ಮಹಿಳೆಯರ ಜಮಾಅತ್:
ಮಹಿಳೆಯರ ಜಮಾಅತ್:
ಮಹಿಳೆಯರಿಗೂ ತರಾವೀಹ್ ನಮಾಝ್ ಸುನ್ನತ್ತಿದೆ. ಅವರಿಗೂ ಸಮ್ಮತ ಸ್ವತಃ ಮನೆಯಲ್ಲಿ ಜಮಾಅತ್ತಾಗಿ ನಿರ್ವಹಿಸಬಹುದು. ಆದರೆ ಅದಕ್ಕಾಗಿ ಮನೆ ಬಿಟ್ಟು ಹೋಗುವುದು ಒಳಿತಲ್ಲ. ಕಾರಣ ಮಹಿಳೆಯರು ಸ್ವತಃ ಮನೆಯೊಳಗೆ ಮಾಡುವ ಇಬಾದತ್‌ಗಿಂತಲೂ ಉತ್ತಮವಾದ ಆರಾಧನೆ ಮತ್ತೊಂದಿಲ್ಲವೆಂದು ಪ್ರವಾದಿ ಸ್ವಲಲ್ಲಾಹು ಅಲಾಹಿವಸಲ್ಲಮರು ಹೇಳಿದ್ದಾರೆ. ಮಾತ್ರವಲ್ಲ ಸ್ತ್ರೀಯರಿಗೆ ನಮಾಝ್ ನಿರ್ವಹಿಸಲು ಅತ್ಯಂತ ಶ್ರೇಷ್ಟ ಸ್ಥಳ ಅವಳ ಸ್ವತಃ ಮನೆಯ ಒಳ ಕೊಠಡಿಯಾಗಿದೆ ಎಂದು ಅದೆಷ್ಟೋ ಹದೀಸ್‌ಗಳಲ್ಲಿ ಸ್ಪಷ್ಟಗೊಂಡಿದೆ. ಆದ್ದರಿಂದಲೇ ಇತ್ತೀಚಿನ ಕಾಲದಿಂದ ಕೆಲವು ಊರುಗಳಲ್ಲಿ ಕಂಡು ಬರುವಂತೆ ಅಕ್ಕಪಕ್ಕದ ಮಹಿಳೆಯರು ಸೇರಿ ಒಂದು ಮನೆಯಲ್ಲಿ ಅಥವಾ ಮದ್ರಸಾದಂತಹ ಇನ್ನಿತರ ಸ್ಥಳಗಳಲ್ಲಿ ತರಾವೀಹ್ ಜಮಾಅತ್ ನಡೆಸುವುದು ಇಸ್ಲಾಮ್ ಒಮ್ಮೆಯೂ ಪ್ರೋತ್ಸಾಹ ಕೊಡುವಂತಹ ಸಂಗತಿಯಲ್ಲ. ಒಳಿತಿಗೆ ವಿರುದ್ಧವಾದ ಇಂತಹ ಕಾರ್ಯಗಳಿಗೆ ಮದ್ರಸಾವನ್ನು ಬಿಟ್ಟು ಕೊಡುವುದು ಸರಿಯಲ್ಲ. ಆಡಳಿತಾಧಿಕಾರಿಗಳು ಆ ಬಗ್ಗೆ ಜಾಗೃತರಾಗಲೇಬೇಕು. ಅದೇ ರೀತಿ ಸ್ವತಃ ಮನೆಯನ್ನು ಬಿಟ್ಟು ಕೊಡುವುದೂ ಇಸ್ಲಾಮ್ ಆದೇಶಿಸುವ ಒಳಿತಿನ ವಿರುದ್ದ ಸಹಾಯ ಮಾಡುವಂತಾಗುತ್ತದೆ.
ಸ್ವತಃಮನೆಯಿಂದ ಹೊರ ಹೋಗಿ ಜಮಾಅತಾಗಿ ನಿರ್ವಹಿಸುವುದಕ್ಕಿಂತಲೂ ಮನೆಯೊಳಗೆಯೇ ಒಬ್ಬಂಟಿಯಾಗಿ ನಿರ್ವಹಿಸುವುದೇ ಮಹಿಳೆಯರಿಗೆ ಉತ್ತಮವೆಂದು ಮೇಲಿನ ಹದೀಸ್‌ಗಳಿಂದ ಮನಗಾಣಬಹುದು. ಮಾತ್ರವಲ್ಲ ಶಾಫಿಈ ಮದ್ಸ್‌ಹಬ್‌ನ ಅತ್ಯಂತ ಹಿರಿಯ ಆಲಿಂಗಳಲ್ಲೊಬ್ಬರಾದ ಇಬ್ನು ಖಝೈಮ(ರ.ಅ) ರವರ ಮಾತು ನೋಡಿ ,
ಮಹಿಳೆಯರು ತಮ್ಮ ಸ್ವತಃ ಮನೆಯೊಳಗೆ ಮಾಡುವ ನಮಾಝ್ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಸೀದಿ (ಮದೀನಾದ ಮಸ್ಜಿದುನ್ನಬವಿಯ್ಯ)ಯದಲ್ಲಿ ಅವಳು ಮಾಡುವ ನಮಾಝ್‌ಗಿಂತಲೂ ಶ್ರೇಷ್ಠವಾಗಿದೆ.
ಆ ಮಸೀದಿಯಲ್ಲಿ ಮಾಡುವ ನಮಾಝ್‌ಗೆ ಇತರ ಸ್ಥಳದಲ್ಲಿನ ಸಾವಿರ ನಮಾಝ್‌ನ ಪ್ರತಿಫಲವಿದ್ದರೂ ಸರಿ, ಕಾರಣ ಈ ಹೇಳಿದ್ದು ಪುರುಷರ ನಮಾಝಿಗೆ ಹೋಲಿಸಿಕೊಂಡಾಗಿರುತ್ತದೆ. ಸ್ವತಃ ಮನೆಯೇ ಸ್ತ್ರೀಗಳಿಗೆ ನಮಾಝ್‌ಗೆ ಅತ್ಯಂತ ಶ್ರೇಷ್ಠವೆಂದಿರುವಾಗ ಮತ್ತೆ ಹೊರ ಹೋಗುವುದು ಒಂದಾದರೆ ತನ್ನ ಆರಾಧನೆಗಳನ್ನು ಇತರರಿಗೆ ತೋರ್ಪಡಿಸಲಿಕೋಸ್ಕರವಾಗಿರಬಹುದು. ಹಾಗನ್ನುವಾಗ ಅದು ಖಂಡಿತಾ ಹರಾಂ ಆಗಿರುತ್ತದೆ. ಇಲ್ಲದಿದ್ದರೆ ಇನ್ನಿತರ ಏನಾದರೂ ಉದ್ದೇಶವಿರಬೇಕು. ಅದು ಇಖ್‌ಲಾಸ್ (ನಿಷ್ಕಳಂಕತೆ)ಗೆ ವಿರುದ್ದವಾಗಿರುತ್ತದೆ
(ಫತಾವಲ್ ಕುಬ್‌ರಾ)
Comments
Post a Comment