ಬದ್ರ್: ಪ್ರವಾದಿ ﷺ ರವರ ದೀರ್ಘದ್ರಷ್ಟಿ
ಬದ್ರ್: ಪ್ರವಾದಿ ﷺ ರವರ ದೀರ್ಘದ್ರಷ್ಟಿ
(عنْ أَنَسِ بْنِ مَالِكٍ، قَالَ: أَنْشَأَ عُمَرُ بْنُ الْخَطَّابِ يُحَدِّثُنَا عَنْ أَهْلِ بَدْرٍ، فَقَالَ: إِنَّ رَسُولَ اللَّهِ صَلَّى اللَّهُ عَلَيْهِ وَآلِهِ وَسَلَّمَ كَانَ يُرِينَا مَصَارِعَ أَهْلِ بَدْرٍ بِالأَمْسِ مِنْ بَدْرٍ، يَقُولُ: هَذَا مَصْرَعُ فُلانٍ غَدًا، وَهَذَا مَصْرَعُ فُلانٍ غَدًا إِنْ شَاءَ اللَّهُ، قَالَ عُمَرُ : فَوَالَّذِي بَعَثَهُ بِالْحَقِّ، مَا أَخْطَأُوا الْحُدُودَ الَّتِي حَدَّهَا رَسُولُ اللَّهِ صَلَّى اللَّهُ عَلَيْهِ وَآلِهِ وَسَلَّمَ".رواه-الطبراني/١٠٨٢)
ಅನಸ್ ಬುನ್ ಮಾಲಿಕ್ (ರ.ಅ) ರಿಂದ ವರದಿ- ಅವರು ಹೇಳಿದರು: ಉಮರ್ ಬುನ್ ಖತ್ತಾಬ್ (ರ.ಅ) ರವರು ಬದ್ರ್'ನ ಕುರಿತು ನಮ್ಮೊಂದಿಗೆ ವಿವರಿಸಿದರು: ಖಂಡಿತವಾಗಿಯೂ ಪ್ರವಾದಿ (ﷺ) ರವರು ಬದ್ರ್ ಯುದ್ಧದ ಹಿಂದಿನ ದಿನ ಮುಶ್ರಿಕ್'ಗಳ ನೇತಾರರೆಲ್ಲರೂ ಸತ್ತುಬೀಳುವ ಸ್ಥಳವನ್ನು ನಮಗೆ ತೋರಿಸಿದ್ದರು. ಪ್ರವಾದಿ ﷺ ರವರು ಹೇಳಿದ್ದಾರೆ: ಇನ್ಶಾ ಅಲ್ಲಾಹ್ ನಾಳೆ ಇಂತಹಾ ವ್ಯಕ್ತಿ ಸಾಯುವ ಸ್ಥಳ ಇದಾಗಿದೆ, ಇಂತಿಂತಹಾ ವ್ಯಕ್ತಿ ಸಾಯುವ ಸ್ಥಳ ಇದಾಗಿದೆ.
ಉಮರ್ (ರ.ಅ) ರವರು ಹೇಳಿದರು: "ಪ್ರವಾದಿ ﷺ ರನ್ನು ಸತ್ಯದೂತರಾಗಿ ಕಳುಹಿಸಿದ ಅಲ್ಲಾಹನಾಣೆ, ಯಾರೂ ಕೂಡಾ ಪ್ರವಾದಿ ﷺ ರು ಎಳೆದ ರೇಖೆಯನ್ನು ದಾಟಲಿಲ್ಲ."
(ಹದೀಸ್- ಇಮಾಂ ತ್ವಬ್ರಾನೀ)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ತಾಜುದ್ದೀನ್ ಸಖಾಫಿ,ಕುಂದಾಪುರ
(29-04-2021,ಗುರುವಾರ)
(17-ರಂಝಾನ್-1442)
Comments
Post a Comment