್ಲಿ ಮೂರು ಬಾರಿ ಸೇವಿಸಬೇಕು....

04. ನಾಯಿ ಕೆಮ್ಮು: ನೀರುಳ್ಳಿಯನ್ನು ಬಿಸಿ ಮಾಡಿ ನೀರು ತೆಗೆದು ಅದಕ್ಕೆ ಒಂದು ಚಮಚ ಜೇನು ಸೇರಿಸಿ ದಿವಸದಲ್ಲಿ ಹಲವು ಬಾರಿ ಸೇವಿಸಬೇಕು....

       ಕಿವಿಯ ರೋಗಗಳು

 01 ಕಿವಿ ಸಿಡಿತಕ್ಕೆ: ಜೇನು ಮತ್ತು ಹಸಿ ಶುಂಠಿಯ ರಸ ಇವುಗಳನ್ನು ಸಮಾಂಶ ಸೇರಿಸಿ ಒಂದು ಉದ್ದಿನ ಕಾಲಿನಷ್ಟು ಇಂದುಪ್ಪು ಅನ್ನು ಅರೆದು ಸೇರಿಸಿ ಬಿಸಿ ಮಾಡಿ ತಣಿಸಿ ಕಿವಿಗೆ ಎರೆದರೆ ಕಿವಿ ಸಿಡಿತ ಗುಣವಾಗುವುದು....

02. ಕಿವಿಯಲ್ಲಿ ಶಬ್ದ, ಕಿವಿ ನೋವು ಕಿವಿ ಸೋರುವುದು: ಮೂರು ನಾಲ್ಕು ಹನಿ ಜೇನಿಗೆ ಮೂರು ನಾಲ್ಕು ಹನಿ ನೀರು ಬೆರೆಸಿ ಸ್ವಲ್ಪ ಬಿಸಿ ಮಾಡಿ ತಣ್ಣಗಾದ ನಂತರ ಕಿವಿಯಲ್ಲಿ ದಿನಕ್ಕೆ ಮೂರು ನಾಲ್ಕು ಬಾರಿ ಹಾಕಬೇಕು. ಪ್ರತಿಸಾರಿಯೂ ಕಿವಿಯನ್ನು ಹತ್ತಿಯಿಂದ ಸ್ವಚ್ಚ ಮಾಡಬೇಕು....

03. ಉಪ್ಪು ಕಲಸಿದ ಸ್ವಲ್ಪ ನೀರಿಗೆ ಜೇನು ಸೇರಿಸಿ ನಿದ್ರಿಸುವ ಮುಂಚೆ ಕಿವಿಗೆ ಸ್ವಲ್ಪ ಇಟ್ಟಿಸಬೇಕು....

           ಶೀತ

01. ಎರಡು ಚಮಚ ಜೇನನ್ನು ಕುದಿಸಿ ಆರಿದ ಹಾಲಲ್ಲಿ ಸೇರಿಸಿ ಬರೀ ಹೊಟ್ಟೆಗೆ ದಿವಸ ಮೂರು ಹೊತ್ತು ಸೇವಿಸಬೇಕು. ಆವಶ್ಯ ಬಂದಷ್ಟು ಸೇವಿಸಬೇಕು...

    ಚರ್ಮ ರೋಗಗಳು

  ವ್ರಣ ಶೋಧನೆಗೆ (ಹುಣ್ಣು ವಾಸಿಯಾಗಲು) ;- ತುಳಸಿ ಗಿಡದ ಕಷಾಯದಲ್ಲಿ ಹಳೆಯ ಜೇನು ಸೇರಿಸಿ ಅದರಿಂದ ವ್ರಣವನ್ನು ತೊಳೆದರೆ ಕೆಲವೇ ದಿನಗಳಲ್ಲಿ ದೀರ್ಘಕಾಲದ ವ್ರಣವು ಕೂಡ ಶುದ್ಧವಾಗಿ ಮಾಯವಾಗುವುದು....

02. ಗಾಯಗಳಿಗೆ ಮತ್ತು ಜಜ್ಜಿ ಹೋಗಿ ನೋವಾದರೆ: ಜೇನಿನೊಂದಿಗೆ ತುಪ್ಪ ಸೇರಿಸಿ ಜಾಳಿಸಿ ಕೂಡಲೇ ಲೇಪಿಸುವುದು ಜೇನನ್ನು ಧಾರೆ ಎರೆಯುವುದರಿಂದ ಗುಣವಾಗುತ್ತದೆ....

