ಕೂಲಿಯಾಳುಗಳಿಗೆ ಊಟ:
ಕೂಲಿಯಾಳುಗಳಿಗೆ ಊಟ:
ರಮಳಾನ್ ತಿಂಗಳಲ್ಲಿ ವ್ರತ ತೊರೆಯಲು ಪರಿಗಣಿಸಲಾಗಿರುವ ರಿಯಾಯಿತಿಗಳೇನೂ ಇಲ್ಲದೆ ವೃತ ಉಪೇಕ್ಷಿಸುವುದು ತನ್ನ ಮೇಲೆ ನಿಷಿದ್ಧವಾದಂತೆಯೇ ಇತರರಿಗೆ ಆ ಬಗ್ಗೆ ಸಹಾಯ ಮಾಡುವುದೂ ಹರಾಂ ಆಗಿರುತ್ತದೆ. ಹಾಗೆನ್ನುವಾಗ ತಮ್ಮ ಮನೆಯಲ್ಲಿ ಅಥವಾ ತೋಟಗಳಲ್ಲಿ ಕೆಲಸ ಮಾಡುವ ಕೂಲಿಯಾಳುಗಳಿಗೆ ರಮಳಾನಿನ ಹಗಲಲ್ಲಿ ಊಟ ತಯಾರಿಸಿ ಕೊಡುವುದೂ ನಿಷಿದ್ಧವಾಗಿರುತ್ತದೆ. ಕಾರಣ ಕೆಲಸಗಳು ರಿಯಾಯಿತಿಯಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಕೃಷಿ ಮತ್ತು ಕಟ್ಟಡ ನಿರ್ಮಾಣ ಈ ಎರಡು ಕೆಲಸವನ್ನು ಮೇಲಿನ ನಿಯಮದಿಂದ ಹೊರತುಪಡಿಸಲಾಗಿದೆ. ಈ ಇಬ್ಬರಿಗೂ ತಮ್ಮ ಕೆಲಸದ ವೇಳೆ ಅತಿಯಾದ ತೊಂದರೆ ಅನುಭವಿಸಬೇಕಾಗಿ ಬಂದಲ್ಲಿ ಮಾತ್ರ ವೃತ ತೊರೆಯುವುದರಲ್ಲಿ ತಪ್ಪಿಲ್ಲ. ಆದರೆ ಆ ರೀತಿಯ ತೊಂದರೆಗಳೇನೂ ಇಲ್ಲದಿದ್ದಲ್ಲಿ ಈ ರಿಯಾಯಿತಿ ಬಾಧಕವಲ್ಲ. ಆದ್ದರಿಂದಲೇ ಪ್ರತಿದಿನವೂ ರಾತ್ರಿ ನಿಯ್ಯತ್ ಮಾಡುವುದು ಇವರಿಗೆ ಕಡ್ಡಾಯವಾಗಿರುತ್ತದೆ. ಕೂಲಿಯಾಳುಗಳು ಅಮುಸ್ಲಿಮರಾದರೂ ಊಟ ತಯಾರಿಸಿ ಕೊಡುವುದು ನಿಷಿದ್ದ ಕಾರಣ ಶಾಫಿಈ ಮದ್ಸ್‌ಹಬ್ ಪ್ರಕಾರ ನಮ್ಮ ಮೇಲೆ ಕಡ್ಡಾಯವಿರುವ ವೈಯಕ್ತಿಕ ಕರ್ಮಗಳೆಲ್ಲವೂ ಅವರ ಮೇಲೂ ಕಡ್ಡಾಯವಾಗಿದೆ. ಆದರೆ ಅವುಗಳು ಸಿಂಧುವಾಗಬೇಕಾದರೆ ಮಾತ್ರ ವ್ಯಕ್ತಿ ಮುಸ್ಲಿಮನಾಗಿರಬೇಕಾದುದು ಒಂದು ನಿಬಂಧನೆಯಷ್ಟೆ.
Comments
Post a Comment