ಭೂಲೋಕ ಪರಲೋಕ.

ಭೂಲೋಕ ಪರಲೋಕ.... (ಸಂಕ್ಷಿಪ್ತ)

ಈ ಭೂಲೋಕದ ಬಗ್ಗೆ ಕೂಲಂಕುಷವಾಗಿ ಚಿಂತಿಸುವಾಗ ಕೆಲವೊಂದು ವಿಷಯಗಳು ಅರ್ಥಮಾಡಲು ಸಾಧ್ಯವಾಗುತ್ತದೆ. ಇಲ್ಲಿ ಯಾರೂ ಸುಖವಾಗಿ ಇರುವುದಿಲ್ಲ. ದುಡ್ಡಿರುವವರೆಲ್ಲರೂ ಹಾಯಾಗಿ ಇರುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ ಅದು ನಮ್ಮ ಶುದ್ಧ ಮೂರ್ಖತನ.

ಒಂದು ವಸ್ತುವು ಶಾಶ್ವತವಾಗಿ ಇರಬೇಕು. ಅದಕ್ಕೆ ಕೊನೆ ಇರಬಾರದು, ಅದರಲ್ಲಿ ಯಾವುದೇ ದೋಷಗಳು ಇರಬಾರದು, ಅದರ ಕಾರಣದಿಂದ ನಾವು ಕಷ್ಟ ಅನುಭವಿಸಬಾರದು. ಹೀಗೆಲ್ಲಾ ಇದ್ದರೆ ಅದಕ್ಕೊಂದು ಅರ್ಥವಿರುತ್ತೆ. 

ಆದರೆ ಈ ಲೋಕದಲ್ಲಿ ಅಂತಹಾ ಸ್ಪೆಷಾಲಿಟಿ ಏನೂ ಇಲ್ಲ. ಇಲ್ಲಿ ಏನು ಮಾಡಬೇಕಾದರೂ ಕಷ್ಟ ಪಡಬೇಕು, ಆರೋಗ್ಯ ಹಾಲುಮಾಡಬೇಕು, ಒಂದುವೇಳೆ ಕಷ್ಟ ಪಟ್ಟು ಆರೋಗ್ಯ ಹಾಳುಮಾಡಿ ತುಂಬಾ ಹಣ ಮಾಡಿ ದೊಡ್ಡ ಶ್ರೀಮಂತನಾದರೂ ಕೂಡಾ ಆ ಸಮಯಕ್ಕೆ ಆಯುಷ್ಯ ಮುಗಿಯುವ ಹಂತದಲ್ಲಿರುತ್ತೇವೆ. ಶರೀರದ ಚರ್ಮವೆಲ್ಲಾ ಸುರುಗಟ್ಟಿ, ಕಣ್ಣುಗುಡ್ಡೆಗಳು ಒಳಹೋಗಿ, ಕೂಡಲೆಲ್ಲಾ ಉದುರಿ ಹೋಗಿಬಿಟ್ಟಿರುತ್ತದೆ. ಇಷ್ಟೆಲ್ಲಾ ಮಾಡಿ ಏನು ಪ್ರಯೋಜನ...? ಕೊನೆಗೆ ತಾನು ಮಾಡಿದ್ದೆಲ್ಲಾ ವಾರೀಸುದಾರರಿಗೆ ಕೊಟ್ಟು ಮಣ್ಣಿನ ಸಣ್ಣ ರಂಧ್ರದಲ್ಲಿ ಮಣ್ಣಾಗುವ ಶರೀರ.....