03. ಹುಣ್ಣುಗಳು ಮಾಯಲು: ರಕ್ತ ಕೀವು ಸೋರುವುದನ್ನು ತಡೆಗಟ್ಟಲು ಜೇನು ತುಪ್ಪವನ್ನು ಆಗಾಗ ಸವರುತ್ತಿರಬೇಕು. ಪ್ರತಿ ಲೇಪನಕ್ಕಿಂತ ಮುಂಚೆ ಒಮ್ಮೆ ಹುಣ್ಣು ಗಾಯಗಳನ್ನು ತೊಳೆದು ಲೇಪನ ಮಾಡುವುದು ಒಳ್ಳೆಯದು ತುಳಸಿ ಸೊಪ್ಪಿನ ಕಷಾಯದಲ್ಲಿ ತೊಳೆದು ಜೇನು ತುಪ್ಪವನ್ನು ಲೇಪನ ಮಾಡಿದರೆ ಹುಣ್ಣು ಗಾಯಗಳು ಬೇಗನೆ ಮಾಯುತ್ತದೆ.....

04. ಚರ್ಮ‌ರೋಗಕ್ಕೆ: ಎರಡು ಚಮಚ ಕರಿ ಜೀರಿಗೆಯ ಎಣ್ಣೆಗೆ ಮೂರು ಚಮಚ ಜೇನು ಸೇರಿಸಿ ರೋಗ ಬಾಧಿತ ಸ್ಥಳಕ್ಕೆ ಗುಣ ಕಂಡು ಬರುವ ತನಕ ಹಚ್ಚಬೇಕು....

05. ಅರ್ಧ‌ ಕಪ್ ಜೇನಲ್ಲಿ ಮೂರು ಚಮಚ ಸಾಂಬ್ರಾಣಿ ಹುಡಿಯನ್ನು ಮಿಕ್ಸ್ ಮಾಡಿ ದಿವಸ ಎರಡು ಹೊತ್ತು ಅದಕ್ಕೆ ಚೆನ್ನಾಗಿ ಹಚ್ಚಬೇಕು....

    ಬಾಯಿ ಹುಣ್ಣು

ಉಷ್ಣದಿಂದ ಇಲ್ಲವೇ ತೀಕ್ಷ್ಣ ಪದಾರ್ಥ ಸೇವನೆಯಿಂದ ಬಾಯಿ ಹುಣ್ಣಾದರೆ....

01. ಜೇನನ್ನು ಬಾಯಲ್ಲಿ ಹಾಕಿಕೊಂಡು ಕವಳಿಸಬೇಕು. ಅಥವಾ ಜೇನನ್ನು ಬಾಯಿಯ ವ್ರಣಗಳಿಗೆ ಲೇಪಿಸಬೇಕು.

02. ‌ನಿಂಬೆ ಹುಳಿಯ ರಸಕ್ಕೆ ಜೇನನ್ನು ಮಿಶ್ರ ಮಾಡಿ ಸೇವಿಸಬೇಕು ಅಥವಾ ಜೇನನ್ನು ಮುಕ್ಕಳಿಸಬೇಕು....

03. ಜೇನು ತುಪ್ಪದಲ್ಲಿ ಅತ್ತಿಯನ್ನು ಅದ್ದಿ ಹುಣ್ಣಿಗೆ ಲೇಪಣೆ ಮಾಡಬೇಕು. ಅಥವಾ ಅರ್ಧ\ ಕಾಲು ಚಮಚದಷ್ಟು ಬಾಯಿಯಲ್ಲಿ ಹಾಕಿಕೊಂಡು ಹಲ್ಲುಗಳಿಗೆ ಚೆನ್ನಾಗಿ ತಾಗುವಂತೆ ಬಾಯಿ ಮುಕ್ಕಲಿಸಿ ಉಗುಳಿ ಬಾಯಿ ತೊಳೆದುಕೊಳ್ಳಬೇಕು. ಹೀಗೆ ದಿನದಲ್ಲಿ ಎರಡು ಮೂರು ಬಾರಿ ಮಾಡಬೇಕು.....

      ಕಣ್ಣಿನ ರೋಗಗಳು

01. ಜೇನಿನೊಂದಿಗೆ ತುಳಸಿ ಎಲೆಯ ರಸ ಸೇರಿಸಿ ಜಾಳಿಸಿ ಕಣ್ಣಿಗೆ ಅಂಜನ ಹಾಕಿದರೆ ಸಾಮಾನ್ಯ ಎಲ್ಲಾ ವಿಧ ನೇತ್ರ ರೋಗಗಳು ಗುಣವಾಗುತ್ತದೆ.