ಇನ್ನು ಒಬ್ಬ ತುಂಬಾ ವೇಗವಾಗಿ ಬೆಳೆದ ಅವನ ಬ್ಯುಸ್ನಸ್ ತುಂಬಾ ದೊಡ್ಡದಾಯಿತು. ಸಣ್ಣ ಪ್ರಾಯದಲ್ಲೇ ತುಂಬಾ ಹಣ ಗಳಿಸಿ ತುಂಬಾ ದೊಡ್ಡ ಶ್ರೀಮಂತನಾದ ಅಂದುಕೊಳ್ಳುವ (ಇಂತಹಾ ಅದೇಷ್ಟೋ ಮಂದಿಯಿದ್ದಾರೆ) ತನ್ನ ಎಷ್ಟೋ ತಲೆಮಾರುಗಳಿಗೆ ಸಾಕಾಗುವಷ್ಟು ಆಸ್ತಿ ಆತನ ಬಳಿಯಲ್ಲಿ ಇರುತ್ತದೆ. ಆದರೂ ಆತನು ನೆಮ್ಮದಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಮತ್ತೆ ಮತ್ತೆ ದುಡ್ಡುಗಳಿಸಲು ಶ್ರಮಿಸುತ್ತಲೇ ಇರುತ್ತಾನೆ. 

ಒಂದು ಸಲ ಯೋಚಿಸಿ ಈ ಲೋಕದಲ್ಲಿ ಅದೆಷ್ಟೋ ಶ್ರೀಮಂತರಿದ್ದಾರೆ ಅವರಿಗೆ ಸಾಯುವವರೆಗೂ ಹಾಯಾಗಿದ್ದುಕೊಂಡೇ ಜೀವನ ಮುಂದೆ ಹಾಕಬಹುದು. ಆದರೂ ಅವರು ದುಡ್ಡನ್ನು ದುಪ್ಪಟ್ಟು ಗೊಳಿಸಲು ಕಷ್ಟಪಡುತ್ತಲೇ ಇರುತ್ತಾರೆ. ತನ್ನ ಕೈ ಕಾಲು ಬಲಹೀನವಾಗುವವರೆಗೂ, ಅಥವಾ ರೋಗ ಬಾದಿಸುವವರೆಗೂ ಕಷ್ಟ ಪಡುತ್ತಲೇ ಇರುತ್ತಾರೆ ಇದು ಐಷಾರಾಮಿ ಜೀವನ ಎಂದು ಹೇಳಲು ಸಾಧ್ಯವಿದೆಯೇ....? ಇಲ್ಲ... ಖಂಡಿತಾ ಇಲ್ಲ..... ಆತನು ಎಷ್ಟೇ ದೊಡ್ಡ ಶ್ರೀಮಂತನಾದರೂ ಜೀವನವಿಡೀ ಕಷ್ಟಪಡುತ್ತಲೇ ಇರುತ್ತಾನೆ. ಅದರಿಂದ ಆತನ ಸಮಾಧಾನವೂ ನಷ್ಟವಾಗಿ ಬಿಡುತ್ತೆ. 

ದಿನಕ್ಕೆ 400 ರಿಂದ 500ರ ವರೆಗೆ ದುಡಿಯುವ ಕೂಲಿ ಕಾರ್ಮಿಕನಿಗೆ ಇರುವ ನೆಮ್ಮದಿ ಶ್ರೀಮಂತನ ಬಳಿ ಇರುವುದಿಲ್ಲ. ಇದನ್ನೆಲ್ಲಾ ಯಾಕೆ ಹೇಳುವುದೆಂದರೆ ಶ್ರೀಮಂತ ವ್ಯಕ್ತಿಗಳನ್ನು ನೋಡಿ ಆಸೆ ಹುಟ್ಟುವ ನಮಗೆ ಅವನ ಹೊರಗಿನ ಜೀವನ ಮಾತ್ರ ಕಾಣುವುದು. ಆದರೆ ಅವನ ಒಳಗಿನ ಜೀವನ ಅವನಿಗೆ ಮಾತ್ರ ತಿಳಿದಿರುತ್ತದೆ.

ಶ್ರೀಮಂತನಾದವನು ಜಾಸ್ತಿ ತಿನ್ನಲೋ, ಕುಡಿಯಲೊ, ಸಾಧ್ಯವಿಲ್ಲ. ಹೊಟ್ಟೆ ತುಂಬುವವರೆಗೆ ಮಾತ್ರ. ರೋಗ ಬಂದರೆ ಅದೂ ಇಲ್ಲ....

ಒಬ್ಬನು ದೊಡ್ಡ ಶ್ರೀಮಂತನು ತುಂಬಾ ಖರ್ಚುಮಾಡಿ ತನಗಾಗಿ ಸುಂದರವಾದ ಬೃಹತ್ ಬಂಗಲೆ ನಿರ್ಮಿಸಿ ತನ್ನ ಸುಂದರವಾದ ಕೋಣೆಯಲ್ಲಿ ನಿದ್ರೆ ಮಾಡುವ ಸಮಯ ಎಲ್ಲವೂ ಮರೆತು ಬಿಡುತ್ತಾನೆ. ಅವನ ಶ್ರೀಮಂತಿಕೆಯ ಅರಿವೇ ಅವನಿಗಿರುವುದಿಲ್ಲ. ಸುಖ ಅಂದರೆ ಅದು ಶಾಶ್ವತವಾಗಿರಬೇಕು. ಅದು ನಮ್ಮಿಂದ ಮರೆಯಾಗಬಾರದು, ಕೈ ತಪ್ಪಿ ಹೋಗಬಾರದು. ಈ ಭೂಲೋಕದ ಅಲ್ಪ ಸಮಯದ ಕಷ್ಟಪಟ್ಟು ಸಂಪಾದಿಸಿರುವ ಕ್ಷಣಿಕ ಸುಖವನ್ನು ಸುಖ ಎನ್ನಲು ಸಾಧ್ಯವೇ ಇಲ್ಲ. ಈ ಲೋಕವು ಆಸೆ ಹುಟ್ಟಿಸುವ ಟೊಳ್ಳು ಲೋಕವಾಗಿದೆ.

ಸ್ವರ್ಗವಾಗಿದೆ ಶಾಶ್ವತ ಸುಖವಿರುವ ಬೀಡು.

ಅಲ್ಲಿ......

ಕಷ್ಟವಿಲ್ಲ....

ನೋವಿಲ್ಲ....

ಸಾವಿಲ್ಲ....

ಪಕೃತಿ ವಿಕೋಪವಿಲ್ಲ....

ಯಾವಾಗಲೂ ಸಮಾಧಾನ....

ಪ್ರಾಯವಾಗುವುದಿಲ್ಲ....

ಸೌಂದರ್ಯಕ್ಕೆ ಕೇಡು ಸಂಭವಿಸುವುದಿಲ್ಲ....

ಕೋಪವಿಲ್ಲ....

ಹಗೆತನವಿಲ್ಲ....

ಅಸೂಯೆಯಿಲ್ಲ....

ಮಾಲಿನ್ಯವಿಲ್ಲ....

ಮಲ ಮೂತ್ರವಿಲ್ಲ....

ನಿದ್ರೆಯಿಲ್ಲ (ಸದಾ ಆನಂದ)....

ಸುಸ್ತು ಇಲ್ಲ....(ಅಲ್ಲಿ ಎಷ್ಟೇ ಕುಣಿದು ಕುಪ್ಪಳಿಸಿ ಎಷ್ಟೇ ಸುಖ ಅನುಭವಿಸಿದರೂ ಸುಸ್ತು ಬರುವುದೇ ಇಲ್ಲ ಬದಲಾಗಿ ಮೊದಲು ಇದ್ದ ಆಸಕ್ತಿಗಿಂತ ಹೆಚ್ಚು ಆಸಕ್ತಿ ಮೂಡುತ್ತದೆ.)

ಬಿಸಿಲು ಇಲ್ಲ....

ಚಳಿಯಿಲ್ಲ.....(ಬಿಸಿಲು ಚಳಿ ಅಲ್ಲಿ ಅನುಭವಕ್ಕೆ ಬರಲ್ಲ ಇದರಿಂದ ನಾವು ಅರ್ಥೈಸಿಕೊಳ್ಳಬಹುದು ಸ್ವರ್ಗವು ಸಂಪೂರ್ಣ ಹವಾನಿಯಂತ್ರಿತ air condition ಆಗಿದೆಯೆಂದು.)

ಹಸಿವು ಇಲ್ಲ....