02. ಖರ್ಜೂರದ ಕಾಯಿಯ ಬೀಜವನ್ನು ಜೇನಿನಲ್ಲಿ ತೇದು ಅಂಜನ ಹಾಕಿದರೆ ಕಣ್ಣು ಹೂವು ನಿವಾರಿಸಲ್ಪಡುವುದು.

03. ಹತ್ತು ತೊಟ್ಟು ನೀರುಳ್ಳಿ ರಸ ಹತ್ತು ತೊಟ್ಟು ಜೇನು ತುಪ್ಪ ಮಿಶ್ರ ಮಾಡಿ ಈ ಮಿಶ್ರಣದ 4-5 ತೊಟ್ಟು ರಸವನ್ನು ದಿನಕ್ಕೆ ಮೂರು ಬಾರಿ ಕಣ್ಣಿಗೆ ಬಿಡಬೇಕು. ಕಣ್ಣಿನಲ್ಲಿ ಸ್ವಲ್ಪ ಉರಿ ಉಂಟಾಗಬಹುದು. ಕ್ರಮೇಣ ತಣ್ಣಗಾಗುವುದು.

    ಸುಟ್ಟ ಗಾಯ

01. ಕೂಡಲೇ ಜೇನನ್ನು ಬೆಂಕಿ ತಾಗಿದ ಭಾಗದ ಮೇಲೆ ಎಡೆ ಬಿಡದೆ ಧಾರೆ ಎರೆಯುತ್ತಿರುವುದರಿಂದ ಗುಳ್ಳೆಗಳು ಕೂಡ ಬಾರದೆ ಬೆಂಕಿ ತಣಿಯುವುದು. ಮಾತ್ರವಲ್ಲ ವ್ರಣವೂ ಬೇಗನೆ ಮಾಯುವುದು....

02. ಕೋಳಿ ಮೊಟ್ಟೆಯ ಬಿಳಿ ಭಾಗವನ್ನು ಜೇನು ತುಪ್ಪದಲ್ಲಿ ಸರಿಯಾಗಿ ಮಿಶ್ರ ಮಾಡಿ ಸುಟ್ಟ ಸ್ಥಳಕ್ಕೆ ತಕ್ಷಣ ಸವರಬೇಕು. ಬಿಟ್ಟು ಬಿಟ್ಟು ಸವರುತ್ತಿರಬೇಕು....
 
  ವಿ. ಸೂ: ಗಾಯ ಆಳವಾಗಿದ್ದಲ್ಲಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಬೇಕು....

      ವಾತ ರೋಗಗಳು

01. ವಾತ ರಕ್ತಕ್ಕೆ : ಒಂದೂವರೆ ಪಾಲು ಜೇನಿಗೆ ಒಂದೊಂದು ಪಾಲು ತುಪ್ಪ ಮತ್ತು ಕಲ್ಲು ಸಕ್ಕರೆ ಬೆರೆಸಿ ಕೆಲವು ದಿನಗಳವರೆಗೆ ತಿನ್ನಬೇಕು....

02. ವಾತಕ್ಕೆ ಜೇನಿನಲ್ಲಿ ಸಣ್ಣದಾಗಿ ಕತ್ತರಿಸಿದ ಹಸಿ ಶುಂಠಿಯ ಹೋಳುಗಳನ್ನು ಹಾಕಿ ಭದ್ರವಾಗಿ‌ ಮುಚ್ಚಿ ಇರಿಸಿಕೊಂಡು ದಿನಾ 12 ಗ್ರಾಮ್ ಪ್ರಕಾರ ಬೆಳಿಗ್ಗೆ ಸೇವಿಸಿದರೆ ಶೀತವಾತ ಗುಣವಾಗುವುದು....

03. ನೋವಿಗೆ: ಜೇನು, ಕರಿ ಜೀರಿಗೆಯ ಎಣ್ಣೆ, ಕರ್ಪೂರ ತೈಲ, ಆಲಿವ್ ಎಣ್ಣೆ ಇವುಗಳನ್ನು ಸಮ‌ ಪ್ರಮಾಣದಲ್ಲಿ ತೆಗೆದು ಮಿಕ್ಸ್ ಮಾಡಿ ನೋವಿರುವ ಸ್ಥಳಕ್ಕೆ ಹಚ್ಚಿ ಸ್ವಲ್ಪ ಹೊತ್ತು ವಸ್ತ್ರದಿಂದ ಮುಚ್ಚಬೇಕು....


  
 



ಲೇಖಕರು:ಅಬೂ ಫಿದಾ
NOORUL FALAH ISLAMIC ORGANISATION 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್