ಬಾಯಾರಿಕೆಯಿಲ್ಲ.... (ಸ್ವರ್ಗದಲ್ಲಿ ತಿನ್ನುವುದು ಕುಡಿಯುವುದು ಹಸಿವು ಬಾಯಾರಿಕೆ ನೀಗಿಸಲು ಅಲ್ಲ ಬದಲಾಗಿ ಆಹಾರ ಪಾನೀಯ ಫಲಹಾರಗಳ ವಿಶೇಷವಾದ ರುಚಿಯನ್ನು ಅನುಭವಿಸಲಿಕ್ಕಾಗಿದೆ.

ರಾತ್ರಿಯಿಲ್ಲ (ಸದಾ ಸಂಜೆಯ ವಾತಾವರಣ)

ಎಷ್ಟು ಬೇಕಾದರೂ ತಿನ್ನಬಹುದು....

ಎಷ್ಟು ಬೇಕಾದರೂ ಕುಡಿಯಬಹುದು... 

ಎಷ್ಟು ಬೇಕಾದರೂ ಕುಣಿದು ಕುಪ್ಪಳಿಸಬಹುದು....

ನಿನ್ನನ್ನು ಕೇಳುವವರು, ಆಳುವವರು ಯಾರೂ ಇಲ್ಲ... ನಿನ್ನ ಸಾಮ್ರಾಜ್ಯಕ್ಕೆ ನೀನೇ ಒಡೆಯ....

ನಿನಗೆ ಬೇಕಾದ ಸೇವಕರು ಸದಾ ಸಮಯ ಸಿದ್ಧರಿರುವರು....

ನೀನು ಏನೆಲ್ಲಾ ಭಾವಿಸುತ್ತಿಯೂ ಅದೆಲ್ಲಾ ನಿನ್ನ ಬಳಿ ತಕ್ಷಣವೇ ಬಂದು ಬಿಡುತ್ತದೆ....

ತಿನ್ನಲು 70ಸಾವಿರ ಪಕ್ಷಿಗಳ ಮಾಂಸ, ಫಲ ಹಾರಗಳು ಮತ್ತು ನೀನು ಏನೇನೂ ಆಗ್ರಹಿಸುತ್ತಿಯೂ ಅದೆಲ್ಲವೂ.... 

ಮುತ್ತು ರತ್ನಗಳಿಂದ ನಿರ್ಮಿಸಿದ ಬೃಹತ್ ಮಹಡಿಗಳಿರುವ ಅರಮನೆ..... 

ಮನರಂಜನೆಗೊಳಿಸಲು ಮ್ಯೂಸಿಕ್ ಪ್ಯಾಲೇಸ್ಗಳು....

ಬೃಹತ್ ಮಹಡಿಗಳಲ್ಲಿರುವ ಕೊಠಡಿಗಳಲ್ಲಿ ಒರಗಿ ಕುಳಿತುಕೊಳ್ಳುವ ಸಿಂಹಾಸನ....

ಪ್ರತೀ ಕೊಠಡಿಗಳಲ್ಲೂ ಮುತ್ತು ರತ್ನಗಳಿಂದ ನೇಯ್ದ ಸುಂದರವಾದ ಮಂಚಗಳು. ಪ್ರತೀ ಮಂಚದಲ್ಲೂ ನಿನಗಾಗಿ ಮಾತ್ರ ಸೃಷ್ಟಿಸುವ ಬೇರೆ ಯಾರೂ ಮುಟ್ಟದ ಸುಂದರವಾದ ತರುಣಿಯರು....

ನಿನ್ನ ಸುತ್ತು ಮುತ್ತ ಹಲವಾರು ಸುಂದರ ಸ್ವರ್ಗೀಯ ತರುಣಿಯರು (ಹೂರುಲ್ ಈನ್) ಹಾಡುತ್ತಾ ಮನರಂಜಿಸುತ್ತಾ ಇರುವರು.

ಹಾಲಿನ, ಜೇನಿನ, ಮುಂತಾದ ವಿವಿಧ ಜ್ಯುಸ್ ಗಳ ನದಿಗಳು....

ಬೃಹತ್ ಸುಂದರ ವರ್ಣರಂಜಿತ ನಗರಗಳು.... 

ಮುಂತಾದ ಎಲ್ಲಾ ಸಲವತ್ತುಗಳಿರುವ ನಷ್ಟ ಹೊಂದದ ಸುಂದರವಾದ ಶಾಶ್ವತ ಬೀಡಾಗಿದೆ ಸ್ವರ್ಗ ಅದಕ್ಕಾಗಿ ನಾವು ಶ್ರಮಿಸಬೇಕಿದೆ. 

ನಾವು ಸ್ವರ್ಗದ ಬಗ್ಗೆ ಹಾಗಿರಬಹುದು. ಹೀಗಿರಬಹುದು ಎಂದು ಎಷ್ಟೇ ಊಹಿಸಿದರೂ ಅದು ಹಾಸ್ಯಾಸ್ಪದವಾಗಿರುತ್ತದೆ. ಕಾರಣ ನಾವು ಇದುವರೆಗೂ ಕಾಣದ, ಕೇಳದ, ಅನುಗ್ರಹಗಳನ್ನು ಅಲ್ಲಾಹು ಅಲ್ಲಿ ಇಟ್ಟಿದ್ದಾನೆ. ಎಲ್ಲಕ್ಕಿಂತಲೂ ಮಿಗಿಲಾಗಿ ಎಲ್ಲವನ್ನೂ ಸೃಷ್ಟಿಸಿದ ಸೃಷ್ಟಿಕರ್ತನಾದ ಅಲ್ಲಾಹನ ದರ್ಶನ ಭಾಗ್ಯ (ಅಲ್ಲಾಹನನ್ನು ಕಾಣುವಾಗ ಸ್ವರ್ಗವಾಸಿಗಳು ಅಷ್ಟೊಂದು ಅನುಗ್ರಹಗಳಿರುವ ಸ್ವರ್ಗವನ್ನೇ ಮರೆತುಬಿಡುತ್ತಾರೆ.) ಮತ್ತು ಪುಣ್ಯ ಪ್ರವಾದೀ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ದೀರ್ಘಕಾಲವಿರುವ ಮದುವೆ ಸಮಾರಂಭವನ್ನು ಕಾಣುವ ಭಾಗ್ಯ ಸ್ವರ್ಗದಲ್ಲಿ ಲಭಿಸುವುದು.

ಸತ್ತ ಶವಕ್ಕೆ ಸಮನಾದ ದುನಿಯಾದ ಕ್ಷಣಿಕ ಆಸೆಯನ್ನು ಬಿಟ್ಟು ಶಾಶ್ವತ ಸ್ವರ್ಗವನ್ನು ಆಗ್ರಹಿಸಿ ಜೀವನವನ್ನು ಮುನ್ನಡೆಸಬೇಕಾಗಿದೆ. ಅಲ್ಲಾಹು ನಮಗೆಲ್ಲರಿಗೂ ಕುಟುಂಬದೊಂದಿಗೆ ಸಜ್ಜನರು ಇರುವ ಆ ಸುಂದರವಾದ ಲೋಕದಲ್ಲಿ ಒಗ್ಗೂಡಿಸಲಿ. 

صَلَّى اللهُ عَلَيْكَ يَارَسُولَ الله ﷺ
ಆಮೀನ್ ಯಾ ರಬ್ಬಲ್ ಆಲಮೀನ್
💎💎💎💎💎💎💎💎💎

ಸ್ವಲಾತಿನೊಂದಿಗೆ ಈ ಪುಟ್ಟ ಬರಹವನ್ನು ಕೊನೆಗೊಳಿಸುತ್ತಿರುವೆ. 

💚💚💚💚💚💚💚💚💚 
ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ಆಲಿಹೀ ವಸ್ವಹ್'ಬಿಹೀ ವಸಲ್ಲಿಮ್
💚💚💚💚💚💚💚💚💚

ಆಬ್ದುಲ್ ನಾಸಿರ್ ಕಾವೂರು
➖➖➖➖➖➖➖➖➖

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್